ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಗಳಲ್ಲಿ ತುಂಬಾ ಬದಲಾವಣೆಯಾದ ಕಾರಣ ನಮ್ಮ ಜೀರ್ಣಕ್ರಿಯೆಯಲ್ಲಿಯೂ ಕೂಡ ಅಷ್ಟೊಂದು ಒಳ್ಳೆಯ ರೀತಿಯಲ್ಲಿ ಜೀರ್ಣಕ್ರಿಯೆ ನಡೆಯುವುದಿಲ್ಲ ಏಕೆಂದರೆ ನಾವು ಸೇವಿಸುವ ಆಹಾರ ಪದಾರ್ಥಗಳು ಆ ರೀತಿಯಾಗಿವೆ. ಎಲ್ಲರಿಗೂ ತಿಳಿದಿರುವ ಹಾಗೆ ಚಿಕ್ಕಮಕ್ಕಳಿಗೆ ಊಟವನ್ನು ಮಾಡಿಸಬೇಕೆಂದರೆ ತುಂಬಾ ಕಷ್ಟಪಡಬೇಕಾಗುತ್ತದೆ ಅವರಿಗೆ ಒಂದು ತುತ್ತನ್ನು ತಿನ್ನಿಸುವುದನ್ನು ಆಕಾಶವನ್ನುತೋರಿಸಿ ಚಂದ್ರನನ್ನು ತೋರಿಸಿ ಎಲ್ಲಾಕಡೆ ಸುತ್ತಾಡಿಸಿ ತುಂಬಾ ಕಷ್ಟಪಟ್ಟು ತಿನ್ನಿಸಬೇಕಾಗುತ್ತದೆ ಆದರೆ ಆ ಮಕ್ಕಳಿಗೆ ಜಂಕ್ ಫುಡ್ ನೀಡಿದರೆ ತಕ್ಷಣವೇ ತಿಂದು ಖಾಲಿ ಮಾಡುತ್ತಾರೆ ಜಂಕ್ ಫುಡ್ ಗಳ ಬದಲಿಗೆ ರೊಟ್ಟಿ ಚಪಾತಿ ಮುದ್ದೆ ಅನ್ನ ಇವುಗಳನ್ನು ನೀಡಿದರೆ ಬೇಡ ಎನ್ನುತ್ತಾರೆ ಆದರೆ ಈ ಜಂಕ್ ಫುಡ್ ಗಳು ಆರೋಗ್ಯಕ್ಕೆ ಅಷ್ಟು ಒಳ್ಳೆಯದಾಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಕೇವಲ ಮಕ್ಕಳಲ್ಲಿ ಮಾತ್ರವಲ್ಲದೆ ಮಧ್ಯವಯಸ್ಕರು ಕೂಡ ಜಂಕ್ ಫುಡ್ ಗಳನ್ನ ಅತಿಯಾಗಿ ಸೇವಿಸುವುದರಿಂದ ಅವರಲ್ಲಿಯೂ ಕೂಡ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ನಿಮ್ಮ ದೇಹಕ್ಕೆ ರಕ್ತ ಸಿಗುವುದಿಲ್ಲ ಜೊತೆಗೆ ದೇಹಕ್ಕೆ ಶಕ್ತಿಯ ಕೂಡ ಅಷ್ಟಾಗಿ ಸಿಗುವುದಿಲ್ಲ ದೇಹದಲ್ಲಿ ರಕ್ತ ಇಲ್ಲ ಶಕ್ತಿ ಇಲ್ಲ ಎಂದಾದಾಗ ಒಂದೊಂದೇ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ ನಿಮ್ಮ ದೇಹ ರೋಗದ ಗುಡಾಗುತ್ತಾ ಬರುತ್ತದೆ ಆ ರೋಗಗಳಿಗೆ ಚಿಕಿತ್ಸೆಯನ್ನು ಪಡೆಯಲು ನೀವು ವೈದ್ಯರ ಬಳಿಗೆ ಹೋಗುತ್ತೀರಿ ಆಗ ವೈದ್ಯರು ವಿಪರೀತವಾದಂತಹ ಮಾತ್ರೆಗಳನ್ನು ಔಷಧಿಗಳನ್ನು ಕ್ಯಾಲ್ಸಿಯಂ ಮಾತ್ರೆಗಳನ್ನು ಹೀಗೆ ಅನೇಕ ವಿಧವಾದ ಔಷಧಿಗಳನ್ನು ನಿಮಗೆ ನೀಡುತ್ತಾರೆ ಜೀರ್ಣಕ್ರಿಯೆ ಸರಿಯಾಗಿ ಆಗದಿರುವಾಗ ನೀವು ಯಾವುದೇ ರೀತಿಯ ಮಾತ್ರೆಗಳನ್ನು ತೆಗೆದುಕೊಂಡರೆ ಔಷಧಿಗಳನ್ನು ತೆಗೆದುಕೊಂಡರೆ ಅದರಿಂದ ಪ್ರಯೋಜನ ಆಗುವುದಿಲ್ಲ.
