ದೇವಸ್ಥಾನಗಳಲ್ಲಿ ಮಾಡುವ ಊಟವನ್ನು ಯಾರು ಮರೆಯುವುದಿಲ್ಲ ಮನೆಯಲ್ಲೇ ರುಚಿಯಾದ ದೇವಸ್ಥಾನಗಳಲ್ಲಿ ಮಾಡುವ ಸಾಂಬಾರನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ಬೇಕಾಗುವ ಸಾಮಗ್ರಿಗಳು ಎಣ್ಣೆ, ಸಾರಿಗೆ ಹಾಕುವ ಬೇಳೆಕಾಳುಗಳು, ಕರಿಬೇವು, 5-6 ಒಣಮೆಣಸು, ಕಾಯಿತುರಿ, ಕಟ್ ಮಾಡಿದ ಟೊಮೆಟೊ, ಬದನೆಕಾಯಿ, ಬೀನ್ಸ್, 4-5 ರೀತಿಯ ತರಕಾರಿಗಳನ್ನು ಹಾಕಬಹುದು, ಅರಿಶಿಣ, ಹುಣಸೇಹಣ್ಣಿನ ನೀರು, ಉಪ್ಪು, ಒಗ್ಗರಣೆಗೆ ಸಾಸಿವೆ.
ಮಾಡುವ ವಿಧಾನ ಒಂದು ಪ್ಯಾನ್ ಗೆ 2 ಸ್ಪೂನ್ ಎಣ್ಣೆ ಹಾಕಿ ಕಾದನಂತರ ಎಳ್ಳು, ಕೊತ್ತಂಬರಿ, ಕಡಲೆಬೇಳೆ ಇತರೆ ಬೇಳೆ ಕಾಳುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು ಇದಕ್ಕೆ ಸ್ವಲ್ಪ ಕರಿಬೇವಿನ ಸೊಪ್ಪು, 3-4 ಒಣಮೆಣಸು ಹಾಕಿ 5 ನಿಮಿಷ ಫ್ರೈ ಮಾಡಬೇಕು. ತಣ್ಣಗಾದ ನಂತರ ಅದಕ್ಕೆ ಕಾಯಿತುರಿ ಹಾಕಿ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಕಟ್ ಮಾಡಿಕೊಂಡ ತರಕಾರಿಗಳನ್ನು ಹಾಕಿ ಫ್ರೈ ಮಾಡಿ ನೀರು ಕರಿಬೇವು, ಅರಿಶಿಣ ಹಾಕಿ ಮುಚ್ಚಿ ಬೇಯಿಸಬೇಕು. ಬೆಂದನಂತರ ಅದಕ್ಕೆ ಹುಣಸೆಹಣ್ಣಿನ ನೀರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ನಿಮಿಷ ಬೇಯಿಸಿ ಅದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಕುದಿಸಬೇಕು. ಒಗ್ಗರಣೆಗೆ ಎಣ್ಣೆ ಹಾಕಿ ಕಾದನಂತರ ಸಾಸಿವೆ, 2-3 ಒಣಮೆಣಸು, 3-4 ಕರಿಬೇವು ಹಾಕಿ ನಂತರ ಅದನ್ನು ಕುದಿಯುತ್ತಿರುವ ಸಾಂಬಾರಿಗೆ ಹಾಕಿ ಮಿಕ್ಸ್ ಮಾಡಿದರೆ ರುಚಕರವಾದ ಸಾಂಬಾರು ಸಿದ್ಧವಾಯಿತು ಇದನ್ನು ಅನ್ನದೊಂದಿಗೆ ಸವಿಯಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.