ಟಾಟಾ ಎಂದರೆ ಕೇವಲ ಒಂದು ಕಂಪನಿಯ ಹೆಸರಲ್ಲ ಭಾರತಿಯರಿಗೆ ಒಂದು ನಂಬಿಕೆ. ಟಾಟಾ ಸರ್ವಿಸ್ ಜನರಿಗೆ ಇಷ್ಟವಾಗುತ್ತದೆ. ಟಾಟಾ ಕಂಪನಿಯ ವಿವಿಧ ಸರ್ವಿಸ್ ಹಾಗೂ ಅದು ನಡೆದು ಬಂದ ದಾರಿಯನ್ನು ಈ ಲೇಖನದಲ್ಲಿ ನೋಡೋಣ.ಜೆಂಶೆಟ್ ಜಿ ಟಾಟಾ ಸುಮಾರು 150 ವರ್ಷಗಳ ಹಿಂದೆ ಪ್ರಾರಂಭಿಸಿದ ಟಾಟಾ ಕಂಪನಿ ಜನರ ಜೀವನವನ್ನು ಬದಲಾಯಿಸಿತು. ಭಾರತ ಸ್ವಾತಂತ್ರ್ಯದ ನಂತರ ಆರ್ಥಿಕವಾಗಿ ಅಭಿವೃದ್ಧಿಯಾಗಲು ಟಾಟಾ ಕಂಪನಿ ನೆರವಾಗಿದೆ. ಲೈಫ್ ಸ್ಟೈಲ್ ಕೆಟಗೆರಿಯಲ್ಲಿ ನಮ್ಮ ಇಂಡಿಯನ್ ಮಾರ್ಕೆಟ್ ನಲ್ಲಿ ಮೋಸ್ಟ್ ಪಾಪ್ಯುಲರ್ ಕಂಪನಿಗಳಲ್ಲಿ ಒಂದು ಫಾಸ್ಟರ್ಯಾಕ್ ಕಂಪನಿ. ವಾಚ್, ಬ್ಯಾಗ್ಸ್ ನಂತಹ ಲೈಫ್ ಸ್ಟೈಲ್ ಪ್ರೊಡಕ್ಟ್ ಗಳನ್ನು ಇದು ಉತ್ಪಾದಿಸುತ್ತದೆ.
ಈ ಕಂಪನಿಯನ್ನು 1998 ರಲ್ಲಿ ಟೈಟಾನ್ ನ ಸಬ್ ಬ್ರ್ಯಾಂಚ್ ಆಗಿ ಪ್ರಾರಂಭಿಸುತ್ತಾರೆ. 1984 ರಲ್ಲಿ ಪ್ರಾರಂಭವಾದ ಟಾಟಾ ಕಂಪನಿ ಇಂಡಿಯನ್ ಸ್ಟಾಕ್ ಮಾರ್ಕೆಟ್ ನಲ್ಲಿ ಮೋಸ್ಟ್ ಸಕ್ಸೆಸ್ ಫುಲ್ ಕಂಪನಿಗಳಲ್ಲಿ ಒಂದಾಗಿದೆ. 2009ರಲ್ಲಿ ಟೈಟಾನ್ ಕಂಪನಿಯ ಶೇರ್ ಬೆಲೆ 40 ರೂಪಾಯಿ ಆಗಿತ್ತು ಈಗ 2140ರೂಪಾಯಿ ಆಗಿದೆ. ಟೈಟಾನ್ ಕಂಪನಿಯಲ್ಲಿ ಇನ್ವೆಸ್ಟ್ ಮಾಡಿ ನೂರಾರು ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದಾರೆ.
