ಶಿಕ್ಷಣ ನಮ್ಮೆಲ್ಲರ ಹಕ್ಕು, ಉತ್ತಮ ಶಿಕ್ಷಣವಿದ್ದರೆ ಉತ್ತಮವಾದ ಕೆಲಸ ಸಿಗುತ್ತದೆ. ಜೀವನವೇ ಬದಲಾಗುತ್ತದೆ. ಆದರೆ ಎಲ್ಲರಿಗೂ ಕೂಡ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಹಣಕಾಸಿನ ವಿಷಯದಲ್ಲಿ ಸಮಸ್ಯೆ ಇರುವ ಕಾರಣ ಹಲವರಿಗೆ ಶಿಕ್ಷಣ ಪಡೆಯಲು ಕಷ್ಟವಾಗುತ್ತದೆ. ಅಂಥ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅನೇಕ ಸಂಘ ಸಂಸ್ಥೆಗಳಿಂದ ಸ್ಕಾಲರ್ಶಿಪ್ ಸಿಗುತ್ತದೆ.

ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿ ಸಾಗಬೇಕು ಎಂದು ಹಲವು ಸ್ಕಾಲರ್ಶಿಪ್ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿದ್ಯಾಧನ ಸ್ಕಾಲರ್ಶಿಪ್, ಅಬ್ದುಲ್ ಕಲಾಂ ಆರ್ಥಿಕ ನೆರವು ಯೋಜನೆ, ಸಯ್ಯಾಜಿ ರಾವ್ ಗಾಯಕ್ವಾಡ್ ವಿದ್ಯಾರ್ಥಿ ನೆರವು ಯೋಜನೆ ಇಂಥ ಹಲವು ಯೋಜನೆಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲವನ್ನು ಕೊಡಲಾಗುತ್ತಿದೆ. ಇಂಥ ಒಂದು ಸ್ಕಾಲರ್ಶಿಪ್ ಯೋಜನೆ ಸರೋಜಿನಿ ದಾಮೋದರನ್ ವಿದ್ಯಾರ್ಥಿ ವೇತನ..

ಇದು ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀಡುವ ಶಿಕ್ಷಣ ಆಗಿದ್ದು, ಭಾರತಾದ್ಯಂತ ವಿದ್ಯಾರ್ಥಿಗಳು ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು. ಪ್ರತಿ ವರ್ಷದ ಹಾಗೆ ಈ ವರ್ಷ ಕೂಡ ಈ ಸ್ಕಾಲರ್ಶಿಪ್ ಅರ್ಜಿ ಹಾಕುವುದಕ್ಕೆ ಆಹ್ವಾನ ನೀಡಲಾಗಿದೆ. 10ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳು ಸರೋಜಿನಿ ದಾಮೋದರನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ಈ ಸೌಲಭ್ಯ ಪಡೆಯಬಹುದು. ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಕೆಲವು ನಿಯಮ, ಅರ್ಹತೆ ಇದ್ದು, ಅದನ್ನು ಪೂರೈಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ನಮ್ಮ ದೇಶದ ವಿವಿಧ ರಾಜ್ಯಗಳಿಂದ ಈಗಾಗಲೇ 4,700 ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ನ ಪ್ರಯೋಜನ ಪಡೆಯುತ್ತಿದ್ದಾರೆ.

ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
ಸ್ಕಾಲರ್ಶಿಪ್ ಹೆಸರು :- ಸರೋಜಿನಿ ದಾಮೋದರನ್ ವಿದ್ಯಾರ್ಥಿ ವೇತನ
ಈ ಸ್ಕಾಲರ್ಶಿಪ್ ಯೋಜನೆಯಲ್ಲಿ ಸಿಗುವ ಒಟ್ಟು ಸ್ಕಾಲರ್ಶಿಪ್ ಹಣ ₹20,000 ರೂಪಾಯಿಗಳು. 10ನೇ ತರಗತಿ ನಂತರ ಪ್ರಥಮ ಪಿಯುಸಿಗೆ ₹10,000 ರೂಪಾಯಿಗಳು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ₹10,000 ರೂಪಾಯಿ ಸ್ಕಾಲರ್ಶಿಪ್ ಸಿಗುತ್ತದೆ.

