ರಾಜ್ಯದಲ್ಲಿ SSLC ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಹೆಚ್ಚಿನ ಫಲಿತಾಂಶದಲ್ಲಿ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ, ಕೇವರು ಬಡತವನ್ನು ಮೆಟ್ಟಿ ನಿಂತು ಉತ್ತಮ ಅಂಕವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಇಲ್ಲೊಂದು ವಿಶೇಷತೆ ಏನು ಅಂದ್ರೆ ಎಲ್ಲವು ಇದ್ದು ಓದುವುದು ಹೆಚ್ಚು ಅಂಕ ಗಳಿಸುವುದು ಸಾಧನೆ ಅಲ್ಲ, ಏನು ಇಲ್ಲದೆ ಕಷ್ಟದಲ್ಲಿ ತನ್ನ ಛಲವನ್ನು ಬಿಡದೆ ಸಾಧಿಸಬೇಕು ಅನ್ನೋ ಛಲದೊಂದಿಗೆ ಸಾಧಿಸುವವನೇ ನಿಜವಾದ ಸಾಧಕ.
ಹೌದು ಬಡತವನ್ನು ಮೆಟ್ಟಿ ನಿಂತು ಗುಡಿಸಲಲ್ಲಿ ಜೀವಿಸುತ್ತಾ ಆರ್ಥಿಕ ಸಂಕಷ್ಟದಿಂದ ಬಿಡುವಿನ ವೇಳೆಯಲ್ಲಿ ಗಾರೆ ಕೆಲಸ ಮಾಡುತ್ತ ತಾನು ಹತ್ತನೇ ತರಗತಿಯಲ್ಲಿ 625 ಕ್ಕೆ 616 ಅಂಕಗಳನ್ನು ಪಡೆದಿದ್ದಾನೆ ಅಷ್ಟಕ್ಕೂ ಈ ವಿದ್ಯಾರ್ಥಿ ಯಾರು ಇದು ಎಲ್ಲಿ ಶಿಕ್ಷಣ ಸಚಿವರು ಇವರನ್ನು ಭೇಟಿಯಾಗಿ ಹೇಳಿದ್ದೇನು ಅನ್ನೋದನ್ನ ಮುಂದೆ ನೋಡಿ.
ಹೆಸರು ಮಹೇಶ್ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಮಹೇಶನಿಗೆ ತಾಯಿಯೇ ಸರ್ವಸ್ವ. ಆತನ ತಾಯಿ ಜೀವನಭೀಮಾನಗರದ ಗುಡಿಸಲಿನಲ್ಲಿ ವಾಸವಿದ್ದಾರೆ. ಇಲ್ಲಿನ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ಓದುತ್ತಿದ್ದ ಮಹೇಶ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 616 ಅಂಕ ಪಡೆಯುವ ಮೂಲಕ ಓದಿಗೆ ಛಲ ಇದ್ದರೆ ಬಡತನ ಅಡ್ಡಿ ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ. ಅಷ್ಟೇ ಅಲ್ಲದೆ ತಾನು ಗಾರೆ ಕೆಲಸ ಮಾಡಿ ತನ್ನ ತಾಯಿ ಮನೆಗೆಲಸ ಮಾಡಿ ಬಂದಂತ ಹಣದಲ್ಲಿ ತನ್ನ ವಿದ್ಯಾಭ್ಯಾಸ ಹಾಗೂ ಜೀವನ ಸಾಗಿಸುವುದರ ಜೊತೆಗೆ ಸಾಧನೆಯ ಹಾದಿಯನ್ನು ಮೆಟ್ಟಿದ್ದಾನೆ ಈ ವಿದ್ಯಾರ್ಥಿ.
ಶಿಕ್ಷಣ ಸಚಿವರು ಈ ವಿದ್ಯಾರ್ಥಿಯನ್ನು ಭೇಟಿಯಾಗಿ ಏನ್ ಅಂದ್ರು ಸಚಿವರು, ಮಹೇಶ ಮತ್ತು ಆತನ ತಾಯಿ ಜತೆ ಚರ್ಚಿಸಿ ಅವನ ಮನೆ, ಕುಟುಂಬ, ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲವನ್ನೂ ಕಂಡ ಸಚಿವರು ಭಾವುಕರಾದರು. ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿದರು. ಮಹೇಶ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಅಂದು ಸಚಿವರಲ್ಲಿ ಕೇಳಿಕೊಂಡನು ಇದರ ವ್ಯವಸ್ಥೆಯನ್ನು ಮಾಡುವುದಾಗಿ ಸಚಿವರು ಈ ವಿದ್ಯಾರ್ಥಿಗೆ ತಿಳಿಸಿ ಧೈರ್ಯ ನೀಡಿದ್ದಾರೆ.