ನೀವು ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಇಲ್ಲದೆ ಇದ್ದಾಗ ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆದುಕೊಂಡರು ಅದು ಪ್ರಯೋಜನ ಆಗುವುದಿಲ್ಲ. ನೀವು ಯಾವುದೇ ಔಷಧಿಯನ್ನು ತೆಗೆದುಕೊಂಡಾಗ ಅದು ಜೀರ್ಣ ಆಗದೇ ಇದ್ದಾಗ ಅದರಿಂದ ನಿಮ್ಮ ದೇಹಕ್ಕೆ ಯಾವುದೇ ರೀತಿಯ ಔಷಧೀಯ ಗುಣಗಳು ನಾಟುವುದಿಲ್ಲ ಆಗ ಯಾವ ಕಾಯಿಲೆಯೂ ವಾಸಿಯಾಗುವುದಿಲ್ಲ ಹಾಗಾಗಿ ನೀವು ಮೊಟ್ಟಮೊದಲು ಮಾಡಬೇಕಾದದ್ದು ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುವ ಹಾಗೆ ಮಾಡಿಕೊಳ್ಳುವುದು. ಅದನ್ನು ಮಾಡಿ ತದನಂತರ ನೀವು ಏನನ್ನೇ ಸೇವಿಸಿದರು ಅದು ದೇಹಕ್ಕೆ ನಾಟುತ್ತದೆ.
ಹಾಗಾದರೆ ಜೀರ್ಣಕ್ರಿಯೆಯನ್ನು ಸರಿಪಡಿಸಿಕೊಳ್ಳಲು ಏನು ಮಾಡಬೇಕು ಅದುಕ್ಕೂ ಕೂಡ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದು ನೀವು ಪ್ರಶ್ನಿಸಿದರೆ ಅದಕ್ಕೆ ಔಷಧಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಸದ್ಯದ ಜನರ ಪರಿಸ್ಥಿತಿ ಏನಾಗಿದೆ ಎಂದರೆ ಹಸಿವು ಆಗುವುದಕ್ಕೆ ಒಂದು ಮಾತ್ರೆ ಸೇವಿಸುವುದು ತಿಂದ ಆಹಾರ ಜೀರ್ಣ ಆಗುವುದಕ್ಕೆ ಒಂದು ಮಾತ್ರ ಸೇವಿಸುವಂತಹದ್ದು ಜೀರ್ಣ ಆಗಿರುವುದನ್ನು ಹೊರಹಾಕುವುದಕ್ಕೆ ಒಂದು ಮಾತ್ರೇನ ಸೇವಿಸುವುದು ಹೀಗೆ ಎಲ್ಲದಕ್ಕೂ ಮಾತ್ರೆ ಸೇವಿಸುವಂತಹ ರೂಡಿಬೆಳೆದು ಬಂದಿದೆ. ಎಲ್ಲದಕ್ಕೂ ನೀವು ಮಾಟ್ರೆಯನ್ನು ಸೇವಿಸುವ ಅವಶ್ಯಕತೆ ಇಲ್ಲ ನಿಮ್ಮ ಜೀರ್ಣಕ್ರಿಯೆಯನ್ನು ಸರಿಪಡಿಸಿಕೊಳ್ಳಲು ನೀವು ಮಾಡಬೇಕಾದದ್ದು ನೀವು ವಾರಕ್ಕೆ ಒಂದು ದಿನ ಉಪವಾಸವನ್ನು ಮಾಡಬೇಕು ಆಯುರ್ವೇದದಲ್ಲಿ ಉಪವಾಸವನ್ನು ಪರಮೌಷಧಿ ಎಂದು ಹೇಳಲಾಗುತ್ತದೆ.
ಹಾಗಾದರೆ ಉಪವಾಸವನ್ನು ಎಷ್ಟು ದಿವಸಕ್ಕೊಮ್ಮೆ ಮಾಡಬೇಕು ಅದರಿಂದ ಯಾವ ರೀತಿ ಪ್ರಯೋಜನ ಆಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳೋಣ. ಸ್ನೇಹಿತರೆ ನೀವು ವಾರದಲ್ಲಿ ಒಂದು ದಿನ ಉಪವಾಸ ಮಾಡಿದರೆ ಸಾಕು ಒಂದು ವೇಳೆ ನಿಮಗೆ ಒಂದು ದಿನ ಪೂರ್ತಿ ಉಪವಾಸ ಮಾಡಲು ಸಾಧ್ಯವಾಗದಿದ್ದಲ್ಲಿ ಒಂದು ಹೊತ್ತಾದರೂ ಉಪವಾಸವನ್ನು ಮಾಡಬೇಕು. ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ ಅದಕ್ಕೆ ಒಂದು ಉದಾಹರಣೆ, ಒಂದು ಒಲೆ ಇದೆ ಹಳ್ಳಿ ಕಡೆ ಹೋದಾಗ ನೋಡಿ ಒಲೆ ಇರುತ್ತದೆ ವಾರಕ್ಕೊಂದು ಬಾರಿ ಅದರೋಳಗೆ ಇರುವಂತಹ ಭುದಿಯನ್ನೆಲ್ಲ ತೆಗೆದು ಸಾರಿಸುತ್ತಾರೆ ಅದನ್ನ ಕ್ಲೀನ್ ಮಾಡಿ ಮತ್ತೆ ಒಲೆಯನ್ನು ಹಚ್ಚುತ್ತಾರೆ ವಾರಕ್ಕೆ ಒಂದು ಸಾರಿ ಹೀಗೆ ಮಾಡದಿದ್ದಲ್ಲಿ ಅದರಲ್ಲಿ ಭುದಿ ಕಟ್ಟಿಕೊಳ್ಳುತ್ತದೆ ಹೋಗೆ ಆಗುತ್ತದೆ
ಬೆಂಕಿ ಸರಿಯಾಗಿ ಹತ್ತುವುದಿಲ್ಲ ಅದೇ ರೀತಿಯಾಗಿ ನಮ್ಮ ಹೊಟ್ಟೆಯಲ್ಲಿ ಇರುವಂತಹ ಅಗ್ನಿ ವರ್ಷಾನುವರ್ಷ ಹೊತ್ತಿ ಉರಿಯುತ್ತಿರುತ್ತದೆ ನೀವು ತಿಂದ ಆಹಾರವನ್ನು ಅದು ಜೀರ್ಣ ಮಾಡುತ್ತಾ ಇರುತ್ತದೆ ಆದರೆ ಅಲ್ಲಿ ಉಳಿದುಕೊಂಡಿರುವಂತಹ ಮಲ ಅದೆಲ್ಲ ಕಟ್ಟಿಕೊಂಡು ಕಟ್ಟಿಕೊಂಡು ಅಲ್ಲಿ ಒಲೆಹತ್ತಿ ಉರಿಯುವುದಕ್ಕೆ ಜಾಗ ಇರುವುದಿಲ್ಲ ವಾರದಲ್ಲಿ ಒಂದು ದಿನ ನೀವು ಉಪವಾಸವನ್ನು ಮಾಡಿದಾಗ ಅಲ್ಲಿ ಹಳೆಯದಾಗಿ ಉಳಿದಿರುವುದನ್ನು ಜಠರಾಗ್ನಿಯು ಸುಡುತ್ತದೆ ಅದನ್ನು ಕ್ಲೀನ್ ಮಾಡಿ ಹೊರಗಡೆ ಹಾಕುತ್ತದೆ ಹೊಟ್ಟೆಯಲ್ಲಿ ಇರುವಂತಹ ಹಳೆ ಸ್ಟಾಕು ಕಲ್ಮಶಗಳು ಹೊರಹೋದರೆ ಹೊಟ್ಟೆ ಖಾಲಿಯಾಗುತ್ತದೆ. ಹೀಗಾಗಿ ನೀವು ವಾರದಲ್ಲಿ ಒಂದು ದಿನ ಉಪವಾಸ ಮಾಡಿದರೆ ಸಾಕು.