ಜೀರ್ಣಿಸಲು ಕೇವಲ ಘನ ಪದಾರ್ಥಗಳು ಮಾತ್ರ ಅಲ್ಲ ದ್ರವ ಪದಾರ್ಥಗಳೂ ಕೂಡಾ ಅಷ್ಟೇ ಮುಖ್ಯ. ದ್ರವ ಪದಾರ್ಥಗಳು ಅಂದರೆ ಬರೀ ಎಣ್ಣೆ ಮಾತ್ರ ಅಲ್ಲ ಟೀ ಕಾಫೀ ಎಲ್ಲವೂ ಸೇರುತ್ತದೆ. ಇನ್ನು ಪ್ರಪಂಚದಾದ್ಯಂತ ಎಲ್ಲರೂ ಊಟ ತಿಂಡಿ ಇಲ್ಲದೆ ಬದುಕಿದರೂ ಬದುಕಬಹುದೇನೋ ಆದರೆ ಕೆಲವರಿಗೆ ಟೀ ಕಾಫಿ ಇಲ್ಲಾ ಅಂದ್ರೆ ದಿನವೇ ಕಳಿಯಲ್ಲ. ಅಷ್ಟೊಂದು ಟೀ ಕಾಫಿ ಗೆ ಜನರು ತಮ್ಮನ್ನು ತಾವು ಒಗ್ಗಿಸಿಕೊಂಡಿರುತ್ತಾರೆ.ಇನ್ನು ತಲೆ ನೋವಿಗೆ ಅಂತ ಟೀ ತೆಗೆದುಕೊಳ್ಳುವವರು ಇರುತ್ತಾರೆ. ಅವರಿಗೆ ಸಾದ ಟೀ ಯಾವ ಪ್ರಯೋಜನವೂ ಬೀರುವುದೇ ಇಲ್ಲ ಆಗೆಲ್ಲ ಬಹಳ ಸ್ಟ್ರಾಂಗ್ ಟೀ ಬೇಕಾಗುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚೇ ಸೇವನೆ ಆಗುತ್ತದೆ.
ಪ್ರತಿಯೊಬ್ಬರಿಗೂ ಅವರವರದ್ದೇ ಆದ ಅಭ್ಯಾಸ ಹವ್ಯಾಸ ಇರತ್ತೆ. ಹೀಗೆಯೇ ಕೆಲವರಿಗೆ ಊಟ ಆದ ನಂತರ ಟೀ ಕುಡಿಯುವ ಅಭ್ಯಾಸ ಇರುತ್ತದೆ ಇನ್ನು ಕೆಲವರಿಗೆ ಊಟಕ್ಕೂ ಮುಂಚೆ ಟೀ ಕುಡಿಯುವ ಅಭ್ಯಾಸ ಇರುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ಬಿರಿಯಾನಿ ಅಂತಹ ಪದಾರ್ಥಗಳನ್ನು ತಿಂದರೆ ತಕ್ಷಣವೇ ಅವರಿಗೆ ಟೀ ಕುಡಿಯಲೇಬೇಕಂತೆ. ಅದಕ್ಕೆ ಕಾರಣ ತಿಂದ ಬಿರಿಯಾನಿ ಜೀರ್ಣ ಆಗಬೇಕು ಎಂದು ತಿಂದ ತಕ್ಷಣವೇ ಟೀ ಕುಡಿಯುತ್ತಾರಂತೆ.
ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಟೀ ಕಾಫಿ ಏನಾದರೂ ಕುಡಿಯುವ ಮೊದಲು ಸ್ವಲ್ಪ ನೀರನ್ನು ಕುಡಿಯಬೇಕು ಎಂದು ಹೇಳುತ್ತಿದ್ದರಂತೆ. ಅದರಲ್ಲೂ ನಿಂತು ನೀರು ಕುಡಿಯಬಾರದು ಕುಳಿತುಕೊಂಡು ನೀರು ಕುಡಿಯಬೇಕು ಇದು ಆರೋಗ್ಯಕ್ಕೆ ಕೂಡಾ ತುಂಬಾ ಒಳ್ಳೆಯದು ಎಂದು ಹೇಳುತ್ತಿದ್ದರು. ತಲೆಮಾರುಗಳಿಂದ ತಲೆಮಾರುಗಳು ಬದಲಾಗುತ್ತಲೇ ಬಂದಿವೆ ಆದರೂ ಸಹ ಕೆಲವು ಪದ್ಧತಿಗಳು ಬದಲಾಗಿಲ್ಲ. ಇಂದಿಗೂ ಕೂಡ ಕೆಲವರಿಗೆ ಟೀ ಕಾಫಿ ಕುಡಿಯುವ ಮೊದಲು ಕೆಲವರಿಗೆ ಅಭ್ಯಾಸ ಆಗಿರುತ್ತದೆ. ಕೆಲವರಿಗೆ ಪ್ರತೀ ದಿನ ಅವರು ಟೀ ಕಾಫಿ ಕುಡಿಯುವ ಸಮಯಕ್ಕೆ ಒಂದು ದಿನ ಸಿಗದೆ ಹೋದರೆ ತಲೆನೋವು ಆರಂಭ ಆಗಿಬಿಡುತ್ತದೆ.
ಇದು ಒಂದು ರೀತಿಯ ಮಾನಸಿಕ ಸ್ಥಿತಿ ಎಂದರೂ ಸಹ ಆರೋಗ್ಯಕ್ಕೆ ಇದು ಅಷ್ಟೊಂದು ಒಳ್ಳೆಯದೇನೂ ಅಲ್ಲ. ಇನ್ನು ನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬ ಒಳ್ಳೆಯದು ಅದರಲ್ಲೂ ಟೀ ಕಾಫಿ ಕುಡಿಯುವ ಮೊದಲು ನೀರನ್ನು ಕುಡಿಯುವುದು ಟೀ ಕಾಫಿ ಕುಡಿಯುವುದರಿಂದ ಶರೀರಕ್ಕೆ ಇದರಿಂದ ಬರುವ ಬಿಸಿ ಬಿಸಿ ಹಬೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಅಂದರೆ ಟೀ ಅಲ್ಲಿ ಇರುವ ಕೆಲವು ಆಮ್ಲಗಳು ನಮ್ಮ ಜಠರದಲ್ಲಿ ಇಳಿದಾಗ ಉಂಟಾಗುವ ಹಾನಿಯನ್ನು ನಾವು ಮೊದಲೇ ಕುಡಿದ ನೀರು ತಡೆಗಟ್ಟುತ್ತದೆ. ಇದರ ಹಿಂದೆ ಕಾರಣ ಏನೇ ಇದ್ದರೂ ಸಹ ವೈಜ್ಞಾನಿಕವಾಗಿಯೇ ಟೀ ಕಾಫಿ ಕುಡಿಯುವ ಮೊದಲು ಸ್ವಲ್ಪ ನೀರು ಕುಡಿಯುವುದು ಒಳ್ಳೆಯದು ಎಂದು ಸಾಭೀತು ಆಗಿದೆ.