ಆತ್ಮೀಯರೇ ನೀವು ಕೆಲಸಕ್ಕಾಗಿ ಹುಡುಕುತ್ತಿದ್ದರೆ ನಾವು ತಿಳಿಸುವ ಈ ಮಾಹಿತಿಯ ಬಗ್ಗೆ ಗಮನಹರಿಸಿ ತೆರಿಗೆ ಇಲಾಖೆಯಲ್ಲಿ ನಿಮಗೂ ಉದ್ಯೋಗ ಸಿಗುತ್ತಿದೆ ನೀವು ಕೇವಲ ಹತ್ತನೇ ತರಗತಿಯನ್ನು ಪಾಸಗಿದ್ದಾರೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಕೆಲಸಕ್ಕೆ ಹೇಗೆ ಅರ್ಜಿ ಸಲ್ಲಿಸಬಹುದು ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ ಇನ್ನು ಆದಾಯ ತೆರಿಗೆ ಇಲಾಖೆಯಲ್ಲಿ ನೂರಾ ಐವತ್ತೈದು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಕರ್ನಾಟಕದವರಾಗಿದ್ದರು ಸರಳವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇನ್ನು ಇಲಾಖೆಯಲ್ಲಿ ಯಾವೆಲ್ಲ ಹುದ್ದೆಗಳು ಕಾಲಿ ಇವೆ ಎಂಬುದನ್ನು ನೋಡುವುದಾದರೆ ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್ ಹಾಗೂ ಟ್ಯಾಕ್ಸ್ ಅಸಿಸ್ಟಂಟ್ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಈ ಮೂರು ರೀತಿಯ ಹುದ್ದೆಗಳು ಕಾಲಿ ಇವೆ. ಹತ್ತನೇ ತರಗತಿ ತೇರ್ಗಡೆ ಹೊಂದಿದರು ಮತ್ತು ಡಿಗ್ರಿ ಪಾಸ್ ಆಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ಅರ್ಜಿ ಸಲ್ಲಿಸಲು ವಯೋಮಿತಿಯನ್ನು ನೋಡುವುದಾದರೆ ಅಭ್ಯರ್ಥಿಗಳಿಗೆ ಕನಿಷ್ಟ ಹದಿನೆಂಟುವರ್ಷ ಆಗಿರಬೇಕು ಮತ್ತು ಮುವತ್ತುವರ್ಷದ ಒಳಗಿನವರಾಗಿರಬೇಕು. ಇನ್ನು ಸಂಬಳದ ಬಗ್ಗೆ ತಿಳಿಯುವುದಾದರೂ ಇಲ್ಲಿ ಹದಿನೆಂಟು ಸಾವಿರದಿಂದ ಒಂದು ಲಕ್ಷದ ನಲವತ್ತೆರಡು ಸಾವಿರದ ನಾಲ್ಕುನೂರು ರೂಪಾಯಿಯವರೆಗೆ ಇರುತ್ತದೆ. ಅಂದರೆ ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ರೀತಿಯ ಸಂಬಳವಿರುತ್ತದೆ.
ಕೆಲಸಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ಇದರಲ್ಲಿ ನೀವು ಪಾಸ್ ಆದರೆ ನಿಮಗೆ ನೇರ ಸಂದರ್ಶನವನ್ನು ತೆಗೆದುಕೊಳ್ಳುತ್ತಾರೆ ಅದರಲ್ಲೂ ನೀವು ಪಾಸ್ ಆದರೆ ನಿಮಗೆ ಉದ್ಯೋಗ ಸಿಗುವುದು ಗ್ಯಾರಂಟಿ. ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬುದಾಗಿದೆ.
ಅರ್ಜಿಸಲ್ಲಿಸಲು ಜೂಲೈ ಎಂಟರಿಂದ ಪ್ರಾರಂಭವಾಗಿದೆ ಮತ್ತು ಕೊನೆಯ ದಿನಾಂಕ ಆಗಸ್ಟ್ ಇಪ್ಪತ್ತೈದು ಎರಡು ಸಾವಿರದ ಇಪ್ಪತ್ತೊಂದು ಅಷ್ಟರೊಳಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಆದಾಯ ಇಲಾಖೆಯಲ್ಲಿ ಕೆಲಸಮಾಡುವ ಆಸೆ ಇದ್ದರೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಜೊತೆಗೆ ನಿಮ್ಮ ಸ್ನೇಹಿತರಿಗೂ ತಿಳಿಸಿರಿ.