ನೀವು ಸೋಮವಾರ ಉಪವಾಸ ಮಾಡಬಹುದು ಅಥವಾ ನೀವು ನಿಮ್ಮ ಮನೆ ದೇವರ ವಾರವನ್ನು ಮಾಡಬಹುದು. ಹೀಗೆ ನೀವು ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ನಿಮಗೆ ಹಸಿವು ಕೂಡ ಚೆನ್ನಾಗಿ ಆಗುತ್ತದೆ ನೀವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ ಜೀರ್ಣ ಆಗಿರುವುದು ದೇಹಕ್ಕೆ ಸಲ್ಲುತ್ತದೆ ನಿಮ್ಮ ದೇಹವನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಇದು ಸಹಾಯಕವಾಗುತ್ತದೆ.
ಹಿಂದಿನ ಕಾಲದಿಂದಲೂ ನಮ್ಮ ಭಾರತ ದೇಶದಲ್ಲಿ ಪ್ರತಿಯೊಂದು ಧರ್ಮದವರು ಅವರವರದೇ ಆದ ರೀತಿಯಲ್ಲಿ ಉಪವಾಸದ ಬಗ್ಗೆ ಅದರ ಮಹತ್ವದ ಬಗ್ಗೆ ಹೇಳುತ್ತಾ ಬಂದಿದ್ದಾರೆ. ಪ್ರಾಣಿ ಪಕ್ಷಿಗಳು ಕೂಡ ಆರೋಗ್ಯ ಸರಿಯಿಲ್ಲದಿದ್ದಾಗ ಉಪವಾಸವನ್ನು ಮಾಡುತ್ತವೆ ನೀವು ಮನೆಯಲ್ಲಿ ನಾಯಿ ಬೆಕ್ಕು ಹಸು ಇವುಗಳನ್ನು ಸಾಕಿರುತ್ತಿರಿ ಅವುಗಳಿಗೆ ಸಣ್ಣದಾಗಿ ಜ್ವರ ಬಂದರೂ ಅವು ಆಹಾರವನ್ನು ಸೇವಿಸುವುದಿಲ್ಲ. ಇನ್ನು ಕೆಲವು ಬೆಕ್ಕು ನಾಯಿಗಳು ಹೊರಗಡೆ ಹೋಗಿ ಹುಲ್ಲನ್ನು ತಿಂದು ವಾಂತಿ ಮಾಡಿಕೊಳ್ಳುತ್ತವೆ ಹಳೆಯದಾಗಿ ಉಳಿದ ಆಹಾರ ಪದಾರ್ಥಗಳನ್ನು ಹೊರಹಾಕುತ್ತವೆ ಆದರೆ ಮನುಷ್ಯರಾದ ನಾವು ಅದನ್ನೆಲ್ಲ ಮಾಡುವ ಅವಶ್ಯಕತೆ ಇಲ್ಲ. ಮೇಲೆ ಹೇಳಿದ ಹಾಗೆ ವಾರದಲ್ಲಿ ಒಂದು ದಿನ ಉಪವಾಸ ಮಾಡಿದರೆ ಸಾಕು.
ನೋಡಿದಿರಲ್ಲ ಸ್ನೇಹಿತರೆ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ಸರಿಯಾಗಿರುತ್ತದೆ ಇದರ ಜೊತೆಗೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಹಾಗಾಗಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ನೀವು ಕೂಡ ವಾರದಲ್ಲಿ ಒಂದು ದಿನ ಅಥವಾ ಒಂದು ಹೊತ್ತು ಉಪವಾಸ ಮಾಡುವುದನ್ನು ರೂಢಿ ಮಾಡಿಕೊಳ್ಳಿ.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430