ಟಿಸಿಎಸ್ ಇದು ಪ್ರಪಂಚದ ಅತಿ ದೊಡ್ಡ ಐಟಿ ಕಂಪನಿಗಳಲ್ಲಿ ಒಂದು. 1968 ರಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೂ ಅದೆ ಗತ್ತನ್ನು ಹೊಂದಿರುವ ಕಂಪನಿ ಟಿಸಿಎಸ್. 5 ಲಕ್ಷ ಉದ್ಯೋಗಿಗಳು ಇದ್ದು, ವರ್ಷಕ್ಕೆ ಒಂದು ವರೆ ಲಕ್ಷ ಕೋಟಿ ಲಾಭ ಪಡೆಯುತ್ತದೆ. ಈಗ ರಾಜೇಶ್ ಗೋಪಿನಾಥನ್ ಈ ಕಂಪನಿಯ ಸಿಇಓ ಆಗಿದ್ದಾರೆ. ಟಾಟಾ ಸಾಲ್ಟ್ ಭಾರತದಲ್ಲಿ 1983 ರಲ್ಲಿ ಅಯೋಡೈಜ್ ಸಾಲ್ಟ್ ಅನ್ನು ಪರಿಚಯಿಸಿದ್ದು ಟಾಟಾ ಕಂಪನಿ. ಭಾರತದಲ್ಲಿ ಈಗ ಹೆಚ್ಚು ಬಳಸುತ್ತಿರುವುದು ಟಾಟಾ ಸಾಲ್ಟ್. ವರ್ಷಕ್ಕೆ 90,000 ಮೆಟ್ರಿಕ್ ಟನ್ ಗಳಷ್ಟು ಉಪ್ಪನ್ನು ಟಾಟಾ ಕಂಪನಿ ತಯಾರಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ಯುರೋಪ್ ನಲ್ಲಿ ಕೂಡ ಸಾಲ್ಟ್ ಉತ್ಪಾದಿಸುವ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಬ್ರಿಟಿಷ್ ಸಾಲ್ಟ್ ಎಂಬ ಯುಕೆ ಕಂಪನಿಯನ್ನು 2010 ರಲ್ಲಿ ಟಾಟಾ ಗ್ರೂಪ್ ಕೊಂಡುಕೊಳ್ಳುತ್ತದೆ. ವರ್ಷಕ್ಕೆ 8 ಲಕ್ಷ ಟನ್ ಗಳಷ್ಟು ಸಾಲ್ಟ್ ಅನ್ನು ಉತ್ಪಾದಿಸುತ್ತದೆ.
ಭಾರತದಲ್ಲಿ ಡಿಟಿಎಚ್ ಇಂಡಸ್ಟ್ರಿಯಲ್ಲಿ ಟಾಪ್ ನಲ್ಲಿರುವ ಕಂಪನಿ ಟಾಟಾ ಸ್ಕೈ ಇದನ್ನು ಟಾಟಾ ಪ್ಲೇ ಎಂತಲೂ ಕರೆಯುತ್ತಾರೆ. ಭಾರತದಾದ್ಯಂತ 22 ಮಿಲಿಯನ್ ಸಬ್ ಸ್ಕ್ರೈಬರ ಇದ್ದಾರೆ. ಲಕ್ಸ್ಯೂರಿ ಕಾರ್ ಗಳನ್ನು ತಯಾರಿಸುವ ಫಾರಿನ್ ಬ್ರ್ಯಾಂಡ್ ಆಗಿರುವ ಜಾಗ್ವಾರ್ ಲ್ಯಾಂಡ್ ರೋವರ್ ನ ಮೇನ್ ಓನರ್ ಇಂಡಿಯನ್ ಕಂಪನಿ ಟಾಟಾ ಗ್ರೂಪ್. 2008 ರಲ್ಲಿ ರತನ್ ಟಾಟಾ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನ ಪಡಿಸಿಕೊಂಡು ಇಂಡಿಯನ್ ಬ್ರ್ಯಾಂಡ್ ಅನ್ನು ಇಂಟರ್ ನ್ಯಾಷನಲ್ ಬ್ರ್ಯಾಂಡ್ ಆಗಿ ಬದಲಾಯಿಸಿದ್ದಾರೆ.
ಜಾಗ್ವಾರ್ 1930 ರಲ್ಲಿ ಪ್ರಾರಂಭವಾದರೆ ಲ್ಯಾಂಡ್ ರೋವರ್ 1940 ರಲ್ಲಿ ಪ್ರಾರಂಭವಾಯಿತು. ಜಾಗ್ವಾರ್ ಅನ್ನು ಬ್ರಿಟಿಷ್ ಕಂಪನಿಯೊಂದು ಕೊಂಡುಕೊಳ್ಳುತ್ತದೆ ನಂತರ ಅಮೆರಿಕದ ಫೋರ್ಡ್ ಕಂಪನಿ ಜಾಗ್ವಾರ್ ಅನ್ನು ಸ್ವಾಧೀನ ಪಡಿಸಿಕೊಳ್ಳುತ್ತದೆ ಆದರೆ ನಷ್ಟದ ಕಾರಣದಿಂದ ಮಾರಿಬಿಡುತ್ತದೆ. ಲ್ಯಾಂಡ್ ರೋವರ್ ಅನ್ನು ಟಾಟಾ ಫೋರ್ಡ್ ಕಂಪನಿಯಿಂದ ಟಾಟಾ ಕೊಂಡುಕೊಳ್ಳುತ್ತದೆ. 2013 ರಲ್ಲಿ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಅನ್ನು ಒಂದೆ ಕಂಪನಿಯಾಗಿ ಏಕೀಕರಣಗೊಳಿಸುತ್ತದೆ.
