ಅರಿಶಿನ ಪುಡಿಯನ್ನು ಭಂಡಾರ ಎಂದು ಕರೆಯಲಾಗುತ್ತದೆ ಈ ಬಂಡಾರವನ್ನು ಪ್ರೇಮಿಸುವವನು ಮೈಲಾರಲಿಂಗ. ಭಂಡಾರದ ಒಡೆಯ ಮೈಲಾರಲಿಂಗ. ಅವನು ಮಹಾರಾಷ್ಟ್ರದಲ್ಲಿ ಖಂಡೋಬಾ ಎಂದು ಪ್ರಸಿದ್ಧಿಯನ್ನು ಪಡೆದಿದ್ದಾನೆ ಖಂಡೋಬಾ ಸಾಮಾನ್ಯವಾಗಿ ಮಹಾರಾಷ್ಟ್ರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ತೆಲಂಗಾಣ ಆಂಧ್ರ ಪ್ರದೇಶದಲ್ಲಿ ಆರಾಧಿಸುವ ದೇವರು. ಆಂಧ್ರಪ್ರದೇಶದಲ್ಲಿ ಮಲ್ಲಣ್ಣ ನಾಗಿಯೂ ಕರ್ನಾಟಕದಲ್ಲಿ ಮೈಲಾರಲಿಂಗನಾಗಿಯು ಹಾಗೂ ಮಹಾರಾಷ್ಟ್ರದಲ್ಲಿ ಖಂಡೋಬನಾಗಿ ಪೂಜಿಸಲ್ಪಡುತ್ತಾನೆ. ಖಂಡೋಬಾ ಮಹಾರಾಷ್ಟ್ರದ ದೇಶಸ್ಥ ಬ್ರಾಹ್ಮಣ ಕುಟುಂಬದ ಮನೆದೇವರು ಕೂಡ ಹೌದು.

ಮಹಾರಾಷ್ಟ್ರದ ಜೆಜೂರಿಯಲ್ಲಿ ಇರುವ ಖಂಡೋಬಾ ದೇವಸ್ಥಾನವು ಜೆಜೂರಿಚ ಖಂಡೋಬನೆಂದೆ ಪ್ರಸಿದ್ಧಿಯನ್ನು ಪಡೆದಿದೆ. ಜೆಜೂರಿ ಪುಣೆ ಜಿಲ್ಲೆಯ ಒಂದು ಪಟ್ಟಣವಾಗಿದ್ದು ಪುಣೆ ಮಹಾನಗರದಿಂದ ಸುಮಾರು ಮೂವತ್ತೆಂಟು ಕಿಲೋಮೀಟರ್ ದೂರದಲ್ಲಿದೆ ಇಲ್ಲಿಗೆ ತೆರಳಲು ಪುಣೆಯಿಂದ ಸಾಕಷ್ಟು ಬಸ್ಸುಗಳು ಹಾಗೂ ರೈಲಿನ ಸಂಪರ್ಕವೂ ಇದೆ. ನಾವಿಂದು ಕರ್ನಾಟಕದ ಮೈಲಾರಲಿಂಗ ಮಹಾರಾಷ್ಟ್ರದಲ್ಲಿ ಖಂಡೋಬಾ ಎಂದು ಹೇಗೆ ಪ್ರಸಿದ್ಧನಾಗಿದ್ದಾನೆ ಅದರ ಹಿಂದಿನ ವಿಚಾರ ಏನು ಎಂಬುದರ ಕುರಿತಾದ ಕುತೂಹಲಕಾರಿ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ. ಖಂಡೋಬಾ ಎಂಬ ಹೆಸರು ಖಡ್ಗದಿಂದ ಬಂದಿದೆ ಖಡ್ಗ ಎಂದರೆ ಕತ್ತಿ ರಾಕ್ಷಸರನ್ನು ಕೊಲ್ಲುವ ಖಂಡೋಬಾ ಬಳಸಿದ ಆಯುಧ. ಬಾ ಎಂದರೆ ಮರಾಠಿಯಲ್ಲಿ ತಂದೆ ಆದ್ದರಿಂದಲೇ ಈ ತಂದೆಯನ್ನು ಮಹಾರಾಷ್ಟ್ರದಲ್ಲಿ ಖಂಡೋಬಾ ಎಂದು ಕರೆಯುತ್ತಾರೆ.

