ದೇಶದ ಬೆನ್ನೆಲುಬು ಆಗಿರುವ ರೈತರ (farmers) ಹಿತಾಸಕ್ತಿಯಿಂದ (Central Govt) ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಹೌದು ನಾವು ಮಾತನಾಡುತ್ತಿರುವುದು PM ಕಿಸಾನ್ FPO ಯೋಜನೆ ಬಗ್ಗೆ. ರೈತರಿಗೆ (farmers) ಹೊಸದಾಗಿ ಕೃಷಿ ವ್ಯಾಪಾರವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ 15 ಲಕ್ಷ ರೂಪಾಯಿ ನೀಡುವ ಯೋಜನೆಯನ್ನು ಈ ಮೂಲಕ ಪ್ರಾರಂಭಿಸಿದೆ.
ಆದರೆ ಇದನ್ನು ಪಡೆದುಕೊಳ್ಳಲು 11 ಸದಸ್ಯರಿರುವಂತಹ ರೈತರ ತಮ್ಮ ಒಕ್ಕೂಟವನ್ನು ರಚಿಸಬೇಕು. ನಂತರ ಅರ್ಜಿಯನ್ನು ಸಲ್ಲಿಸಬೇಕು. ಹಾಗಿದ್ದರೆ ಬನ್ನಿ ಈ ಯೋಜನೆ ಅಡಿಯಲ್ಲಿ ಹಣವನ್ನು ರೈತರು ಹೇಗೆ ಪಡೆಯುವುದು ಎನ್ನುವುದನ್ನು ತಿಳಿಯೋಣ ಬನ್ನಿ. ಈ ವರ್ಷ ಹಾಗೂ ಮುಂದಿನ ವರ್ಷದ ಒಳಗೆ ಇಂತಹ ಸಾವಿರ ಗುಂಪುಗಳನ್ನು ರಚಿಸಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ. ಈ ಯೋಜನೆಯ ಮೂಲಕ ರೈತರ ಸ್ವಾವಲಂಬಿ ಆಗಬಹುದು ಎನ್ನುವ ದೂರ ದೃಷ್ಟಿ ಸರ್ಕಾರದ್ದು.
ಈ ಯೋಜನೆ ಅಡಿಯಲ್ಲಿ ನೇರವಾಗಿ ರೈತರ ಖಾತೆಗೆ 15 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಲಾಗುತ್ತದೆ. ಈ ಹಣದ ಮೂಲಕ ಅವರು ಕೃಷಿಗೆ ಸಂಬಂಧಿಸಿದ ವ್ಯವಹಾರಗಳನ್ನು ಪ್ರಾರಂಭಿಸುತ್ತಾರೆ ಹಾಗೂ ಅದಕ್ಕೆ ಬೇಕಾಗಿರುವಂತಹ ಎಲ್ಲಾ ಸಂಪನ್ಮೂಲಗಳನ್ನು ಕೂಡ ಸರ್ಕಾರ ಒದಗಿಸುತ್ತದೆ. ಆದರೆ ಈ ಗುಂಪಿನಲ್ಲಿ 11 ರೈತರ ಅಸ್ತಿತ್ವ ಇರಲೇಬೇಕು. ಸೂಕ್ತ ದಾಖಲೆಗಳ ಜೊತೆಗೆ ಕೃಷಿ ಯೋಗ್ಯವಾಗಿರುವಂತಹ ಭೂಮಿ ಹಾಗೂ ಭಾರತದ ಪೌರತ್ವವನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಪಾಸ್ಪೋರ್ಟ್ ಸೈಜ್ ಫೋಟೋ ಸೇರಿದಂತೆ ಎಲ್ಲ ದಾಖಲಾತಿ ಪತ್ರಗಳನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳಬೇಕು.
ಇದನ್ನೂ ಓದಿ..ನೀವು ಕುಳಿತ ಜಾಗದಲ್ಲೇ ನಿಮ್ಮ ವೋಟರ್ ID ಹೆಸರು ತಿದ್ದುಪಡಿ ಮಾಡೋದು ಹೇಗೆ?ಇಲ್ಲಿದೆ ಸಂಪೂರ್ಣ ಮಾಹಿತಿ
ನಂತರ www.enam.gov.in ವೆಬ್ಸೈಟ್ಗೆ ನಿಮ್ಮ ದಾಖಲಾತಿಗಳ ವಿವರವನ್ನು ತುಂಬಿಸಬೇಕು. ಹಾಗೂ ಅವುಗಳನ್ನು ಪೂರೈಸಲು ಬೇಕಾಗಿರುವಂತಹ ದಾಖಲಾತಿ ಸಾಫ್ಟ್ ಕಾಪಿಗಳನ್ನು ಕೂಡ ಪೂರೈಸಬೇಕು. ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಪರೀಕ್ಷಿಸಿದರೆ ಈ ಯೋಜನೆಯ ಕುರಿತಂತೆ ಸಂಪೂರ್ಣ ವಿವರಗಳು ನಿಮಗೆ ಅಧಿಕೃತವಾಗಿ ದೊರಕಲಿದ್ದು ಇದರ ಲಾಭವನ್ನು ಪಡೆಯುವ ಅರ್ಹತೆ ನಿಮ್ಮಲ್ಲಿ ಇದ್ದರೆ ತಪ್ಪದೇ ಇದನ್ನು ಉಪಯೋಗಿಸಿಕೊಳ್ಳಿ.