ಸುಲ್ತಾನ್ ಹಸನೈಲ್ ಬೋಲ್ಕೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ಕಾಣ ಸಿಗುವ ಹೆಸರು. ಅಷ್ಟಕ್ಕೂ ಆತ ಯಾರು, ಯಾವ ದೇಶದ ಪ್ರಧಾನಿ, ಆತನ ಲಕ್ಸೂರಿ ಲೈಫ್‌ನ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ. ಸುಲ್ತಾನ್ ಹಸನೈಲ್ ಬೋಲ್ಕೆ. ಈತ ಬ್ರುನೈ ದೇಶದ ಸುಲ್ತಾನ, ಅಂದರೆ ಪ್ರಧಾನಿ. ಬ್ರುನೈ ತೈಲ ನಿಕ್ಷೇಪದಿಂದ ಅತೀ ಹೆಚ್ಚು ಲಾಭಗಳಿಸಿಕೊಂಡ ರಾಷ್ಟ್ರ. ಈ ದೇಶದ ವಿಶೇಷತೆಯಂದ್ರೆ ಸಾರ್ವಜನಿಕರ ಮೇಲೆ ಒಂದು ಪೈಸೆಯು ಸಾಲ ಇಲ್ಲದ ಜಗತ್ತಿನ ಎರಡೇ ಎರಡು ರಾಷ್ಟ್ರಗಳ ಪೈಕಿ ಬ್ರುನೈ ಸಹ ಒಂದು.

ಈ ದೇಶ ಪೋರ್ಚುಗೀಸರ, ಬುದ್ಧರ ಹೀಗೆ ಬೇರೆ ಬೇರೆ ದೇಶಗಳ ಆಳ್ವಿಕೆಗೆ ಒಳಪಟ್ಟಿತ್ತು. ಕೊನೆಗೂ ಈ ದೇಶಕ್ಕೆ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಸಿಕ್ಕ ಸಂದರ್ಭದಲ್ಲಿ ಸುಲ್ತಾನ್ ಹಸನೈಲ್ ಬೋಲ್ಕೆ ಈ ರಾಷ್ಟದ ಪ್ರಧಾನಿಯಾಗಿದ್ದ. ತೈಲವನ್ನು ಫೋಕಸ್ ಮಾಡಿ ಅದನ್ನೇ ರಫ್ತು ಮಾಡಿ ಈತ ದೇಶಕ್ಕೆ ಅತೀ ಲಾಭ ತಂದುಕೊಟ್ಟ. ಜೊತೆಗೆ ದೇಶದಲ್ಲಿ ತನ್ನದೇ ಆದ ಕೆಲವು ಕಾನೂನುಗಳನ್ನು ಹೇರಿ ಸರ್ವಾಧಿಕಾರ ಆಡಳಿತವನ್ನು ನಡೆಸಿದ್ದಾನೆ.

ಇನ್ನು ಸುಲ್ತಾನ್ ಹಸನೈಲ್ ಬೋಲ್ಕೆ ಬಳಿ ಏಳು ಸಾವಿರ ಅತ್ಯುನ್ನತವಾದ ಬ್ರಾಂಡೆಡ್ ಕಾರ್‌ಗಳಿವೆ. ತನ್ನ ಮದುವೆಯ ವಾರ್ಷಿಕೋತ್ಸವದ ದಿನ ಚಿನ್ನದ ರೋಲ್ಸ್ ರಾಯ್ ಕಾರಿನಲ್ಲಿ ಮೆರವಣಿಗೆ ಹೋಗಿ ಸಾಕಷ್ಟು ಸದ್ದು ಸಹ ಮಾಡಿದ್ದಾರೆ. ಜೊತೆಗೆ ಈತ ವಾಸವಿರುವ ಭವ್ಯ ಬಂಗಲೆ 52 ಎಕರೆಗಳಲ್ಲಿ ರಚನೆಯಾಗಿದ್ದು, 1788 ಕೋಣೆಗಳಿವೆ, ಈತನದ್ದೇ ಆದ ಸ್ವಂತ ಮೃಗಾಲಯವಿದೆ.

