ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಎಲ್ಲರಿಗೂ ಗೊತ್ತು. ಸರ್ಪದೋಷ ಪರಿಹಾರಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ಈ ದೇವಸ್ಥಾನದ ಹಿಂದಿನ ರಹಸ್ಯ ತಿಳಿದವರು ಕಡಿಮೆ. ಈಗ ನಾವು ಈ ದೇವಸ್ಥಾನದ ಬಗ್ಗೆ ತಿಳಿಯೋಣ.
ಕುಮಾರಧಾರಾ ನದಿತೀರಕ್ಕೆ ಬಂದಿದ್ಯಾಕೆ ಸುಬ್ರಹ್ಮಣ್ಯ:- ಕುಕ್ಕೆ ಸುಬ್ರಮಣ್ಯ ಹಿಂದುಗಳಪವಿತ್ರ ಕ್ಷೇತ್ರದಲ್ಲಿ ಒಂದು. ಇದು ಕುಮಾರಧಾರಾ ನದಿ ತೀರದಲ್ಲಿ ಇದೆ. ರಾಕ್ಷಸರ ಸಂಹಾರಕ್ಕಾಗಿ ಇಲ್ಲಿಗೆ ಬಂದ ಸುಬ್ರಹ್ಮಣ್ಯ ಅಸುರರನ್ನು ಸಂಹಾರ ಮಾಡಿ ಗಣಪತಿಯ ಜೊತೆ ಕುಮಾರ ಪರ್ವತಕ್ಕೆ ಬಂದಿರುತ್ತಾನೆ. ಆಗ ತನ್ನ ಮಗಳಾದ ದೇವಸೇನೆಯ ಜೊತೆ ಕುಮಾರಧಾರಾ ನದಿ ತೀರದದಡದಲ್ಲಿ ಮದುವೆ ಮಾಡಿಕೊಡುತ್ತಾನೆ. ಅಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ವಾಸುಕಿಯ ಅಪ್ಪಣೆಯ ಮೇರೆಗೆ ತಾನು ದೇವಸೇನೆಯ ಜೊತೆ ಈ ಕ್ಷೇತ್ರದಲ್ಲಿ ವಾಸಿಸುವುದಾಗಿ ಮಾತು ಕೊಡುತ್ತಾನೆ.
ಸರ್ಪದೋಷ ನಿವಾರಣೆಗೆ ಈಸ್ಥಳ ಪ್ರಸಿದ್ಧವಾಗಿದ್ದು ಹೇ ಗೆ:- ಈ ದೇವಸ್ಥಾನದ ಪ್ರವೇಶದಲ್ಲಿ ಬಲ್ಲಾಳ ದೇವನ ವಿಗ್ರಹವಿದೆ. ಕುಂಬಳಕಾಯಿ, ಬೆಣ್ಣೆ, ಸಾಸಿವೆ,ಹತ್ತಿ ಅರ್ಪಿಸಿದರೆ ದೋಷ ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅದರ ಹಿಂದೆ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಮಧ್ವದ ವಿಷ್ಣುತೀರ್ಥರು ಸಂಸ್ಥಾನದಿಂದಸಿದ್ಧಪರ್ವತಕ್ಕೆ ಹೊರಡುವಾಗ ಮಧ್ವದಿಂದ ಒಂದು ಅಕ್ಷಯ ಪಾತ್ರೆಯನ್ನು ತೆಗೆದುಕೊಂಡು ಹೋಗುತ್ತಾರೆ. ಆಗ ಇನ್ನೋರ್ವ ಸ್ವಾಮಿ ಅನಿರುದ್ಧ ತೀರ್ಥರನ್ನು ಕಂಡು ನಾಳೆ ನೀನು ಹರಿಧ್ಯಾನದಲ್ಲಿ ಇರುವಾಗ ಅಕ್ಷಯ ಪಾತ್ರೆಯೊಂದು ಕುಮಾರಧಾರ ನದಿಯ ನೀರಿನಲ್ಲಿ ತೇಲಿ ಬರುತ್ತದೆ. ಒಂದನ್ನು ಸಂಸ್ಥಾನದಲ್ಲಿ ಇಟ್ಟುಕೊಂಡು ಇನ್ನೊಂದನ್ನು ದೇವಸ್ಥಾನಕ್ಕೆ ಕೊಡಬೇಕು ಎಂದು ಹೇಳುತ್ತಾರೆ. ಹಾಗೆಯೇ ಅನಿರುದ್ಧ ತೀರ್ಥರಿಗೆ ಅಕ್ಷಯ ಪಾತ್ರೆ ಸಿಕ್ಕ ವಿಚಾರ ಊರು ತುಂಬಾ ಸುದ್ದಿ ಆಗುತ್ತದೆ. ಒಂದನ್ನು ಅವರೇ ಇಟ್ಟುಕೊಂಡಿದ್ದಾರೆ ಒಂದನ್ನು ಮಾತ್ರ ನೀಡಿದ್ದಾರೆ ಎಂದು ಬಲ್ಲಾಳ ದೇವನಿಗೆ ದೂರು ಹೋಗುತ್ತದೆ.
ಒತ್ತಾಯದಿಂದ ಬಲ್ಲಾಳನು ಆ ಅಕ್ಷಯ ಪಾತ್ರೆಯನ್ನು ಕಸಿದುಕೊಂಡು ತೆಗೆಯಲು ಆಗದೆ ಆನೆಯ ಮೂಲಕ ತುಳಿಸುತ್ತಾನೆ. ಆಗ ಆ ಆನೆಗೆ ಮೈಯಲ್ಲಿ ಉರಿ ಬಿದ್ದು ನದಿಯಲ್ಲಿ ಬಿದ್ದು ಸತ್ತು ಹೋಯಿತು. ಆನೆ ಸತ್ತು ಹೋದ ಆ ಸ್ಥಳವೇ ಆನೆಗುಂಡಿ. ಬಲ್ಲಾಳನಿಗೂ ಮೈಯೆಲ್ಲಾ ಬೊಬ್ಬೆಗಳು ಎದ್ದಾಗ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿದಾಗ ನಿನ್ನ ಕಲ್ಲಿನ ವಿಗ್ರಹ ಮಾಡಿ ನನ್ನ ಸನ್ನಿಧಾನದಲ್ಲಿ ಇರಿಸು, ಭಕ್ತಾದಿಗಳು ಕುಂಬಳಕಾಯಿ, ಸಾಸಿವೆ, ಬೆಣ್ಣೆ, ಹತ್ತಿಯನ್ನು ಹರಕೆಯಾಗಿ ಸಲ್ಲಿಸಲಿ ಅದನ್ನು ಮಾರಿದ ಹಣದಿಂದ ಸಂಸ್ಥಾನ ಮಠಕ್ಕೆ ಅರ್ಪಿಸಬೇಕು ಎಂದು ಹೇಳಿದಾಗ ಹಾಗೆ ಮಾಡಿದಾಗ ಬಲ್ಲಾಳ ಗುಣಮುಖನಾದನು. ಆದ್ದರಿಂದ ಎಲ್ಲಾ ನಾಗದೋಷ ಗಳಿಗೂ ಇಲ್ಲಿ ಪರಿಹಾರ ಇದೆ. ಪವಿತ್ರ ಕುಮಾರಧಾರಾ ನದಿಯ ಸ್ನಾನದಿಂದ ಕುಷ್ಠ ರೋಗಗಳು ಎಲ್ಲಾ ಚರ್ಮ ರೋಗಗಳು ದೂರವಾಗುತ್ತದೆ.