ದೇಶದ ಬಹುಪಾಲು ಜನರು ಉತ್ತಮ ಶಿಕ್ಷಣ ಪಡೆಯಬೇಕು, ಸರ್ಕಾರಿ ಉದ್ಯೋಗ ಗಳಿಸಬೇಕು ಮತ್ತು ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಿಸಿಕೊಳ್ಳಬೇಕು ಎನ್ನುವ ಹಂಬಲವನ್ನು ಹೊಂದಿರುತ್ತಾರೆ. ಆದರೆ, ಸರ್ಕಾರಿ ಉದ್ಯೋಗವನ್ನು ಪಡೆಯುವುದು ಅಷ್ಟು ಸುಲಭದ ಕೆಲಸ ಅಲ್ಲ. ಅದನ್ನು ಪಡೆಯಲು ಸಾಕಷ್ಟು ಶ್ರಮ ಶ್ರದ್ಧೆ ಅಗತ್ಯ ಇರುತ್ತದೆ.

ಸಾಮಾನ್ಯವಾಗಿ ಗೌರ್ಮೆಂಟ್ ಕೆಲಸಗಳಿಗೆ ನೋಟಿಫಿಕೇಶನ್’ಗಳು ಬರುವುದು ವಿರಳ. ಅದರಲ್ಲಿ, ಒಂದು ಉದ್ಯೋಗಕ್ಕೆ ಸಾವಿರಾರು ಜನರು ಪೈಪೋಟಿ ಮಾಡುತ್ತಾರೆ. ಇನ್ನು, ಕೆಲವು ಮಂದಿ ಅರ್ಧದಲ್ಲಿ ಸರ್ಕಾರಿ ಕೆಲಸದ ಮೇಲೆ ಇರುವ ಆಸೆಯನ್ನೇ ಕೈ ಬಿಟ್ಟು ಬಿಡುತ್ತಾರೆ. ಇನ್ನು ಸಾಕಷ್ಟು ಜನ ಎಷ್ಟೇ ಬಾರಿ ವಿಫಲರಾದರು ಅವರ ಗುರಿ ಸಾಧನೆ ಆಗುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರೈತನ ಮಗಳಿಗೆ ಏಕಕಾಲದಲ್ಲಿ ಮೂರು ಕೆಲಸ ಸಿಕ್ಕಿದೆ.

ಹೌದು ಈ ಲೇಖನದಲ್ಲಿ ಆ ಕುರಿತಾದ ಮಾಹಿತಿ ಪಡೆಯೋಣ ಬನ್ನಿ.
ತೆಲಂಗಾಣ ಜಗಿತ್ಯಾಲ ಜಿಲ್ಲೆಯ ಕೊಡಿಮ್ಯಾಲ ಮಂಡಲದ ಚೆಪ್ಯಾಲ ಗ್ರಾಮದ ಮುದುಗಂಪಳ್ಳಿ ಚಂದ್ರಯ್ಯ ಭಾರತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ. ಇತ್ತೀಚಿಗಷ್ಟೇ ಹಿರಿಯ ಮಗಳು ಶ್ರವತಿ ಮದುವೆ ಮಾಡಲಾಗಿದೆ.

ಎರಡನೇ ಮಗಳು ಜಯಾ ಮೊದಲಿನಿಂದಲೂ ಸಹ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡುವುದು ಅಲ್ಲದೆ ಎಲ್ಲದರಲ್ಲೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಳು. ಜಯಾ ಅವರು 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ಬಸರಾದ ಐಐಐಟಿ ಕಾಲೇಜಿನಲ್ಲಿ ಸೀಟು ಪಡೆದರು. ಅಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಗೇಟ್ ಪರೀಕ್ಷೆಯಲ್ಲಿ ಉತ್ತಮ ರಾಂಕ್ ಪಡೆದರು.

ಹೈದರಾಬಾದ್ ನಾ ಜೆಎನ್ ಟಿಯುನಲ್ಲಿ ಎಂ ಟೆಕ್ ಮುಗಿಸಿದ್ದಾರೆ. ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಜಯಾ, ಇತ್ತೀಚಿಗೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಎಇಇ, ಪುರಸಭೆ ಟೌನ್ ಪ್ಲಾನಿಂಗ್ ಆಫೀಸರ್ ಮತ್ತು ಅಸಿಸ್ಟೆಂಟ್ ಇಂಜಿನೀಯರಿಂಗ್ ಹುದ್ದೆಗಳಿಗೆ ಆಯ್ಕೆ ಆಗಿದ್ದಾರೆ. ಇದರಲ್ಲಿ ಎಇಇ ಕೆಲಸಕ್ಕೆ ಸೇರುವುದಾಗಿ ಜಯಾ ತಿಳಿಸಿದ್ದಾರೆ. ವಿದ್ಯಾಭ್ಯಾಸಕ್ಕೆ ಬಡತನ ಅಡ್ಡಿಯಲ್ಲ, ಪರಿಶ್ರಮವಿದ್ದರೆ ಎಂತಹ ಗೆಲುವನ್ನು ಸಾಧನೆ ಮಾಡಬಹುದು ಎನ್ನುತ್ತಾರೆ ಈ ರೈತನ ಮಗಳು.

ಚಿಕ್ಕಂದಿನಿಂದಲೂ ಮಗಳು ಎಲ್ಲದರಲ್ಲೂ ಯಶಸ್ವಿ ಆಗಿದ್ದು, ಒಂದೇ ಬಾರಿಗೆ 3 ಸರ್ಕಾರಿ ಕೆಲಸಕ್ಕೆ ಆಯ್ಕೆ ಆಗಿರುವುದು ಹೆಮ್ಮೆ ತಂದಿದೆ ಎಂದು ಜಯಾ ಅವರ ತಂದೆ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಮನಸ್ಸಿನಲ್ಲಿ ಗುರಿ, ಛಲ, ಅಚಲವಾದ ನಂಬಿಕೆ ಇದ್ದರೆ ಯಾವುದೇ ರೀತಿಯ ಕೆಲಸವನ್ನು ಸಾಧಿಸಬಹುದು ಎನ್ನುವುದಕ್ಕೆ ಇದು ಒಂದು ಉದಾಹರಣೆ. ಈ ರೀತಿಯ ಹೆಣ್ಣು ಮಕ್ಕಳ ಸಾಧನೆ ಎಲ್ಲರಿಗೂ ಸ್ಪೂರ್ತಿ ತುಂಬುವಂತದ್ದು ಮತ್ತು ಇತರೆ ಹೆಣ್ಣು ಮಕ್ಕಳಿಗೆ ಮಾದರಿ. ವಿದ್ಯೆ ಒಂದು ಕೈಯಲ್ಲಿ ಇದ್ದರೆ ಯಾವುದೇ ಬಡತನ ಸಿರಿತನ ಯಶಸ್ಸು ಗಳಿಕೆಗೆ ಅಡ್ಡಿಯಾಗುವುದಿಲ್ಲ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!