ಅನೇಕ ಹೋಟೆಲ್‌ಗಳಿವೆ. ಜೊತೆಗೆ ವೈಯಕ್ತಿಕ ಓಡಾಟಕ್ಕಾಗಿಯೇ 400 ಮಿಲಿಯನ್ ಖರ್ಚು ಮಾಡಿ ಪೋಯಿಂಗ್ 747 ವಿಮಾನವನ್ನು ಸಹ ಈತ ಖರೀದಿ ಮಾಡಿದ್ದಾನೆ. ಈತನ ಒಟ್ಟು ಆಸ್ತಿ 40 ಬಿಲಿಯನ್ ಡಾಲರ್. ಇದೆಲ್ಲವುದಕ್ಕಿಂತಲೂ ಗಮನ ಸೆಳೆಯುವ ಮತ್ತೊಂದು ವಿಚಾರ ಅಂದ್ರೆ ಈ ಸುಲ್ತಾನ ತನ್ನ ಕೂದಲು ಕಟ್ ಮಾಡಲು ವ್ಯಯಿಸುವ ಹಣ. ಒಂದೇ ಒಂದು ಸಲ ಹೇರ್ ಕಟ್ ಮಾಡಲು ಈತ ಬರೋಬ್ಬರಿ 20 ಸಾವಿರ ಡಾಲರ್ ಖರ್ಚು ಮಾಡ್ತಾನೆ. ಅಂದ್ರೆ ಭಾರತೀಯ ಮೌಲ್ಯದ ಪ್ರಕಾರ 15 ಲಕ್ಷ ಹಣ. ಅದೆಂತಹ ಹೇರ್ ಕಟ್ ಇರಬಹುದಪ್ಪಾ ಅನ್ನೋ ಡೌಟು ಆತನ ಹೇರ್ ಸ್ಟೈಲ್ ನೋಡಿಬಿಡಿ. ಎಷ್ಟೇ ಖುರ್ಚು ಮಾಡಿದ್ರು, ಲಕ್ಸೂರಿ ಲೈಪ್ ಲೀಡ್ ಮಾಡಿದ್ರು ದೇಶದ ಪ್ರಜೆಗಳ ಮೇಲೆ ಒಂದು ರೂಪಾಯಿ ಸಹ ಸಾಲ ಬೀಳದೇ ಇರೋ ರೀತಿ ನೋಡಿಕೊಂಡಿರೋ ಈತನ ಆಡಳಿತ ವೈಖರಿಯನ್ನು ನಾವು ಮೆಚ್ಚಲೇಬೇಕು.

ಹರಾಜಿನಲ್ಲಿ ಅನೇಕ ರೀತಿಯ ವಸ್ತುಗಳನ್ನು ಕೂಡ ಪಡೆದುಕೊಂಡಿದ್ದಾನೆ. ನಂತರ ಇವನ ತಮ್ಮ ತುಂಬಾ ವೆಚ್ಚವನ್ನು ಮಾಡುತ್ತಿದ್ದ ಆದಕಾರಣ ಅವನ ಹತ್ತಿರ ಹಣಕಾಸು ಅಧಿಕಾರವನ್ನು ಇವನೇ ಪಡೆದುಕೊಳ್ಳುತ್ತಾನೆ. ನಂತರ ತೈಲ ಎಣ್ಣೆ ಅಷ್ಟು ಸಿಗಲಿಲ್ಲ ಈ ದೇಶದಲ್ಲಿ ಅದಾದನಂತರ ಇವನು ಇಂಗ್ಲೆಂಡ್ನ ರಾಣಿ ನಂತರ ಎರಡನೇ ಶ್ರೀಮಂತನಾಗಿದ್ದನು ಮತ್ತು ಇವನು ದೇಶದಲ್ಲಿ ಸಲಿಂಗಕಾಮ ಅಪರಾಧ ಎಂದು ಹೇಳಿದ ನಂತರ ಆ ಕಾನೂನನ್ನು ತೆರವುಗೊಳಿಸಿದ ಮತ್ತು ಈ ದೇಶದಲ್ಲಿ ಪ್ರಜೆಗಳ ಮೇಲೆ ಯಾವುದೇ ರೀತಿಯ ತೆರಿಗೆಯನ್ನು ಕೂಡ ವಿಧಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!