2020 ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 21 ಭಾನುವಾರದಂದು ಮೂಡಿ ಬರಲಿದೆ. ಇದು ಈ ವರ್ಷದ ಮೊದಲ ಹಾಗೂ ದೊಡ್ಡ ಸೂರ್ಯ ಗ್ರಹಣ ಆಗಿದ್ದು ಅತ್ಯಂತ ಕುತೂಲಹವನ್ನು ಇದು ಸೃಷ್ಟಿಸಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈಗ ಇರುವಂತಹ ಕರೊನ ಸಾಂಕ್ರಾಮಿಕ ರೋಗವು ಕೊನೆಯ ವರ್ಷದ 2019 ರ ಕೊನೆಯ ಸೂರ್ಯ ಗ್ರಹಣದಿಂದ ಆರಂಭ ಆಯಿತು. ಈ ವರ್ಷದ ಮೊದಲ ಸೂರ್ಯ ಗ್ರಹಣ ಅಂದರೆ ಜೂನ್ 21 ರ ಸೂರ್ಯ ಗ್ರಹಣದಲ್ಲಿ ಈ ರೋಗವು ಮುಕ್ತಿಯನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಸೂರ್ಯ ಗ್ರಹಣದ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತು ವಿಜ್ಞಾನದ ಪ್ರಕಾರ ಜಗತ್ತಿನಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತದೆ ಎಂದು ಹೇಳಲಾಗಿದೆ. ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ನಾವು ಜ್ಯೋತಿಷ್ಯ ಶಾಸ್ತ್ರವನ್ನು ಗಾಢವಾಗಿ ನಂಬುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯ ಗ್ರಹಣದ ಸಮಯದಲ್ಲಿ ಕೆಲವೊಂದು ರಾಶಿಗಳಿಗೆ ಹಲವಾರು ತೊಂದರೆ ಆಗುತ್ತದೆ ಎಂದು ಸಹ ಹೇಳಲಾಗುತ್ತದೆ. ಈ ಸೂರ್ಯ ಗ್ರಹಣದ ಸಮಯದಲ್ಲಿ ಯಾರಿಗೆಲ್ಲ ಒಳ್ಳೆಯದು ಆಗುತ್ತದೆ ಹಾಗೂ ಯಾವ ರಾಶಿಯವರಿಗೆ ಕೆಟ್ಟ ಫಲ ಇದೆ ಅನ್ನೋದನ್ನ ನೋಡೋಣ.

ಈ ಒಂದು ಸೂರ್ಯ ಗ್ರಹಣ ಇದು ವಾರ್ಷಿಕ ಸೂರ್ಯ ಗ್ರಹಣ ಆಗಿದ್ದು ಈ ಗ್ರಹಣವನ್ನು ಪ್ರಪಂಚದಾದ್ಯಂತ ಎಲ್ಲರೂ ನೋಡಬಹುದು. ಈ ಗ್ರಹಣದಲ್ಲಿ ಚಂದ್ರನ ನೆರಳು ಶೇಕಡಾ 99 ರಷ್ಟು ಸೂರ್ಯನನ್ನು ಆವರಿಸಿರುತ್ತದೆ. ಪ್ರತೀ 18 ವರ್ಷಗಳಿಗೆ ಒಮ್ಮೆ ಈ ರೀತಿಯ ಸೂರ್ಯ ಗ್ರಹಣ ಬರುತ್ತದೆ ಎಂದು ಹೇಳಲಾಗುತ್ತದೆ. ವೈಜ್ಞಾನಿಕವಾಗಿ ಸೂರ್ಯ ಗ್ರಹಣವು ಖಗೋಳದಲ್ಲಿ ನಡೆಯುವ ವಿದ್ಯಾಮಾನ ಆಗಿರುತ್ತದೆ. ಇಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರುತ್ತಾನೆ. ಚಂದ್ರನು ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳದಂತೆ ಅಡ್ಡ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ ಈ ಪ್ರಕ್ರಿಯೆಯನ್ನು ಸೂರ್ಯ ಗ್ರಹಣ ಎನ್ನುತ್ತಾರೆ. ಇಂತಹ ಘಟನೆ ನಡೆಯುವುದು ಅಮಾವಾಸ್ಯೆಯಂದು ಮಾತ್ರ ಎಂದು ನಮ್ಮ ಜ್ಯೋತಿಶ್ಯ ಶಾಸ್ತ್ರ ತಿಳಿಸುತ್ತದೆ.