ಈ ಸ್ಕಾಲರ್ಶಿಪ್ ಪಡೆಯಲು ಬೇಕಾಗುವ ಅರ್ಹತೆಗಳು, ಈ ಸ್ಕಾಲರ್ಶಿಪ್ ಗೆ ಅರ್ಜಿ ಹಾಕುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು. ಹಾಗೆಯೇ 2023-24ರ ಸಾಲಿನಲ್ಲಿ 10ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳ ಅಂಕ 85% ಗಿಂತ ಜಾಸ್ತಿ ಇರಬೇಕು. ಇನ್ನು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಹೇಳುವುದಾದರೆ, ಈ ಫೌಂಡೇಶನ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿಂದ ಅಪ್ಲಿಕೇಶನ್ ಹಾಕಬೇಕು. ಅಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಫಿಲ್ ಮಾಡಬೇಕು.

ಅಪ್ಲಿಕೇಶನ್ ಹಾಕಲು ಬೇಕಾಗುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಆಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಯಾಗುತ್ತದೆ. ಅರ್ಜಿ ಹಾಕುವವರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂದರೆ, ಅಪ್ಲಿಕೇಶನ್ ಮೂಲಕ ಸೆಲೆಕ್ಟ್ ಆಗುವ ವಿದ್ಯಾರ್ಥಿಗಳನ್ನು ಟೆಸ್ಟ್ ಮತ್ತು ಇಂಟರ್ವ್ಯೂಗೆ ಕರೆಯಲಾಗುತ್ತದೆ.
ವಿದ್ಯಾರ್ಥಿಗಳು ನೀಡುವ ಇಮೇಲ್ ಅಡ್ರೆಸ್ ಮತ್ತು ಮೊಬೈಲ್ ನಂಬರ್ ಎರಡಕ್ಕೂ ಟೆಸ್ಟ್ ಮತ್ತು ಇಂಟರ್ವ್ಯೂ ದಿನಾಂಕ ಮೆಸೇಜ್ ಮೂಲಕ ಬರುತ್ತದೆ.

ಟೆಸ್ಟ್ ಮತ್ತು ಇಂಟರ್ವ್ಯೂ ಎರಡರಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 10,000 ದ ಹಾಗೆ ಅಂದರೆ ಎರಡು ವರ್ಷಕ್ಕೆ ₹20,000 ಸ್ಕಾಲರ್ಶಿಪ್ ಸಿಗುತ್ತದೆ. ಅರ್ಜಿ ಸಲ್ಲಿಕೆಗೆ ಬೇಕಾಗುವ ಪ್ರಮುಖ ದಾಖಲೆಗಳು ಹೀಗಿದೆ.. *ಅರ್ಜಿ ಹಾಕುವ ವಿದ್ಯಾರ್ಥಿಯ ಆಧಾರ್ ಕಾರ್ಡ್ *ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್ *ಶಾಲೆಯಲ್ಲಿ ಅಡ್ಮಿಷನ್ ಆಗಿರುವ ಅಡ್ಮಿಷನ್ ಸರ್ಟಿಫಿಕೇಟ್ *10ನೇ ತರಗತಿ ಮಾರ್ಕ್ಸ್ ಕಾರ್ಡ್ *ಇನ್ಕಮ್ ಸರ್ಟಿಫಿಕೇಟ್ *ಒಂದು ವೇಳೆ ವಿದ್ಯಾರ್ಥಿ ಅಂಗವಿಕಲರಾಗಿದ್ದರೆ ಅದರ ಪ್ರಮಾಣ ಪತ್ರ *ಆಕ್ಟಿವ್ ಆಗಿರುವ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ

ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಿನಾಂಕ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/9/2023. ಆಕ್ಟೊಬರ್ 9 ರಿಂದ 20ರ ವರೆಗು ವಿದ್ಯಾರ್ಥಿಗಳಿಗೆ ಟೆಸ್ಟ್ ಮತ್ತು ಇಂಟರ್ವ್ಯೂ ಇರುತ್ತದೆ.

By

Leave a Reply

Your email address will not be published. Required fields are marked *