ಸಾಮಾನ್ಯವಾಗಿ ನಾವೆಲ್ಲರೂ ನಿದ್ದೆಯಲ್ಲಿ ಕೆಲವೊಂದು ದೃಶ್ಯಗಳನ್ನು ನೋಡುತ್ತೇವೆ. ಕೆಲವು ದೃಶ್ಯಗಳು ಆಸ್ಪಷ್ಟವಾಗಿರುತ್ತದೆ. ಇನ್ನೂ ಕೆಲವು ಕಣ್ಣಿಗೆ ಕುಕ್ಕುವಂತಿರುತ್ತದೆ. ನಿದ್ದೆಯಲ್ಲಿ ಕಾಣುವ ಈ ದೃಶ್ಯಗಳನ್ನೇ ಕನಸು ಎನ್ನಲಾಗುತ್ತದೆ.ಕನಸುಗಳಲ್ಲಿ ಅನೇಕ ವಿಧಗಳಿಗೆ. ಸ್ವಪ್ನ ಶಾಸ್ತ್ರದಲ್ಲಿ ನಾವು ಕಾಣುವ ಪ್ರತಿಯೊಂದು ಕನಸಿಗೂ ಅದರದ್ದೇ ಅರ್ಥವನ್ನು ಮಹತ್ವವನ್ನು ನೀಡಲಾಗಿದೆ.ಹಾಗಾದರೆ ಯಾವ ಕನಸ್ಸು ನಮ್ಮ ಯಶಸ್ಸನ್ನು, ಸಂಪತ್ತನ್ನು ಸೂಚಿಸುತ್ತದೆ ಎಂದು ಈ ಕೆಳಗಿಂನಂತೆ ತಿಳಿಯೋಣ.
ಮನೆಯಲ್ಲಿ ಕಸ ಬಿದ್ದಿರುವ ದೃಶ್ಯಾವನ್ನು ಕನಸಿನಲ್ಲಿ ನೋಡಿದರೆ ಅದು ಧನಲಾಭವಾಗುವ ಸಂಕೇತವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಯಾರಾದರೂ ಹೊರಗಿನಿಂದ ಮನೆಗೆ ಕಸವನ್ನು ತರುತ್ತಿರುವಂತೆ ಕಂಡರೆ ಅದು ಸಹ ಹಣ ಸಿಗುವ ಸಂಕೇತವನ್ನು ಸೂಚಿಸುತ್ತದೆ. ಈ ರೀತಿಯ ಕನಸುಗಳು ಬಿದ್ದರೆ ಅವು ಧನ ಲಾಭವಾಗುವ ಸೂಚನೆ ಎಂದು ಹೇಳಲಾಗುತ್ತದೆ.
ಕನಸಿನಲ್ಲಿ ಹಾಲು ಅಥವಾ ಮೊಸರನ್ನು ಇಟ್ಟಂತೆ ಕಂಡರೆ ಅದು ಧನಲಾಭವನ್ನು ಸೂಚಿಸುತ್ತದೆ. ಇಲ್ಲವೇ ಹಾಲು ಅಥವಾ ಮೊಸರನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ ಅದರ ಅರ್ಥವು ಸಹ ಧನ ಧನ್ಯಗಳಿಂದ ಮನೆಯು ಸಮೃದ್ಧವಾಗುತ್ತದೆ ಎಂಬುದೇ ಆಗಿರುತ್ತದೆ ಎಂದು ಹೇಳಲಾಗುತ್ತದೆ.
ಗೋವಿನಲ್ಲಿ ಮೂವತ್ಮೂರು ಕೋಟಿ ದೇವಾಣುದೇವತೆಗಳು ವಾಸವಾಗಿರುತ್ತರೆಂದು ಹೇಳಗುತ್ತದೆ. ಗೋ ಮಾತೆಯ ಸೇವೆಯಿಂದ ಇಷ್ಟಾರ್ಥ ಸಿದ್ಧಿಸುವುದಲ್ಲದೆ, ಮಾಡಿದ ಪಾಪ ಕಳೆಯುತ್ತದೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಗೋ ಮಾತೆಯ ದರ್ಶನವಾದರೆ ಅದು ಧನಲಾಭವನ್ನು ಸೂಚಿಸುತ್ತದೆ ಎನ್ನುತ್ತಾರೆ ಕನಸಿನಲ್ಲಿ ಗಣೇಶನ ಮೂರ್ತಿಯಾಗಲಿ ಈಶ್ವರನ ಲಿಂಗವಾಗಲಿ ಅಥವಾ ಬಸವನಾಗಲಿ ಬಂದರೆ ನಿಮಗೆ ಧನಲಾಭದ ಸಂಕೇತ, ಎಥೇಚ್ಚವಾಗಿ ಧನ ಲಾಭ ಆಗುತ್ತದೆ.