ಈ ಸೆಪ್ಟೆಂಬರ್ ತಿಂಗಳಿನಲ್ಲಿ ಈ 6 ರಾಶಿಗಳಿಗೆ ಅತ್ಯಂತ ಒಳ್ಳೆಯ ಸಮಯ. ಇವರು ಮುಟ್ಟಿದ್ದೆಲ್ಲವು ಚಿನ್ನ ಆಗುತ್ತದೆ ಎಂದು ಹೇಳಬಹುದು. ಆ ರಾಶಿಗಳು ಯಾವವು ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಸೆಪ್ಟೆಂಬರ್ ನಿಮಗೆ ಒಳ್ಳೆಯ ಸಮಯ ಆಗಿದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ, ಕೆಲಸ ಮಾಡುತ್ತಿರುವವರಿಗೆ ಜವಾಬ್ದಾರಿ ಹೆಚ್ಚಿಗೆ ಇರುತ್ತದೆ. ನಿಮ್ಮ ಕೆಲಸಕ್ಕೆ ಬೇರೆಯವರು ಕ್ರೆಡಿಟ್ ಪಡೆದುಕೊಳ್ಳಬಹುದು. ಇದರಿಂದ ನಿಮ್ಮ ಮನಸ್ಸಿಗೆ ಬೇಸರ ಮಾಡಿಕೊಳ್ಳದೆ, ನಿಮ್ಮ ಕೆಲಸವನ್ನು ನೀವು ಮಾಡಿ ದೇವರಿಂದ ಪ್ರತಿಫಲ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಇದು ಶ್ರಮವಹಿಸಬೇಕಾದ ಸಮಯ. ದಂಪತಿಗಳ ನಡುವೆ ಬಾಂಧವ್ಯ ಇದ್ದರು ಕೂಡ ಸಣ್ಣ ಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ ಬರಬಹುದು. ಆಗ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕಬೇಕು. ಹೆಚ್ಚು ಒಳ್ಳೆಯ ಫಲ ಪಡೆಯುವುದಕ್ಕೆ ಓಂ ನಮೋ ಭಗವತೆ ವಾಸುದೇವಾಯ ನಮಃ ಮಂತ್ರವನ್ನು 108 ಸಾರಿ ಪಠಿಸಿ.
ವೃಷಭ ರಾಶಿ :- ಈ ರಾಶಿಯವರಿಗೆ ಸಹ ಸೆಪ್ಟೆಂಬರ್ ತಿಂಗಳು ಒಳ್ಳೆಯದು. ಈ ವೇಳೆ ಕೆಲಸ ಮಾಡುತ್ತಿರುವವರು, ಓದುತ್ತಿರುವವರು, ಬ್ಯುಸಿನೆಸ್ ಮಾಡುತ್ತಿರುವವರು, ದಾಂಪತ್ಯ ಜೀವನಕ್ಕೆ ತಯಾರಿ ನಡೆಸುತ್ತಿರುವವರು ಇವರೆಲ್ಲರಿಗೂ ಕೂಡ ಇದು ಒಳ್ಳೆಯ ಸಮಯ ಆಗಿದೆ. ತೀರ್ಥಕ್ಷೇತ್ರಕ್ಕೆ ಪ್ರಯಾಣ ಮಾಡಬಹುದು, ದಿಢೀರ್ ಧನಲಾಭ ಉಂಟಾಗುತ್ತದೆ, ಎಲ್ಲ ಕೆಲಸದಲ್ಲಿ ಶುಭಫಲ. ಇನ್ನು ಹೆಚ್ಚಿನ ಫಲ ಬೇಕು ಎಂದರೆ, ಮಂಗಳವಾರದ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ದೇವರ ಆಶೀರ್ವಾದ ಪಡೆದು, ಆಂಜನೇಯ ಸ್ವಾಮಿಯ ಪಾದದ ಹತ್ತಿರ ಇರುವ ಸಿಂಧೂರವನ್ನು ಹಣೆಗೆ ಹಚ್ಚಿಕೊಳ್ಳಿ. ವಾಹನ ಚಾಲನೆ ಮಾಡುವಾಗ ಕೂಲ್ ಆಗಿರಿ.