ಎಸಿ, ಫ್ರಿಡ್ಜ್ ತಯಾರಿಸುವ ವೋಲ್ಟಾಸ್ ಕಂಪನಿ 1954 ರಲ್ಲಿ ಪ್ರಾರಂಭವಾಗಿದೆ. ಮೊದಲು ಈ ಕಂಪನಿ ಕನ್ಸ್ಟ್ರಕ್ಷನ್, ಮಷೀನರಿ ಡಿಸೈನ್ ನಲ್ಲಿ ಕೆಲಸ ಮಾಡುತಿತ್ತು. ಭಾರತದಲ್ಲಿ ಮೊದಲು ಎಸಿ ತಯಾರಿಸಿದ್ದು ವೋಲ್ಟಾಸ್ ಕಂಪನಿ. ಇಂಜಿನಿಯರಿಂಗ್ ವಿಭಾಗದಲ್ಲಿ ಅನೇಕ ಪ್ರೊಡಕ್ಟ್ ಗಳನ್ನು ವೋಲ್ಟಾಸ್ ಉತ್ಪಾದಿಸುತ್ತದೆ. ಟಾಟಾ ಭಾರತದ ಟೆಟ್ಲಿ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡು ಗ್ಲೋಬಲ್ ಟಿ ಮಾರ್ಕೆಟ್ ನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುತ್ತದೆ.
1837 ರಲ್ಲಿ ಪ್ರಾರಂಭವಾದ ಟೆಟ್ಲಿ ಅತಿ ಪುರಾತನವಾದ ಕಂಪನಿ ಯುಕೆ, ಯುಎಸ್ಎ ಗಳಲ್ಲಿ ಟೆಟ್ಲಿ ಟಾಪ್ ಸ್ಥಾನ ಪಡೆದಿದೆ, ಇದನ್ನು ಟಾಟಾ ತನ್ನ ಸ್ವಂತ ಮಾಡಿಕೊಳ್ಳುತ್ತದೆ. ಈಗ ಟೆಟ್ಲಿ ಸುಮಾರು 40 ದೇಶಗಳಿಗೆ ಟಿ ಬ್ಯಾಗ್ ಗಳನ್ನು ಪ್ರೊವೈಡ್ ಮಾಡುತ್ತಿದೆ. ಪ್ರಪಂಚದಲ್ಲಿ ಯುನಿಲಿವರ್ ನಂತರ ಟಿ ಪುಡಿಯನ್ನು ಹೆಚ್ಚಾಗಿ ಮಾರಾಟ ಮಾಡುತ್ತಿರುವುದು ಟಾಟಾ.
2015 ರಲ್ಲಿ ಪ್ರಶಾಂತ್, ಗೌರವ್, ವಿಕಾಸ್ ಮೂವರು 1ಎಂಜಿ ಎಂಬ ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸುತ್ತಾರೆ. ಇದು ಹೆಲ್ತ್ ಕೇರ್, ಮೆಡಿಸಿನ್ ಗಲನ್ನು ಡೆಲಿವರಿ ಮಾಡುವ ವೆಬ್ ಸೈಟ್. ಹೆಲ್ತ್ ಕೇರ್ ಗೆ ಸಂಬಂಧಿಸಿದ ಸರ್ವಿಸ್ ಅನ್ನು ಈ ಕಂಪನಿ ಪ್ರೊವೈಡ್ ಮಾಡುತಿತ್ತು. ಟಾಟಾ 1ಎಂಜಿ ಹೆಲ್ತ್ ಕೇರ್ ಸಿಸ್ಟಮ್ ನಲ್ಲಿ ಪ್ರಮುಖವಾಗಿದೆ. ಸ್ವತಂತ್ರ ಬರುವ ಮೊದಲೆ 1945 ರಲ್ಲಿ ಟ್ರೇನ್ ತಯಾರಿಸಲು ಜೆ ಆರ್ ಡಿ ಟಾಟಾ ಟಾಟಾ ಮೋಟಾರ್ಸ್ ಪ್ರಾರಂಭಿಸುತ್ತಾರೆ. ಕಂಪನಿ ನಂತರ ಮಿಡ್ಲ್ ಕ್ಲಾಸ್ ಕುಟುಂಬಕ್ಕೆ ಸಹಾಯವಾಗಲಿ ಎಂದು ಒಂದು ಲಕ್ಷ ರೂಪಾಯಿಗೆ ನ್ಯಾನೊ ಕಾರನ್ನು ತಯಾರಿಸುತ್ತದೆ. ಇದೀಗ ಬೇರೆ ಬೇರೆ ಡಿಸೈನ್ ಗಳಲ್ಲಿ ಟಾಟಾ ವೆಹಿಕಲ್ ಮಾರುಕಟ್ಟೆಗೆ ಬರುತ್ತಿದೆ.
