ನಮ್ಮ ದೇಶದಲ್ಲಿ ಕ್ರಿಕೆಟ್ ಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. 2018 ರಿಂದ ವಿವೊ ಕಂಪನಿ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಈಗ ಪ್ರಾಯೋಜಕತ್ವವನ್ನು ವಿವೊ ಕಂಪನಿಯನ್ನು ಬದಲಾಯಿಸಿ ಟಾಟಾ ಕಂಪನಿಗೆ ಕೊಡಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಇಂಡಿಯನ್ ಪ್ರೀಮಿಯರ್ ಲೀಗ್ ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಈ ಹಿಂದೆ ಇರುವ ವಿವೊ ಬದಲಿಗೆ ಟಾಟಾ ಗ್ರೂಪ್ ಟೈಟಲ್ ಪ್ರಾಯೋಜಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಮುಂದಿನ ಸೀಸನ್​ ಟಾಟಾ ಐಪಿಎಲ್​ 2022 ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ. ಮಂಗಳವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಪ್ರಾಯೋಜಕತ್ವ ಬದಲಾವಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಅದರಂತೆ ಟಾಟಾ ಸಮೂಹಕ್ಕೆ ಪ್ರಾಯೋಜಕತ್ವವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಚೀನಾ ವಿರೋಧಿ ಭಾವನೆಯಿಂದಾಗಿ ವಿವೊ 2020 ರಲ್ಲಿ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು ಆದರೂ 2021 ರಲ್ಲಿ ವಿವೊ ಮುಖ್ಯ ಪ್ರಾಯೋಜಕರಾಗಿತ್ತು. ಆದರೆ ಈಗ ಮತ್ತೆ ಹೊಸ ಆವೃತ್ತಿಗಾಗಿ ನೂತನ ಪ್ರಾಯೋಜಕರನ್ನು ಆಯ್ಕೆ ಮಾಡಲಾಗಿದೆ ಅದರಂತೆ ಟಾಟಾ ಗ್ರೂಪ್ ಐಪಿಎಲ್ ಟೈಟಲ್ ಸ್ಪಾನ್ಸರ್ ಆಗಲು ಮುಂದಾಗಿದ್ದಾರೆ. 2018 ರಲ್ಲಿ ವಿವೊ ಕಂಪನಿ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ 440 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು ಹಾಗೂ ಈ ಪ್ರಾಯೋಜಕತ್ವದ ಒಪ್ಪಂದವು ಐಪಿಎಲ್ 2023 ರ ನಂತರ ಮುಕ್ತಾಯಗೊಳ್ಳಬೇಕಿತ್ತು ಆದರೆ ಬಿಸಿಸಿಐ ಹಾಗೂ ವಿವೊ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪ್ರಾಯೋಜಕತ್ವ ಬದಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಕುರಿತು ಬಿಸಿಸಿಐ ಜೊತೆಗಿನ ತನ್ನ ಅಸ್ತಿತ್ವದಲ್ಲಿರುವ ಒಪ್ಪಂದವನ್ನು ಟಾಟಾಗೆ ವರ್ಗಾಯಿಸಲು ವಿವೊ ಕೂಡ ಒಪ್ಪಿದೆ. ಇದಕ್ಕೆ ಐಪಿಎಲ್​ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅದರಂತೆ  ಟಾಟಾ ಐಪಿಎಲ್ 2022 ಮತ್ತು 2023 ಸೀಸನ್‌ಗಳಿಗೆ  ಶೀರ್ಷಿಕೆ ಪ್ರಾಯೋಜಕತ್ವವನ್ನು ಹೊಂದಿರಲಿದೆ. ಈ ಎರಡು ಸೀಸನ್‌ಗಳ ಪ್ರಾಯೋಕತ್ವದ ಒಪ್ಪಂದ ಮೊತ್ತ ಇನ್ನೂ ಬಹಿರಂಗವಾಗಿಲ್ಲ. ಈ ಹಿಂದಿನಕ್ಕಿಂತ ದೊಡ್ಡ ಮೊತ್ತಕ್ಕೆ ಟಾಟಾ ಕಂಪನಿ ಟೈಟಲ್ ಪ್ರಾಯೋಕತ್ವ ಪಡೆದುಕೊಂಡಿದೆ ಎಂಬ ಸುದ್ದಿ ತಿಳಿದು ಬಂದಿದೆ.

ಏಕೆಂದರೆ ಈ ಬಾರಿ ಒಟ್ಟು 10 ತಂಡಗಳಿದ್ದು ಪಂದ್ಯಗಳ ಸಂಖ್ಯೆ 56 ರಿಂದ 74ಕ್ಕೆ ಏರಿಕೆಯಾಗಲಿದೆ. ಹೀಗಾಗಿ ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಮೊತ್ತ ಕೂಡ ಹೆಚ್ಚಾಗಲಿದೆ ಅದರಂತೆ ಎರಡು ಸೀಸನ್​ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಟಾಟಾ ದೊಡ್ಡ ಮೊತ್ತ ಪಾವತಿಸಿರುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಬದಲಾದ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!