PUC ಪಾಸಾದ ವಿದ್ಯಾರ್ಥಿಗಳಿಗೆ 30 ಸಾವಿರ ವಿದ್ಯಾರ್ಥಿ ವೇತನ ಸಿಗುತ್ತೆ, ಆಸಕ್ತರು ಅರ್ಜಿಹಾಕಿ

0 17

Colgate Scholarship: ಈ ಲೇಖನದಲ್ಲಿ ಖಾಸಗಿ ಸಂಸ್ಥೆ ಆಯೋಜಿಸಿರುವಂತಹ ಕೋಲ್ಗೆಟ್ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಳ್ಳಲಾಗುವುದು. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸುವುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಯಾವ ದಾಖಲೆಗಳು ಬೇಕಾಗುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು.

ಕೀಪ್ ಇಂಡಿಯಾ ಸ್ಟೈಲಿಂಗ್ ಫೌಂಡೇಶನ್ ವತಿಯಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತನ್ನ ಕನಸುಗಳನ್ನು ಸಾಕಾರಗೊಳಿಸಲು ಉಪಯೋಗವಾಗಲೆಂದು ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. 11 ಹಾಗೂ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಹತ್ತನೇ ತರಗತಿಯನ್ನು ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.

ಇದನ್ನೂ ಓದಿ..SSLC ಪಾಸ್ ಆಗಿರುವ ಪುರುಷ ಹಾಗೂ ಮಹಿಳೆಯರಿಗೆ, ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಖಾಲಿ ಇದೆ

ವಿದ್ಯಾರ್ಥಿ ವೇತನದ ಮೊತ್ತ ವರ್ಷಕ್ಕೆ 20,000 ರೂ ಗಳಂತೆ ಎರಡು ವರ್ಷಗಳ ಕಾಲ ನೀಡಲಾಗುತ್ತದೆ. ಮೂರು ವರ್ಷದ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಇರಬೇಕಾದ ಅರ್ಹತೆಗಳು 12ನೇ ತರಗತಿಯನ್ನು ಪರೀಕ್ಷಾ ಮಂಡಳಿ ವತಿಯಿಂದ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿ ವೇತನದ ಮೊತ್ತ ಒಂದು ವರ್ಷಕ್ಕೆ ರೂ.30,000 ಗಳಂತೆ ಮೂರು ವರ್ಷಗಳ ಕಾಲ ನೀಡಲಾಗುತ್ತದೆ.

ವೃತ್ತಿಪರ ಶಿಕ್ಷಣವನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅರ್ಹತೆಗಳು ಕಡ್ಡಾಯವಾಗಿ 12ನೇ ತರಗತಿಯನ್ನು ಪರೀಕ್ಷಾ ಮಂಡಳಿ ವತಿಯಿಂದ ಪಾಸಾಗಿರಬೇಕು. ವಿದ್ಯಾರ್ಥಿ ವೇತನದ ಮೊತ್ತ ವರ್ಷಕ್ಕೆ 50,000 ರೂಗಳಂತೆ ನಾಲ್ಕು ವರ್ಷ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಪಾಸ್ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ಪಾನ್ ಕಾರ್ಡ್/ ವೋಟರ್ ಐಡಿ, 10ನೇ ತರಗತಿಯ ಅಂಕಪಟ್ಟಿ ಇತ್ತೀಚಿನ ಅಂಕಪಟ್ಟಿ ಹಾಗೂ ಶಿಕ್ಷಣ ಪ್ರಮಾಣ ಪತ್ರ, ಫೀ ರಶೀತಿ /ಅಡ್ಮಿಶನ್ ಲೆಟರ್ /ಕಾಲೇಜ್ ಐಡಿ, ಪ್ರವೇಶ ಪಡೆಯಲು ಬಯಸಿದ್ದಲ್ಲಿ ಪ್ರವೇಶ ಪರೀಕ್ಷೆಯ ಫಲಿತಾಂಶ. ಅಂಗವಿಕಲರಾದಲ್ಲಿ ಡಿಸೆಬಿಲಿಟಿ ಸರ್ಟಿಫಿಕೇಟ್ ಬೇಕಾಗುತ್ತದೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 31 ಮಾರ್ಚ್ 2023

ಅರ್ಜಿ ಸಲ್ಲಿಸುವ ವಿಧಾನ ಈ ಮೇಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ಅಧಿಕೃತ ವೆಬ್‌ಸೈಟ್: https://www.colgate.com ಇಲ್ಲಿಗೆ ಭೇಟಿ ನೀಡಿ Apply Now ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ID ಯೊಂದಿಗೆ Buddy4Study ಗೆ ಲಾಗಿನ್ ಮಾಡಿ Buddy4Study ಗೆ ನೋಂದಾಯಿಸದಿದ್ದರೆ ನಿಮ್ಮ ಇಮೇಲ್/ಮೊಬೈಲ್ ಸಂಖ್ಯೆ/Gmail ಖಾತೆಯೊಂದಿಗೆ Buddy4Study ನಲ್ಲಿ ನೋಂದಾಯಿಸಿ.

ಈಗ ನಿಮ್ಮನ್ನು ಸ್ಕಾಲರ್‌ಶಿಪ್ ಪ್ರೋಗ್ರಾಂ ಅರ್ಜಿ ನಮೂನೆಯ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು Start Application ಬಟನ್ ಮೇಲೆ ಕ್ಲಿಕ್ ಮಾಡಿ. ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ. ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ ಮತ್ತು ಪೂರ್ವವೀಕ್ಷಣೆ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ..ಕಚೇರಿ ಸಹಾಯಕ ಹುದ್ದೆಗಳು ಖಾಲಿ ಇವೆ ಆಸಕ್ತರು ಅರ್ಜಿಹಾಕಿ

ಅರ್ಜಿದಾರರು ಭರ್ತಿ ಮಾಡಿದ ಎಲ್ಲಾ ವಿವರಗಳನ್ನು ಪ್ರಕ್ರಿಯೆಯನ್ನು ಪೂರ್ವ ವೀಕ್ಷಣೆ ಪರದೆಯಲ್ಲಿ ಸರಿಯಾಗಿ ಬರುತ್ತಿದ್ದಾರೆ ಪೂರ್ಣಗೊಳಿಸಲು Submit ಬಟನ್ ಕ್ಲಿಕ್ ಮಾಡಿ. ವಿಳಾಸ ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್, ಮುಖ್ಯ ರಸ್ತೆ, ಹಿರಾನಂದನಿ ಗಾರ್ಡನ್ಸ್ ಪುವೈ, ಮುಂಬೈ 400 076.
ಟೋಲ್-ಫ್ರೀ ಸಂಖ್ಯೆ 011-430-92248 (ವಿಸ್ತರಣೆ- 125) (ಸೋಮ-ಶುಕ್ರ: ಬೆಳಗ್ಗೆ 10:00 ರಿಂದ ಸಂಜೆ 06:00)

Leave A Reply

Your email address will not be published.