ವಿಶೇಷವೇನೆಂದರೆ ಖಂಡೋಬಾ ಒಬ್ಬ ಸಂಯುಕ್ತ ದೇವರ ಅವತಾರವಾಗಿದ್ದು ಶಿವ ಭೈರವ ಸೂರ್ಯ ಹಾಗೂ ಕಾರ್ತಿಕೇಯನ ಗುಣಲಕ್ಷಣಗಳನ್ನು ಹೊಂದಿರುವ ದೈವಿ ಅವತಾರವೆನ್ನಲಾಗಿದೆ. ಇಷ್ಟೇ ಅಲ್ಲದೆ ಖಂಡೋಬ ನನ್ನು ಕೆಲವು ಮುಸ್ಲಿಮರು ಕೂಡ ಪರಿಪಾಲಿಸುತ್ತಾರೆ. ಕೆಲವರು ಮಾರ್ತಾಂಡ ಭೈರವನೆಂದು ಕೂಡ ಕರೆದು ಪೂಜಿಸುತ್ತಾರೆ. ಖಂಡೋಬನಿಗೆ ಐವರು ಪತ್ನಿಯರಿದ್ದರು. ಅದರಲ್ಲಿ ಒಬ್ಬಳು ಮುಸ್ಲಿಂ ಸಮುದಾಯಕ್ಕೆ ಸೇರಿದವಳು ಎನ್ನಲಾಗಿದೆ. ಅವನ ಕುದುರೆಯ ಪರಿಪಾಲನೆಯನ್ನು ಒಬ್ಬ ಮುಸ್ಲಿಂ ಮಾಡುತ್ತಿದ್ದ ಎನ್ನುವ ಪ್ರತೀತಿ ಇದೆ. ಆದ್ದರಿಂದಲೇ ಇಂದಿಗೂ ಖಂಡೋಬನ ಕುದುರೆಗಳನ್ನ ಸಾಂಪ್ರದಾಯಿಕವಾಗಿ ಮುಸ್ಲಿಂ ಕುಟುಂಬವೊಂದು ಜೆಜೂರಿಯಲ್ಲಿ ನಿರ್ವಹಿಸುತ್ತಿದೆ. ಪೌರಾಣಿಕವಾಗಿ ಈ ಪ್ರದೇಶದಲ್ಲಿ ಹಿಂದೆ ಮಣಿ ಮತ್ತು ಮಲ್ಲ ಎಂಬ ಇಬ್ಬರು ದೈತ್ಯರಿದ್ದರು.

ಅವರು ಬ್ರಹ್ಮನನ್ನು ಕುರಿತು ಕಠೋರ ತಪಸ್ಸನ್ನು ಮಾಡಿ ಬ್ರಹ್ಮನಿಂದ ಅವಿನಾಶಿಗಳು ಎಂಬ ವರವನ್ನು ಪಡೆದುಕೊಳ್ಳುತ್ತಾರೆ. ನಂತರ ಇಬ್ಬರು ದೈತ್ಯರು ಈ ಪ್ರದೇಶದಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತಾರೆ ಯಜ್ಞಯಾಗಾದಿಗಳನ್ನು ಹಾಳುಮಾಡುತ್ತಾರೆ. ಋಷಿಮುನಿಗಳನ್ನು ಹಿಂಸಿಸುತ್ತಾರೆ. ಸಾಮಾನ್ಯ ಜನಗಳನ್ನು ಕೂಡಾ ತುಂಬಾ ಕಾಡುವುದಕ್ಕೆ ಪ್ರಾರಂಭಿಸುತ್ತಾರೆ. ಇದರಿಂದ ನೊಂದಂತಹ ಋಷಿಮುನಿಗಳು ದೇವತೆಗಳಲ್ಲಿ ಬೇಡಿಕೊಳ್ಳುತ್ತಾರೆ ಇದರಿಂದ ದೇವತೆಗಳಿಗೆ ಹವಿಸ್ಸು ಸಿಗದೆ ಬ್ರಹ್ಮ ವಿಷ್ಣುವಿನ ಬಳಿ ಸಹಾಯವನ್ನು ಬೇಡುತ್ತಾರೆ ಅಲ್ಲಿಯು ದಾರಿ ತೋರದೆ ಶಿವನ ಬಳಿ ತಮ್ಮ ಚಿಂತಾಜನಕ ಸ್ಥಿತಿಯನ್ನು ತೋಡಿಕೊಳ್ಳುತ್ತಾರೆ. ಇದಕ್ಕೆ ಸ್ಪಂದಿಸಿದ ಶಿವನು ಖಂಡೋಬನಾಗಿ ಜನ್ಮವೆತ್ತಿ ಬಂಗಾರದಂತೆ ಹೊಳೆಯುವ ಕುದುರೆಯ ಮೇಲೆ ಬಂದು ಮಣಿ ಮಲ್ಲರನ್ನು ಸಂಹರಿಸುತ್ತಾನೆ.

