ಪ್ರತಿಯೊಬ್ಬರಿಗೂ ತಾವು ಜೀವನದಲ್ಲಿ ಶ್ರೀಮಂತರಾಗಿ ಬಾಳಬೇಕು ಎಂಬ ಆಸೆ ಇರುತ್ತದೆ ಆದರೆ ಲಕ್ಷ್ಮೀ ದೇವಿಯ ಕೃಪೆ ಎಲ್ಲರ ಮೇಲು ಇರುವುದಿಲ್ಲ ಜನರು ಮಾಡುವಂತಹ ಕೆಲಸ ಕಾರ್ಯಗಳು ಅವರ ಅಭ್ಯಾಸ ಕೆಲವು ಸನ್ನಿವೇಶಗಳಿಂದ ಕೆಲವು ವಿಶೇಷ ವ್ಯಕ್ತಿಗಳ ಮೇಲೆ ಲಕ್ಷ್ಮಿ ದೇವಿಯ ಕೃಪೆ ಉಂಟಾಗುತ್ತದೆ. ಚಾಣಕ್ಯ ತನ್ನ ನೀತಿಯಲ್ಲಿ ಒಬ್ಬ ವ್ಯಕ್ತಿಯು ಶ್ರೀಮಂತ ಆಗಬೇಕಾದರೆ ಯಾವ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು
ಯಾವ ಕೆಲಸ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ತಿಳಿಸಿದ್ದಾನೆ. ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರೆ ಶ್ರೀಮಂತನಾಗಿ ಬಾಳಬೇಕು ಎಂದರೇನು ಚಾಣಕ್ಯ ತಿಳಿಸಿರುವ ಕೆಲವು ನೀತಿಗಳನ್ನು ನಾವು ಅಳವಡಿಸಿಕೊಳ್ಳಬೇಕು ಇದರಿಂದ ನಮ್ಮದಾಗುತ್ತದೆ. ನಾವಿಂದು ಒಬ್ಬ ವ್ಯಕ್ತಿ ಶ್ರೀಮಂತನಾಗುವುದಕ್ಕೆ ಚಾಣಕ್ಯ ತಿಳಿಸಿರುವ ನೀತಿಗಳು ಯಾವುವು ಎಂಬುದರ ಬಗ್ಗೆ ನಿಮಗೆ ತಿಳಿಸಿ ಕೊಡುತ್ತೇವೆ.
ಚಾಣಕ್ಯನ ಪ್ರಕಾರ ಜೀವನದಲ್ಲಿ ಯಶಸ್ಸನ್ನು ಸಾಧಿಸುವುದಕ್ಕೆ ಮತ್ತು ಶ್ರೀಮಂತನಾಗುವುದಕ್ಕೆ ಕಠಿಣ ಪರಿಶ್ರಮ ಸಾಮರ್ಥ್ಯ ಮತ್ತು ಅದೃಷ್ಟವನ್ನು ಹೊಂದಿರಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಕೂಡ ಯಶಸ್ಸನ್ನು ಸಾಧಿಸುವುದಕ್ಕೆ ಎರಡು ಗುಣಗಳಿವೆ ಆ ಗುಣಗಳನ್ನು ವ್ಯಕ್ತಿಯು ಜೀವನದಲ್ಲಿ ಅಳವಡಿಸಿಕೊಂಡರೆ ಅವನು ತನ್ನ ಜೀವನದಲ್ಲಿ ಯಶಸ್ಸನ್ನು ಸಾಧಿಸುವುದಕ್ಕೆ ಅದು ಸಹಾಯವನ್ನು ಮಾಡುತ್ತದೆ. ಚಾಣಕ್ಯನ ನೀತಿಯಲ್ಲಿ ಆ ಎರಡು ಗುಣಗಳ ಬಗ್ಗೆ ವಿವರಣೆಯನ್ನು ಮಾಡಲಾಗಿದೆ.
ಚಾಣಕ್ಯ ತಿಳಿಸಿರುವ ಎರಡು ಗುಣಗಳು ಯಾವುದು ಎಂದರೆ ಮೊದಲನೆಯದಾಗಿ ನಮ್ರತೆ. ಒಬ್ಬ ವ್ಯಕ್ತಿಯು ನಮ್ರತೆಯನ್ನು ಹೊಂದಿಲ್ಲದಿದ್ದರೆ ಅವನು ಯಶಸ್ಸನ್ನ ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ವ್ಯಕ್ತಿಯು ಅಹಂಕಾರ ಭಾವವನ್ನು ಹೊಂದಿದ್ದರೆ ಲಕ್ಷ್ಮೀದೇವಿಯು ಆತನ ಹತ್ತಿರ ಸುಳಿಯುವುದೇ ಇಲ್ಲ. ನಮ್ರತೆ ಇಲ್ಲದಂತಹ ವ್ಯಕ್ತಿಯನ್ನು ಜನರು ಕೂಡ ಇಷ್ಟಪಡುವುದಿಲ್ಲ ಆದ್ದರಿಂದಲೇ ಒಬ್ಬ ವ್ಯಕ್ತಿ ಹುದ್ದೆ ಹಣ ಗೌರವ ಪ್ರತಿಷ್ಠೆಯನ್ನು ಪಡೆಯುವುದಕ್ಕೆ ವಿನಯವಂತಿಕೆ ಇರುವುದು ಬಹಳ ಮುಖ್ಯವಾಗಿದೆ.
ಚಾಣಕ್ಯ ತಿಳಿಸಿರುವ ಎರಡನೇ ನೀತಿ ಸಿಹಿಯಾದ ಮಾತು. ಕೆಲವೊಮ್ಮೆ ಸಿಹಿಯಾಗಿ ಮಾತನಾಡುವುದೇ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವಾಗಿರುತ್ತದೆ ಒಬ್ಬ ವ್ಯಕ್ತಿ ಆತನು ಆಡುವ ಮಾತಿನಲ್ಲಿ ಮಾಧುರ್ಯ ವಿದ್ದರೆ ಆತ ತನ್ನ ಶತ್ರುವನ್ನು ಕೂಡ ಮಿತ್ರನನ್ನಾಗಿ ಮಾಡಿಕೊಳ್ಳಬಹುದು. ಕೈತಪ್ಪಿ ಹೋಗುತ್ತಿರುವ ಕೆಲಸವನ್ನು ಸುಲಭವಾಗಿ ನಿಭಾಯಿಸಬಹುದು ಸಿಹಿಯಾದ ಮಾತುಗಳನ್ನು ಆಡುವುದರಿಂದ ಎಲ್ಲರ ಹೃದಯವನ್ನು ಗೆಲ್ಲುವುದಕ್ಕೆ ಇದು ಸಹಾಯಮಾಡುತ್ತದೆ. ಯಶಸ್ವಿ ಜೀವನ ಮತ್ತು ಸಿರಿವಂತಿಕೆಯ ಜೀವನವನ್ನು ಅನುಭವಿಸಬೇಕು ಎಂದರೆ ಮಾತಿನಲ್ಲಿ ಮಾಧುರ್ಯವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಚಾಣಕ್ಯ ತಿಳಿಸಿದ್ದಾರೆ.
ನಿಮ್ಮ ಜೀವನದಲ್ಲಿ ಮೇಲೆ ತಿಳಿಸಿರುವ ಎರಡು ಗುಣಗಳನ್ನು ಅಳವಡಿಸಿಕೊಂಡರೆ ಸಿರಿತನ ಹಾಗೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು. ನಮ್ರತೆ ಮತ್ತು ಸಿಹಿಮಾತು ಮಾಡುವಂತ ಗುಣ ನಿಮ್ಮಲ್ಲಿದ್ದರೆ ನೀವು ಉತ್ತಮವಾದ ಸಂತೋಷದಾಯಕವಾದ ಜೀವನವನ್ನು ನಡೆಸುವುದಕ್ಕೆ ಸಾಧ್ಯ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.