ಟ್ರ್ಯಾಕ್ಟರ್ ರೈತನ ಮಿತ್ರ ನಾಗಿ ಕೆಲಸ ಮಾಡುತ್ತದೆ. ರೈತ ಬೆಳೆದ ವಸ್ತುಗಳ ಸಾರಿಗೆಗೆ ಜೊತೆಗೆ ಕೃಷಿಗೆ ಸಂಬಂಧಪಟ್ಟ ಕೆಲಸಗಳಿಗೆ ಅತ್ಯುತ್ತಮ ಉಪಕಾರಿಯಾಗಿ ಕೆಲಸ ಮಾಡುತ್ತದೆ. ಟ್ಯಾಕ್ಟರ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ಕಚ್ಚಾ ರಸ್ತೆಗಳಲ್ಲಿಯು ತೆಗೆದುಕೊಂಡು ಹೋಗಲು ಯೋಗ್ಯವಾಗಿದೆ. ಈಗಿನ ಆಧುನಿಕ ತಂತ್ರಜ್ಞಾನದ ಮೂಲಕ ಟ್ರ್ಯಾಕ್ಟರ್ ಗಳಿಗೆ ಗದ್ದೆಗಳನ್ನು ನಾಟಿ ಮಾಡುವ ಮಿಷನ್ ಅನ್ನು ಅಳವಡಿಸಿ ಕಡಿಮೆ ಸಮಯದಲ್ಲಿ ಅತಿವೇಗದ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಗದ್ದೆಯನ್ನು ಕಟಾವು ಮಾಡಲು ಇನ್ನು ಅನೇಕ ಕೃಷಿ ಹೊಲದ ಕೆಲಸಗಳಿಗೆ ಟ್ರ್ಯಾಕ್ಟರ್ ಗಳು ಉಪಯೋಗವಾಗುತ್ತದೆ ಟ್ರ್ಯಾಕ್ಟರ್ ರೈತನಿಗೆ ಉತ್ತಮ ಉಪಕಾರಿಯಾಗಿದೆ. ಆದರೆ ಅದನ್ನು ಅವಶ್ಯಕತೆಗೆ ಮೀರಿ ಉಪಯೋಗಿಸಿದವರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮಣ್ಣುಗಳನ್ನು ಸಾಗಿಸಲು, ರೈತರು ಬೆಳೆದ ಫಸಲುಗಳನ್ನು ಒಯ್ಯಲು ಹೀಗೆ ಇನ್ನೂ ಅನೇಕ ಕೆಲಸಗಳಿಗೆ ಟ್ರ್ಯಾಕ್ಟರ್ ಗಳು ಉಪಕಾರಿಯಾಗಿದೆ. ಕೃಷಿಗೆ ಉಪಯೋಗಿಸುವಂತಹ ಟ್ರ್ಯಾಕ್ಟರ್ ಗಳನ್ನು ಸಾರಿಗೆ ವಾಹನ ವಿಭಾಗದಡಿ ತರಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಸಿದ್ಧತೆ ನಡೆಸಿದೆ. ಸದ್ಯದಲ್ಲಿ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಾಗುವ ಸಾಧ್ಯತೆಯಿದ್ದು ಈ ಸಂಬಂಧ ಕರಡು ರಚನೆ ಪೂರ್ಣಗೊಂಡಿದೆ. ಸದ್ಯ ರಾಜ್ಯದಲ್ಲಿ ಕೃಷಿಗಾಗಿ ಬಳಸುವ ಟ್ರ್ಯಾಕ್ಟರ್ ಗಳನ್ನು ಸಾರಿಗೆಯೇತರ ವಾಹನಗಳ ಅಂದರೆ ವೈಟ್ ಬೋರ್ಡ್ವಿಭಾಗದಲ್ಲಿ ನೋಂದಣಿ ಮಾಡಲಾಗುತ್ತಿದೆ.
