ಹುಳುಕು ಹಲ್ಲಿನ ಸಮಸ್ಯೆ ಕೆಲವರಲ್ಲಿ ಕಾಣಿಸಿಕೊಳ್ಳುತ್ತದೆ, ಈ ಸಮಸ್ಯೆ ಬಂದ್ರೆ ನರಕ ಯಾತನೆ ಅನುಭವಿಸಬೇಕಾಗುತ್ತದೆ ಅಷ್ಟೊಂದು ನೋವನ್ನು ಕೊಡುತ್ತದೆ. ಸಾಮಾನ್ಯವಾಗಿ ಈ ಹುಳುಕು ಹಲ್ಲಿನ ಸಮಸ್ಯೆ ಮಕ್ಕಳಲ್ಲಿ ಅಷ್ಟೇ ಅಲ್ದೆ ವಯಸ್ಸಾದವರಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರ ನೀಡುವಂತ ಒಂದಿಷ್ಟು ಮನೆಮದ್ದುಗಳನ್ನು ಈ ಮೂಲಕ ತಿಳಿಯೋಣ, ಇದರಿಂದ ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಮನೆಯಲ್ಲೆಯೇ ಬಳಸುವಂತ ಪದಾರ್ಥಗಳನ್ನು ಬಳಸಿ ಹುಳುಕು ಹಲ್ಲಿನ ಸಮಸ್ಯೆಗೆ ಪರಿಹಾರವನ್ನು ಹೇಗೆ ಪಡೆದುಕೊಳ್ಳಬಹುದು ಅನ್ನೋದನ್ನ ಹೇಳುವುದಾದರೆ, ಅಡುಗೆಗೆ ಬಳಸುವಂತ ಉಪ್ಪನ್ನು ತಡೆದುಕೊಂಡು ಒಂದು ಗ್ಲಾಸ್ ನೀರಿನಲ್ಲಿ ಅರ್ಧ ಚಮಚ ಅಡುಗೆ ಉಪ್ಪನ್ನು ಹಾಕಿ ಅದನ್ನು ಚನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಮಾಡಿದ ನೀರನ್ನು ಬಾಯಲ್ಲಿ ಹಾಕಿ ಮುಕ್ಕಳಿಸುವುದರಿಂದ ಹಲ್ಲಿನಲ್ಲಿರುವಂತ ಹುಳುಕು ನಿವಾರಣೆಯಾಗುತ್ತದೆ. ಇದರಲ್ಲಿರುವ ಉಪ್ಪಿನಂಶ ಹುಳುಕು ಹಲ್ಲನ್ನು ನಿಯಂತ್ರಿಸುತ್ತದೆ. ಈ ವಿಧಾನವನ್ನು ದಿನದಲ್ಲಿ ಮೂರೂ ನಾಲ್ಕು ಬಾರಿ ಮಾಡಬೇಕಾಗುತ್ತದೆ.
ಇನ್ನು ಎರಡನೆಯ ಮನೆಮದ್ದು ಯಾವುದು ಅನ್ನೋದನ್ನ ಹೇಳುವುದಾದರೆ ಅಡುಗೆಗೆ ಬಳಸುವಂತ ಈರುಳ್ಳಿ. ಹೌದು ಒಂದು ಹಸಿ ಈರುಳ್ಳಿಯನ್ನು ತಗೆದುಕೊಂಡು ವೃತ್ತಾಕಾರದಲ್ಲಿ ಅದನ್ನು ಕಟ್ ಮಾಡಿಕೊಂಡು ಹುಳುಕು ಹಲ್ಲಿನ ಮೇಲೆ ಕಟ್ ಮಾಡಿದ ಈರುಳ್ಳಿಯನ್ನು ಇಡುವುದರಿಂದ ಈರುಳ್ಳಿಯಲ್ಲಿರುವಂತ ಅಂಶ ಹಲ್ಲಿನಲ್ಲಿರುವಂತ ಕೆಟ್ಟ ಬ್ಯಾಕ್ಟಿರೀಯಾವನ್ನು ನಿವಾರಿಸುತ್ತದೆ. ಅಷ್ಟೇ ಅಲ್ದೆ ಹಲ್ಲು ನೋವನ್ನು ಸಹ ಈರುಳ್ಳಿ ಕಡಿಮೆ ಮಾಡುತ್ತದೆ.
ಮೂರನೆಯ ಮನೆಮದ್ದು ಯಾವುದು ಅನ್ನೋದನ್ನ ತಿಳಿಯುವುದಾದರೆ, ಒಂದು ಗ್ಲಾಸ್ ಬಿಸಿನೀರಿನಲ್ಲಿ ಎರಡು ಪೇರಳೆ ಎಲೆ ಹಾಗೂ ಒಂದು ಟೀ ಚಮಚ ಉಪ್ಪನ್ನು ಹಾಕಿ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಆ ನೀರನ್ನು ಬಾಯಲ್ಲಿ ಹಾಕಿ ಮುಕ್ಕಳಿಸುವುದರಿಂದ ಹುಳುಕು ಹಲ್ಲು ನಿವಾರಣೆಯಾಗಿ ಹಲ್ಲು ನೋವು ಕಡಿಮೆಯಾಗುವುದು. ಈ ಮನೆಮದ್ದುಗಳು ನಿಮ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ತಿಳಿಯಲು ಹಂಚಿಕೊಳ್ಳಿ, ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.