ನಿಜಕ್ಕೂ ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಕಣ್ಮರೆಯಾಗುತ್ತಿದೆ, ಬಹಳಷ್ಟು ಜನ ಕಷ್ಟಕ್ಕೆ ಸ್ಪಂದಿಸದೆ ತಮ್ಮ ಪಾಡಿಗೆ ತಾವು ಹೋಗಿಬಿಡುತ್ತಾರೆ, ಆದ್ರೆ ಇಲ್ಲೊಬ್ಬ ಮಹಿಳೆ ವೃದ್ಧ ಬಸ್ ನಲ್ಲಿ ಹೋಗಲು ಬಂದಾಗ ಸರ್ಕಾರೀ ಬಸ್ ಈ ವೃದ್ದಿನಿಂದ ಪಾಸ್ ಆಗುತ್ತದೆ ಆದ್ರೆ ಹಿಂದಿನಿಂದ ಓಡಿ ಬರಲು ಆಗದೆ ಇರುವಂತ ಸಂದರ್ಭದಲ್ಲಿ ಅಲ್ಲೇ ನಿಂತಿದ್ದ ಮಹಿಳೆಯೊಬ್ಬರು ಓಡಿ ಬಂದು ಬಸ್ ನಿಲ್ಲಿಸಿ ಆ ವೃದ್ಧನಿಗೆ ಕೈ ಹಿಡಿದು ಬಸ್ ಹತ್ತಿಸುತ್ತಾಳೆ. ಮಾನವೀಯತೆ ಮೆರೆದ ಈ ಮಹಿಳೆಯ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನದಾಗಿ ವೈರ್ ಆಗಿದ್ದು. ಈ ಮಹಿಳೆ ಊಹಿಸದಂತ ಗಿಫ್ಟ್ ಸಿಕ್ಕಿದೆ.
ನಾವು ಬೇರೆಯವರಿಗೆ ಸಹಾಯ ಮಾಡಿದ್ರೆ ದೇವ್ರು ನಮಗೆ ಮತ್ತೊಂದು ರೂಪದಲ್ಲಿ ಸಹಾಯ ಮಾಡ್ತಾನೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಹೌದು ಈ ಮಹಿಳೆಯ ಹೆಸರು ಸುಪ್ರಿಯಾ ಎಂಬುದಾಗಿ ಜುಲೈ ತಿಂಗಳ ಮೊದಲ ವಾರದಲ್ಲಿ ಅಂಧ ವೃದ್ಧರೊಬ್ಬರ ಕೈಹಿಡಿದು ಬಸ್ ಹತ್ತಿಸಿದ ಮಹಿಳೆಗೆ ಊಹಿಸದಂತ ಗಿಫ್ಟ್ ಅನ್ನು ಜ್ಯೋಯಲೂಕಾಸ್ ಕೊಟ್ಟಿದೆ ಹೌದು ಸುಪ್ರಿಯಾಗೆ ಕನಸಿನ ಮನೆಯೊಂದು ದೊರಕಿದೆ. ಈ ಮನೆಯನ್ನು ಪ್ರತಿಷ್ಠಿತ ಆಭರಣ ಮಳಿಗೆಯಾದ ಜಾಯಾಲುಕ್ಕಾಸ್ ಅವರು ನೀಡಿದ್ದಾರೆ.
ಜಾಯಾಲುಕ್ಕಾಸ್ ಗ್ರೂಪ್ ಮುಖ್ಯಸ್ಥ ಜಾಯ್ ಅಲುಕ್ಕಾಸ್ ಅವರು ಸುಪ್ರಿಯಾ ಅವರನ್ನು ಭೇಟಿ ಮಾಡಿ, ಮೊದಲು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆ ಬಳಿಕ ತ್ರಿಶೂರಿನಲ್ಲಿರುವ ಮುಖ್ಯಕಚೇರಿಗೆ ಬಂದು ಭೇಟಿಯಾಗುವಂತೆ ಹೇಳಿದ್ದಾರೆ ಈ ವೇಳೆ ಸುಪ್ರಿಯಾಗೆ ಅಲ್ಲಿ ಬಿಗ್ ಗಿಫ್ಟ್ ಸಿಕ್ಕಿದೆ. ಅದೇನೇ ಇರಲಿ ಈ ಮಹಿಳೆ ಮಾಡಿದ ಸಹಾಯಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿದ್ದು ಇದರಿಂದ ತಮಗೆ ಕನಸಿನ ಮನೆ ದೊರಕಿದೆ.