ದೇವಾಲಯಗಳ ತವರೂರಾದ ಭಾರತದಲ್ಲಿ ನೀವು ಪ್ರತಿಯೊಂದು ದೇವಾಲಯಕ್ಕೂ ಭೇಟಿ ನೀಡಿದಾಗ ಅಲ್ಲಿ ಅದರದೇ ಆದ ವೈಶಿಷ್ಟ್ಯವನ್ನು ಕಾಣಬಹುದು ಅಂತಹ ವೈಶಿಷ್ಟ್ಯಪೂರ್ಣ ದೇವಾಲಯಗಳಲ್ಲಿ ಒಂದು ವಿಶೇಷ ದೇವಾಲಯದ ಬಗ್ಗೆ ನಾವು ತಿಳಿಸಿಕೊಡುತ್ತೇವೆ. ಈ ದೇವಾಲಯದ ಆವರಣದಲ್ಲಿ ನಿಗೂಢ ಇಪ್ಪತ್ತೆರಡು ಬಾವಿಗಳಿವೆ.ಕಾಶಿಯ ವಿಶ್ವನಾಥನ ದರ್ಶನ ಮಾಡುವ ಮೊದಲು ಈ ದೇವಾಲಯಕ್ಕೆ ಭೇಟಿ ಕೂಡಲೇ ಬೇಕು.

ಇಲ್ಲಿರುವ ಅಗ್ನಿ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರ ಆಗುತ್ತದೆ ಎಂದು ನಂಬಲಾಗಿದೆ ಈ ದೇವಾಲಯಕ್ಕೆ ಭೇಟಿ ನೀಡುವುದಕ್ಕೆ ನೀವು ವಿಶ್ವ ಪ್ರಸಿದ್ಧ ಪಂಬನ್ ಸೇತುವೆಯನ್ನು ದಾಟಲೆ ಬೇಕು. ಹಾಗಾದರೆ ಆ ದೇವಾಲಯ ಯಾವುದು ಎಲ್ಲಿದೆ ಆ ದೇವಾಲಯವನ್ನು ಹೇಗೆ ತಲುಪಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಪರಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ರಾಮೇಶ್ವರದ ದೇವಾಲಯದಲ್ಲಿ ನೀವು ಒಂದು ಲಿಂಗವನ್ನು ಕಾಣಬಹುದು. ಅಲ್ಲದೆ ಭಾರತದ ನಾಲ್ಕು ಪವಿತ್ರ ಚಾರ್ ಧಾಮ ಕ್ಷೇತ್ರಗಳಲ್ಲಿ ರಾಮೇಶ್ವರವು ಒಂದು ಉತ್ತರದ ಬದ್ರಿನಾಥ ಪೂರ್ವದ ಪುರಿಜಗನ್ನಾಥ ಪಶ್ಚಿಮದ ದ್ವಾರಕಾನಾಥ ಹಾಗೆ ದಕ್ಷಿಣದ ಶ್ರೀ ರಾಮನಾಥರಾಂ ಅಥವಾ ರಾಮೇಶ್ವರ. ಈ ಕ್ಷೇತ್ರಗಳು ಭಾರತದ ಪವಿತ್ರ ಕ್ಷೇತ್ರಗಳಾಗಿವೆ ಜೀವನದಲ್ಲಿ ಒಮ್ಮೆಯಾದರೂ ಹಿಂದೂಗಳು ಈ ತೀರ್ಥಕ್ಷೇತ್ರಗಳಿಗೆ ಭೇಟಿ ಕೊಡಲೇಬೇಕು.

ಇದೇ ಕಾರಣದಿಂದ ಈ ಕ್ಷೇತ್ರಗಳನ್ನು ಚಾರ್ ಧಾಮ ಎಂದು ಕರೆಯಲಾಗುತ್ತದೆ. ಶ್ರೀರಾಮ ಮತ್ತು ಈಶ್ವರನ ಐಕ್ಯತೆಯ ರೂಪವೇ ಈ ರಾಮೇಶ್ವರಂ ದೇವಾಲಯವಾಗಿದೆ ಈ ದೇವಾಲಯ ಕಾಶಿ ಯಾತ್ರೆಯನ್ನು ಮಾಡುವವರಿಗೆ ಒಂದು ಪ್ರಮುಖ ತಾಣವಾಗಿದೆ ರಾಮೇಶ್ವರ ಯಾತ್ರೆ ಇಲ್ಲದೇ ಕಾಶಿಯಾತ್ರೆ ಅಪೂರ್ಣ ಎಂದು ಹಿಂದೂಗಳಲ್ಲಿ ಅಗಾಧ ನಂಬಿಕೆ ಇದೆ.

