ತಹಶೀಲ್ದಾರ್ ಕಚೇರಿಯಲ್ಲಿ ಯಾವ ಯಾವ ಕೆಲಸಗಳು ನಡೆಯುತ್ತದೆ ಎಂದು ಜನ ಸಾಮಾನ್ಯರಿಗೆ ತಿಳಿದಿರುವುದಿಲ್ಲ ಹಾಗೆಯೇ ಈಗ ಹಲವು ಸೇವೆಗಳು ಆನ್ಲೈನ್ ನಲ್ಲಿ ಇರುತ್ತದೆ ಆದರೂ ಸಹ ಹಲವು ಕೆಲಸಗಳಿಗೆ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಲೇಬೇಕು ದಲ್ಲಾಳಿಗಳ ಮೋಸ ವಂ ಚನೆಗೆ ಯಾವುದೇ ರೀತಿಯಿಂದ ಮೋಸ ಹೋಗಬಾರದು ನೇರವಾಗಿ ಹೋಗಿ ಮಾಹಿತಿ ಪಡೆದುಕೊಳ್ಳಬೇಕು ಕೆಲವರು ರೈತರಿಗೆ ಖಾಲಿ ಪೇಪರ್ ಮೇಲೆ ಸಹಿ ಹಾಕಿಸುವ ಮೂಲಕ ರೈತರಿಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ
ಇವೆಲ್ಲವನ್ನು ತಪ್ಪಿಸಲು ರೈತರು ತಹಶೀಲ್ದಾರ್ ಕಚೇರಿಯಲ್ಲಿ ವಿಶ್ವಾಸವಿರುವ ವ್ಯಕ್ತಿಗಳಿಂದ ಸಲಹೆ ಪಡೆದುಕೊಳ್ಳುವ ಮೂಲಕ ಮೋಸ ಹೋಗುವ ಸಾಧ್ಯತೆಗಳು ಇರುವುದಿಲ್ಲ ಇನ್ನೂ ಕೆಲವರಿಗೆ ತಹಶೀಲ್ದಾರ್ ಕಚೇರಿಯಲ್ಲಿ ಯಾವ ಯಾವ ಕಾರ್ಯಗಳು ನಡೆಯುತ್ತದೆ ಮತ್ತು ಯಾವ ಯಾವ ಸೇವೆಗಳು ತಹಶೀಲ್ದಾರ್ ಕಚೇರಿಯಲ್ಲಿ ಜರುಗುತ್ತದೆ ಎಂಬುದು ತಿಳಿದಿರುವುದಿಲ್ಲ ನಾವು ಈ ಲೇಖನದ ಮೂಲಕ ತಹಶೀಲ್ದಾರ್ ಕಚೇರಿಯಲ್ಲಿ ಯಾವ ಯಾವ ಕೆಲಸಗಳು ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು
ಉಪನೊಂದಣಿ ಕಚೇರಿಯಲ್ಲಿ ಹೊಲ ಮನೆ ಮತ್ತು ಮದುವೆ ನೋಂದಣಿ ಮಾಡಲು ತಾಲೂಕಿನ ಉಪನೊಂದಣಿ ಕಚೇರಿಗೆ ಹೋಗಬೇಕು ಹಾಗೆಯೇ ಕಂದಾಯ ದಾಖಲೆಗಳು ಮತ್ತು ಸರ್ವೆ ದಾಖಲೆಗಳು ಮಾಹಿತಿ ಪಡೆಯಲು ತಹಶಿಲ್ದಾರ್ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ ಹಾಗೆಯೇ ಸಾಮಾಜಿಕ ಸೇವೆಗಳಾದ ಸಂಧ್ಯಾ ಸುರಕ್ಷಾ ಯೋಜನೆಯ ಪಲಾನುಭವಿಗಳಾಗಿದ್ದರೆ ಸರಿಯಾದ ಸಮಯಕ್ಕೆ ಪಿಂಚಣಿ ಬರದಿದ್ದರೆ ಹಾಗೂ ರದ್ದು ಗೊಳಿಸಿದ್ದರೆ ಆಗ ತಹಶೀಲ್ದಾರ್ ಕಚೇರಿ ಬಂದು ವಿಚಾರಿಸಬೇಕು
