ವೆಡಿವಿಲ್ ತಮಿಳು ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮ ನಟನೆಯನ್ನು ಅಭಿವ್ಯಕ್ತಿ ಪಡಿಸಿದ್ದಾರೆ. ಒಂದು ಕಾಲದಲ್ಲಿ ವೆಡಿವಿಲ್ ಗಾಗಿ ಫಿಲ್ಮ್ ಮಾಡುವವರು ಸಾಲು ಸಾಲಾಗಿ ನಿಲ್ಲುತ್ತಿದ್ದರು. ಅಂತಹವರು ಕಣ್ಮರೆಯಾದರು. ಇವರ ಜೀವನದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ವೆಡಿವಿಲ್ ತಮ್ಮ ಅಸಾಧ್ಯ ನಟನೆಯಿಂದಾಗಿ ಅಭಿಮಾನಿಗಳ ಹೃದಯ ತಲುಪಿ ಅತ್ಯಂತ ಶ್ರೀಮಂತ ಹಾಸ್ಯ ನಟನಾಗಿ ಇದ್ದವರು. ಇವರು ಮೂಲತಃ ತಮಿಳುನಾಡಿನ ಮಧುರೈನವರು ಆಗಿದ್ದಾರೆ. 1969ರಲ್ಲಿ ಸೆಪ್ಟೆಂಬರ್ 12ನೇ ತಾರೀಖಿನಂದು ನಟರಾಜನ್ ಹಾಗೂ ವೈದೇಶ್ವರಿ ಮಗನಾಗಿ ಜನಿಸಿದರು. ಬಡತನದಲ್ಲಿ ಹುಟ್ಟಿ ಬೆಳೆದ ಇವರಿಗೆ ಪ್ರಾಥಮಿಕ ಶಿಕ್ಷಣ ದೊರೆಯಲಿಲ್ಲ.ಇವರ ತಂದೆ ದೊಡ್ಡ ಗಾಜಿನ ಕಾರ್ಖಾನೆಯೊಂದರಲ್ಲಿ ಗ್ಲಾಸ್ ಕಟಿಂಗ್ ಕೆಲಸ ಮಾಡುತ್ತಿದ್ದರು. ಇವರು ಕೂಡ ತಂದೆಯ ಜೊತೆ ಅಲ್ಲಿಯೇ ಕೆಲಸ ಮಾಡಲು ಶುರು ಮಾಡಿದರು.
ತಂದೆಯವರ ಮರಣದ ನಂತರ ವೆಡಿವಿಲ್ ತಮ್ಮ ಸೋದರರ ಜೊತೆ ಕೆಲಸವನ್ನು ಮುಂದುವರೆಸಿದರು. ಮೊದಲಿಂದಲೂ ನಟಿಸುವ ಇವರಲ್ಲಿ ಒಬ್ಬ ಕಲಾವಿದ ಇದ್ದನು. ಸಮಯ ಸಿಕ್ಕಾಗೆಲ್ಲಾ ಸ್ಟೇಜ್ ಶೋಗಳಿಗೆ ಹೋಗಿ ಅಭಿನಯ ಮಾಡುತ್ತಿದ್ದರು. 1988ರಲ್ಲಿ ಖ್ಯಾತ ನಿರ್ದೇಶಕ ಆದ ಡಿ.ರಾಜೇಂದ್ರನ್ ಅವರ ನಿರ್ದೇಶನದ ಎನ್ತಂಗೈ ಕಲ್ಯಾಣಿ ಎಂಬ ಚಿತ್ರದಲ್ಲಿ ವೆಡಿವಿಲ್ ಅವರಿಗೆ ಒಂದು ಸಣ್ಣ ಪಾತ್ರ ವಹಿಸುವ ಅವಕಾಶ ಸಿಕ್ಕಿತು. ಇವರ ಆರಂಭಿಕ ವರ್ಷಗಳು ಬಹಳ ಶೋಚನೀಯ ಆಗಿದ್ದವು. ಬಡತನ, ನಿರುದ್ಯೋಗ ಮತ್ತು ಅದಕ್ಕಿಂತ ಹೆಚ್ಚಾಗಿ ಆಗ ಚಿತ್ರರಂಗದಲ್ಲಿ ಇದ್ದ ಅತಿಯಾದ ಸ್ಪರ್ಧೆ ಇವೆಲ್ಲವುಗಳಿಂದ ತಮಿಳಿನಲ್ಲಿ ಹೊಸಬರು ನೆಲೆಯೂರುವುದು ಬಹಳ ಕಷ್ಟವಿತ್ತು.
ಹಾಸ್ಯ ನಟನೆಯ ಮೂಲಕ ಇವರು ಹೆಜ್ಜೆ ಇಟ್ಟರು. ಒಮ್ಮೆ ಇವರು ಚೆನ್ನೈಗೆ ಬರುವ ರೈಲಿನಲ್ಲಿ ಕುಳಿತಾಗ ತಮಿಳಿನ ಒಬ್ಬ ರಾಜಕೀಯ ನಟ ಪರಿಚಯ ಆಗಿ ಇವರ ಸಂಭಾಷಣೆಯ ಪ್ರತಿಫಲವಾಗಿ ಒಂದು ಚಲನಚಿತ್ರದಲ್ಲಿ ಮುಖ್ಯ ಪಾತ್ರವನ್ನು ವಹಿಸುವ ಅವಕಾಶ ದೊರೆಯಿತು. ಈ ಚಿತ್ರ ಕಸ್ತೂರಿರಾಜ್ ಅವರ ನಿರ್ದೇಶನ ಆಗಿದ್ದು ಇದರ ನಂತರ ಸಾಲು ಸಾಲಾಗಿ ಇವರಿಗೆ ಅವಕಾಶಗಳು ದೊರೆತವು. 1992ರಲ್ಲಿ ಕಮಲ್ ಹಾಸನ್ ಅವರ ಜೊತೆ ನಟಿಸಿದ್ದರು. ಕಾದಲನ್ ಚಿತ್ರದಲ್ಲಿ ಪ್ರಭುದೇವ ಅವರು ಹೀರೊ ಆಗಿದ್ದರು. ಅವರ ಜೊತೆ ಇವರಿಗೆ ನಟಿಸುವ ಅವಕಾಶ ದೊರೆಯಿತು.
ನಂತರದಲ್ಲಿ ಅವರು ವರ್ಷಕ್ಕೆ 15 ಸಿನೆಮಾಗಳನ್ನು ಮಾಡುವಷ್ಟು ಪ್ರಸಿದ್ಧಿ ಆದರು. ಆದರೆ ಕಾಲಾನಂತರದಲ್ಲಿ ರಾಜಕೀಯ ರಂಗಕ್ಕೆ ಇಳಿದು ತಮ್ಮ ವ್ಯಕ್ತಿತ್ವವನ್ನು ಅವರ ಕೈಯಲ್ಲಿ ಅವರೇ ಹಾಳುಮಾಡಿಕೊಂಡರು. ಇದರಿಂದ ಕೆಲವಷ್ಟು ಅಪವಾದಗಳನ್ನು ಅನುಭವಿಸಿದರು. ಚಿತ್ರರಂಗ ಇವರನ್ನು ಹೊರ ಹಾಕಿತು. ಇವೆಲ್ಲವುಗಳಿಂದ ಅವರು ಮುಕ್ತಿ ಹೊಂದಿ ಮತ್ತೆ ತಮ್ಮ ನಟನೆಯನ್ನು ಮುಂದುವರೆಸಲಿ ಎಂದು ನಾವು ಹಾರೈಸೋಣ.