ಈ ದೇವಾಲಯದ ಪ್ರತಿಯೊಂದು ಅಂಶವು ರಾಮಾಯಣ ಘಟನೆಯನ್ನು ಮತ್ತು ಶೈವ ಮತ್ತು ವೈಷ್ಣವ ಧರ್ಮದ ಏಕತೆಯನ್ನು ಸೂಚಿಸುತ್ತದೆ. ಭಗವಾನ್ ರಾಮನು ಈ ಸ್ಥಳದಲ್ಲಿ ಲಿಂಗವನ್ನು ಸ್ಥಾಪಿಸಿದನು ಎಂದು ನಂಬಲಾಗಿದೆ. ಆಡಳಿತಗಾರರು ಬದಲಾದಂತೆ ದೇವಾಲಯದ ನಿರ್ಮಾಣದಲ್ಲಿ ಹೊಸ-ಹೊಸ ವಿಧಾನಗಳನ್ನು ಕಂಡುಹಿಡಿಯಲಾಗಿದೆ ಅದಲ್ಲದೆ ಆಡಳಿತಗಾರರು ಬದಲಾದಂತೆ ದೇವಾಲಯದ ನಿರ್ಮಾಣದಲ್ಲಿ ಕೂಡ ಬದಲಾವಣೆ ಆಗಿದೆ ಎಂದು ನಂಬಲಾಗಿದೆ.

ಮುಖ್ಯವಾಗಿ ಈ ದೇವಾಲಯದಲ್ಲಿ ರಾಮಲಿಂಗ ಮತ್ತು ಶಿವಲಿಂಗಗಳಿವೆ. ಇಂದಿಗೂ ಕೂಡ ರಾಮನ ಭಕ್ತರು ಇಲ್ಲಿ ಶಿವಲಿಂಗವನ್ನೇ ಪೂಜಿಸುವುದು. ರಾಮೇಶ್ವರ ಎನ್ನುವುದು ಶಿವನಿಗೆ ಅರ್ಪಿತವಾದ ದೇವಾಲಯವಾಗಿದೆ ಇದನ್ನು ರಾಮನಾಥಸ್ವಾಮಿ ದೇವಾಲಯ ಅಂದರೆ ರಾಮನ ಮೆಚ್ಚಿನ ಭಗವಂತನ ದೇವಾಲಯ ಎಂದು ನಂಬಲಾಗಿದೆ.

ರಾಮೇಶ್ವರ ದೇವಾಲಯ ಭಾರತದ ತಮಿಳುನಾಡಿನ ರಾಮಣಾಥಪುರಂ ನ ಪಂಬನ್ ದ್ವೀಪದಲ್ಲಿದೆ. ರಾಮಾಯಣದ ಪ್ರಕಾರ ರಾಮನೂ ಲಂಕೆಯನ್ನು ಪತನ ಗೊಳಿಸಿ ರಾವಣನನ್ನು ಸಂಹರಿಸಿ ದೇವಿ ಸೀತೆಯೊಂದಿಗೆ ಹಾಗೂ ಆತನ ಸೈನ್ಯದೊಂದಿಗೆ ರಾಮೇಶ್ವರಕ್ಕೆ ಬರುತ್ತಾನೆ. ರಾವಣ ಕೇವಲ ಲಂಕೆಯ ರಾಜ ಅಲ್ಲದೆ ಅವನು ಬ್ರಾಹ್ಮಣ ಆಗಿದ್ದರಿಂದ ಆತನನ್ನು ಕೊಂದು ನಾನು ಪಾಪ ಮಾಡಿದ್ದೇನೆಂದು ಪಾಪಪ್ರಜ್ಞೆ ರಾಮನಲ್ಲಿ ಕಾಡುತ್ತಿತ್ತು.

ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಬ್ರಾಹ್ಮಣರನ್ನು ಕೊಲ್ಲುವುದು ಬ್ರಹ್ಮಹತ್ಯ ದೋಷವೆಂದು ಭಯಾನಕ ಪಾಪವೆಂದು ಪರಿಗಣಿಸುತ್ತಿದ್ದರು. ಹೀಗಾಗಿ ರಾಮನು ತನ್ನ ಪಾಪವನ್ನು ಕಳೆಯುವಂತೆ ಶಿವನನ್ನು ಪ್ರಾರ್ಥಿಸುತ್ತಾರೆ ಋಷಿ ಅಗಸ್ತ್ಯರ ಸಲಹೆಯಂತೆ ರಾಮೇಶ್ವರಂನಲ್ಲಿ ಶಿವಲಿಂಗವನ್ನು ಸ್ಥಾಪಿಸಲು ನಿರ್ಧರಿಸುತ್ತಾನೆ. ಮತ್ತು ಬ್ರಹ್ಮಹತ್ಯಾ ದೋಷವನ್ನು ನಿವಾರಿಸಿಕೊಳ್ಳಲು ಈ ವಿಧಿಯನ್ನು ಮಾಡಬೇಕಾಗುತ್ತದೆ ಆದ್ದರಿಂದ ರಾಮನು ಶಿವಲಿಂಗವನ್ನು ತರಲು ಹನುಮಂತನನ್ನು ಕೈಲಾಸಪರ್ವತಕ್ಕೆ ಕಳುಹಿಸುತ್ತಾನೆ.

ದೋಷ ಪರಿಹಾರಕ್ಕಾಗಿ ಎಲ್ಲಾ ವಿಧಿವಿಧಾನಗಳನ್ನು ನಿರ್ದಿಷ್ಟ ಸಮಯದೊಳಗೆ ಮಾಡಬೇಕಾಗಿತ್ತು ಹನುಮಂತನು ಶಿವಲಿಂಗವನ್ನು ತರುವುದಕ್ಕೆ ವಿಳಂಬ ಮಾಡುತ್ತಾನೆ ಆದ್ದರಿಂದ ಸೀತಾದೇವಿಯು ಕಡಲತೀರದಲ್ಲಿ ಲಭ್ಯವಿರುವ ಮರಳುಗಳಿಂದ ಸಣ್ಣ ಶಿವಲಿಂಗವನ್ನು ಮಾಡುತ್ತಾಳೆ ಇದನ್ನು ರಾಮಲಿಂಗ ಎಂದು ಕರೆಯುತ್ತಾರೆ. ಜ್ಯೋತಿರ್ಲಿಂಗ ಎಂದು ಕರೆಯಲ್ಪಡುವ ರಾಮಲಿಂಗವು ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಹನುಮಂತನು ತಂದ ಸಣ್ಣ ಲಿಂಗದ ಬಳಿ ರಾಮನು ಕಪ್ಪು ಕಲ್ಲಿನ ದೊಡ್ಡ ಶಿವಲಿಂಗವನ್ನು ಸ್ಥಾಪಿಸಿದನು.

ರಾಮನಾಥ ಸ್ವಾಮಿ ದೇವಾಲಯದ ಮತ್ತೊಂದು ಪ್ರಮುಖ ಲಕ್ಷಣ ಏನೆಂದರೆ ಈ ದೇವಾಲಯದ ಆವರಣದಲ್ಲಿ ಮತ್ತು ದೇವಾಲಯದ ಸುತ್ತಮುತ್ತ ಅರವತ್ನಾಲ್ಕು ಬಾವಿಗಳಿವೆ ದೇವಾಲಯದ ಪ್ರಾಂಗಣದಲ್ಲಿ ಇಪ್ಪತ್ತೆರಡು ನಿಗೂಡ ಬಾವಿಗಳಿವೆ ಇವುಗಳು ತೀರ್ಥಸ್ನಾನದ ಬಾವಿಗಳಾಗಿವೆ ಸ್ಕಂದ ಪುರಾಣದ ಪ್ರಕಾರ ಇಪ್ಪತ್ತೆರಡು ಬಾವಿಗಳು ಪ್ರಮುಖ ಬಾವಿ ಗಳಾಗಿವೆ ಈ ಬಾವಿಗಳಲ್ಲಿ ಅಚ್ಚರಿಯ ವಿಷಯವೆಂದರೆ ದೇವಾಲಯದ ಬಾವಿಗಳು ಒಂದಕ್ಕೊಂದು ಹತ್ತಿರವಿದ್ದರೂ ಪ್ರತಿಯೊಂದು ಬಾವಿಯ ನೀರು ಭಿನ್ನವಾದ ರುಚಿಯನ್ನು ರೋಗನಿರೋಧಕ ಲಕ್ಷಣವನ್ನು ಹೊಂದಿದೆ ಭಕ್ತರು ದೇವಾಲಯವನ್ನು ಪ್ರವೇಶಿಸುವ ಮುನ್ನ ಇಲ್ಲಿರುವ ಅಗ್ನಿ ತೀರ್ಥದಲ್ಲಿ ಸ್ನಾನ ಮಾಡಬೇಕು.

