ಇವತ್ತಿನ ವಿಚಾರ ಹೊಟ್ಟೆಯಲ್ಲಿ ಆಗುವಂತಹ ಜಂತು ಹುಳಗಳು, ಕೊಕ್ಕೆ ಹುಳಗಳ ಸಮಸ್ಯೆಗೆ ಆಯುರ್ವೇದದ ಮನೆ ಮದ್ದು. ಮಾನವನ ಶರೀರವನ್ನು ಒಂದು ದೇಶ ಅಂತ ತಿಳಿದುಕೊಂಡರೆ, ದೇಹಕ್ಕೂ ಹಾಗೂ ದೇಶಕ್ಕೂ ಇರುವ ಸಾಮ್ಯತೆ. ಒಂದು ದೇಶ ಅಂತ ಬಂದಾಗ ಅಲ್ಲಿ ಎಲ್ಲರೂ ಸಾಮಾನ್ಯ ಜನರು, ಪೊಲೀಸ್, ಮಿಲಿಟರಿ, ರೈತರು, ವ್ಯಾಪಾರಿಗಳು, ಶಿಕ್ಷಕರು, ವಕೀಲರು ಹೀಗೆ ವಿವಿಧ ವರ್ಗಗಳಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂಧಿ ವರ್ಗಗಳು ಇರುತ್ತವೇ. ಹಾಗೆ ನಮ್ಮ ದೇಹವೂ ಕೂಡ. ನಮ್ಮ ದೇಹವನ್ನು “its a colony of bacteria” ಎಂದು ಹೇಳಬಹುದು. ನಮ್ಮ ದೇಹದಲ್ಲಿ ಎಷ್ಟೋ ಬಿಲಿಯನ್ ಅಷ್ಟು ಬ್ಯಾಕ್ಟೀರಿಯಾಗಳು ವಾಸ ಮಾಡುತ್ತವೇ. ಈ ಒಂದು ಮಾತನ್ನು ಕೇಳಿದರೆ ಅಸಹ್ಯ ಅನ್ನಿಸಬಹುದು ಅಥವಾ ನಮ್ಮ ದೇಹದ ಬಗ್ಗೆ ವೈರಾಗ್ಯ ಬರಬಹುದು.
ಕೆಲವರಿಗೆ ದೇಹದ ಮೇಲೆ ತುಂಬಾ ಅಭಿಮಾನ, ಸೊಕ್ಕು, ಬಿಂಕ ಇರತ್ತೆ. ಇನ್ನು ಕೆಲವರಿಗೆ ತನ್ನ ಸೌಂದರ್ಯದ ಮೇಲೆ ಸೊಕ್ಕು ಬಿಗುಮಾನ ಇರತ್ತೆ. ಆದರೆ ನಮ್ಮ ದೇಹವೇ ನಶ್ವರ. ಆಧ್ಯಾತ್ಮದ ರೂಪದಲ್ಲಿ ಹೇಳುವುದಾದರೆ, ನಮ್ಮ ದೇಹ ಕ್ರಿಮಿ ಕೀಟಗಳು, ವೈರಸ್, ಬ್ಯಾಕ್ಟೀರಿಯಾಗಳ ಒಂದು ಲೋಕ. ಆದರೆ ಖುಷಿ ಪಡುವ ಒಂದು ವಿಚಾರ ಏನು ಅಂದರೆ, ಬ್ಯಾಕ್ಟೀರಿಯಾಗಳಲ್ಲಿ ಕೆಟ್ಟ ಮತ್ತು ಒಳ್ಳೆಯ ಬ್ಯಾಕ್ಟೀತ್ಯಗಳೂ ಎಂದು ಎರಡು ವಿಧ. ಒಳ್ಳೆಯ ಬ್ಯಾಕ್ಟೀರಿಯಾಗಳೂ ನಮ್ಮ ದೇಹಕ್ಕೆ ದೇಹದ ಎಲ್ಲ ಸಂಸ್ಥಾನಗಳು ಅಂದರೆ ಮೂತ್ರವಾಹ ಸಂಸ್ಥಾನ, ನರವಾಹ ಸಂಸ್ಥಾನ, ಜೀರ್ಮಾಂಗ ವ್ಯವಸ್ಥೆ ಇವೆಲ್ಲವನ್ನು ಸುವ್ಯವಸ್ಥಿತವಾಗಿ ನಡೆಸಲು ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಸಹಾಯ ಮಾಡುತ್ತವೆ. ಆದರೆ ನಾವು ಯಾವಾಗ ಶುದ್ಧವಾದ ನೀರು, ಗಾಳಿ ಆಹಾರವನ್ನು ಸೇವಿನೆ ಮಾಡುವುದಿಲ್ಲವೋ, ಯಾವಾಗ ಶುದ್ಧವಾದ ವಿಚಾರಗಳನ್ನು ಮಾಡುವುದಿಲ್ಲವೋ ಆಗ ನಮ್ಮ ದೇಹದಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಉತ್ಪತ್ತಿ ಆಗಲು ಆರಂಭಿಸುತ್ತವೆ. ಕೆಟ್ಟ ಬ್ಯಾಕ್ಟೀರಿಯಾಗಳು ಉತ್ಪತ್ತಿ ಆಗಲು ನಾವು ತಿಂದ ಆಹಾರ, ಕಲುಷಿತ ನೀರು ಮಾತ್ರ ಅಲ್ಲ ಕೆಟ್ಟ ವಿಚಾರವು ಹೌದು. ಬೇಡವಾದ ವಿಚಾರಗಳನ್ನು ಮಾಡುವ ಸಂದರ್ಭದಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಉತ್ಪತ್ತಿ ಆಗುತ್ತವೆ. ಹೀಗೆ ನಮ್ಮ ದೇಹದಲ್ಲಿ ಈ ಜಂತು ಹುಳಗಳು ಕೊಕ್ಕೆ ಹುಳಗಳು ನಮ್ಮ ಕೆಟ್ಟ ವಿಚಾರಗಳ ಪರಿಣಾಮವಾಗಿ ಹುಟ್ಟಿಕೊಳ್ಳುತ್ತವೆ.
ಇದಕ್ಕೆ ಆಯುರ್ವೇದದಲ್ಲಿ ಮನೆ ಮದ್ದು ಏನಿದೆ ಅಂತ ನೋಡೋಣ. ಪರಂಗಿ ಕಾಯಿಯನ್ನು ಸಕ್ಕರೆಯ ಜೊತೆ ಬೆರೆಸಿ ಸೇವಿಸುವುದರಿಂದ ಜಂತು ಹುಳಗಳು ಸಾಯುತ್ತವೆ. ಊಟಕ್ಕೆ ಮೊದಲು ಪರಂಗಿ ಹಣ್ಣಿನ ಜೊತೆ ಪರಂಗಿ ಬೀಜವನ್ನು ಸಹ ತಿನ್ನುವುದರಿಂದ ಸಹ ಹೊಟ್ಟೆಯಲ್ಲಿರುವ ಜಂತು ಹುಳಗಳು ನಾಶ ಹೊಂದುತ್ತವೆ. ಹಾಗೆ ಜೇನುತುಪ್ಪವನ್ನು ಬೆಳ್ಳುಳ್ಳಿಯ ರಸದ ಜೊತೆ ಬೆರೆಸಿ ತಿನ್ನುವುದರಿಂದಲೂ ಸಹ ಜಂತು ಹುಳಗಳು ನಾಶ ಹೊಂದುತ್ತವೆ.