ತಲೆತಲಾಂತರದಿಂದ ಕಾಶ್ಮೀರ ವಿವಾದ ನಡೆಯುತ್ತಲೆ ಬಂದಿದೆ. ಕಾಶ್ಮೀರ ಜನರ ಪರಿಸ್ಥಿತಿ ಅಲ್ಲಿಯ ಸ್ಥಿತಿಗತಿ ಬಗ್ಗೆ ಸಿನಿಮಾವೊಂದು ತಯಾರಾಗಿದೆ. ಕಾಶ್ಮೀರ್ ಫೈಲ್ಸ್ ಈ ಸಿನಿಮಾ ಭರ್ಜರಿ ಜಯ ಗಳಿಸಿದೆ. ಹಾಗಾದರೆ ಈ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಧಾರುಣ ಧಾಳಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವು ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ದಿನೆ ದಿನೆ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಿರುವುದರಿಂದ ಚಿತ್ರತಂಡದ ಮೊಗದಲ್ಲಿ ಮಂದಹಾಸ ಮೂಡಿಸಿದೆ ಎಂದು ಹೇಳಬಹುದು. ಕೊರೋನ ಪ್ಯಾಂಡಮಿಕ್ ನಂತರ ತೆರೆಕಂಡ ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ ಮತ್ತು ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿ ಸಿನಿಮಾಗಳ ದಾಖಲೆಯನ್ನು ದಿ ಕಾಶ್ಮೀರ್ ಫೈಲ್ಸ್ ಮುರಿದಿದ್ದು ಐದು ದಿನಗಳಿಗೆ ವಿಶ್ವದಾದ್ಯಂತ ಈ ಸಿನಿಮಾ ಗಳಿಸಿರುವುದು ಬರೋಬ್ಬರಿ 67.35 ಕೋಟಿ ರೂಪಾಯಿ ಆಗಿದೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾವು ಮಾರ್ಚ್ 11ರಂದು ತೆರೆಕಂಡಿದೆ. ಮೊದಲ ದಿನ ವಿಶ್ವದಾದ್ಯಂತ ಈ ಸಿನಿಮಾ 4.25 ಕೋಟಿ ರೂಪಾಯಿ ಗಳಿಸಿತ್ತು. ನಂತರ ಎರಡನೆ ದಿನದಿಂದಲೆ ಸಿನಿಮಾ ಗಳಿಕೆಯಲ್ಲಿ ತೀವ್ರ ಏರಿಕೆ ಶುರುವಾಗಿತ್ತು. ಎರಡನೆ ದಿನ 10.10 ಕೋಟಿ ರೂಪಾಯಿ, ಮೂರನೆ ದಿನ 17.25 ಕೋಟಿ ರೂಪಾಯಿ, ನಾಲ್ಕನೆ ದಿನ 16.25 ಕೋಟಿ ರೂಪಾಯಿ ಗಳಿಸಿದೆ. ಐದನೆ ದಿನ 19.50 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಇನ್ನೂ ವಿಶ್ವದಾದ್ಯಂತ 67.35 ಕೋಟಿ ರೂಪಾಯಿ ಗಳಿಸಿದರೆ ಅದರಲ್ಲಿ ಭಾರತದ ಪಾಲು 60.20 ಕೋಟಿ ರೂಪಾಯಿ ಗಳಿಕೆಯಾಗಿದೆ. ಇನ್ನೂ 30 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿದರೆ ಶತಕೋಟಿ ಕ್ಲಬ್‌ಗೆ ದಿ ಕಾಶ್ಮೀರ್ ಫೈಲ್ಸ್ ಸೇರಲಿದೆ. ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಕರ್ನಾಟಕ, ಮಧ್ಯಪ್ರದೇಶ, ಹರಿಯಾಣ, ಗುಜರಾತ್ ರಾಜ್ಯಗಳು ಶೇಕಡ100 ತೆರಿಗೆ ವಿನಾಯಿತಿ ಘೋಷಿಸಿವೆ.
ಮಧ್ಯಪ್ರದೇಶ ಈ ಚಿತ್ರ ವೀಕ್ಷಿಸಲು ಒಂದು ದಿನದ ರಜೆ ನೀಡಿದೆ. ಇನ್ನು ಕೆಲವು ಕಡೆ ಇಡಿ ಥಿಯೇಟರ್‌ಗಳನ್ನು ಬಂದ್ ಮಾಡಿಸಿ ಟಿಕೆಟ್ ಸಿಗದಂತೆ ಮಾಡಿ ಶೋಗಳನ್ನು ಅರ್ಧದಲ್ಲೆ ನಿಲ್ಲಿಸಿ ವೀಕ್ಷಕರು ಸಿನಿಮಾ ನೋಡದಂತೆ ಮಾಡುವ ಪ್ರಯತ್ನಗಳೂ ಸಹ ನಡೆದಿವೆ. ಇನ್ನು ಕಾಶ್ಮೀರದಲ್ಲಿ ಚಿತ್ರ ರಿಲೀಸ್ ಆಗಿಲ್ಲ. ಜಮ್ಮುವಿನಲ್ಲಿ ಹಲವು ಥಿಯೇಟರ್‌ಗಳ ಮಾಲೀಕರು ಧೈರ್ಯ ಮಾಡಿಲ್ಲ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಹಲವಾರು ಥಿಯೇಟರ್‌ಗಳನ್ನು ಬಿಜೆಪಿ ನಾಯಕರು ಪೂರ್ತಿ ಬುಕ್ ಮಾಡಿ ವೀಕ್ಷಕರಿಗೆ ಉಚಿತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ.
ವಿಜಯಪುರದ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರು 10 ದಿನಗಳ ಕಾಲ ತಮ್ಮ ಕ್ಷೇತ್ರದ ಥಿಯೇಟರ್‌ಗಳಲ್ಲಿ ಸಿನಿಮಾದ ಉಚಿತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. 1990ರ ಜನವರಿಯಲ್ಲಿ ಪಂಡಿತರು ಮತಾಂತರವಾಗಿ ಕಾಶ್ಮೀರ ಬಿಟ್ಟು ತೆರಳಿ, ಇಲ್ಲವೇ ಸಾಯಿರಿ ಎಂದು ಭಯೋತ್ಪಾದಕರು ಎಚ್ಚರಿಕೆ ನೀಡಿದ್ದರು. ಅನಿವಾರ್ಯವಾಗಿ ಪಂಡಿತರು ರಾತ್ರೋರಾತ್ರಿ ಅವರ ಮನೆಗಳಿಂದ ಹೊರಬಿದ್ದು ಜಮ್ಮು ಕಡೆಗೆ ತೆರಳಿದರು.
ಆ ಸಂದರ್ಭದಲ್ಲಿ ಅನೇಕ ಪಂಡಿತರ ಹತ್ಯೆಯಾಯಿತು. ಇಂತಹ ಅಂಶಗಳನ್ನು ಇಟ್ಟುಕೊಂಡು ನೈಜವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಷಿ, ದರ್ಶನ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ ಅಭಿಪ್ರಾಯ ತಿಳಿಸಿ.