ಇಲ್ಲಿಯ ಅಗ್ನಿ ತೀರ್ಥ ಅತ್ಯಂತ ಪವಿತ್ರವಾಗಿದೆ ಇಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಕೂಡ ಪರಿಹಾರ ಆಗುತ್ತದೆ ಎಂದು ನಂಬಲಾಗಿದೆ ಇದೇ ಕಾರಣಕ್ಕೆ ರಾಮೇಶ್ವರಕ್ಕೆ ಹೋಗುವ ಎಲ್ಲ ಭಕ್ತಾದಿಗಳು ಅಗ್ನಿ ತೀರ್ಥದಲ್ಲಿ ಸ್ನಾನ ಮಾಡುವುದನ್ನು ನಾವು ಕಾಣಬಹುದು ಹಾಗೆಯೇ ಇಲ್ಲಿ ಇಪ್ಪತ್ತೆರಡು ಬಾವಿಗಳ ತೀರ್ಥ ಸ್ನಾನವನ್ನು ಮಾಡಿ ಆಮೇಲೆ ದೇವಾಲಯದ ಒಳಗೆ ಪ್ರವೇಶಿಸಬೇಕು ಇಲ್ಲಿಯ ಬಾವಿಯ ನೀರಿನಿಂದ ಸ್ನಾನ ಮಾಡುವುದರಿಂದ ಪಾಪಕರ್ಮಗಳು ಪರಿಹಾರವಾಗಿ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಇದೆ.

ರಾಮೇಶ್ವರ ದೇವಾಲಯವು ಒಟ್ಟು ಮೂರುಸಾವಿರದ ಎಂಟುನೂರಾ ಐವತ್ತು ಅಡಿ ಉದ್ದ ಮೂರು ವಿವಿಧ ಬಗೆಯ ಪ್ರವೇಶಾಂಗಣಗಳನ್ನು ಹೊಂದಿದೆ ಮೊದಲ ಪ್ರವೇಶಾಂಗಣ ಉಳಿದೆರಡು ಪ್ರವೇಶಾಂಗಣಗಳಿಗೆ ಹೋಲಿಸಿದರೆ ಅತ್ಯಂತ ಹಳೆಯ ಪ್ರವೇಶಾಂಗಣವಾಗಿದೆ ಎರಡನೆಯ ಪ್ರವೇಶಾಂಗಣವನ್ನು ಸುಮಾರು ಹನ್ನೆರಡನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಈ ಪ್ರವೇಶಾಂಗಣ 108 ಶಿವಲಿಂಗವನ್ನು ಮತ್ತು ಗಣೇಶನ ಪ್ರತಿಮೆಯನ್ನು ಹೊಂದಿದೆ. ಮೂರನೇ ಪ್ರವೇಶಾಂಗಣ ಅಗಾಧವಾದ ಒಂದು ಸಾವಿರದ ಎರದುನುರಾ ಹನ್ನೆರಡು ಸ್ತಂಭವನ್ನು ಹೊಂದಿದ್ದು ಪ್ರತಿಯೊಂದು ಸ್ತಂಭವು ಮೂವತ್ತು ಅಡಿ ಎತ್ತರವನ್ನು ಪಡೆದಿದ್ದು ಈ ಪ್ರವೇಶಾಂಗಣವು ವಿಶ್ವದ ಅತಿದೊಡ್ಡ ಪ್ರವೇಶಾಂಗಣ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ದೇವಾಲಯದಲ್ಲಿರುವ ಶಾಸನಗಳ ಪ್ರಕಾರ ರಾಮೇಶ್ವರದಲ್ಲಿರುವ ಪ್ರಾಚೀನ ದೇವಾಲಯಗಳನ್ನು ಹನ್ನೆರಡನೇ ಶತಮಾನದಲ್ಲಿ ಶ್ರೀಲಂಕಾದ ರಾಜನಾದ ಪರಾಕ್ರಮ ಬಾಹುವು ದೇವಾಲಯವನ್ನು ದೊಡ್ಡದಾಗಿ ನಿರ್ಮಿಸಿದನು ಎಂದು ಹೇಳಲಾಗಿದೆ. ರಾಮನಾಥಸ್ವಾಮಿ ದೇವಾಲಯ ವನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ ಬರೋಬ್ಬರಿ ಹದಿನೈದು ಎಕರೆ ವಿಸ್ತೀರ್ಣದಲ್ಲಿ ಈ ದೇವಾಲಯವನ್ನು ಕಟ್ಟಲಾಗಿತ್ತು ಎತ್ತರದ ಗೋಪುರಗಳನ್ನು ಬೃಹತ್ ಗೋಪುರಗಳನ್ನು ಬೃಹತ್ ಗೋಡೆಗಳನ್ನು ಬೃಹತ್ ನಂದಿಯನ್ನು ಈ ದೇವಾಲಯ ಹೊಂದಿದೆ