ಮಿಥುನ ರಾಶಿ :- ಮಿಥುನ ರಾಶಿಯವರಿಗೆ ಇದು ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಸಮಯ. ಈ ವೇಳೆ ಕೆಲಸ ಮಾಡುತ್ತಿರುವವರಿಗೆ ಪ್ರೊಮೋಷನ್, ವಿದೇಶ ಪ್ರಯಾಣ ಯೋಗ, ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ, ಕಾಂಪಿಟೇಟೀವ್ ಎಕ್ಸಾಂ ಗೆ ಪ್ರಿಪೇರ್ ಆಗುತ್ತಿರುವವರಿಗೆ ಒಳ್ಳೆಯ ಸಮಯ, ಮನೆ ಕಟ್ಟುವ ಯೋಗ, ದಂಪತಿಗಳ ನಡುವೆ ಸಾಮರಸ್ಯ, ಪ್ರೀತಿ ಇರುತ್ತದೆ. ಇನ್ನು ಹೆಚ್ಚಿನ ಫಲಕ್ಕಾಗಿ ಗುರುವಾರದ ದಿನ ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿನ ಹಾಕಿ ಸ್ನಾನ ಮಾಡಿ, ಇದರಿಂದ ನಿಮ್ಮ ಮುಖದ ವರ್ಚಸ್ಸು ಹೆಚ್ಚಾಗುತ್ತದೆ.
ಕರ್ಕಾಟಕ ರಾಶಿ ;- ಸೆಪ್ಟೆಂಬರ್ 18ರವರೆಗು ನಿಮ್ಮ ಎಲ್ಲಾ ಕೆಲಸಗಳು ನಿಧಾನಗತಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಲಸ್ಯ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಕೆಲಸಗಳಲ್ಲಿ ನಿಧಾನಗತಿ, ಬ್ಯುಸಿನೆಸ್ ಡಲ್ ಇರುತ್ತದೆ. 18ನೇ ತಾರೀಕಿನ ನಂತರ ಸರಿ ಹೋಗುತ್ತದೆ. ದಾಂಪತ್ಯ ಜೀವನದಲ್ಲಿ ಕೂಡ ಅದೇ ರೀತಿ ಇರುತ್ತದೆ. ಇನ್ಯಾವುದೇ ತೊಂದರೆ ಇಲ್ಲ. ಹೆಚ್ಚಿನ ಫಲಕ್ಕಾಗಿ ಗಜೇಂದ್ರ ಸ್ತೋತ್ರವನ್ನು ಕೇಳಿ. ಮನೆ ಒರೆಸುವ ನೀರಿಗೆ 2 ಚಿಟಿಕೆ ಉಪ್ಪು ಹಾಕಿ ಮನೆ ಒರಿಸಿದರೆ ನಿಮಗೆ ಶ್ರೇಷ್ಠ, ನೆಗಟಿವ್ ಎನರ್ಜಿ ಮನೆಯಿಂದ ಹೊರಟು ಹೋಗುತ್ತದೆ.
ಸಿಂಹ ರಾಶಿ :- ನಿಮಗೆ ಸೆಪ್ಟೆಂಬರ್ ತಿಂಗಳು ಅದ್ಭುತವಾಗಿರುತ್ತದೆ. ಈ ವೇಳೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಗ್ಯಾಸ್ಟ್ರಿಕ್ ಸಮಸ್ಯೆ ಬರಬಹುದು. ಹಾಗೆಯೇ ಕೋಪ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಕೆಲಸ ಮಾಡುತ್ತಿರುವವರು ಸಹೋದ್ಯೋಗಿಗಳ ಜೊತೆಗೆ ಕೋಪ ಮಾಡಿಕೊಳ್ಳದೆ ಉತ್ತಮವಾಗಿ ನಡೆದುಕೊಂಡರೆ ಒಳ್ಳೆಯದು. ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ, ಪರಿಹಾರಕ್ಕಾಗಿ ಸ್ನಾನ ಪೂಜೆ ಮಾಡಿದ ನಂತರ ಓಂ ಗಂ ಗಣಪತಯೇ ನಮಃ ಸ್ತೋತ್ರವನ್ನು ಹೇಳಿ ಮನೆಯಿಂದ ಹೊರಟರೆ, ಎಲ್ಲವೂ ಒಳ್ಳೆಯದಾಗುತ್ತದೆ. ಮಂಗಳವಾರದ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ದೇವರ ಆಶೀರ್ವಾದ ಪಡೆದು, ಆಂಜನೇಯ ಸ್ವಾಮಿಯ ಪಾದದ ಹತ್ತಿರ ಇರುವ ಸಿಂಧೂರವನ್ನು ಹಣೆಗೆ ಹಚ್ಚಿಕೊಳ್ಳಿ.
