ಇತ್ತೀಚೆಗಷ್ಟೇ ವಿದ್ಯಾರ್ಥಿಗಳೆಲ್ಲ ಸೇರಿ ತಮ್ಮ ಶಿಕ್ಷಕರಿಗೆ ಮನೆ ಕಟ್ಟಿಕೊಟ್ಟ ವಿಚಾರವನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಶಿಕ್ಷಕರು ತಮ್ಮ ಬಡ ವಿದ್ಯಾರ್ಥಿನಿಯ ಸಲುವಾಗಿ ತಮ್ಮ ನಿವೃತ್ತಿಯ ಪೆನ್ಷನ್ ಹಣದಿಂದ ಮನೆಯನ್ನು ಕಟ್ಟಿಸಿ ಕೊಟ್ಟಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಿವೃತ್ತಿ ಹಣ ಬಂದ್ರೆ ಒಂದು ಕಾರು ತಗೋಬೇಕು, ಬ್ಯಾಂಕಲ್ಲಿ ಫಿಕ್ಸೆಡ್ ಡೆಪೋಸಿಟ್ ಇಟ್ಟು ಬಡ್ಡಿಯಲ್ಲೇ ಜೀವನ ಮಾಡಬೇಕು, ಸುಂದರ ಮನೆ ಕಟ್ಟಿ ಆರಾಮಾಗಿ ಇರಬೇಕು ಅಂತ ಸರ್ಕಾರಿ ಉದ್ಯೋಗಿಗಳು ಲೆಕ್ಕಾ ಹಾಕುತ್ತಾ ಇರುತ್ತಾರೆ ಆದರೆ ಉಡುಪಿಯ ವ್ಯಕ್ತಿ ಒಬ್ಬರು ಎಲ್ಲರ ಹಾಗೆ ಮಾಡದೆ ಇವರು ಮಾಡಿರೋ ಕೆಲಸದಿಂದ ಇವರು ಇಡೀ ದೇಶಕ್ಕೆ ಮಾದರಿ ಆಗಿದ್ದರೆ. ಒಬ್ಬ ಶಿಕ್ಷಕ ಮುಂದಿನ ಪೀಳಿಗೆಗೆ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಒಂದು ಬಲಿಷ್ಠ ಸುಸಂಸ್ಕೃತ ದೇಶವನ್ನು ರೂಪಿಸಬಲ್ಲರು ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಉಡುಪಿಯ ನಿಟ್ಟೂರು ಹೈಸ್ಕೂಲಿನ ಹೆಡ್ ಮಾಸ್ಟರ್ ಮುರಳಿ ಕಡೆಕಾರು ಉದಾಹರಣೆ ಆಗಿದ್ದಾರೆ.
ಮುರಳಿ ಸರ್ ಇವರು ಸತತ ಮೂವತ್ತೇಳು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನವೆಂಬರ್ 1 ಕ್ಕೆ ನಿವೃತ್ತಿ ಆದರು. ಸರ್ಕಾರದಿಂದ ಬಂದ ಮೊತ್ತದಲ್ಲಿ ತನ್ನದೇ ಶಾಲೆಯ ಕೊರಗ ಸಮುದಾಯದ ಬಡ ವಿದ್ಯಾರ್ಥಿನಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಮಳೆಗಾಲದಲ್ಲಿ ಸೋರುತ್ತಿದ್ದ, ಬೇಸಿಗೆಯಲ್ಲಿ ಸುಡುತ್ತಿದ್ದ ಮನೆಗೆ ಮುಕ್ತಿ ಸಿಕ್ಕಿ, ಈ ಮೂಲಕ ಸುಂದರ ಸೂರು ನಯನಾ ಎಂಬ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಿಕ್ಕಿದೆ.
ಮುರಳಿ ಅವರು ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ತಮ್ಮ ಶಾಲೆಯಲ್ಲಿರುವ 170 ವಿದ್ಯಾರ್ಥಿಗಳ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಅಷ್ಟೇ ಅಲ್ಲದೆ ಕುಟುಂಬದ ಆರ್ಥಿಕ ಪರಿಸ್ಥಿತಿ ಮನೆಯ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಕೊಡಿಸುತ್ತಾರೆ. ಗುಡಿಸಲು ಮಾದರಿಯ ಮನೆಯಲ್ಲಿದ್ದ ನಯನಾಳಿಗೆ ತನ್ನ ಸ್ವಂತ ಹಣದಲ್ಲಿ ಮನೆ ಕಟ್ಟಿ ಕೊಡಬೇಕು ಎಂಬ ಅಭಿಲಾಷೆ ಹಿಂದಿದ್ದ ಮುರಲಿ ಅವರ ಕನಸು ಕೈಗೂಡಿದೆ. ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ಸ್ವಾಮೀಜಿ ನಯನಾಳ ಮನೆಯಲ್ಲಿ ದೀಪ ಬೆಳಗಿದರು.
