ಶ್ರೀ ಹರಸಿದ್ಧಿ ದೇವಿ ದೇವಸ್ಥಾನ ಭಾರತದ 51 ಶಕ್ತಿಪೀಠಗಳಲ್ಲಿ 13ನೆಯ ಶಕ್ತಿಶಾಲಿ ಶಕ್ತಿಪೀಠವಾಗಿದೆ. ಈ ದೇವಸ್ಥಾನದ ಸಂಜೆಯ ಆರತಿ ಇಡೀ ವಿಶ್ವದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಕಾರಣ ಇಲ್ಲಿ 1001ದೀಪಗಳನ್ನು ಬೆಳಗಲಾಗುತ್ತದೆ. ಇಂತಹ ಅದ್ಭುತ ನೋಟವನ್ನು ಇಡೀ ವಿಶ್ವದಲ್ಲಿ ನೋಡಲು ಸಾಧ್ಯವಿಲ್ಲ. ನಾವು ಇಲ್ಲಿ ಹರಸಿದ್ಧಿ ದೇವಿಯ ದೇವಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇಲ್ಲಿ ದೀಪದ ಕಂಬದ ಮೇಲೆ ಹತ್ತಲು ಬಹಳ ಧೈರ್ಯ ಬೇಕು. ಇದು ಒಂದು ಸಾಹಸದ ಕೆಲಸವೇ ಸರಿ. ಇಲ್ಲಿ ಮೇಲೆ ಹತ್ತಲು ಬಹಳ ಭಕ್ತಿ ಇರಬೇಕು. ಹಾಗೆಯೇ ಬ್ರಹ್ಮಚಾರಿಗಳು ಮಾತ್ರ ಈ ದೀಪವನ್ನು ಹಚ್ಚಬೇಕು. ದೀಪ ಹಚ್ಚುವಾಗ ದೇವಿಯ ಆಶೀರ್ವಾದ ಇರಬೇಕು. ಆಶೀರ್ವಾದ ಇರುವುದರಿಂದಲೇ ಇಲ್ಲಿಯವರೆಗೆ ದೀಪ ಹಚ್ಚುವಾಗ ಯಾವುದೇ ರೀತಿಯ ದುರ್ಘಟನೆ ಸಂಭವಿಸಿಲ್ಲ. ಇಂತಹ ಅದ್ಭುತ ಆರತಿಯನ್ನು ನೋಡಲು ವಿಶ್ವದ ನಾನಾಕಡೆಯಿಂದ ಜನರು ಆಗಮಿಸುತ್ತಾರೆ. ಅದರಲ್ಲೂ ರಾತ್ರಿಯ ಸಮಯದಲ್ಲಿ ಲಕ್ಷಾಂತರ ಜನರು ಇಲ್ಲಿ ಬರುತ್ತಾರೆ.
ಪುರಾತನ ಭಾರತದ ಮಹಾನ್ ಚಕ್ರವರ್ತಿ ವಿಕ್ರಮಾದಿತ್ಯ ಹರಸಿದ್ಧಿ ದೇವಿಯನ್ನು ಆರಾಧಿಸುತ್ತಿದ್ದನು. 11ಬಾರಿ ತನ್ನ ತಲೆಯನ್ನು ದೇವಿಯ ಪಾದಕ್ಕೆ ಅರ್ಪಿಸಿದ್ದನು. ಆದರೆ ಆ ದೇವಿಯು ಪ್ರತೀ ಬಾರಿ ಅವನಿಗೆ ಮರುಜನ್ಮ ನೀಡಿದ್ದಳು. ಹಿಂದೆ ದಕ್ಷ ಪ್ರಜಾಪತಿಯು ಯಜ್ಞದಲ್ಲಿ ಶಿವನನ್ನು ಆಮಂತ್ರಿಸಿದ್ದಕ್ಕೆ ಸತಿ ಅಗ್ನಿ ಆಹುತಿ ಆದಾಗ ಶಿವನು ಸತಿಯ ಶವವನ್ನು ಹೊತ್ತು ಇಡೀ ಬ್ರಹ್ಮಾಂಡವನ್ನು ಸುತ್ತುತ್ತಿರುತ್ತಾನೆ. ಇದನ್ನರಿತ ದೇವಾನು ದೇವತೆಗಳು ಪ್ರಳಯದ ಸೂಚನೆಯನ್ನು ಕಂಡುಕೊಂಡು ವಿಷ್ಣುವಿನ ಹತ್ತಿರ ಬೇಡಿಕೊಳ್ಳುತ್ತಾರೆ. ಆಗ ವಿಷ್ಣುವು ತನ್ನ ಚಕ್ರದಿಂದ ಸತಿಯ ದೇಹವನ್ನು 51ತುಂಡುಗಳನ್ನಾಗಿ ಮಾಡುತ್ತಾನೆ.
