ಕೊರೊನಾ ಎರಡನೇ ಅಲೆ ಅರ್ಭಟದಿಂದಾಗಿ ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಯುವಕರೇ ಅಧಿಕ ಎಂಬ ವಿಚಾರ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆ ಸೋಂಕಿತರ ಪೈಕಿ ಶೇಕಡಾ 36 ರಷ್ಟು ಯುವ ಜನರಿದ್ದಾರೆ. ಸಾವಿನ ಪ್ರಮಾಣ ವಯಸ್ಸಾದವರಲ್ಲಿ ಹೆಚ್ಚು ಎಂದು ಕೋವಿಡ್ ವಾರ್ ರೂಂ ವರದಿ ಹೇಳಿದೆ. ಕೊರೊನಾ ಹೆಚ್ಚಾಗಿ ವೃದ್ಧರನ್ನು ಸಹ ಬಾಧಿಸುತ್ತದೆ. ಯುವ ಪೀಳಿಗೆಗೆ ಅಷ್ಟು ತೊಂದರೆ ನೀಡಲ್ಲ ಎಂಬ ನಿರ್ಲಕ್ಷ್ಯ ಧೋರಣೆ ಸೋಂಕು ಹರಡಲು ಮತ್ತು ಹೆಚ್ಚಾಗಲು ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ. ಇತರ ಮಕ್ಕಳೊಂದಿಗೆ ಆಟವಾಡುವ ಮಕ್ಕಳು ವೈರಸ್ ಮನೆಗೆ ತರುತ್ತಿದ್ದಾರೆ. ಇದರಿಂದ ಇಡೀ ಕುಟುಂಬಕ್ಕೆ ಸೋಂಕು ಹರಡುತ್ತಿರುವ ಆತಂಕ ಎದುರಾಗಿದೆ. ಹೀಗಿದ್ದಾಗ ಕೋರೋನ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿರುವ ಕಾರಣಕ್ಕೆ ಮನೆಮಂದಿಯಲ್ಲೆ ಯಾರಿಗಾದರೂ ಕೋರೋನ ಬಂದರೆ ಅವರನ್ನು ಸ್ಪರ್ಶಿಸಲು ಹಿಂಜರಿಯುತ್ತಾರೆ ಹೀಗಿದ್ದಾಗ ಇಲ್ಲೊಬ್ಬ ಹೆಣ್ಣು ಮಗಳು ತನ್ನ ಕೋರೋನ ಸೋಂಕಿತ ಮಾವನನ್ನು ಮನೆಯಿಂದ ಆಸ್ಪತ್ರೆಯವರೆಗೂ ತಾನೇ ಹೊತ್ತುಕೊಂಡು ಬಂದಿದ್ದಾಳೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಾವು ಹಿಂದೆ ಪುರಾಣಗಳ ಕಥೆಗಳಲ್ಲಿ ದ್ವಾಪರಾ ಯುಗದಲ್ಲಿ ಶ್ರೀ ಕೃಷ್ಣನ ಜನನವಾದ ಸಂದರ್ಭದಲ್ಲಿ ಕಂಸನಿಂದ ಕೃಷ್ಣನ ಪ್ರಾಣ ಉಳಿಸುವ ಸಲುವಾಗಿ ತಂದೆ ವಾಸುದೇವ ಮಧ್ಯರಾತ್ರಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನೂ ಸಹ ಲೆಕ್ಕಿಸದೆ ಭಗಾವನ್ ಶ್ರೀ ಕೃಷ್ಣನನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಹೋಗಿ ತುಂಬಿ ಹರಿಯುತ್ತಿರುವ ನದಿಯನ್ನು ದಾಟಿ ನಂದಗೋಕುಲದಲ್ಲಿ ಯಶೋದೆಯ ಬಳಿ ಬಿಟ್ಟು ಬಂದ ಕಥೆ ನಾಮಗೆಲ್ಲ ತಿಳಿದೇ ಇದೆ ಈ ಕಥೆಯನ್ನು ನಾವು ಸಾಕಷ್ಟು ಬಾರಿ ಕೇಳಿದ್ದೇವೆ ಹಾಗೂ ಟಿವಿಯಲ್ಲಿ ಸಿನಿಮಾ ಧಾರಾವಾಹಿಗಳ ಮೂಲಕ ನೋಡಿದ್ದೇವೆ ಕೂಡಾ. ಅದೇ ರೀತಿ ಈಗ ಕಲಿಯುಗದಲ್ಲಿ ಕೂಡಾ ಇದೆ ರೀತಿಯ ಒಂದು ಘಟನೆ ನಡೆದಿದೆ. ಒಬ್ಬಳು ಹೆಣ್ಣು ಮಗಳು ತನ್ನ ಮಾವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಅವರ ಪ್ರಾಣ ರಕ್ಷಣೆ ಮಾಡಿದ ಘಟನೆ ಒಂದು ನಡೆದಿದೆ. ಏನಿದು ಈ ಘಟನೆ? ಎಲ್ಲಿ ನಡೆದಿರುವುದು ಎನ್ನುವುದನ್ನು ವಿವರವಾಗಿ ನೋಡೋಣ.