ಮಾಧ್ಯಮದ ಜೊತೆ ಮಾತನಾಡಿದ ವಿದ್ಯಾರ್ಥಿನಿ ನಯನ, ನಮ್ಮ ಮನೆ ಮಳೆಗಾಲದಲ್ಲಿ ಐದಾರು ಕಡೆ ಸೋರುತ್ತಿತ್ತು. ಮನೆಯಲ್ಲಿ ಏಳು ಜನ ಇರುವುದು ಬಹಳ ಕಷ್ಟವಾಗಿತ್ತು. ಮುರಳಿ ಸರ್ ನಮ್ಮ ಕಷ್ಟ ಅರಿತು ಮನೆ ಕಟ್ಟಿಸಿಕೊಟ್ಟಿದ್ದಾರೆ. ನಾನು ಚೆನ್ನಾಗಿ ಕಲಿತು ಶಾಲೆಗೂ ಮುರಲಿ ಸರ್ ಗೂ ಹೆಸರು ತಂದು ಕೊಡುತ್ತೇನೆ ಎಂದು ಹೇಳುವ ನಯನಾ ಅವರ ಮಾತಿನಲ್ಲಿ ದೈನ್ಯತೆ ಇದ್ದಿತ್ತು ಹಾಗೂ ಅವರ ಶಿಕ್ಷಕರ ಮೇಲೆ ಇದ್ದ ಗೌರವವನ್ನೂ ಸಹ ನಾವು ಗಮನಿಸಬಹುದು. ಈ ಸಂದರ್ಭದಲ್ಲಿ ನಯನ ಭಾವುಕರಾಗಿದ್ದು ಕೂಡಾ ಸುಳ್ಳಲ್ಲ. ಮೂವತ್ತೇಳು ವರ್ಷದಲ್ಲಿ ಮುರಲಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.
ರಾಜ್ಯದಲ್ಲೇ ಶಾಲೆಯಲ್ಲಿ ಮೊದಲು ಬಿಸಿಯೂಟ, ಉಚಿತ ಗ್ಯಾಸ್, ವಿದ್ಯುತ್, ಸ್ಕಾಲರ್ಶಿಪ್, ಉಳಿತಾಯ ಖಾತೆಮನೆ, ವಿದ್ಯೆ, ಉದ್ಯೋಗ ಹೀಗೆ ಸೇವೆಯೆಂಬ ಯಜ್ಞವನ್ನೇ ಕೈಗೊಂಡಿದ್ದರು. ಶಿಕ್ಷಕನ ಕೆಲಸಕ್ಕೆ ಚೌಕಟ್ಟು ಪರಿಧಿ, ಮಿತಿಯೇ ಇಲ್ಲ ಎಂಬೂದು ಮುರಲಿ ಪಾಲಿಸಿಕೊಂಡು ಬಂದಿರುವ ನಿಯಮ. ಮುರಳಿ ಅವರು ಅನುದಾನಿತ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸಿ ನೆಮ್ಮದಿಯ ನಿವೃತ್ತಿಯನ್ನು ಪಡೆದಿರುವುದು ತನಗೆ ಹೆಮ್ಮೆ ಎಂದು ಹೇಳಿದರು.
ಬಡಮಕ್ಕಳ ಕಷ್ಟ ಏನು ಎಂದು ಅರಿಯಲು, ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಬಡ ಮಕ್ಕಳ ಕಣ್ಣಲ್ಲಿ ಪ್ರೀತಿಯ ಮಿಂಚು ಕಾಣಲು ನನಗೆ ಸಾಧ್ಯವಾಗಿದೆ. ಶಿಕ್ಷಕನಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡುವ ಅವಕಾಶ ಇದೆ. ಮಕ್ಕಳ ಪೋಷಕರ ಊರವರ ಪ್ರೀತಿ ಗಳಿಸುವ ಅವಕಾಶ ಒಂದಿದ್ದರೆ ಅದು ಶಿಕ್ಷಕರಿಗೆ ಮಾತ್ರ ಎಂದರು. ಈ ಮೂಲಕ ವೃತ್ತಿ ಜೀವನವನ್ನು ಸಾರ್ಥಕ ಕಾರ್ಯದ ಮೂಲಕ ಮುರಲಿ ಅವರು ಮುಗಿಸಿದ್ದಾರೆ. ರಿಟೈರ್ಡ್ ಮೆಂಟ್ ಆದ ಮುರಲಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿನಂದಿಸಿದ್ದಾರೆ. ತನ್ನ ಕರ್ತವ್ಯದ ಜೊತೆ ಏನೆಲ್ಲಾ ಮಾಡುವ ಅವಕಾಶ ಇದೆ ಎಂಬೂದು ರಾಜ್ಯದ ಎಲ್ಲಾ ಶಿಕ್ಷಕರಿಗೆ ಮುರಲಿ ಅವರೇ ಮಾದರಿ ಆಗಿದ್ದಾರೆ.