ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ಸರ್ಕಾರ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಉದ್ಯಮಶೀಲತಾ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸುವುದು ಹಾಗೂ ಅರ್ಹತೆಗಳೇನು ಇರಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಯೋಜನೆಗಳಲ್ಲಿ ಉದ್ಯಮ ಶೀಲತಾ ಯೋಜನೆ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಯಾವುದೆ ರೀತಿಯ ವ್ಯಾಪಾರ, ಬಿಸಿನೆಸ್ ಪ್ರಾರಂಭಿಸಲು ಸಾಲ ಸೌಲಭ್ಯ, 70% ಸಬ್ಸಿಡಿ ಪಡೆಯಬಹುದು.
ಉದ್ಯಮಶೀಲತಾ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅಗಸ್ಟ್ 5ನೇ ತಾರೀಖಿನಂದು ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ, ಸಪ್ಟೆಂಬರ್ 15 ರವರೆಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ಅಫಿಶಿಯಲ್ ವೆಬ್ ಸೈಟ್ ಓಪನ್ ಮಾಡಿದ ನಂತರ ಉದ್ಯಮ ಶೀಲತಾ ಯೋಜನೆ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಉದ್ಯಮ ಶೀಲತಾ ಯೋಜನೆ ಬಗ್ಗೆ ಮಾಹಿತಿ ಸಿಗುತ್ತದೆ.
ಯಾವುದೆ ವ್ಯಾಪಾರ, ಬಿಸಿನೆಸ್ ಪ್ರಾರಂಭಿಸಲು ಬ್ಯಾಂಕ್ ನಿಂದ ಸಾಲ ಸೌಲಭ್ಯ ಸಿಗುತ್ತದೆ ಹಾಗೂ 70% ಸಬ್ಸಿಡಿ ಉಚಿತವಾಗಿ ಸಿಗುತ್ತದೆ. ಈ ಯೋಜನೆ ಅಡಿಯಲ್ಲಿ 2 ಲಕ್ಷ ರೂಪಾಯಿವರೆಗೆ ಸಬ್ಸಿಡಿ ಕೊಡಲಾಗುತ್ತದೆ. ಉದ್ಯಮಶೀಲತಾ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳನ್ನು ಹೊಂದಿರಬೇಕು. ಪರಿಶಿಷ್ಟ ಜಾತಿಯಲ್ಲಿ ಬರುವ ಲಂಬಾಣಿ ಹಾಗೂ ಬಂಜಾರ ಜನಾಂಗದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕರ್ನಾಟಕದಲ್ಲಿ ವಾಸವಾಗಿರಬೇಕು. ಅರ್ಜಿ ಸಲ್ಲಿಸುವ ವ್ಯಕ್ತಿಗೆ 21 ವರ್ಷ ಕಂಪ್ಲೀಟ್ ಆಗಿರಬೇಕು, 50 ವರ್ಷ ಮೀರಿರಬಾರದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಭಾಗದಲ್ಲಿ 1,50,000ರೂ ವರೆಗೆ, ನಗರ ಪ್ರದೇಶದಲ್ಲಿ ಎರಡು ಲಕ್ಷದ ಒಳಗಡೆ ಆದಾಯ ಹೊಂದಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಬಿಪಿಎಲ್ ರೇಷನ್ ಕಾರ್ಡ್, ಭಾವಚಿತ್ರ ಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಸರ್ಕಾರದ ಯಾವುದೆ ಯೋಜನೆಯ ಮೂಲಕ ಒಂದು ಲಕ್ಷಕ್ಕಿಂತ ಮೇಲ್ಪಟ್ಟು ಸಾಲ ಸೌಲಭ್ಯವನ್ನು ಪಡೆದಿರಬಾರದು.
ವ್ಯಾಪಾರ ಮಾಡುವವರು ತಮ್ಮದೆ ಸ್ವಂತ ಜಾಗವನ್ನು ಹೊಂದಿರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಓಪನ್ ಆದ ನಂತರ ಉದ್ಯಮ ಶೀಲತಾ ಯೋಜನೆ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಒಂದು ಫಾರ್ಮ್ ಓಪನ್ ಆಗುತ್ತದೆ. ನಂತರ ಜಿಲ್ಲೆ, ತಾಲೂಕು, ತಾಂಡಾದ ಹೆಸರು, ಅರ್ಜಿದಾರನ ಪೂರ್ಣ ಹೆಸರು, ಮೊಬೈಲ್ ನಂಬರ್, ತಂದೆಯ ಹೆಸರು, ವಿಳಾಸ, ವಯಸ್ಸು, ಶಿಕ್ಷಣ, ಜಾತಿ ಅಥವಾ ಉಪಜಾತಿ, ಕುಟುಂಬದ ವಾರ್ಷಿಕ ವರಮಾನ, ಆಧಾರ್ ಕಾರ್ಡ್ ನಂಬರ್, ರೇಷನ್ ಕಾರ್ಡ್ ನಂಬರ್ ಹಾಕಬೇಕು, ಇದುವರೆಗೂ ನಿಗಮದಡಿ ಅರ್ಜಿ ಸಲ್ಲಿಸಿದ್ದರೆ ಇದು ಎಷ್ಟನೆ ಅರ್ಜಿ ಎಂಬುದನ್ನು ಹಾಕಬೇಕು, ಸಾಲಸೌಲಭ್ಯ ಯಾವ ಉದ್ದೇಶಕ್ಕಾಗಿ ಪಡೆಯುತ್ತೀರಾ ಎನ್ನುವುದನ್ನು ಹಾಕಬೇಕು, ಅರ್ಜಿದಾರನು ಮೊದಲು ಕೆಲಸ ಮಾಡಿದ ಅನುಭವವಿದ್ದರೆ ವಿವರವನ್ನು ಹಾಕಬೇಕು.
ಬ್ಯಾಂಕ್ ಅಕೌಂಟ್ ನಂಬರ್, ಐಎಫ್ಎಸ್ ಕೋಡ್, ಕುಟುಂಬದ ಸದಸ್ಯರ ವಿವರವನ್ನು ಹಾಕಬೇಕು. ನಂತರ ಫೋಟೋ, ಸಹಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್, ಅನುಭವ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಕೊಡಬೇಕಾಗುತ್ತದೆ. ನಂತರ ಅಪ್ಲಿಕೇಷನ್ ಹಾಕಿರುವುದರ ಬಗ್ಗೆ ಒಂದು ಪ್ರಿಂಟ್ ತೆಗೆದುಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ನಿರುದ್ಯೋಗಿ ಯುವಕರಿಗೆ ತಿಳಿಸಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430