ರೇಷನ್ ಕಾರ್ಡ್ ಹಾಗೂ ಓಟರ್ ಐಡಿ ಕಾರ್ಡ್ ತಿದ್ದುಪಡಿ ಇದ್ದರೆ ತಹಶೀಲ್ದಾರ್ ಕಚೇರಿಗೆ ಹೋಗುವ ಸಂಧರ್ಭ ಬರುತ್ತದೆ ರೈತರ ನಡುವೆ ಭೂ ವಿವಾದ ಬಂದರೆ ತಹಶೀಲ್ದಾರ್ ಕಚೇರಿ ತಹಶೀಲ್ದಾರ್ ನಡೆಸುವ ಬೇರಿಂಗ್ ನಲ್ಲಿ ಭಾಗವಹಿಸುವ ಸಂಧರ್ಭ ಬರುತ್ತದೆ ಹಲವಾರು ಪ್ರಮಾಣ ಪತ್ರಗಳು ತಹಶೀಲ್ದಾರ್ ಕಚೇರಿಯಲ್ಲಿ ಸಿಗುವ ಕಾರಣ ಅವಶ್ಯಕವಾಗಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಬೇಕು .
ಮಳೆ ವಿಕೋಪಕ್ಕೆ ಒಳಗಾಗಿ ಮನೆ ಬಿದ್ದರೆ ಸರ್ಕಾರದ ಪರಿಹಾರಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಬೇಕು ಸರ್ಕಾರ ನೌಕರರು ತಮ್ಮ ವೇತನದ ತೊಂದರೆಗಳು ಸಂಭವಿಸಿದಾಗ ತಹಶೀಲ್ದಾರ್ ಕಚೇರಿ ಬಂದು ಸರಿ ಪಡಿಸಿಕೊಳ್ಳಬೇಕು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ವಂಶಾವಳಿ ಪ್ರಮಾಣ ಪತ್ರ ಮಾಡಿಸಲು ತಹಶೀಲ್ದಾರ್ ಕಚೇರಿ ಗೆ ಹೋಗಬೇಕಾಗುತ್ತದೆ ಜನರು ತಹಶೀಲ್ದಾರ್ ಕಚೇರಿಯಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳೆಂದರೆ ವಿಶ್ವಾಸ ಇರುವ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು
ದಲ್ಲಾಳಿಗಳ ಮೋಸ ವಂಚನೆಗೆ ಯಾವುದೇ ರೀತಿಯಿಂದ ಮೋಸ ಹೋಗಬಾರದು ಸುಳ್ಳು ಹೇಳಿ ಹಣ ವಸೂಲಿ ಮಾಡುವ ಜನರಿಂದ ದೂರ ಇರಬೇಕು ಹಲವು ಸೇವೆಗಳು ಆನ್ಲೈನ್ ಮೂಲಕ ಇರುತ್ತದೆ ಹಾಗೂ ಆದಷ್ಟು ಜನರು ಆನ್ಲೈನ್ ಸೇವೆಗಳನ್ನು ಪಡೆದುಕೊಳ್ಳಬೇಕು ರೈತರು ಯಾವುದೇ ಕಾರಣಕ್ಕೂ ಖಾಲಿ ಪೇಪರ್ ಮೇಲೆ ಸಹಿ ಮಾಡಬಾರದು ಕರ್ನಾಟಕ ಸರ್ಕಾರದ ಹಲವಾರು ಸೇವೆಗಳು ಆನ್ಲೈನ್ ಅಲ್ಲಿ ಇರುವುದರಿಂದ ಹೆಚ್ಚಾಗಿ ಆನ್ಲೈನ್ ಸೇವೆಯನ್ನು ಜನರು ತೆಗೆದುಕೊಳ್ಳಬೇಕು ಇವೆಲ್ಲ ವಿಷಯಗಳಿಗೆ ಜನರು ತಹಶೀಲ್ದಾರ ಕಚೇರಿಗೆ ಭೇಟಿ ನೀಡಬೇಕು.