ಆಗ ಒಂದೊಂದು ತುಂಡು ಭಾರತದ ಒಂದೊಂದು ಭಾಗದಲ್ಲಿ ಬೀಳುತ್ತವೆ. ಹಾಗೆಯೇ ಸತಿಯ ಮೊಣಕೈ ಬಿದ್ದಂತಹ ದೇವಾಲಯವೇ ಹರಸಿದ್ಧಿ ದೇವಸ್ಥಾನ ಆಗಿದೆ. ಆದ್ದರಿಂದ ಇದನ್ನು ಅತ್ಯಂತ ಶ್ರೇಷ್ಠ ಶಕ್ತಿಪೀಠ ಎಂದು ನಂಬಲಾಗುತ್ತದೆ. ನವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಇಲ್ಲಿನ ಅನ್ನಪೂರ್ಣೆ ದೇವಿಯನ್ನು ಕಡುಕೆಂಪು ಬಣ್ಣದಿಂದ ಚಿತ್ರಿಸಲಾಗಿದೆ. ದೇವಿ ಅನ್ನಪೂರ್ಣೆ ವಿಷ್ಣುವಿನ ಅರ್ಧಾಂಗಿಯಾಗಿದ್ದು ಜೀವನಕ್ಕೆ ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುತ್ತಾಳೆ. ಹೀಗಾಗಿ ಹರಸಿದ್ಧಿ ಎಂದು ಕರೆಯಲಾಗುತ್ತದೆ. ಈ ದೇವಿಯ ಆರಾಧನೆಯಿಂದ ಎಲ್ಲಾ ಸಿದ್ಧಿಗಳು ಪ್ರಾಪ್ತವಾಗುತ್ತವೆ ಎನ್ನುವ ನಂಬಿಕೆ ಜನರಲ್ಲಿ ಇದೆ.
ಹರಸಿದ್ಧಿ ದೇವಿಯನ್ನು ವಿಕ್ರಮಾದಿತ್ಯನು ಗುಜರಾತ್ ದಿಂದ ತಂದಿದ್ದನು. ಹಾಗಾಗಿ ಮಾತೆ ಹರಸಿದ್ಧಿಯು ಬೆಳಿಗ್ಗೆ ಗುಜರಾತ್ ನ ಹರಸದ್ ಎನ್ನುವ ದೇವಸ್ಥಾನದಲ್ಲಿ ಇರುತ್ತಾಳೆ. ಹಾಗೆಯೇ ಸಂಜೆ ವಿಶ್ರಾಂತಿಗಾಗಿ ಉಜ್ಜಯಿನಿಗೆ ಬರುತ್ತಾಳೆ. ಹಾಗೆಯೇ ಉಜ್ಜಯಿನಿ ಭೂಪಾಲದಿಂದ 180ಕಿಲೋಮೀಟರ್ ದೂರದಲ್ಲಿ ಇದೆ. ಹತ್ತಿರದ ವಿಮಾನ ನಿಲ್ದಾಣ ಇಂದೋರ್ ನಿಂದ 50ಕಿಲೋಮೀಟರ್ ದೂರದಲ್ಲಿ ಇದೆ. ಬೆಂಗಳೂರಿನಿಂದ ಇಂದೋರ್ ಗೆ ವಿಮಾನ ಹೋಗುತ್ತದೆ. ಹುಬ್ಬಳ್ಳಿ, ಧಾರವಾಡ ಮತ್ತು ಕಲಬುರ್ಗಿಯಿಂದ ಇಲ್ಲಿಗೆ ರೈಲ್ವೆ ವ್ಯವಸ್ಥೆ ಕೂಡ ಇದೆ.