ಆದರೆ ಟ್ರ್ಯಾಕ್ಟರ್ ಖರೀದಿಸುವ ಬಹಳಷ್ಟು ರೈತರಲ್ಲಿ ಪರವಾನಗಿಯೇ ಇಲ್ಲ. ಇಂತಹ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಿರುವುದು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಕಾಯ್ದೆಯಿಂದ ಇದಕ್ಕೆ ಕಡಿವಾಣ ಬೀಳುವ ನಿರೀಕ್ಷೆಯಿದೆ. ಈಗ ದ್ವಿಚಕ್ರ ವಾಹನಗಳು, ಓಮಿನಿ, ಬಸ್, ಟ್ರ್ಯಾಕ್ಟರ್, ಟ್ರೇಲರ್, ಕಾರು, ಜೀಪು, ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನ ವಿಭಾಗದಲ್ಲಿವೆ. ಟ್ರ್ಯಾಕ್ಟರ್ ಗಳು ಸಾರಿಗೆ ವಾಹನ ವಿಭಾಗದಡಿ ಬಂದಲ್ಲಿ ಪ್ರತಿ ವರ್ಷಕ್ಕೊಮ್ಮೆ ಅರ್ಹತಾ ಪ್ರಮಾಣ ಪತ್ರ, ಪರ್ಮಿಟ್ ಪಡೆದುಕೊಳ್ಳುವುದು ಕಡ್ಡಾಯವಾಗಲಿದೆ.
ಟ್ರ್ಯಾಕ್ಟರ್ ಗಳನ್ನು ಸಾಹಸ ಪ್ರದರ್ಶನಕ್ಕಾಗಿ ಕೆಲವರು ಬಳಸುತ್ತಾರೆ. ಹೀಗೆ ಒಬ್ಬ ರೈತ ತನ್ನ ಟ್ರ್ಯಾಕ್ಟರ್ ಅನ್ನು ಹೂಳು ತುಂಬಿದ ಕೆರೆಯಲ್ಲಿ ಇಳಿಸುತ್ತಾನೆ. ನಂತರ ಆ ಟ್ರ್ಯಾಕ್ಟರ್ ಅನ್ನು ಹೂಳಿನಿಂದ ಮೇಲೆ ತೆಗೆದುಕೊಂಡು ಬರಲು ಅನೇಕ ಸಾಹಸಗಳನ್ನು ಮಾಡುತ್ತಾನೆ. ಈ ದೃಶ್ಯವು ಅನೇಕ ಜನರಿಗೆ ಮನೋರಂಜನೆಯನ್ನು ಮತ್ತು ತಮಾಷೆಯನ್ನು ನೀಡುತ್ತದೆ. ಆದರೆ ಆ ರೈತ ತನ್ನ ಟ್ರ್ಯಾಕ್ಟರ್ ಅನ್ನು ಮೇಲೆ ತೆಗೆಯಲು ತುಂಬಾ ಸಾಹಸವನ್ನು ಪಡುತ್ತಾನೆ. ನಂತರ ಟ್ರ್ಯಾಕ್ಟರ್ ಗೆ ಹಗ್ಗವನ್ನು ಬಿಗಿದು ಅದರ ಸಹಾಯದ ಮೂಲಕ ಮೇಲೆ ತರುತ್ತಾನೆ. ಹೀಗೆ ಟ್ರ್ಯಾಕ್ಟರ್ ಗಳಿಂದ ಅನೇಕ ಸಾಹಸವನ್ನು ಮಾಡಲು ಹೋಗಿ ಜೀವಕ್ಕೆ ಆಪತ್ತು ತಂದುಕೊಳ್ಳುವವರಿದ್ದಾರೆ. ಟ್ರ್ಯಾಕ್ಟರ್ ರೈತನಿಗೆ ಉಪಯುಕ್ತ ಕೆಲಸಗಳಿಗೆ ಮತ್ತು ಸಾರಿಗೆಗೆ ಒಳ್ಳೆಯ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದು ಉತ್ತಮವಾಗಿದೆ.