ಹೆಣ್ಣು ಮಕ್ಕಳು ಇಂದಿನ ಯುಗದಲ್ಲಿ ಎಲ್ಲದರಲ್ಲೂ ಮುಂದೆ ಬರುತ್ತಿದ್ದಾರೆ ಆದರೂ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದರು ಅದರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಹೆಣ್ಣು ಮಗುವಿನ ತಂದೆ- ತಾಯಿ ಆಗಿದ್ದರೆ ಮತ್ತು ಲೀಗಲ್ ಗಾರ್ಡಿಯನ್ ಆಗಿದ್ದರೆ ಈ ಯೋಜನೆ ಅನ್ವಯವಾಗುತ್ತದೆ. ಮೂರು ಹೆಣ್ಣು ಮಕ್ಕಳು ಅಂದರೆ ಮೊದಲನೆಯದು ಅವಳಿ- ಜವಳಿ ಹೆಣ್ಣು ಮಕ್ಕಳು ಆಗಿದ್ದರೆ ಇನ್ನೊಂದು ಮಗಳಿದ್ದರೆ ಈ ಮೂರು ಮಕ್ಕಳಿಗೆ ಬರುತ್ತದೆ. ಕನಿಷ್ಟ ಮೂರು ಹೆಣ್ಣು ಮಕ್ಕಳು ಅದು ಅವಳಿ ಜವಳಿ ಇದ್ದರೆ ಇಲ್ಲದಿದ್ದರೆ ಒಂದು ಮನೆಗೆ ಎರಡು ಹೆಣ್ಣು ಮಕ್ಕಳು ಇದ್ದರೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯಲ್ಲಿ ಹೆಣ್ಣು ಮಗು ಹುಟ್ಟಿದ ದಿನದಿಂದ 10 ವರ್ಷದೊಳಗೆ ಮಾಡಬೇಕು. ಪೋಸ್ಟ್ ಆಫೀಸ್, ಆರ್ ಬಿಐ ವೆಬ್ ಸೈಟ್ ನಲ್ಲಿ, ಪಬ್ಲಿಕ್ ಸೆಕ್ಟರ್ ಬ್ಯಾಂಕ್ ನಲ್ಲಿ ಮತ್ತು ಅದರ ವೆಬ್ ಸೈಟ್ ನಲ್ಲಿ, ಪ್ರೈವೇಟ್ ಬ್ಯಾಂಕ್ ಮತ್ತು ಅದರ ವೆಬ್ ಸೈಟ್ ನಲ್ಲಿ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ವರ್ಷಕ್ಕೆ ಒಂದು ಮಗುವಿಗೆ 250 ರೂ -1,50,000 ರೂವರೆಗೆ ಇನವೆಸ್ಟ್ ಮಾಡಬಹುದು. ಇಟ್ಟಿರುವ ಹಣಕ್ಕೆ 8.5% ಬಡ್ಡಿ ಬರುತ್ತದೆ, ಯಾವುದಕ್ಕೂ ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ದುಡ್ಡು ಸೇಫ್ ಆಗಿರುತ್ತದೆ.

ಅಕೌಂಟ್ ಓಪನ್ ಮಾಡಿದಾಗಿನಿಂದ 15 ವರ್ಷದವರೆಗೆ ಇನವೆಸ್ಟ್ ಮಾಡಬೇಕು. ಮಗುವಿಗೆ 18 ವರ್ಷ ಆದ ನಂತರ ಹಣ ತೆಗೆಯಬಹುದು ಅಷ್ಟರೊಳಗೆ ತೆಗೆಯುವಂತಿಲ್ಲ. ತೆಗೆಯುವಾಗ ಇರುವ ದುಡ್ಡಿನ 50% ವಿತ್ ಡ್ರಾ ಮಾಡಬಹುದು. ತಂದೆ ಮರಣ ಹೊಂದಿದ್ದರೆ ತೆಗೆಯಲು ಅವಕಾಶವಿದೆ, ತಂದೆ ಅಥವಾ ಮಗಳಿಗೆ ತೀವ್ರ ಅನಾರೋಗ್ಯವಿದ್ದರೆ ಆಗಲೂ ತೆಗೆಯಲು ಅವಕಾಶವಿದೆ. ಒಂದು ವರ್ಷ ದುಡ್ಡು ಕಟ್ಟದೆ ಇದ್ದರೆ 50 ರೂ ದಂಡ ಕಟ್ಟಿ ಮುಂದುವರೆಸಬಹುದು. SIP ಸಿಸ್ಟಮೆಟಿಕ್ ಇನವೆಸ್ಟ್ ಪ್ಲಾನ್ ಮಾಡಬಹುದು ಬ್ಯಾಂಕ ಅಕೌಂಟ್ ಇಂದ ಡೆಬಿಟ್ ಆಗುತ್ತದೆ. ಉದಾಹರಣೆಗೆ ವರ್ಷಕ್ಕೆ 10,000 ರೂ ಕಟ್ಟಿದರೆ 20 ವರ್ಷಕ್ಕೆ 4,54,492 ರೂ ಆಗುತ್ತದೆ. ಇದನ್ನು ಮಾಡಲು ಮಗಳ ಬರ್ಥ ಸರ್ಟಿಫಿಕೇಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಬೇಕಾಗುತ್ತದೆ. ಈ ಮಾಹಿತಿಯನ್ನು ಹೆಣ್ಣು ಮಕ್ಕಳಿರುವ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!