2011 ರಲ್ಲಿ ಬಿಗ್ ಬಾಸ್ಕೆಟ್ ಪ್ರಾರಂಭವಾಯಿತು ಇದು ಭಾರತದ ಮೋಸ್ಟ್ ಸಕ್ಸೆಸ್ ಫುಲ್ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಒಂದು. 2021 ರಲ್ಲಿ ಟಾಟಾ ಡಿಜಿಟಲ್ ಬಿಗ್ ಬಾಸ್ಕೆಟ್ ಅನ್ನು ಸ್ವಂತ ಮಾಡಿಕೊಳ್ಳುತ್ತದೆ. ಇದರಿಂದ ದೊಡ್ಡ ದೊಡ್ಡ ಆನಲೈನ್ ಡೆಲಿವರಿ ಕಂಪನಿಗಳೊಂದಿಗೆ ಸ್ಪರ್ಧೆಗೆ ಇಳಿಯಿತು. 2001 ರಲ್ಲಿ ಅಮೇರಿಕನ್ ಇಂಟರ್ ನ್ಯಾಷನಲ್ ಗ್ರೂಪ್ ಜೊತೆ ಸೇರಿ ಟಾಟಾ ಕಂಪನಿ ಇನ್ಸೂರೆನ್ಸ್ ಮಾರ್ಕೆಟ್ ಗೆ ಎಂಟ್ರಿ ಕೊಡುತ್ತದೆ. ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿ ಇದು ಎಲ್ಲ ರೀತಿಯ ಇನ್ಸೂರೆನ್ಸ್ ಸೇವೆಯನ್ನು ಪ್ರೊವೈಡ್ ಮಾಡುತ್ತದೆ.
1932 ರಲ್ಲಿ ಜೆ ಆರ್ ಡಿ ಟಾಟಾ ಏರ್ ಇಂಡಿಯಾ ಸ್ಟಾರ್ಟ್ ಮಾಡುತ್ತಾರೆ. ಮೊದಲು ಟಾಟಾ ಏರ್ ಲೈನ್ಸ್ ಎಂದು ಕರೆಯುತ್ತಿದ್ದರು. ನಂತರ ಇದನ್ನು ನ್ಯಾಷನಲೈಸ್ಡ್ ಮಾಡಿ ಟಾಟಾ ಏರ್ ಇಂಡಿಯಾ ಎಂದು ಕರೆಯಲಾಯಿತು. ನಂತರ ನಷ್ಟ ಅನುಭವಿಸುತ್ತದೆ ಆಗ ಸರ್ಕಾರ ಖಾಸಗಿ ಅಧಿಪತ್ಯಕ್ಕೆ ಒಳಪಡಿಸಬೇಕು ಎಂದಾಗ ಟಾಟಾ ಗ್ರೂಪ್ ಮುಂದೆ ಬರುತ್ತದೆ 2020 ರಲ್ಲಿ ಟಾಟಾ ಸ್ವಂತ ಮಾಡಿಕೊಳ್ಳುತ್ತದೆ. ನಂತರ ಜೆಆರ್ ಡಿ ಟಾಟಾ ಅವರ ಕನಸನ್ನು ರತನ್ ಟಾಟಾ ನನಸು ಮಾಡಿಕೊಳ್ಳುತ್ತಾರೆ.
ಭಾರತದಲ್ಲಿ ಒಳ್ಳೆಯ ಎಜುಕೇಷನ್ ಸಂಸ್ಥೆ ಇರಲಿಲ್ಲ, ಜೆಂಶೆಟ್ ಜಿ ಟಾಟಾ ನಮ್ಮ ದೇಶದಲ್ಲಿ ಸೈನ್ಸ್ ಅಭಿವೃದ್ಧಿಗೊಳಿಸಲು ವಿವೇಕಾನಂದರು, ಮೈಸೂರು ಮಹಾರಾಜರು ಇವರೆಲ್ಲರ ಬೆಂಬಲದೊಂದಿಗೆ ಟಾಟಾ ಇನ್ಸಟುಟ್ಯೂಟ್ ಆಫ್ ಸೋಷಿಯಲ್ ಸೈನ್ಸ್, ಟಾಟಾ ಮೆಮೋರಿಯಲ್ ಹಾಸ್ಪಿಟಲ್ ಮೊದಲಾದ ಸೇವೆಯನ್ನು ಪ್ರಾರಂಭಿಸಿದರು. ಟಾಟಾ ಕಂಪನಿ ನಡೆದು ಬಂದ ದಾರಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.