ಅತ್ತೆ ಮಾವ ಅಂದರೆ ಮೂಗು ಮುರಿಯುವಂತಹ ಈ ಕಾಲದಲ್ಲಿ ಮಹಿಳೆ ಕೊರೊನಾ ಚಿಕಿತ್ಸೆಗಾಗಿ ತನ್ನ ಮಾವನನ್ನು ಹೊತ್ತು ಸಾಗುವ ಮೂಲಕವಾಗಿ ಮಾನವೀಯತೆಯ ಜೊತೆಗೆ ಸಂಬಂಧದ ಮೌಲ್ಯವನ್ನು ಸಾರಿದ್ದಾಳೆ. ತನ್ನ ಕೊರೊನಾ ಸೋಂಕಿತ ಮಾವನನ್ನು ಸೊಸೆ ಹೆಗಲ ಮೇಲೆ ಹೋತ್ತುಕೊಂಡು ಹೋಗಿ ಆಸ್ಪತ್ರೆಗೆ ಸಾಗಿಸಿರುವ ಈ ಘಟನೆ ನಡೆದಿರುವುದು ಭವನೇಶ್ವರದಲ್ಲಿ. ತುಳೇಶ್ವರ್ ದಾಸ್ ಎಂಬ ಹೆಸರಿನ ಎಪ್ಪತ್ತೈದು ವರ್ಷ ವಯಸ್ಸಿನ ವೃದ್ಧ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಈತನ ಮಗ ಸೂರಜ್ ಕೆಲಸದ ನಿಮಿತ್ತ ಬೇರೆ ಊರಿನಲ್ಲಿ ವಾಸವಾಗಿದ್ದಾನೆ. ಹೀಗಾಗಿ ಮನೆಯ ಪೂರ್ತಿ ಜವಾಬ್ದಾರಿ ಸೊಸೆ ನಿಹಾರಿಕಾ ಮೇಲೆಯೇ ಇತ್ತು. ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿದ್ದಂತೆ ಏನು ಮಾಡುವುದು ಎಂದು ತಿಳಿಯದೇ ಗೊಂದಲಕ್ಕೆ ಈಡಾದ ನಿಹಾರಿಕ ಮಾವನನ್ನು ಹೊತ್ತುಕೊಂಡು ಕೋವಿಡ್ ಸೆಂಟರ್ಗೆ ತೆರೆಳಿದ್ದಾಳೆ.
ಕೋರೋನ ಸೋಂಕಿನಿಂದ ಬಳಲುತ್ತ ಇದ್ದ ತನ್ನ ಮಾವನನ್ನು ಮನೆಯಲ್ಲಿ ಬೇರೆ ಯಾರೂ ಇಲ್ಲದ ಕಾರಣ ಮಾವನೊಬ್ಬನನ್ನೇ ಕೊರೊನಾ ಕೇಂದ್ರಕ್ಕೆ ಕಳುಹಿಸಲು ನಿಹಾರಿಕಾ ನಿರಾಕರಿಸಿದ್ದಾಳೆ. ಹೀಗಿದ್ದಾಗ ಒಬ್ಬಳೇ ಏನು ಮಾಡಬೇಕು ಎಂದು ತಿಳಿಯದೇ ಮನೇಯಿಂದ ಕೋವಿಡ್ ಸೆಂಟರ್ ವರೆಗೆ ಮಾವನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾಳೆ. ನಂತರ ಇವರ ಕಷ್ಟ ನೋಡಿ ಇದಕ್ಕೆ ಸ್ಪಂದಿಸಿದ ಆಸ್ಪತ್ರೆ ಸಿಬ್ಬಂದಿ ಅಂಬ್ಯುಲೆನ್ಸ್ನಲ್ಲಿ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಾವನನ್ನು ಆಸ್ಪತ್ರೆಗೆ ದಾಖಲಿಸಿದ ಸೊಸೆ ನಿಹಾರಿಕಳನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ವೈದ್ಯರು ಸೂಚನೆ ನೀಡಿದ್ದಾರೆ. ತನ್ನ ಪ್ರಾಣ ಲೆಕ್ಕಿಸದೇ ಕೊರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಧಾವಿಸಿದ ನಿಹಾರಿಕ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.