ರಸ್ತೆ ಬದಿಯಲ್ಲಿ ಬೆಳೆಯುವ ತಗಚೆ ಗಿಡ ಹೇಗಿರುತ್ತದೆ ಹಾಗೂ ಅದರ ಉಪಯೋಗಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ರಸ್ತೆಬದಿಯಲ್ಲಿ ಗುಂಪು ಗುಂಪಾಗಿ ತಗಚೆ ಗಿಡಗಳು ಕಂಡುಬರುತ್ತದೆ. ಇದು ಪ್ರಮುಖ ಔಷಧೀಯ ಸಸ್ಯವಾಗಿದೆ. ಕೆಲವರು ಸೀಸಲ್ ಫೈನೆಸ್ಸಿಯೆ ಎಂದರೆ ಇನ್ನು ಕೆಲವರು ಪೇಬಾಸಿಯೆ ಎನ್ನುತ್ತಾರೆ. ವೈಜ್ಞಾನಿಕವಾಗಿ ಈ ಸಸ್ಯಕ್ಕೆ ಸೆನ್ನಾ ಟೋರಾ ಎನ್ನುತ್ತಾರೆ. ಸಂಸ್ಕ್ರತದಲ್ಲಿ ಈ ಗಿಡಕ್ಕೆ ಚಕ್ರಮರ್ದ, ದುರ್ದುಗ್ನ ಎನ್ನುವರು ದುರ್ದುಗ್ನ ಎಂದರೆ ಕನ್ನಡದಲ್ಲಿ ತಗಚೆ ಎನ್ನವರು. ಆಂಗ್ಲ ಭಾಷೆಯಲ್ಲಿ ಸಿಕಲ್ ಸೆನ್ನಾ, ರಿಂಗ್ ವೋರ್ಮಾ ಪ್ಲಾಂಟ್ ಇತ್ಯಾದಿ ಹೆಸರುಗಳಿವೆ. ಈ ಸಸ್ಯದ ಮೂಲ ಮಧ್ಯ ಅಮೆರಿಕ ಆಗಿದ್ದು. ಭಾರತ ಮತ್ತು ನೇಪಾಳ ಸೇರಿದಂತೆ ಚೀನಾ ಮುಂತಾದ ದೇಶಗಳಲ್ಲಿ ಕಂಡುಬರುತ್ತದೆ. ಉಷ್ಣವಲಯದ ನಿವಾಸಿಯಾಗಿರುವ ತಗಚೆ ಏಕ ವಾರ್ಷಿಕ ಸಸ್ಯವಾಗಿದ್ದು ಸುಮಾರು 2 -4 ಅಡಿ ಎತ್ತರಕ್ಕೆ ಬೆಳೆದು ಹಲವಾರು ಕವಲುಗಳಾಗಿ ಬೆಳೆಯುತ್ತದೆ, ಗಟ್ಟಿಯಾದ ಹಸಿರು ಕಾಂಡಗಳಿಂದ ಕೂಡಿದ್ದು ಸುಮಾರು 5 ಸೆ.ಮೀ ಉದ್ದ ಹಾಗೂ 2.5 ಸೆ.ಮೀ ಅಗಲವಾದ ಅಂಡಾಕಾರದ 6 ಕಿರುಪತ್ರಗಳು ಸಂಯುಕ್ತ ಮಾದರಿಯಲ್ಲಿ ಜೋಡಣೆಗೊಂಡಿದ್ದು, ಹಳದಿ ಬಣ್ಣದ ಐದು ದಳಗಳಿಂದ ಕೂಡಿದ ಹೂವುಗಳಾಗಿದ್ದು, ನೀಳವಾದ ಹಸಿರು ಕಾಯಿಗಳಿದ್ದು, ಮಾಗಿದ ಬಳಿಕ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಹಾಗೂ ತಿಳಿ ಕಂದು ಬಣ್ಣದ ಬೀಜಗಳಿರುತ್ತದೆ.

ಈ ಸಸ್ಯ ಕೆಲವು ರಸಾಯನಿಕವನ್ನು ಒಳಗೊಂಡಿದೆ. ಈ ಸಸ್ಯದ ಎಲೆ, ಬೇರು ಹಾಗೂ ಬೀಜಗಳನ್ನು ಸಂಪ್ರದಾಯಿಕ, ಆಯುರ್ವೇದ ಹಾಗೂ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಇದರ ಚಿಗುರೆಲೆಗಳನ್ನು ಅಲ್ಪ ಪ್ರಮಾಣದಲ್ಲಿ ತರಕಾರಿಯಂತೆ ಸೇವಿಸಿದರೆ ಚರ್ಮ ರೋಗ ಹಾಗೂ ರಕ್ತ ದೋಷಗಳನ್ನು ನಿವಾರಿಸುತ್ತದೆ. ಇದರ ಎಲೆಗಳನ್ನು ಅರೆದು ಊತ ಹಾಗೂ ನೋವಿರುವ ಜಾಗಗಳಿಗೆ ಲೇಪಿಸಬಹುದಾಗಿದೆ. ತಗಚೆ ಗಿಡದ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬಳಿಕ ಆ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು. ತಗಚೆ ಬೀಜಗಳನ್ನು ಅರೆದು ಹಣೆಗೆ ಹಚ್ಚಿಕೊಳ್ಳುವುದರಿಂದ ಅರ್ಧ ತಲೆನೋವು ಹಾಗೂ ತಲೆನೋವು ನಿವಾರಣೆಯಾಗುತ್ತದೆ. ತಗಚೆ ಬೀಜದ ಪುಡಿಯನ್ನು ಸಂಜೆ ಹಾಗೂ ಮುಂಜಾನೆ ಒಂದೊಂದು ಗ್ರಾಂ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. ತಗಚೆ ಬೀಜದ ಪುಡಿ ಹಾಗೂ ಶ್ರೀಗಂಧವನ್ನು ಸೇರಿಸಿ ಮುಖಕ್ಕೆ ಲೇಪಿಸುವುದರಿಂದ ಮೊಡವೆಗಳು ನಿವಾರಣೆಯಾಗುತ್ತದೆ. ಈ ಸಸ್ಯದಿಂದ ಅಡ್ದ ಪರಿಣಾಮ ಇಲ್ಲದಿದ್ದರೂ ಅಧಿಕ ಪ್ರಮಾಣದಲ್ಲಿ ಬಳಸಬಾರದು. ಗರ್ಭಿಣಿ ಸ್ತ್ರೀಯರು ಈ ಸಸ್ಯವನ್ನು ಬಳಸಬಾರದು.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!