ರಾಜ್ಯದಲ್ಲಿ ಅಷ್ಟೇ ಅಲ್ದೆ ಹಲವು ದೇಶಗಳಲ್ಲಿ ಕೊರೋನಾ ಮಹಾಮಾರಿ ವೈರಸ್ ತನ್ನ ಪ್ರಭಾವವನ್ನು ಹೆಚ್ಚಿಸಿದೆ ಆಗಾಗಿ ಇದರ ಹಿನ್ನಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ದೇವಾಲಯ ಚರ್ಚ್ ಮಸೀದಿ ಇವುಗಳನ್ನು ಬಂದ್ ಮಾಡಲಾಗಿತ್ತು. ಆದ್ರೆ ಇದೀಗ ಸರ್ಕಾರ ಇದೆ ಜೂನ್ ೧ ರಿಂದ ದೇವಾಲಯಗಳಲ್ಲಿ ದರ್ಶನ ಭಾಗ್ಯ ಪಡೆಯುವ ಯೋಜನೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ಕೂಡ ದರ್ಶನ ಭಾಗ್ಯ ಪಡೆಯಬಹುದಾಗಿದ್ದು. ಇಲ್ಲಿ ದರ್ಶನಕ್ಕೆ ಬರುವಾಗ ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಅನ್ನೋದನ್ನ ಆಡಳಿತ ಮಂಡಳಿ ತಿಳಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವಂತ ಭಕ್ತಾದಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ದೇವಸ್ಥಾನವು ಜೂನ್ ೧ ರಿಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಸರ್ಕಾರದ ಆದೇಶದ ಮೇರೆಗೆ ಸ್ವಚ್ಛತೆ, ಸ್ಯಾನಿಟೇಜರ್ ಬಳಕೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ಆದ್ದರಿಂದ ಧರ್ಮಸ್ಥಳಕ್ಕೆ ಹೋಗುವ ಭಕ್ತಾದಿಗಳಿಗೆ ಈ ವಿಚಾರ ತಿಳಿಯಲಿ ನಿಮ್ಮ ಸ್ನೇಹಿತರಿಗೂ ಕೂಡ ಇದನ್ನು ಹಂಚಿಕೊಳ್ಳಿ, ಕ್ಷಣ ಕ್ಷಣ ಮಾಹಿತಿಗಾಗಿ ನಮ್ಮ ನ್ಯೂಸ್ ಮೀಡಿಯಾ ಪೇಜ್ ಬೆಂಬಲಿಸಿ. ಇನ್ನು ದರ್ಶನ ಸಮಯ ಈ ರೀತಿ ಇದೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ, ಸಂಜೆ 5 ಗಂಟೆಯಿಂದ 8 ಗಂಟೆವರೆಗೆ.