ಹಲವಾರು ಹಣ್ಣಿನ ಜ್ಯೂಸ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಕಬ್ಬಿನ ಹಾಲು ಶುಗರ್ ಕೆನ್ ಜ್ಯೂಸ್ ಬಗ್ಗೆ ಹಾಗೂ ಅದನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಕಬ್ಬಿನ ರಸ ಶುಗರ್ ಕೆನ್ ಜ್ಯೂಸ್ ಕಬ್ಬಿನಲ್ಲಿ ಐರನ್ ಅಂಶ ಹೆಚ್ಚಾಗಿರುತ್ತದೆ. ಹಿಂದಿನ ಕಾಲದಲ್ಲಿ ಆಲೆಮನೆ ನಡೆದು ಗಾಣದ ಮೂಲಕ ಕಬ್ಬಿನ ರಸವನ್ನು ತೆಗೆಯುತ್ತಿದ್ದರು ಬೆಲ್ಲವನ್ನು ಉತ್ಪಾದಿಸುತ್ತಿದ್ದರು. ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ಹಿಮೊಗ್ಲೋಬಿನ್ ಕಡಿಮೆಯಾಗುತ್ತದೆ. ದೇಹದಲ್ಲಿ ಹಿಮೊಗ್ಲೋಬಿನ್ ಅಂಶ ಕಡಿಮೆ ಇದ್ದಾಗ ದೇಹ ಬಿಳುಚಾಗುತ್ತದೆ, ಕಾಂತಿ ಕಡಿಮೆಯಾಗುತ್ತದೆ. ಮುಖದಲ್ಲಿ ಕಳೆ ಇರುವುದಿಲ್ಲ ಪೇಷಂಟ್ ಲುಕ್ ಬರುತ್ತದೆ. ಲವಲವಿಕೆ, ಉತ್ಸಾಹ ಇರುವುದಿಲ್ಲ. ತೇಜಸ್ಸು ಇರುವುದಿಲ್ಲ. ಮುಖ ನೋಡಲು ಸಪ್ಪೆ ಮುಖವಾಗಿರುತ್ತದೆ.
ಪ್ರತಿದಿನ ಕಬ್ಬಿನ ಹಾಲನ್ನು ಕುಡಿದರೆ 2-3 ತಿಂಗಳಲ್ಲಿ ದೇಹದಲ್ಲಿ ಹಿಮೊಗ್ಲೋಬಿನ್ ಅಂಶ ಹೆಚ್ಚಾಗಿ ಇದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ, ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ. ಇದರಿಂದ ಮುಖದಲ್ಲಿ ಕಾಂತಿ, ಹೊಳಪು ಬರುತ್ತದೆ ಅಲ್ಲದೇ ಮನುಷ್ಯ ಉತ್ಸಾಹದಿಂದ, ಚಟುವಟಿಕೆಯಿಂದ ಕೆಲಸ ಮಾಡುತ್ತಾನೆ. ಇದರಿಂದ ಮಾನಸಿಕ ನೆಮ್ಮದಿಯು ಹೆಚ್ಚಾಗುತ್ತದೆ. ಶುಗರ್ ಇರುವವರು ವೈದ್ಯರ ಸಲಹೆ ಪಡೆದು ಕಬ್ಬಿನ ಹಾಲನ್ನು ಕುಡಿಯುವುದು ಒಳ್ಳೆಯದು. ಮಕ್ಕಳಿಂದ ವೃದ್ದರವರೆಗೆ ಕಬ್ಬಿನ ಹಾಲನ್ನು ಕುಡಿಯಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಯಾವುದೋ ಹಾನಿಕಾರಕ ಪಾನೀಯಗಳನ್ನು ಕುಡಿಯುವ ಬದಲು ಕಬ್ಬಿನ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.