ದೇವರು ಮಲ್ಲನ ತಲೆಯನ್ನು ಕ ತ್ತರಿಸಿ ದೇವಾಲಯದ ಮೆಟ್ಟಿಲುಗಳ ಮೇಲೆ ಬಿಡುತ್ತಾನೆ ಆದರೆ ಮಣಿ ಮಾನವಕುಲದ ಆಶೀರ್ವಾದದಿಂದ ಆಶೀರ್ವದಿಸುವಂತೆ ಕೇಳಿಕೊಳ್ಳುತ್ತಾನೆ ಆದ್ದರಿಂದ ಅವನನ್ನು ತೊರೆಯುತ್ತಾನೆ ಈ ಕಥೆಯ ಉಲ್ಲೇಖ ಬ್ರಹ್ಮಪುರಾಣದಲ್ಲಿ ಬರುತ್ತದೆ. ಭಗವಾನ್ ಖಂಡೋಬನನ್ನ ಉರಿಯುತ್ತಿರುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಅವನು ಪೂಜಾ ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ ಅವನಿಗೆ ಸಾಮಾನ್ಯ ಪೂಜೆಯಂತೆ ಅರಿಶಿಣ ಹೂವು ಹಣ್ಣು ಇಡಲಾಗುತ್ತದೆ

ಆದರೆ ಕೆಲವೊಮ್ಮೆ ಮೇಕೆ ಮಾಂಸವನ್ನು ದೇವಾಲಯದ ಹೊರಗೆ ದೇವರಿಗೆ ಅರ್ಪಿಸಲಾಗುತ್ತದೆ. ಇಂದಿಗೂ ಜೆಜೂರಿಯ ದೇವಸ್ಥಾನದಲ್ಲಿ ಅರಿಶಿಣ ಎಲ್ಲೆಡೆ ಹರಡಿರುವುದನ್ನು ನೀವು ಕಾಣಬಹುದು. ಈ ಸ್ಥಳವು ಐತಿಹಾಸಿಕವಾಗಿಯೂ ಒಂದು ಪ್ರಮುಖ ಘಟನೆಗೆ ಸಾಕ್ಷಿಯಾಗಿದೆ. ಮರಾಠರ ವೀರ ದೊರೆ ಚತ್ರಪತಿ ಶಿವಾಜಿ ಮಹಾರಾಜ್ ಈ ಸ್ಥಳದಲ್ಲಿ ತನ್ನ ತಂದೆಯಾದ ಶಹಾಜಿಯನ್ನು ಬಹು ಸಮಯ ಭೇಟಿಯಾಗಿದ್ದನು.

ಖಂಡೋಬನ ವಿಗ್ರಹವು ಕುದುರೆ ಸವಾರಿ ಮಾಡುವ ಯೋಧನ ರೀತಿಯಲ್ಲಿದೆ. ಅವನ ಕೈಯಲ್ಲಿ ರಾಕ್ಷಸರನ್ನ ಸಂಹರಿಸುವ ದೊಡ್ಡ ಖಡ್ಗವು ಕೂಡ ಇದೆ. ಖಂಡೋಬಾ ದೇವಾಲಯವನ್ನು ಮುಖ್ಯವಾಗಿ ಎರಡು ಭಾಗಗಳನ್ನಾಗಿ ವಿಭಾಗಿಸಲಾಗಿದೆ ಮೊದಲನೆಯ ಭಾಗವನ್ನು ಮಂಟಪ ಎಂದು ಕರೆಯಲಾಗುತ್ತದೆ ಎರಡನೇ ಭಾಗವು ಗರ್ಭಗುಡಿ ಇದರಲ್ಲಿ ಭಗವಾನ್ ಖಂಡೋಬನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ದೇವಾಲಯದಲ್ಲಿ ಹಿತ್ತಾಳೆಯಿಂದ ಮಾಡಿದ ದೊಡ್ಡ ಆಮೆ ಕೂಡ ಇದೆ. ನವೆಂಬರ್ ತಿಂಗಳಲ್ಲಿ ಖಂಡೋಬಾ ದೇವರ ವಾರ್ಷಿಕೋತ್ಸವವನ್ನು ಅತಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಜಾತ್ರೆಗೆ ಸಾವಿರಾರು ಭಕ್ತರು ಸುತ್ತಮುತ್ತಲಿನ ಪ್ರದೇಶಗಳಿಂದ ಬಂದು ಹೋಗುತ್ತಾರೆ ಮರಾಠಾ ಸಂಪ್ರದಾಯದ ಪ್ರಕಾರ ಹೊಸದಾಗಿ ಮದುವೆಯಾದಂತಹ ದಂಪತಿಗಳು ಇಲ್ಲಿಗೆ ಭೇಟಿ ಕೊಡುವುದು ಕಡ್ಡಾಯವಾಗಿದೆ. ನೀವು ಕೂಡ ಜೆಜೂರಿಯಲ್ಲಿ ಇರುವ ಈ ದೇವಾಲಯಕ್ಕೆ ಭೇಟಿ ನೀಡಿ ಖಂಡೋಬನ ಆಶೀರ್ವಾದವನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *