ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಕೆಲವು ಮಾತುಗಳು ನಮ್ಮನ್ನು ನಮಗೆ ಪರಿಚಯ ಮಾಡಿಕೊಡುತ್ತವೆ ಅಂದರೆ ಮನುಷ್ಯನನ್ನು ಮನುಷ್ಯನಿಗೆ ಪರಿಚಯ ಮಾಡಿಕೊಡುತ್ತವೆ.ಆ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅನುಸರಿಸುವುದರಿಂದ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ನಾವು ಸಿದ್ಧಿಯನ್ನು ಕಾಣಬಹುದು ಅಭಿವೃದ್ಧಿಯನ್ನು ಕಂಡುಕೊಳ್ಳಬಹುದು ಜೊತೆಗೆ ಯಾರಿಂದಲೂ ಮೋಸ ಹೋಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಹಾಗಾದರೆ ಶ್ರೀಕೃಷ್ಣ ಹೇಳಿರುವಂತಹ ಆ ಹತ್ತು ಅದ್ಭುತವಾದ ಮಾತುಗಳು ಯಾವುವು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಸಾಮಾನ್ಯವಾಗಿ ನಿಮ್ಮ ದುರ್ಬಲತೆ ಯಾವುದು ಹಣ ಪ್ರೀತಿ ಅಥವಾ ಅಹಂಕಾರನಾ. ಇದ್ಯಾವುದೂ ಅಲ್ಲ ನಿಮ್ಮ ದುರ್ಬಲತೆ ನಿಮ್ಮ ರಹಸ್ಯ. ನೀವು ನಿಮ್ಮ ರಹಸ್ಯವನ್ನು ಯಾರಹತ್ತಿರವೂ ಹಂಚಿಕೊಳ್ಳ ಬಾರದು ಅದು ನಿಮ್ಮ ಮಿತ್ರನೆ ಆಗಿರಬಹುದು ಅಥವಾ ನಿಮ್ಮ ಶತ್ರುವೇ ಆಗಿರಬಹುದು ಯಾಕೆಂದರೆ ಸಮಯ ಸಂದರ್ಭಗಳು ಹೇಗೆ ಇರುತ್ತವೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಸಮಯ ಬಂದಾಗ ನಿಮ್ಮ ರಹಸ್ಯವನ್ನು ಆಯುಧವನ್ನಾಗಿ ಮಾಡಿಕೊಂಡು ನಿಮ್ಮ ಮೇಲೆ ದಾಳಿ ಮಾಡುವಂತಹ ಸಾಕಷ್ಟು ಜನರು ಇರುತ್ತಾರೆ. ಹಾಗಾಗಿ ನೀವು ನಿಮ್ಮ ರಹಸ್ಯವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಬೇಕು ಅದನ್ನು ಯಾರೊಂದಿಗೂ ಹಂಚಿಕೊಳ್ಳಬಾರದು

ಇನ್ನು ಎರಡನೆಯ ಮಾತು ನಾವು ನಮ್ಮ ಜೀವನದಲ್ಲಿ ಯಾವತ್ತೂ ನಕಲು ಮಾಡಬಾರದು. ನಾವು ಎಲ್ಲ ಹಂತದಲ್ಲಿಯೂ ಸ್ವಂತಿಕೆಯಿಂದ ಬಾಳುವುದನ್ನು ಕಲಿಯಬೇಕು. ನಮ್ಮ ವ್ಯವಹಾರದಲ್ಲಿ ಆಗಿರಬಹುದು ವಿದ್ಯಾಭ್ಯಾಸದಲ್ಲಿ ಆಗಿರಬಹುದು ಉದ್ಯೋಗದಲ್ಲಿ ಆಗಿರಬಹುದು ಯಾವುದೇ ಹಂತದಲ್ಲೂ ಕೂಡ ನಾವು ನಕಲು ಮಾಡುವುದನ್ನು ಕಲಿಯಬಾರದು. ಉದಾಹರಣೆಗೆ ನಿಮಗೆ ನೆನಪಿರಬಹುದು ನಾವು ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಇರಬಹುದು ನಕಲು ಮಾಡಿ ಪರೀಕ್ಷೆಯನ್ನು ಪಾಸು ಮಾಡಬಹುದು ಕಾರಣ ಅಲ್ಲಿ ಎಲ್ಲರಿಗೂ ಒಂದೇ ರೀತಿಯದಾದ ಪ್ರಶ್ನೆಪತ್ರಿಕೆ ಇರುತ್ತದೆ ಹಾಗಾಗಿ ನಕಲು ಮಾಡಿ ಪಾಸ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಜೀವನ ಎಂಬ ಈ ಪ್ರಶ್ನೆ ಪತ್ರಿಕೆ ಎಲ್ಲರಿಗೂ ಒಂದೇ ರೀತಿಯಾಗಿ ಇರುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ ಎಲ್ಲರದ್ದು ಭಿನ್ನಭಿನ್ನವಾದ ಪ್ರಶ್ನೆಪತ್ರಿಕೆ ಯಾಗಿರುತ್ತದೆ. ಪ್ರಶ್ನೆ ಪತ್ರಿಕೆ ಭಿನ್ನವಾಗಿದ್ದ ಮೇಲೆ ಉತ್ತರ ಕೂಡ ಭಿನ್ನ ಭಿನ್ನವಾಗಿಯೇ ಇರಬೇಕು. ಹಾಗಾಗಿ ನಾವು ನಮ್ಮ ಸ್ವಂತಿಕೆಯಿಂದ ನಮ್ಮ ಜೀವನದ ಪ್ರಶ್ನೆ ಪತ್ರಿಕೆಗೆ ನಾವೇ ಉತ್ತರವನ್ನು ಕಂಡುಕೊಳ್ಳಬೇಕು ಯಾವಾಗ ನಮ್ಮ ಜೀವನದ ಪ್ರಶ್ನೆ ಪತ್ರಿಕೆಗೆ ನಾವು ಉತ್ತರವನ್ನು ಕೊಂಡುಕೊಳ್ಳುತ್ತೇವೆಯೊ ಆಗ ನಮ್ಮ ಯಶಸ್ಸನ್ನು ನಾವೇ ಕಂಡುಕೊಂಡಂತೆ.

ಮೂರನೆಯ ಮಾತು ಜೀವನ ಎಂಬ ತಕ್ಕಡಿಯಲ್ಲಿ ಸೋಲು ಮತ್ತು ಗೆಲುವು ಎರಡು ಯಾವಾಗಲೂ ತೂಗುತ್ತಿರುತ್ತವೆ. ಈ ಸೋಲು-ಗೆಲುವು ಎನ್ನುವುದು ಕೇವಲ ಮನುಷ್ಯನ ಮನಸ್ಥಿತಿ. ಈ ಮನಸ್ಥಿತಿ ಇಂದಲೇ ಮನುಷ್ಯ ಸಾಕಷ್ಟು ಉತ್ಸುಕನಾಗುತ್ತಾನೆ ಮತ್ತು ಕುಂಟಿತನು ಆಗುತ್ತಾನೆ. ಮನುಷ್ಯ ಜೀವನದಲ್ಲಿ ಗೆಲುವನ್ನು ಕಂಡಾಗ ತುಂಬಾ ಹಿಗ್ಗುತ್ತಾನೆ ಸಂಭ್ರಮಿಸುತ್ತಾನೆ ಆ ಕ್ಷಣವನ್ನು ಅನುಭವಿಸುತ್ತಾನೆ ಅದೇ ಮನುಷ್ಯ ತನ್ನ ಜೀವನದಲ್ಲಿ ಸೋಲು ಅಂತ ಕಂಡಾಗ ಅದನ್ನು ನೋವಿನಿಂದ ಸ್ವೀಕರಿಸುತ್ತಾನೆ ತುಂಬಾ ಸಂಕಟ ಪಡುತ್ತಾನೆ ಆದರೆ ನಿಜವಾದ ಸುಳ್ಳು ಯಾವುದು ಎಂದರೆ ನಮ್ಮ ಶತ್ರು ಗೆಲ್ಲುವುದು ಸೋಲಲ್ಲ. ನಾವು ಸೋಲನ್ನು ಸ್ವೀಕರಿಸುವುದು ನಿಜವಾದ ಸೋಲು. ಇನ್ನು ಸುಲಭವಾಗಿ ಹೇಳಬೇಕು ಎಂದರೆ ನಮ್ಮ ಗುರಿಯನ್ನು ನಾವು ಮುಟ್ಟಲಿಲ್ಲ ಎನ್ನುವುದು ನಿಜವಾದ ಸೋಲಲ್ಲ ನಮ್ಮ ಗುರಿಯನ್ನು ಮುಟ್ಟುವುದಕ್ಕೆ ಬೇಕಾದಂತಹ ಪ್ರಯತ್ನವನ್ನು ನಾವು ಮಾಡಲಿಲ್ಲ ಎನ್ನುವುದು ನಿಜವಾದ ಸೋಲಾಗುತ್ತದೆ. ಹಾಗಾಗಿ ಈ ಸೋಲು ಮತ್ತು ಗೆಲುವುಗಳು ನಮ್ಮ ಮನಸ್ಥಿತಿಗಳು ಮಾತ್ರ ಆದರೆ ನಿರಂತರವಾದ ಪ್ರಯತ್ನ ನಿಮ್ಮದಾದಲ್ಲಿ ಯಶಸ್ಸು ಕೂಡ ನಿಮ್ಮದಾಗುತ್ತದೆ.

ನಾಲ್ಕನೆಯ ಮಾತು ಪ್ರತಿಯೊಬ್ಬರೂ ನಿಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ. ನೀವೆಲ್ಲರೂ ಆಲದಮರವನ್ನು ನೋಡಿರುತ್ತೀರಿ ಎಷ್ಟು ವಿಶಾಲವಾಗಿ ಹರಡಿಕೊಂಡಿರುತ್ತದೆ ತುಂಬಾ ಬೃಹದಾಕಾರವಾಗಿ ಇರುತ್ತದೆ ಅದನ್ನು ನೋಡಿದಾಗ ನಮಗೆಲ್ಲರಿಗೂ ಅನಿಸುವುದು ಇದು ಎಷ್ಟು ದೊಡ್ಡದಾಗಿದೆ ವಿಶಾಲವಾಗಿದೆ ಎಂದು. ಆದರೆ ಆ ಮರ ವಿಶಾಲವಾಗಿರುತ್ತದೆ ಅದರ ಕಾಂಡ ಹಾಗೆ ಇರುತ್ತದೆ ಅಂದರೆ ಮರ ವಿಶಾಲವಾದಷ್ಟೂ ಅದರ ಕಾಂಡ ವಿಶಾಲವಾಗಿ ಇರುವುದಿಲ್ಲ ಇದರಿಂದ ಮನುಷ್ಯ ಏನು ಅರ್ಥ ಮಾಡಿಕೊಳ್ಳಬೇಕು ಎಂದರೆ ಮನುಷ್ಯ ತಾನು ಬೆಳೆಯುತ್ತಾ ಬೆಳೆಯುತ್ತಾ ತನ್ನ ವ್ಯಕ್ತಿತ್ವವನ್ನು ಆಲದ ಮರದ ರೆಂಬೆ ಕೊಂಬೆಗಳು ಹೇಗೆ ವಿಷಾಲವಾಗಿ ಹರಡಿಕೊಂಡಿರುತ್ತದೆ ಮನುಷ್ಯನ ವ್ಯಕ್ತಿತ್ವ ಹಾಗೆ ವಿಶಾಲವಾಗಿ ಬೆಳೆದಿರಬೇಕು ಅರ್ಥಾತ್ ನಾವು ಆಸೆ-ದುರಾಸೆ ಅಹಂಕಾರಗಳನ್ನು ಬಿಟ್ಟು ಸಹಾಯ ಮಾನವೀಯತೆ ಧರ್ಮ ಎನ್ನುವ ಒಳ್ಳೆಯ ವಿಚಾರಗಳನ್ನ ಮೈಗೂಡಿಸಿಕೊಂಡಾಗ ನಮ್ಮ ವ್ಯಕ್ತಿತ್ವವೂ ಕೂಡ ಆಲದ ಮರದ ರೆಂಬೆ ಕೊಂಬೆಯ ಹಾಗೆ ವಿಶಾಲವಾಗಿ ಹರಡಿಕೊಳ್ಳುತ್ತದೆ.

ಐದನೆಯ ಮಾತು ನಾವು ತುಂಬಾ ಮಾತನಾಡುವುದು ಹಾನಿಕರ. ನಮ್ಮ ದೇಹ ರಚನೆ ಪ್ರಕೃತಿಯ ಅದ್ಭುತವಾದ ಆವಿಷ್ಕಾರ ಎಂದು ಹೇಳಬಹುದು. ನಮ್ಮ ಪಂಚೇಂದ್ರಿಯಗಳು ಅವುಗಳ ಕೆಲಸವನ್ನು ಯಾವಾಗಲೂ ಮಾಡುತ್ತಿರುತ್ತವೆ ಕಣ್ಣು ನೋಡುವುದನ್ನು ಕಿವಿ ಕೇಳುವುದನ್ನು ಮೂಗು ವಾಸನೆಯನ್ನು ಚರ್ಮ ಸ್ಪರ್ಶವನ್ನು ಮತ್ತು ನಾಲಿಗೆ ಮಾತನಾಡುವುದನ್ನು ಯಾವಾಗಲೂ ಮಾಡುತ್ತಿರುತ್ತವೆ. ಆದರೆ ನೀವು ಇಲ್ಲಿ ಗಮನಿಸಬಹುದು ನಮಗೆ ಕಣ್ಣುಗಳು ಎರಡು ಇವೆ ಎರಡು ಕಿವಿಗಳಿಗೆ ಮೂಗಿನ ಹೊಳ್ಳೆಗಳು ಎರಡು ಇದೆ ಚರ್ಮ ಇಡೀ ದೇಹವನ್ನೂ ಆವರಿಸಿದೆ ಆದರೆ ನಾಲಿಗೆ ಒಂದೇ ಇದೆ. ಇದರಿಂದಲೇ ನಾವು ಅರ್ಥ ಮಾಡಿಕೊಳ್ಳಬೇಕು ನಾವು ಕಡಿಮೆ ಮಾತನಾಡಬೇಕು ಎಂದು. ತುಂಬಾ ಮಾತನಾಡುವಂತದ್ದು ಯಾವುದೇ ಸನ್ನಿವೇಶ ಸಂದರ್ಭ ಅಥವಾ ವ್ಯಕ್ತಿಯೊಂದಿಗೆ ಆಗಿರಲಿ ಅದು ತುಂಬಾ ಹಾನಿಕಾರಕ

ಆರನೆಯ ಮಾತು ನಮ್ಮವರು ಯಾರು ಎಂಬುದನ್ನು ನಾವು ಕಂಡುಕೊಳ್ಳಬೇಕು ಸಾಮಾನ್ಯವಾಗಿ ನಮ್ಮವರು ಯಾರು ಎಂದರೆ ನಮ್ಮ ಒಡಹುಟ್ಟಿದವರು ನಮ್ಮ ರಕ್ತಸಂಬಂಧಿಗಳು ಎಂದು ಹೇಳುತ್ತೇವೆ ಇದು ತಪ್ಪಲ್ಲ ಆದರೆ ಇದರ ಜೊತೆಗೆ ಇನ್ನು ಹಲವಾರು ಜನ ಇರುತ್ತಾರೆ ಅವರು ಕೂಡ ನಮ್ಮ ಜೊತೆಗೆ ನಮ್ಮವರೆ ಆಗುವಂತಹ ಸಾಧ್ಯತೆ ಇರುತ್ತದೆ ಆದರೆ ನಾವು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ ಅದನ್ನು ಕಂಡುಕೊಳ್ಳುವುದಕ್ಕೆ ನಾವು ಪ್ರಯತ್ನ ಪಡುವುದಿಲ್ಲ. ನಾವು ಖುಷಿಯಿಂದ ಇರುವಾಗ ಸಡಗರ-ಸಂಭ್ರಮದಿಂದ ಇರುವಾಗ ಯಾರೆಲ್ಲ ನಮ್ಮ ಜೊತೆ ಇರುತ್ತಾರೋ ಅವರೆಲ್ಲ ನಮ್ಮವರಲ್ಲ. ಮುಖ್ಯವಾಗಿ ಯಾರು ನಮ್ಮ ಕಷ್ಟದಲ್ಲಿ ಸಂಕಟದ ಸಂದರ್ಭದಲ್ಲಿ ನಮ್ಮ ಜೊತೆಯಾಗಿರುತ್ತಾರೋ ಅವರು ನಮ್ಮವರಾಗಿರುತ್ತಾರೆ. ಅವರು ಒಡಹುಟ್ಟಿದವರಾಗಿರಬಹುದು ಸಂಬಂಧಿಕರಾಗಿರಬಹುದು ಅಥವಾ ಸ್ನೇಹಿತರಾಗಿರಬಹುದು. ನಮ್ಮ ಕಷ್ಟದಲ್ಲಿ ನಮ್ಮ ಜೊತೆಗಿದ್ದು ನಮಗೆ ಸಾಂತ್ವಾನ ಹೇಳಿ ನಮ್ಮ ಕಷ್ಟಗಳಲ್ಲಿ ಭಾಗಿಯಾಗಿ ಪರಿಹಾರಕ್ಕೆ ದಾರಿಯನ್ನು ಹೇಳಿಕೊಟ್ಟವರು ನಮ್ಮವರಾಗುತ್ತಾರೆ ಹಾಗಾಗಿ ನಾವು ನಮ್ಮವರನ್ನು ಕೊಂಡುಕೊಳ್ಳಬೇಕು.

ಏಳನೇ ಮಾತು ನೀವು ಸಾಧನೆ ಮಾಡಬೇಕು ಎಂದರೆ ದೂರ ಹೋಗಬೇಕಾಗುತ್ತದೆ.ನೀವು ನಿಮ್ಮ ಜೀವನದಲ್ಲಿ ಸಾಧನೆ ಮಾಡಬೇಕು ಎಂದರೆ ಕೆಲವೊಂದು ಸಂದರ್ಭದಲ್ಲಿ ನೀವು ತುಂಬಾದೂರ ಹೋಗಬೇಕಾಗುತ್ತದೆ. ಯಾಕೆಂದರೆ ನೀವು ದೂರ ಹೋಗುವುದರಿಂದ ಬದುಕುವ ದಾರಿಯನ್ನು ಕಲಿಯುತ್ತಿರಿ.ಬದುಕುವ ದಾರಿಯನ್ನು ಕಲಿಯುವ ಮುಖೇನ ಸಾಧನೆಯ ಹಾದಿಯನ್ನು ತುಳಿಯುತ್ತಿರಿ ಸಾಧನೆಯ ಹಾದಿಯನ್ನು ತಲುಪುವುದರಿಂದ ಸಾಧನೆಯನ್ನು ತಲುಪುವುದಕ್ಕೆ ಸಾಧ್ಯವಾಗುತ್ತದೆ. ನೀವು ಸಾಧನೆಯನ್ನು ಮಾಡಬೇಕು ಎಂದರೆ ದೂರ ಹೋಗಲೆ ಬೇಕು.

ಅದರಲ್ಲೂ ಯಾರು ನಿಮ್ಮನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೋ ಅವರಿಂದ ನೀವು ದೂರ ಹೋಗಬೇಕು ಇದರಲ್ಲಿ ಪೋಷಕರು ಇರುತ್ತಾರೆ. ತಂದೆ-ತಾಯಿಗಳು ಮಕ್ಕಳನ್ನು ತುಂಬಾ ಪ್ರೀತಿಯಿಂದ ಬೆಳೆಸಿರುತ್ತಾರೆ ಅದು ತಪ್ಪಲ್ಲ ಆದರೆ ಪ್ರತಿಯೊಂದು ಹಂತದಲ್ಲಿ ನೀವು ನಿಮ್ಮ ಮಕ್ಕಳಿಗೆ ಮಾರ್ಗದರ್ಶನವನ್ನು ಕೊಡುತ್ತಾ ಹೋದರೆ ನಿಮ್ಮ ಮಕ್ಕಳು ಯಾವಾಗ ಬದುಕನ್ನ ಕಲಿಯುತ್ತಾರೆ. ಅವರು ಯಾವಾಗ ಸಾಧನೆಯ ಗುರಿಯನ್ನು ಮುಟ್ಟುವುದಕ್ಕೆ ಸಾಧ್ಯವಾಗುತ್ತದೆ ಅದಕ್ಕೆ ನಾವೇ ಅಡ್ಡಿಯಾಗುತ್ತೆವೆ ಹಾಗಾಗಿ ಮಕ್ಕಳನ್ನು ಬೆಳೆಯಲು ಬಿಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಅವರಿಗೆ ಬಿಡಿ. ಹಾಗಾಗಿ ಸಾಧನೆಯನ್ನು ಮಾಡಬೇಕೆಂದರೆ ದೂರ ಹೋಗಲೇಬೇಕಾಗುತ್ತದೆ.

ಎಂಟನೆಯ ಮಾತು ನಾವು ಯಾವಾಗಲೂ ಸಕಾರಾತ್ಮಕವಾಗಿ ಯೋಚನೆಯನ್ನು ಮಾಡಬೇಕು. ನೀವು ನೋಡಬಹುದು ಕೆಲವೊಂದು ಸಂದರ್ಭಗಳಲ್ಲಿ ಮನುಷ್ಯ ಸಕಾರಾತ್ಮಕವಾಗಿ ಯೋಚನೆ ಮಾಡಬಹುದು ನಕಾರಾತ್ಮಕವಾಗಿಯು ಯೋಚನೆ ಮಾಡಬಹುದು. ನೀವು ನಕಾರಾತ್ಮಕವಾಗಿ ಯೋಚನೆ ಮಾಡಿದಾಗ ಇಗ ಆಗ ಬೇಕಾದಂತಹ ಕೆಲಸಗಳು ಅಥವಾ ಮುಂದೆ ಆಗಬಹುದಾದಂತ ಕೆಲಸಗಳು ಆಗುವುದಿಲ್ಲ ಅದೇ ನೀವು ಸಕಾರಾತ್ಮಕವಾಗಿ ಯೋಚನೆ ಮಾಡಲು ಪ್ರಾರಂಭಿಸಿದರೆ ಈಗ ಆಗಬೇಕಾದ ಅಂತಹ ಕೆಲಸಗಳು ಬೇಗನೆ ಆಗುತ್ತವೆ ಮುಂದೆ ಆಗಬೇಕಾದ ಕೆಲಸಗಳು ಯಶಸ್ವಿಯಾಗಿ ಆಗುತ್ತವೆ. ಸಮಯ ಸಂದರ್ಭ ವಸ್ತು ವ್ಯಕ್ತಿ ಏನೇ ಇರಲಿ ಅವುಗಳನ್ನು ಸಕಾರಾತ್ಮಕವಾಗಿ ಯೋಚಿಸುವಂತಹ ಮನೋಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಹಾಗಾಗಿ ನೀವು ಯಾವಾಗಲೂ ಸಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ರೂಢಿ ಮಾಡಿಕೊಳ್ಳಿ.

ಒಂಬತ್ತನೆಯ ಮಾತು ನೀವು ನಿಮ್ಮ ಕೆಲಸವನ್ನು ಆನಂದಿಸಿ ಮತ್ತು ಪ್ರೀತಿಸಿ. ಎಲ್ಲರೂ ಅವರವರ ಜೀವನಕ್ಕಾಗಿ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ ಕೆಲಸವನ್ನು ಮಾಡುವಾಗ ಸುಸ್ತಾಗುವಂತಹದ್ದು ಸಹಜ. ಸುಸ್ತಾದಾಗ ಕೆಲಸ ಮಾಡಬೇಕು ಎಂದರೆ ಆಗ ಸ್ವಲ್ಪ ಕಷ್ಟವಾಗುತ್ತದೆ ಆಗ ನಮಗೆ ಅನಿಸುತ್ತದೆ ದಿನದಲ್ಲಿ ಇಪ್ಪತ್ನಾಲ್ಕು ತಾಸುಗಳ ಬದಲಾಗಿ ಇಪ್ಪತ್ತಾರು ತಾಸು ಇದ್ದಿದ್ದರೆ ನಾನು ಎರಡು ತಾಸು ಹೆಚ್ಚಾಗಿ ಮಲಗುತ್ತಿದ್ದೆ ಎಂದು. ಅದೇ ರೀತಿ ನೀವು ಇನ್ನೊಂದು ವಿಚಾರವನ್ನು ಯೋಚನೆ ಮಾಡಬೇಕು ಯಾವುದೇ ಒಬ್ಬ ಸಾಧಕ ಸಾಧನೆ ಮಾಡಿದ್ದಾನೆ ಎಂದರೆ ನಾವು ಅವನನ್ನು ನೆನೆಸುತ್ತೆವೆ ಹೆಮ್ಮೆಪಡುತ್ತೇವೆ ಅವರನ್ನು ಹೊಗಳುತ್ತೇವೆ ಅದಕ್ಕೆ ಕಾರಣ ಅವರು ಅವರ ಕೆಲಸಕ್ಕೆ ತಮ್ಮನ್ನ ಅರ್ಪಿಸಿಕೊಂಡಿದ್ದು.

ಯೋಚನೆ ಮಾಡಿ ಅವರಿಗೂ ಇದ್ದಿದ್ದು ದಿನದಲ್ಲಿ ಇಪ್ಪತ್ನಾಲ್ಕು ಗಂಟೆ ನಮಗೂ ಇರುವುದು ದಿನಕ್ಕೆ ಇಪ್ಪತ್ನಾಲ್ಕು ಗಂಟೆ ಹಾಗಾದ್ರೆ ಅವರು ಯಾಕೆ ಸಾಧನೆಯನ್ನು ಮಾಡಿ ಸಾಧಕ ಎಂದು ಕರೆಸಿಕೊಂಡರು ನಾವ್ಯಾಕೆ ನಮಗೆ ಸಮಯ ಸಾಲುತ್ತಿಲ್ಲ ನಿದ್ದೆ ಮಾಡಬೇಕು ಎಂದುಕೊಳ್ಳುತ್ತಿದ್ದೇವೆ. ಇದರ ಅರ್ಥ ನಾವು ಮಾಡುವಂತಹ ಕೆಲಸವನ್ನು ಆನಂದಿಸಿದಾಗ ಪ್ರೀತಿಸಿದಾಗಾ ಸಮಯ ಹೋಗುವುದೇ ತಿಳಿಯುವುದಿಲ್ಲ. ನೀವು ಗಮನಿಸಿರುತ್ತೀರಿ ನಿಮಗೆ ಇಷ್ಟವಾದ ಕೆಲಸವನ್ನು ಮಾಡುವಾಗ ನನಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ ಎಂದು ಹೇಳಿ ಹೇಳಿ ಇರುತ್ತೀರಿ. ಹಾಗಾಗಿ ನೀವು ಮಾಡುವ ಕೆಲಸವನ್ನು ಆನಂದಿಸಿ ಪ್ರೀತಿಸಿ ಇದರಿಂದ ನೀವು ಕೂಡ ಸಾಧನೆಯನ್ನ ಮಾಡುವುದಕ್ಕೆ ಸಹಾಯವಾಗುತ್ತದೆ ಯಶಸ್ಸು ನಿಮ್ಮದಾಗುತ್ತದೆ.

ಇನ್ನೂ ಕೊನೆಯ ಮತ್ತು ಹತ್ತನೆಯ ಮಾತು ನಾವು ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು ನಿವು ಭೂತಕಾಲ ವರ್ತಮಾನಕಾಲ ಭವಿಷ್ಯತ್ಕಾಲ ಗಳು ಬಗ್ಗೆ ಕೇಳಿರುತ್ತೀರಿ ಭೂತಕಾಲದಲ್ಲಿ ಆದಂತಹ ಘಟನೆಗಳನ್ನು ವರ್ತಮಾನ ಕಾಲದಲ್ಲಿ ನೆನೆಸಿಕೊಳ್ಳುತ್ತೇವೆ ಹಾಗಾದರೆ ವರ್ತಮಾನ ಕಾಲದಲ್ಲಿ ನಡೆಯಬೇಕಾದ ಘಟನೆಗಳ ಬಗ್ಗೆ ನಾವ್ಯಾಕೆ ಯೋಚಿಸುವುದಿಲ್ಲ. ಇದು ಬಹಳ ಸೂಕ್ಷ್ಮವಾದ ಸಂಗತಿ ಆದರೂ ಕೂಡ ನಾವು ಇದನ್ನು ಯೋಚನೆ ಮಾಡುತ್ತಿಲ್ಲ. ಹಾಗಾಗಿ ನಾವು ನಮ್ಮ ಈಗಿನ ಸಮಯವನ್ನು ಈ ಕ್ಷಣವನ್ನು ಮತ್ತೆ ಮರುಕಳಿಸುವುದಕ್ಕೆ ಸಾಧ್ಯವಿಲ್ಲ ಮತ್ತೆ ನಾವು ಈ ಕ್ಷಣವನ್ನು ಮರುಸೃಷ್ಟಿ ಮಾಡುತ್ತೇವೆ ಎಂದರು ಅದು ಸಾಧ್ಯವಿಲ್ಲ. ಹಾಗಾಗಿ ನಾವು ಈ ಕ್ಷಣವನ್ನು ಈ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವಂತಹ ಯೋಜನೆಗಳನ್ನು ಜಾರಿಗೆ ತರಬೇಕು ಭೂತಕಾಲದಲ್ಲಿ ಆಗಿರುವ ವಿಚಾರಗಳನ್ನು ನೆನಪು ಮಾಡುತ್ತಾ ಭವಿಷ್ಯ ಕಾಲದಲ್ಲಿ ಆಗಬೇಕಾದ ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಾ ನಾವು ಈ ಕ್ಷಣವನ್ನು ದುರುಪಯೋಗ ಮಾಡಿಕೊಳ್ಳಬಾರದು. ಸಮಯ ತುಂಬಾ ಅಮೂಲ್ಯವಾದದ್ದು ಹಾಗಾಗಿ ಪ್ರತಿಯೊಂದು ಕ್ಷಣವನ್ನು ಅರ್ಥಪೂರ್ಣವಾಗಿ ಕಳೆಯುವ ಯೋಜನೆಯನ್ನು ನಾವು ಮಾಡಿಕೊಳ್ಳಬೇಕು.

ನೋಡಿದಿರಲ್ಲ ಸ್ನೇಹಿತರೆ ಕೃಷ್ಣನ ಅದ್ಭುತವಾದ ಈ ಹತ್ತು ಮಾತುಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ ಈ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಜೀವನದ ಗುರಿಯನ್ನು ತಲುಪುವುದಕ್ಕೆ ತುಂಬಾ ಸಹಾಯಕವಾಗುತ್ತದೆ.ನಮ್ಮ ಜೀವನದಲ್ಲಿ ಯಾವಾಗಲೂ ಸುಖ ಶಾಂತಿ ನೆಲೆಸಿರುತ್ತದೆ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!