ಈ ಸೂರ್ಯ ಗ್ರಹಣವು 2020 ಜೂನ್ 21 ರಂದು ಬೆಳಿಗ್ಗೆ 10 : 31ಕ್ಕೆ ಆರಂಭ ಆಗಿ, ಮಧ್ಯಾನ್ಹ 2:30 ರ ಸಮಯಕ್ಕೆ ಗ್ರಹಣ ಬಿಡುಗಡೆ ಗೊಳ್ಳುತ್ತೇ ಅಂತ ಹೇಳಲಾಗುತ್ತಿದೆ. ಇದರ ಮಧ್ಯದ ಸಮಯ 12 : 18 ಕ್ಕೆ ಗ್ರಹಣದ ಪೂರ್ಣ ಪರಿಣಾಮ ಬೀರುತ್ತದೆ ಇನ್ಸು ಹೇಳಲಾಗುತ್ತಿದೆ. ಇದು ಗ್ರಹಣದ ಮಧ್ಯ ಕಾಲ ಆಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರ ಪುಂಜಗಳ ಬದಲಾವಣೆಯಿಂದ ಕರೊನ ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡುತ್ತವೆ ಎಂದೂ ಸಹ ಹೇಳುತ್ತಾರೆ.

ಜೂನ್ 21 ಭಾನುವಾರದಂದು ಸೂರ್ಯ ಗ್ರಹಣದಿಂದಾಗಿ ಮಳೆ, ಗೋಧಿ, ಬತ್ತ ಇವುಗಳ ಉತ್ಪಾದನೆಯಲ್ಲಿ ಇಳಿಕೆಯನ್ನು ಕಾಣಬಹುದಾಗಿದೆ. ಹಾಗೂ ಇದೆ ಸಮಯದಲ್ಲಿ ಹಸುವಿನ ಹಾಲಿನ ಉತ್ಪಾದನೆಯೂ ಕೂಡಾ ಕಡಿಮೆ ಆಗುತ್ತದೆ ಎಂದೂ ಹೇಳಲಾಗುತ್ತದೆ. ಇದಲ್ಲದೇ ಪ್ರಮುಖ ದೇಶಗಳ ರಾಷ್ಟ್ರಾಧ್ಯಕ್ಷರ ಮೇಲೆಯೂ ಸಹ ಒತ್ತಡ ಮತ್ತು ಚರ್ಚೆಗಳು ನಡೆಯುತ್ತವೆ ಎಂದು ನಂಬಲಾಗುತ್ತದೆ. ಈ ಗ್ರಹಣವು ವ್ಯಾಪಾರಿಗಳಿಗೆ ಒಳ್ಳೆಯದನ್ನು ಮಾಡುತ್ತದೆ. ತುಂಬಾ ಪ್ರಯೋಜನಕಾರಿಯಾಗಿ ವ್ಯಾಪಾರಿಗಳಿಗೆ ಲಾಭವನ್ನು ತಂದುಕೊಡುತ್ತದೆ. ಈಗಿನ ಸೂರ್ಯ ಗ್ರಹಣದಲ್ಲಿ ತುಂಬಾ ಜನರಿಗೆ ತುಂಬಾ ರೀತಿಯ ನಂಬಿಕೆಗಳೂ ಇದೆ.

ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಈ ಕೆಲವೊಂದು ರಾಶಿಯವರು ಮನೆಯಲ್ಲಿಯೇ ಇರಬೇಕು ಹಾಗೂ ಆಹಾರವನ್ನು ಸೇವಿಸಬಾರದು ಅಂತ ಹೇಳಲಾಗುತ್ತದೆ. ಆ ರಾಶಿಗಳು ಯಾವುದು ಎಂದರೆ, ಮಕರ ರಾಶಿ, ಸಿಂಹ ರಾಶಿಯವರಾಗಿರುತ್ತರೆ. ಈ ರಾಶಿಯವರು ತುಳಸಿಯನ್ನು ಮೊಸರು, ಹಾಲು, ತುಪ್ಪದಲ್ಲಿ ಹಾಕುವುದರಿಂದ ಗ್ರಹಣದ ಕಾಲದಲ್ಲಿ ಅದರ ಪ್ರಭಾವವನ್ನು ಇವರು ತಡೆಯಬಹುದಾಗಿದೆ. ಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಪೂಜೆಗಳನ್ನೂ ಸಹ ಮಾಡಬಾರದು ಹಾಗೂ ದೇವರ ವಿಗ್ರಹಗಳನ್ನೂ ಸಹ ಮುಟ್ಟಬಾರದು ಎಂದಿದೆ. ಗ್ರಹಣ ಮುಕ್ತಾಯ ಆದ ನಂತರ ಸ್ನಾನ ಮಾಡಿ ಶುಚಿಯಾಗಿ ಆಹಾರವನ್ನು ಸೇವಿಸಬೇಕು. ಗ್ರಹಣದ ಸಮಯದಲ್ಲಿ ಸೂರ್ಯನನ್ನು ಪಠಿಸುವ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಗ್ರಹಣದ ದೋಷ ಯಾರ ಮೇಲೆಯೂ ಬೀಳುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ 2020, ಜೂನ್ 21 ಭಾನುವಾರದಂದು ಮೂಡಿ ಬರುವ ಈ ಸೂರ್ಯ ಗ್ರಹಣ ಕೆಲವು ಒಳ್ಳೆಯ ಹಾಗೂ ಕೆಲವು ಕೆಟ್ಟ ಫಲಗಳನ್ನೂ ಸಹ ತರುತ್ತದೆ.

Leave a Reply

Your email address will not be published. Required fields are marked *