ಹತ್ತನೆ ತರಗತಿ ಹಾಗೂ ಪಿಯುಸಿ ಪಾಸ್ ಆದಂತಹ ಅಭ್ಯರ್ಥಿಗಳಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ, ಅಂದರೆ ಅರ್ಜೀ ಸಲ್ಲಿಸುವ ವಿಧಾನ, ಬೇಕಾಗಿರುವ ದಾಖಲಾತಿಗಳು, ವಿದ್ಯಾರ್ಹತೆ, ವೇತನ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇವೆಲ್ಲದರ ಕುರಿತಾಗಿ ನಾವು ಈ ಲೇಖನದ ಮೂಲಕ ವಿವರವಾಗಿ ತಿಳಿದುಕೊಳ್ಳೊಣ.
ಮೊದಲಿಗೆ ಖಾಲಿ ಇರುವ ಹುದ್ದೆಯ ಹೆಸರು ಮತ್ತು ಎಷ್ಟು ಹುದ್ದೆಗಳು ಖಾಲಿ ಇವೆ ಎಂದು ನೋಡುವುದಾದರೆ, ನೋಡುವುದಾದರೆ, ಶೀಘ್ರ ಲಿಪಿಗಾರಾರು ಗ್ರೇಡ್ 3 ಇದರಲ್ಲಿ 6ಹುದ್ದೆಗಳು, ಬೆರಳಚ್ಚುಗಾರರು 2 ಹುದ್ದೆಗಳು, ಆದೇಶ ಜಾರಿಕಾರರು ಒಂದು ಹಿದ್ದೆ ಹಾಗೂ ಜವಾನ 8 ಹುದ್ದೆಗಳು ಖಾಲಿ ಇರುತ್ತವೆ. ಉದ್ಯೋಗ ಸ್ಥಳ ಗದಗ ಹಾಗೂ ಕೊಪ್ಪಳ ಜಿಲ್ಲೆ ಆಗಿರುತ್ತದೆ. ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ನೋಡುವುದಾದರೆ, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳ ವಯೋಮಿತಿ ನೋಡುವುದಾದರೆ, ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮನ್ಯ ವರ್ಗದವರಿಗೆ ಗರಿಷ್ಠ 35 ವರ್ಷ, 2ಎ 2ಬಿ, 3ಎ 3ಬಿ ವರ್ಗದ ಜನರಿಗೆ ಗರಿಷ್ಠ 38 ವರ್ಷ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಪ್ರ -1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯಸ್ಸಾಗಿರಬೇಕು.
ಇನ್ನೂ ವೇತನ ಎಷ್ಟೂ? ಎಂದು ನೋಡುವುದಾದರೆ, ಶೀಘ್ರ ಲಿಪಿಗಾರರು ಈ ಹುದ್ದೆಗೆ 27,650 – 52,650/- ರೂಪಾಯಿ ಮಾಸಿಕ ವೇತನ ನೀಡಲಾಗುವುದು. ಬೆರಳಚ್ಚುಗಾರರು ಹುದ್ದೆಗೆ 21,400 ರಿಂದ 42,000 ರೂಪಾಯಿ ಮಾಸಿಕ ವೇತನ ನೀಡಲಾಗುವುದು. ಆದೇಶಜಾರಿಕಾರರು ಹುದ್ದೆಗೆ 19,950 ರಿಂದ 37,900 ರೂಪಾಯಿ ಮಾಸಿಕ ವೇತನ, ಹಾಗೂ ಜವಾನನ ಹುದ್ದೆಗೆ 17,000 ರಿಂದ 28,950 ರೂಪಾಯಿ ಮಾಸಿಕ ವೇತನ ನೀಡಲಾಗುವುದು.
ಆಯ್ಕೆಯ ವಿಧಾನ ಹೇಗೆ ಎಂದು ನೋಡುವುದಾದರೆ, ಶೀಘ್ರ ಲಿಪಿಗಾರ ಮತ್ತು ಬೆರಳಚ್ಚುಗಾರ ಈ ಹುದ್ದೆಗಳಿಗೆ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿರುವ ಒಟ್ಟೂ ಶೇಕಡಾವಾರು ಅಂಕಗಳು ಮತ್ತು ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಆದೇಶಜಾರಿಕಾರ ಮತ್ತು ಜವಾನ ಈ ಹುದ್ದೆಗಳಿಗೆ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿರುವ ಒಟ್ಟೂ ಶೇಕಡಾವಾರು ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಅದೇ ರೀತಿ ಅರ್ಜಿ ಶುಲ್ಕ ಎಷ್ಟು? ಎಂದು ನೋಡುವುದಾದರೆ, ಸಾಮಾನ್ಯ, ಪ್ರವರ್ಗ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ಗದಗ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವವರು 100/- ಹಾಗೂ ಕೊಪ್ಪಳ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವವರು 200/- ರೂಪಾಯಿ ಶುಲ್ಕವನ್ನು ನೀಡಬೇಕು ಹಾಗೂ SC, ST ಹಾಗೂ ಪ್ರ 1 ಮತ್ತು ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ನೀಡಬೇಕಾಗಿಲ್ಲ. ಶುಲ್ಕ ಪಾವತಿಸುವ ವಿಧಾನ:- ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ತುಂಬಬೇಕು. ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ನಿಂದ ಚಲನ್ ಪ್ರಿಂಟ್ ತೆಗೆದು SBI ಬ್ಯಾಂಕ್ ನ ಯಾವುದೆ ಶಾಖೆಗಳಲ್ಲಿ ಶುಲ್ಕ ತುಂಬಬಹುದು.
ಇನ್ನೂ ಅಭ್ಯರ್ಥಿಗಳ ವಿದ್ಯಾರ್ಹತೆ ನೋಡುವುದಾದರೆ, ಶೀಘ್ರ ಲಿಪಿಕಾರರು ಹುದ್ದೆಗೆ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣತೆ ಅಥವಾ ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯ ಕಮರ್ಷಿಯಲ್ ಪ್ರಾಕ್ಟೀಸ್ 3ವರ್ಷಗಳ ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ. ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಲಾದ ಹಿರಿಯ ದರ್ಜೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ಕಮರ್ಷಿಯಲ್ ಪ್ರಾಕ್ಟೀಸ್ 3ವರ್ಷಗಳ ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.
ಬೆರಳಚ್ಚುಗಾರರು:- ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣತೇ ಅಥವಾ ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯ ಕಮರ್ಷಿಯಲ್ ಪ್ರಾಕ್ಟೀಸ್ 3ವರ್ಷಗಳ ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ. ಆದೇಶ ಜಾರಿಕರ ಹುದ್ದೆಗೆ ಕರ್ನಾಟಕ. ಪ್ರೌಢ ಶಿಕ್ಷಣ ಮಂಡಳಿ ನಡೆಸುವ SSLC ಪರೀಕ್ಷೆಯಲ್ಲೂ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ. ಡ್ರೈವಿಂಗ್ ಲೈಸೆನ್ಸ್ ಹೊಂದಿದ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು. ಇನ್ನೂ ಜವಾನ ಹುದ್ದೆಗೆ ಎಸೆಸೆಲ್ಸಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹಾಗೂ ಕನ್ನಡ ಓದಲು ಬರೆಯಲು ಬರಬೇಕು. ಇನ್ನೂ ಪ್ರಮುಖವಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನೋಡುವುದಾದರೆ, ಕೊಪ್ಪಳ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/04/2022 ಆಗಿರುತ್ತದೆ ಹಾಗೂ ಗದಗ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/04/2022 ಆಗಿರುತ್ತದೆ.