ಕನ್ಯಾ ರಾಶಿ :- ಈ ತಿಂಗಳು ನಿಮಗೆ ಮಾನಸಿಕವಾಗಿ ಕಿರಿಕಿರಿ ಉಂಟಾಗಬಹುದು. ಆಫೀಸ್ ನಲ್ಲಿ ಸಹೋದ್ಯೋಗಿಗಳ ಜೊತೆಗೆ ಕಿರಿಕಿರಿ ಉಂಟಾಗಬಹುದು. ನಿಮ್ಮ ಕೆಲಸದ ಕ್ರೆಡಿಟ್ ಬೇರೆಯವರು ತೆಗೆದುಕೊಂಡಿದ್ದಕ್ಕೆ ನಿಮಗೆ ಕೋಪ ಬರಬಹುದು, ನಿಮ್ಮ ಮೇಲೆ ಅವರು ನಿಮ್ಮ ಬಾಸ್ ಹತ್ತಿರ ದೂರು ಕೊಡಬಹುದು. ಹಾಗಾಗಿ ಆಫೀಸ್ ನಲ್ಲಿ ಎಲ್ಲರೊಡನೆ ಚೆನ್ನಾಗಿರಿ, ಆಫೀಸ್ ಮತ್ತು ಮನೆ ಎರಡು ಕಡೆ ಕೋಪ ಕಂಟ್ರೋಲ್ ಮಾಡಿ. ಸೆಪ್ಟೆಂಬರ್ 16ರ ನಂತರ ಬ್ಯುಸಿನೆಸ್ ನಲ್ಲಿ ದಿಢೀರ್ ಧನಲಾಭ ಉಂಟಾಗುತ್ತದೆ. ಹೆಚ್ಚಿನ ಲಾಭಕ್ಕೆ ವಿಷ್ಣುವಿನ ಅವತಾರ ಆಗಿರುವ ದೇವಸ್ಥಾನಕ್ಕೆ ಭೇಟಿ ನೀಡಿ. ನಿಮ್ಮ ಬ್ಯುಸಿನೆಸ್ ಸ್ಥಳದಲ್ಲಿ ಗಜೇಂದ್ರ ಮೋಕ್ಷ ಪ್ಲೇ ಮಾಡಿ. ಇದರಿಂದ ಒಳ್ಳೆಯದಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಸ್ವಲ್ಪ ಆಲಸ್ಯದ ಸಮಯ. ದಂಪತಿಗಳು ಶಾಂತಿ, ಮೂಲಮಂತ್ರದ ಹಾಗಿರಬೇಕು..
ತುಲಾ ರಾಶಿ :- ಈ ತಿಂಗಳು ನಿಮಗೆ ತುಂಬಾ ಒಳ್ಳೆಯದು, ಸಾಧನೆ ಮಾಡಬೇಕು ಎನ್ನುವ ಛಲ ಮೂಡುತ್ತದೆ, ಆಲಸ್ಯದಿಂದ ಹೊರಗೆ ಬರುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಪ್ರೊಮೋಷನ್, ರೈತರಿಗೆ ಬೆಳೆಯುವ ಬೆಳೆಗೆ ಹೆಚ್ಚು ಹಣ ಸಿಗುತ್ತದೆ. ಪರಿಹಾರಕ್ಕಾಗಿ ದಿನಕ್ಕೆ 11 ಸಾರಿ, ಉಗ್ರಂ ವೀರಂ ಮಹಾವಿಷ್ಣು ಜ್ವಲಂತಾಂ ಸರ್ವತೋಮುಕಮ್ ನರಸಿಂಹಮ್ ಭೀಷಣಂ ಭದ್ರಂ ಮೃತ್ಯೋರ್ಮುತ್ಯಂ ನಮಾಮ್ಯಮ್ ಮಂತ್ರವನ್ನು ಪಠಿಸಿ. ನಿಮಗೆ ಇದು ಒಳ್ಳೆಯ ಸಮಯ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ, ವಿದ್ಯಾರ್ಥಿಗಳಿಗೆ ಒಳ್ಳೆಯದು. ಈ ತಿಂಗಳು ನರಸಿಂಹ ದೇವರ ಪೂಜೆ, ಆರಾಧನೆ ಮಾಡುವುದು ಒಳ್ಳೆಯದು..
ವೃಶ್ಚಿಕ ರಾಶಿ :- ಈ ರಾಶಿಯವರಿಗೆ ಇದು ಒಳ್ಳೆಯ ಸಮಯ, ಆಸ್ತಿ ಖರೀದಿ, ವಾಹನ ಖರೀದಿ, ಧನಲಾಭ, ಕೆಲಸ ಮಾಡುತ್ತಿರುವವರಿಗೆ, ರೈತರಿಗೆ ಎಲ್ಲರಿಗೂ ಈ ತಿಂಗಳು ಒಳ್ಳೆಯ ಸಮಯ. ಹೆಚ್ಚು ಫಲ ಪಡೆಯಲು, ನಾಲ್ಕು ಶುಕ್ರವಾರ ಲಕ್ಷ್ಮಿ ದೇವಸ್ಥಾನಕ್ಕೆ 5 ಗುಲಾಬಿ ಹೂ, 1ಕೆಜಿ ಸಕ್ಕರೆ ಕೊಡಿ, ಇದರಿಂದ ಹಣಕಾಸಿನ ಲಾಭ ಆಗುತ್ತದೆ.
