Sridharvenbu lifestyle: ಈ ಸಮಾಜದಲ್ಲಿ ಪ್ರತಿದಿನ ವಿವಿಧ ರೀತಿಯ ವಿಶೇಷತೆ ಹಾಗೂ ವಿಭಿನ್ನತೆಯ ಜೀವನ ಶೈಲಿ ಹೊಂದಿರುವಂತ ವ್ಯಕ್ತಿಗಳನ್ನು ನಾವು ನೋಡುತ್ತಿರುತ್ತೇವೆ ಆದ್ರೆ, ಪ್ರತಿಯೊಬ್ಬರ ಜೀವನ ಶೈಲಿ ಬೇರೆ ಬೇರೆ ಆಗಿರುತ್ತದೆ. ಈ ಸಮಾಜದಲ್ಲಿ ಏನು ಇಲ್ಲದಿದ್ದರೂ ಎಲ್ಲ ಇದೆ ಅನ್ನೋವ ರೀತಿ ಬದುಕುವ ಜನಗಳ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಸಾವಿರಾರು ಕೋಟಿಯ ಒಡೆಯನಾಗಿದ್ರೂ. ಜನ ಸಾಮಾನ್ಯರಂತೆ ಬದುಕುತ್ತಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಯಾರು ಇವರ ಜೀವನ ಶೈಲಿ ಹೇಗಿದೆ ಇವರ ಆದಾಯ ಹೇಗಿದೆ ಅನ್ನೋದನ್ನ ಮುಂದೆ ನೋಡಿ.

ಇವರ ಹೆಸರು ಶ್ರೀಧರ್ ವೆಂಬು ಎಂಬುದಾಗಿ ಶ್ರೀಧರ್ ವೆಂಬು ಅವರು 1 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಜಾಗತಿಕ ಸಾಫ್ಟ್‌ವೇರ್ ಉತ್ಪನ್ನಗಳ ಕಂಪನಿಯಾದ ಝೋಹೋವನ್ನು ಒಂದು ರೂಪಾಯಿ ಯಾರಿಂದಲೂ ಪಡೆಯದೇ ಸ್ವಂತ ಹಣದಲ್ಲಿ ಸ್ಥಾಪಿಸಿದರು. ಕಳೆದ ವರ್ಷದ ಕೊನೆಯಲ್ಲಿ, ಅವರು ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವ ಝೋಹೋ ಅವರ ದೀರ್ಘಕಾಲದ ಉಪಕ್ರಮದ ಭಾಗವಾಗಿ ಸಿಲಿಕಾನ್ ವ್ಯಾಲಿಯಿಂದ ತಮಿಳುನಾಡಿನ ತೆಂಕಶಿ ಜಿಲ್ಲೆಯ ಹಳ್ಳಿಗೆ ತೆರಳಿದರು.

ಸಾವಿರಾರು ಕೋಟಿಯ ಒಡೆಯನಾದ್ರು ಹಳ್ಳಿ ಜೀವನ ಬಯಸುತ್ತಿದ್ದಾರೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ 55 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶ್ರೀಧರ್ ವೆಂಬು ಅವರನ್ನು ಭೇಟಿ ಮಾಡಿ, ಅವರ 20 ರ ದಶಕದ ಉತ್ತರಾರ್ಧದಲ್ಲಿ, ಐಟಿ ಸೇವೆಗಳು ಕ್ರೋಧದ ಸಮಯದಲ್ಲಿ ಸಾಫ್ಟ್‌ವೇರ್ ಉತ್ಪನ್ನಗಳನ್ನು ತಯಾರಿಸಲು 1996 ರಲ್ಲಿ AdventNet ಅನ್ನು ಸ್ಥಾಪಿಸಿದರು. 2009 ರಲ್ಲಿ ಅವರು ನೆಟ್‌ವರ್ಕ್ ಉಪಕರಣಗಳ ಮಾರಾಟಗಾರರಿಗೆ ಸೇವೆ ಸಲ್ಲಿಸುವ ಸಾಫ್ಟ್‌ವೇರ್ ಕಂಪನಿಯಿಂದ ಹೊಸ ಆನ್‌ಲೈನ್ ಅಪ್ಲಿಕೇಶನ್‌ಗಳ ಪೂರೈಕೆದಾರರಾಗಿ ಪರಿವರ್ತನೆಯನ್ನು ಪ್ರತಿಬಿಂಬಿಸಲು ಕಂಪನಿಯನ್ನು ಜೊಹೊ ಕಾರ್ಪ್ ಎಂದು ಮರುನಾಮಕರಣ ಮಾಡಿದರು.

ರೈತನ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀಧರ್ ವೆಂಬು ಸಾವಿರಾರು ಕೋಟಿಯ ವಹಿವಾಟು ಹೊಂದಿದ್ದಾರೆ, ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಹೊಂದಿದ್ದರು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಇನ್ನು ಇವರ ಪ್ರಕಾರ ಎಷ್ಟೆಲ್ಲ ಇದ್ರು ಹಳ್ಳಿಯಲ್ಲೇ ಇದ್ದು ಕೊಂಡು ಎಲ್ಲವನ್ನು ನಿಭಾಹಿಸಬಹುದು ಎಂಬುದಾಗಿ ಹೇಳುತ್ತಾರೆ. ಅದೇನೇ ಇರಲಿ 10 ಸಾವಿರ ದುಡಿದು ಶೋಕಿ ಮಾಡುವವರ ಮಧ್ಯೆ ಸಾವಿರ ಕೋಟಿಯ ಒಡೆಯನಾದ್ರು ಹಳ್ಳಿ ಜೀವನ ಬಯಸುತ್ತಿರುವ ಈ ಮಹಾನ್ ವ್ಯಕ್ತಿ ನಿಜಕ್ಕೂ ಗ್ರೇಟ್ ಅಲ್ವಾ? ಅಷ್ಟೇ ಅಲ್ಲದೆ ಬಡವರಿಗೆ ಹಾಗೂ ಸಾಮಾನ್ಯ ವ್ಯಕ್ತಿಗಳಿ ಸಹಾಯ ಮಾಡುವ ಗುಣವನ್ನು ಕೂಡ ಇವರು ಹೊಂದಿದ್ದಾರೆ. ಇನ್ನೂ ಇವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗೂಗಲ್ ಮಾಡಿ ಹತ್ತಾರು ವಿಚಾರಗಳು ನಿಮಗೆ ತಿಳಿಯುತ್ತೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!