ನಾವಿಂದು ನಿಮಗೆ ತಿರುಮಲ ಯಾತ್ರೆಯ ರಹಸ್ಯವನ್ನು ತಿಳಿಸಿಕೊಡುತ್ತೇವೆ ತಿರುಮಲ ಯಾತ್ರೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ತಿರುಮಲಕ್ಕೆ ಹೋದಂತಹ ಸಂದರ್ಭದಲ್ಲಿ ಮೊದಲು ಯಾವ ದೇವರ ದರ್ಶನವನ್ನು ಮಾಡಬೇಕುಎನುದನ್ನು ನೋಡೋಣ. ತಿರುಮಲ ಏಳು ಬೆಟ್ಟಗಳ ಒಡೆಯ ಹೇಗಾದ ಎಂದರೆ ತಿರುಮಲದ ಏಳು ಬೆಟ್ಟಗಳು ಸಹ ವರಾಹಸ್ವಾಮಿಯ ಕ್ಷೇತ್ರ. ವರಹಸ್ವಾಮಿಯು ವೆಂಕಟೇಶ್ವರ ಸ್ವಾಮಿಗೆ ಬಿಟ್ಟು ಕೊಟ್ಟಂತಹ ಜಾಗವೇ ಆ ಏಳು ಬೆಟ್ಟಗಳು.

ವೆಂಕಟೇಶ್ವರ ಆ ಏಳು ಬೆಟ್ಟಗಳಲ್ಲಿ ಬಂದು ನೆಲೆಸಿದ. ನೀವು ತಿರುಮಲಕ್ಕೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಮೊದಲನೆಯದಾಗಿ ಹೋಗಿ ದರ್ಶಿಸಬೇಕಾದಂತಹ ಸ್ಥಳ ಯಾವುದಾದರೂ ಇದೆ ಎಂದು ಹೇಳಿದರೆ ನೀವು ಮೊದಲು ವರಾಹನ ಗೂಡಿಗೆ ಹೋಗಿ ವರಾಹನನ್ನು ಪ್ರಾರ್ಥಿಸಿಕೊಂಡು ಅದು ವರಾಹ ಸ್ವಾಮಿಯ ಕ್ಷೇತ್ರವಾಗಿರುವುದರಿಂದ ವರಾಹಸ್ವಾಮಿ ವೆಂಕಟೇಶ್ವರನಿಗೆ ಕೊಟ್ಟಿರುವುದರಿಂದ ಅಲ್ಲಿ ಹೋಗಿ ವರಾಹನನ್ನು ದರ್ಶಿಸಿ ತಿಮ್ಮಪ್ಪನ ಗೂಡಿಗೆ ಹೋಗುವಂತದ್ದು ಹಿಂದೆ ಇದ್ದ ವಾಡಿಕೆ. ಇಲ್ಲಿ ನಮ್ಮ ಪೂರ್ವಿಕರು ಯಜಮಾನಿಕೆಗೆ ಕೊಡುತ್ತಿದ್ದಂತಹ ಆದ್ಯತೆಯನ್ನು ನೋಡಬೇಕಾಗುತ್ತದೆ.

ತಿರುಮಲದಲ್ಲಿರುವ ಸಂಪನ್ಮೂಲಗಳು ತಿಮ್ಮಪ್ಪನಿಗೆ ಸೇರಿದ್ದರು ಸಹ ಆ ಜಾಗದ ಮೂಲ ಒಡೆಯ ವರಾಹಸ್ವಾಮಿ. ಆ ವರಾಹನನ್ನು ಎಂದಿಗೂ ಬದಿಗೊತ್ತಬಾರದು ಅವನನ್ನು ಮರೆಯಬಾರದು ವೆಂಕಟೇಶ್ವರನ ದರುಷನಕ್ಕೆ ದಾರಿಮಾಡಿ ಕೊಟ್ಟ ಇವರನ್ನು ಬದಿಗೊತ್ತಬಾರದು ಎಂದು ಇವತ್ತಿಗೂ ಭೂ ವರಾಹನಾಥ ಸ್ವಾಮಿ ದೇವಾಲಯ ಅಲ್ಲಿದೆ. ದಶಾವತಾರದಲ್ಲಿ ಬರುವ ಮೂರನೇ ಅವತಾರ ವರಾಹ ಅವತಾರ. ಹಿರಣ್ಯಾಕ್ಷ ಭೂದೇವಿಯನ್ನು ಕದ್ದು ಅವಳನ್ನು ಪಾತಾಳದಲ್ಲಿ ಅಡಗಿಸಿ ಇಟ್ಟಿದ್ದ.

ಭೂದೇವಿಯನ್ನು ಅಡಗಿಸಿಟ್ಟ ಹಿರಣ್ಯಾಕ್ಷನನ್ನು ವರಾಹ ಸಂಹರಿಸಿ ವರಾಹ ಸ್ವಾಮಿಯ ಅವತಾರದಲ್ಲಿ ಭೂಮಿಯನ್ನು ಉದ್ಧರಿಸಿದ ಎಂದು ಹೇಳುತ್ತಾರೆ. ಈ ರೀತಿಯಾಗಿ ತಿರುಮಲದಲ್ಲಿರುವ ವೆಂಕಟೇಶನ ದರ್ಶನ ಮಾಡುವುದಕ್ಕಿಂತ ಮೊದಲು ವರಾಹಸ್ವಾಮಿಯ ದರ್ಶನ ಮಾಡುವುದು ವಾಡಿಕೆಯಲ್ಲಿದೆ. ನೀವು ಕೂಡ ತಿರುಮಲಕ್ಕೆ ಹೋದ ಸಂದರ್ಭದಲ್ಲಿ ವರಾಹ ಸ್ವಾಮಿಯ ದರ್ಶನವನ್ನು ಪಡೆದುಕೊಳ್ಳಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗು ತಿಳಿಸಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!