ಧನು ರಾಶಿ :- ಸೆಪ್ಟೆಂಬರ್ ತಿಂಗಳು ನಿಮಗೆ ಅದ್ಭುತವಾದ ಸಮಯ, ಸಾಡೇಸಾತಿ ಮುಗಿಸಿರುವುದರಿಂದ ಇದು ನಿಮಗೆ ತುಂಬಾ ಒಳ್ಳೆಯ ಸಮಯ. ಸಂತಾನ ಪ್ರಾಪ್ತಿಯಾಗುತ್ತದೆ, ವ್ಯಾಪಾರ ಕ್ಷೇತ್ರದಲ್ಲಿ ಹಿಂದೆಂದೂ ಕಂಡಿರದಷ್ಟು ಹಣ ಸಿಗುತ್ತದೆ. ವಿದೇಶ ಪ್ರಯಾಣ ಯೋಗವಿದೆ, ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಈ ವೇಳೆ ಒಳ್ಳೆಯ ಸಾಧನೆ ಮಾಡುತ್ತೀರಿ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಶತ್ರುನಾಶ ಆಗುತ್ತದೆ. ಇನ್ನು ಹೆಚ್ಚಿನ ಫಲ ಸಿಗಬೇಕು ಎಂದರೆ ದಿನಾ ಬೆಳಗ್ಗೆ ಮನೆದೇವರಿಗೆ ಪೂಜೆ ಮಾಡಿ, ಕೆಲಸಕ್ಕೆ ಹೋದರೆ ಇನ್ನು ಒಳ್ಳೆಯಫಲ ಸಿಗುತ್ತದೆ.
ಮಕರ ರಾಶಿ :- ಕೆಲಸಗಳು ನಿಧಾನವಾಗಿ ಸಾಗುತ್ತದೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ಬ್ಯುಸಿನೆಸ್ ಡಲ್ ಇರುತ್ತದೆ, ಚಿಂತೆ ಮಾಡಬೇಡಿ. ದಾಂಪತ್ಯ ಜೀವನದಲ್ಲಿ ಕಿರಿಕಿರಿ, ವ್ಯವಸಾಯ ಮಾಡುತ್ತಿರುವವರಿಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಿರಿಕಿರಿ ಉಂಟಾಗಬಹುದು. ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿ.
ಕುಂಭ ರಾಶಿ :– ನಿಮ್ಮ ಎಲ್ಲಾ ಕೆಲಸಗಳು ನಿಧಾನ ಆಗುತ್ತದೆ, ಇದರಿಂದ ಕಿರಿಕಿರಿ ಆಗುತ್ತದೆ. ವಿದ್ಯಾರ್ಥಿಗಳಿಗೆ, ವ್ಯಾಪಾರ ಮಾಡುತ್ತಿರುವವರಿಗ್ಗೆ ಕಿರಿಕಿರಿ ಆಗುತ್ತದೆ. ಇದು ಗ್ರಹಗತಿಯ ಕಾರಣದಿಂದ ಆಗುತ್ತದೆ. ಶನಿವಾರದ ದಿನ ವಿಷ್ಣುವಿನ ಅವತಾರದ ದೇವಸ್ಥಾನಕ್ಕೆ ಹೋಗಿ, ನಮಸ್ಕಾರ ಮಾಡಿ, ತುಳಸಿ ಅರ್ಚನೆ ಮಾಡಿಸಿ.
ಮೀನ ರಾಶಿ :- ನಿಮಗೆ ಈ ತಿಂಗಳು ಒಳ್ಳೆಯ ಸಮಯ, ಪ್ರೈವೇಟ್ ಕೆಲಸ, ಸರ್ಕಾರಿ ಕೆಲಸ, ಶಿಕ್ಷಕರು, ಎಲ್ಲರಿಗೂ ಇದು ಒಳ್ಳೆಯ ಸಮಯ. ಇನ್ನು ಹೆಚ್ಚು ಒಳ್ಳೆಯದಾಗಬೇಕು ಎಂದರೆ ಶನಿವಾರದ ದಿನ ಶನಿದೇವರ ದೇವಸ್ಥಾನಕ್ಕೆ ಹೋಗಿ, ಊಟ ಬಡಿಸುವ ಕೆಲಸ ಮಾಡಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.