ರಕ್ಷಾ ಬಂಧನ ಭಾವನೆಗಳಿಗೆ ಸಂಬಂಧಿಸಿದ ಹಬ್ಬ. ಅಂದು ಬೆಳಿಗ್ಗೆಯೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಹೊಸ ಬಟ್ಟೆ ಧರಿಸಿ, ಅಣ್ಣ-ತಂಗಿಯರ ಸಂಬಂಧ ಉತ್ತಮವಾಗಿರಲೆಂದು ಬೇಡಿ, ತನ್ನ ಅಣ್ಣನಿಗೆ ತಿಲಕವಿಟ್ಟು ಆರತಿ ಮಾಡಿ, ಆತನ ಮಣಿಕಟ್ಟಿಕೆ ರಾಖಿ ಕಟ್ಟಿ ನಮಸ್ಕರಿಸಿ ತಂಗಿ ಅಣ್ಣನ ಆಶೀರ್ವಾದವನ್ನು ಸ್ವೀಕರಿಸುತ್ತಾಳೆ. ಅಣ್ಣನೂ ಸಹ ಅದಕ್ಕೆ ಪ್ರತಿಯಾಗಿ ಉಡುಗೊರೆ ನೀಡುತ್ತಾನೆ. ಆದರೆ ಇವೆಲ್ಲಾ ಪೂಜಾ ಕ್ರಮಗಳನ್ನು ಹಬ್ಬದಂದು ಮಾತ್ರ ಮಾಡುವ ಆಚರಣೆಯಾಗಿದೆ. ರಕ್ಷಾ ಎಂದರೆ ರಕ್ಷಿಸು ಹಾಗೂ ಬಂಧನ ಎಂದರೆ ಬಾಂಧವ್ಯ ಅಥವಾ ಬದ್ಧತೆ. ಹೀಗೆ ಒಡಹುಟ್ಟಿದ ಅಣ್ಣ-ತಂಗಿ ನಡುವಿನ ಸಂಬಂಧ ಹಸನಾಗಿರಲೆಂದು ಹಾಗೂ ಅಣ್ಣನಾದವನು ಸದಾ ತನ್ನ ರಕ್ಷಣೆಗೆ ಇರಬೇಕೆಂದು ಆಶಿಸಿ ತಂಗಿ ತನ್ನ ಅಣ್ಣನಿಗೆ ಕಟ್ಟುವ ದಾರವೇ ರಕ್ಷಾ ಬಂಧನ. ಇಷ್ಟೊಂದು ಭಾವನೆಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಅಣ್ಣ ತಂಗಿಯ ಬಂಧ್ಯವ್ಯ ತುಂಬಾ ಪವಿತ್ರವಾದದ್ದು. ಇದೇ ರೀತಿ ತನ್ನ ಬಾಂಧವ್ಯದ ಸಂಕೇತವಾಗಿ ಏನಾದರೂ ಉಡುಗೊರೆ ಕೊಡುವ ಅಣ್ಣಂದಿರು ಕಡಿಮೆ ಏನೂ ಇಲ್ಲಾ ಆದರೆ ಈ ಅಣ್ಣ ತನ್ನ ತಂಗಿಗೆ ನೀಡಿದ ಉಡುಗೊರೆ ಒಂದು ರೀತಿ ಅದ್ಭುತ ಉಡುಗೊರೆ ಎಂದೇ ಹೇಳಬಹುದು. ತನ್ನ ತಂಗಿಗೆ ದೇವಸ್ಥಾನ ಕಟ್ಟಿಸಿದ್ದಾರೆ ಈ ಅಣ್ಣ. ತಂಗಿಗಾಗಿ ದೇವಸ್ಥಾನ ಕಟ್ಟಲು ಕಾರಣ ಏನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ತಾಯಿ ಮಗನಷ್ಟೇ ಪವಿತ್ರವಾದ ಪ್ರೀತಿ ಅಣ್ಣ ಮತ್ತು ತಂಗಿಯದು. ನಾವು ಹಲವು ಕಡೆ ಹೆಂಡತಿ ಇಲ್ಲವೇ ಪ್ರೇಯಸಿ ಗೋಸ್ಕರ ಸ್ಮಾರಕಗಳು ದೇವಸ್ಥಾನಗಳು ಕಟ್ಟಿರುವುದನ್ನ ನೋಡಿರುತ್ತೇವೆ. ಆದರೆ ತಂಗಿಗೆ ದೇವಸ್ಥಾನ ಕಟ್ಟಿರುವುದನ್ನು ಎಲ್ಲಿಯೂ ನೋಡಲು ಸಾಧ್ಯವೇ ಇಲ್ಲ. ಆದರೆ ಈ ಅಣ್ಣ ತನ್ನ ತಾಂಗಿಗಾಗಿ ಒಂದು ದೇವಸ್ಥಾನವನ್ನು ಕಟ್ಟಿ ಜಗತ್ತಿನಲ್ಲೇ ಮೊದಲ ಬಾರಿಗೆ ತಂಗಿಗಾಗೀ ದೇವಸ್ಥಾನ ಕಟ್ಟಿಸಿದ ಅಣ್ಣ ಎಂದು ಹೆಸರಿಗೆ ಪಾತ್ರವಾಗಿದ್ದಾರೆ. ಅಷ್ಟಕ್ಕೂ ಈ ಅಣ್ಣ ತಂಗಿಗೋಸ್ಕರ ದೇವಸ್ಥಾನ ಕಟ್ಟಿಸಲು ಕಾರಣ ಏನು ಎಂಬುದನ್ನು ನೋಡುವುದಾದರೆ , ಈ ಘಟನೆ ನಡೆದಿರುವುದು ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ. ತಂಗಿಗಾಗೀ ದೇವಸ್ಥಾನ ಕಟ್ಟಿಸಿದ ವ್ಯಕ್ತಿಯ ಹೆಸರು ಶಿವ ಪ್ರಸಾದ್ ಮತ್ತು ಆತನ ತಂಗಿಯ ಹೆಸರು ಸುಬ್ಬಲಕ್ಷ್ಮಿ. ಬಿಎ ಓದಿದ್ದ ಶಿವ ಪ್ರಸಾದ್ ಅವರ ತಂಗಿ ಸುಬ್ಬಲಕ್ಷ್ಮಿ ಅರಣ್ಯ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು.
ಪ್ರತಿದಿನ ರೈಲಿನಲ್ಲಿ ಆಪಿಸ್ ಗೆ ಹೋಗುತ್ತಿದ್ದ ಸುಬ್ಬಲಕ್ಷ್ಮಿ ಒಂದು ದಿನ ಅಣ್ಣನ ಜೊತೆಗೆ ಆಪಿಸ್ ಗೆ ಹೋಗುತ್ತಿದ್ದಾಗ ಹಿಂದೆಯಿಂದ ಬಂದ ವ್ಯಾನ್ ಒಂದು ಬೈಕ್ ಗೆ ಗುದ್ದಿತು. ಇದರ ಪರಿಣಾಮವಾಗಿ ಅಣ್ಣ ತಂಗಿ ಇಬ್ಬರು ಕೆಳಗೆ ಬೀಳುತ್ತಾರೆ. ಆದರೆ ಸುಬ್ಬಲಕ್ಷ್ಮಿ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಅಣ್ಣನ ಮಡಿಲಲ್ಲೆ ಪ್ರಾಣ ಬಿಡುತ್ತಾರೆ. ತನ್ನ ಕೈಯಿಂದ ಮುದ್ದಾಗಿ ಸಾಕಿದ ತಂಗಿ ತನ್ನ ಮಡಿಲಲ್ಲಿ ಪ್ರಾಣ ಬಿಟ್ಟಿದಳು ಅನ್ನೋದು ಶಿವ ಪ್ರಸಾದ್ ಅವರಿಗೆ ಎಲ್ಲಿಲ್ಲದ ನೋವು ತರಿಸುತ್ತದೆ. ಈ ಕಾರಣಕ್ಕಾಗಿ ಬಡವನಾದರು ಸಹ ಯಾರೊಬ್ಬರ ಬಳಿಯೂ ಒಂದು ರೂಪಾಯಿ ಕೂಡ ಪಡೆಯದೆ ತನ್ನ ತಂಗಿಗೆ ದೇವಸ್ಥಾನ ಕಟ್ಟಿಸಿ ಪ್ರತಿದಿನ ಪೂಜೆ ಮಾಡುತ್ತಿದ್ದಾನೆ ಈ ಶಿವಪ್ರಸಾದ್. ಪ್ರತಿದಿನ ಪೂಜೆ ಮಾಡುವ ಮೂಲಕ ತನ್ನ ತಂಗಿಯನ್ನು ವಿಗ್ರಹದ ರೂಪದಲ್ಲಿ ಕಾಣುತ್ತೇನೆ ಎಂದು ಹೇಳುತ್ತಿದ್ದಾನೆ ಈ ಅಣ್ಣ. ಅಣ್ಣ ಮತ್ತು ತಂಗಿಯ ಸಂಬಂಧವೆಂದರೆ ಅದು ಅಪ್ಪ ಮಗಳ ಸಂಬಂಧವಿದ್ದಂತೆ. ತಂದೆ ತಾಯಿಯನ್ನು ಬಿಟ್ಟು ನಮ್ಮನ್ನು ಈ ಪ್ರಪಂಚದಲ್ಲಿ ಹೆಚ್ಚು ಪ್ರೀತಿಸುವ ವ್ಯಕ್ತಿ ಅಂದರೆ ಅದು ಅಣ್ಣ, ಇಲ್ಲವೆಂದರೆ ತಂಗಿ ಆಗಿರುತ್ತಾಳೆ. ಜೀವನದ ಜಂಜಾಟದಲ್ಲಿ ಆ ಬಾಂಧವ್ಯ ಮರೆಯಾಗದಿರಲಿ ಅನ್ನುವುದು ನಮ್ಮೆಲ್ಲರ ಆಶಯ.
ರಕ್ಷಾ ಬಂಧನದಲ್ಲಿ ಶ್ರೀಮಂತಿಕೆಯ ತೋರಾಗಾಣಿಕೆಯಿಂದ ಮಾತ್ರ ಉತ್ತಮ ಬಾಂಧವ್ಯ ಮೂಡಲು ಸಾಧ್ಯ ಎಂಬ ನಂಬಿಕೆಯನ್ನು ತೊರೆದು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ನಿರ್ಮಲವಾದ ಮನೋಭಾವದಿಂದ ಒಂದು ದಾರ ಕಟ್ಟಿದರೂ ಅಷ್ಟೇ ಪ್ರಾಮುಖ್ಯತೆ, ಶ್ರೇಷ್ಠತೆಯಿಂದ ಕೂಡಿರುತ್ತದೆ ಎಂಬುದನ್ನು ಮರೆಯಬಾರದು. ಅದೇ ರೀತಿ ಈ ರೀತಿಯಾಗಿ ತನ್ನ ತಂಗಿಯನ್ನು ಪ್ರತೀ ದಿನ ನೆನೆಯುವ ಅಣ್ಣಂದಿರನ್ನು ಕೂಡಾ ಮರೆಯುವ ಹಾಗಿಲ್ಲ. ಒಂದರ್ಥದಲ್ಲಿ ನಿಜವಾದ ಅಣ್ಣ ತಂಗಿ ಬಾಂಧವ್ಯಕ್ಕೆ ಇವರು ಹೆಸರಾಗಿದ್ದಾರೆ ಎಂದರೆ ತಪ್ಪಾಗಲಾರದು.