ಈ ದೇವಸ್ಥಾನದ ಪೂರ್ವದಲ್ಲಿ ಒಂದು ಗೋಪುರ ಹಾಗೂ ಪಶ್ಚಿಮದಲ್ಲಿ ಇನ್ನೊಂದು ಗೋಪುರವಿದೆ ಪೂರ್ವದಲ್ಲಿರುವ ಗೋಪುರವು ಐದು ಹಂತಗಳನ್ನು ಇಪ್ಪತ್ತೆಂಟು ಅಡಿ ಎತ್ತರವನ್ನು ಹೊಂದಿದೆ ಇನ್ನು ಪಶ್ಚಿಮದಲ್ಲಿರುವ ಗೋಪುರವು ಒಂಬತ್ತು ಹಂತಗಳಲ್ಲಿ ನೂರಾಇಪ್ಪತ್ತಾರು ಅಡಿ ಎತ್ತರವನ್ನು ಹೊಂದಿದೆ. ಈ ಗೋಪುರವನ್ನು ರಾಜಗೋಪುರ ಎಂದು ಕರೆಯಲಾಗುತ್ತದೆ.

ರಾಮೇಶ್ವರಂ ದೇವಾಲಯಕ್ಕೆ ಪ್ರತಿವರ್ಷವು ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಇದರ ವಾಸ್ತುಶಿಲ್ಪದ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದಿರುವ ಈ ದೇವಾಲಯ ಎಲ್ಲರನ್ನೂ ಆಕರ್ಷಿಸುತ್ತದೆ ಸ್ನೇಹಿತರೆ ಒಂದು ವೇಳೆ ನೀವು ಮಧುರೈ ಕನ್ಯಾಕುಮಾರಿಗೆ ಹೋದರೆ ದಯವಿಟ್ಟು ರಾಮೇಶ್ವರಂ ಗೆ ಭೇಟಿ ಕೊಡಿ ಇದೊಂದು ಅದ್ಭುತವಾದಂತಹ ಜ್ಯೋತಿರ್ಲಿಂಗ ವಾಗಿದೆ.

ರಾಮೇಶ್ವರಂ ನನ್ನು ಭೇಟಿಯಾದ ನಂತರವೇ ನೀವು ಕಾಶಿಯಾತ್ರೆಗೆ ಹೋಗಬಹುದು ಜೀವನದಲ್ಲಿ ಪ್ರತಿಯೊಬ್ಬ ಹಿಂದೂ ನಾಲ್ಕು ಚಾರ್ ಧಾಮ ಗಳನ್ನು ಭೇಟಿ ಕೊಡಲೇಬೇಕು ಕನ್ನಡಿಗರಿಗೆ ಅತ್ಯಂತ ಹತ್ತಿರವಾದ ಚಾರ್ ಧಾಮ್. ನೀವು ರಾಮೇಶ್ವರಕ್ಕೆ ಭೇಟಿಕೊಟ್ಟಾಗ ಧನುಷ್ಕೋಡಿಯನ್ನು ಭೇಟಿ ಕೊಡಿ ಯಾಕೆಂದರೆ ಅಲ್ಲಿಯೇ ಇರುವುದು ರಾಮ ಸೇತುವೆಯ ಆರಂಭದ ಹಂತ ರಾಮನ ಆಶೀರ್ವಾದ ಈಶ್ವರನ ಆಶೀರ್ವಾದ ಸದಾಕಾಲ ನಮ್ಮೆಲ್ಲರ ಮೇಲೆ ಇರಲಿ ಎಂದು ನಾವು ಬೇಡಿಕೊಳ್ಳೋಣ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!