Solar touch for electric auto: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರತಿಭೆಗಳು ಬೆಳಕಿಗೆ ಬರ್ತಿದ್ದಾರೆ, ಈ ವ್ಯಕ್ತಿ ಮಾಡಿರುವಂತ ಕೆಲಸ ಇದೀಗ ಸಮಾಜೂಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲೆಕ್ಟ್ರಿಕ್ ಆಟೋ ಖರೀದಿಸಿ ಅದಕ್ಕೆ ಸೋಲಾರ್ ಸಿಸ್ಟಮ್ ಅಪ್ಡೇಟ್ ಮಾಡಿಕೊಂಡಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ರೇಟ್ ಜಾಸ್ತಿ ಆಗಿರುವುದರಿಂದ ಹಾಗೂ ಇವುಗಳ ಬಳಕೆಯಿಂದ ಎಲ್ಲೆಡೆ ವಾಯುಮಾನ್ಯ ಪರಿಣಾಮ ಬೀರುತ್ತಿದೆ, ಹಾಗಾಗಿ ಸರ್ಕಾರ ಕೂಡ ಕೆಲವು ಡೀಸೆಲ್ ವಾಹನಗಳನ್ನು ಕಡಿತ ಮಾಡಿದೆ. ಇನ್ನೂ ಪೆಟ್ರೋಲ್ ಬೆಲೆ ಏರಿಕೆಯಿಂದ ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಆಟೋ ಓಡಿಸುವವರಿಗೆ ಪೆಟ್ರೋಲ್ ರೇಟ್ ನಿಂದ ಹೆಚ್ಚು ಹಣ ಗಳಿಸಲು ಆಗೋದಿಲ್ಲ ಈಗಿರುವಾಗ ಈ ವ್ಯಕ್ತಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುತ್ತಾರೆ.

ಈತನ ಸೋಲಾರ್ ಐಡಿಯಾಗೆ ಮಗಳೇ ಸ್ಪೂರ್ತಿ
ಹೌದು ಮಗಳು ಆಟೋಗೆ ಸೋಲಾರ್ ಹೇಗೆ ಅಳವಡಿಸಬೇಕು ಎಂಬುದಾಗಿ ಮಗಳು ಯೂಟ್ಯೂಬ್ ನೋಡಿ ತಂದೆಗೆ ಹೇಳಿದ್ದಾಳೆ, ಈ ಮೂಲಕ ಈ ವ್ಯಕ್ತಿ ತಮ್ಮ ಆಟೋವನ್ನು ಸಂಪೂರ್ಣವಾಗಿ ಸೋಲಾರ್ ಅಪ್ಡೇಟ್ ಮಾಡಿಕೊಂಡಿದ್ದಾರೆ, ಅಷ್ಟಕ್ಕೂ ಇದರಿಂದ ಇವರ ಆಟೋ ಒಂದೇ ಚಾರ್ಜ್ ಗೆ ಬರೋಬ್ಬರಿ 140 ಕಿ.ಮೀ ಮೈಲೇಜ್ ನೀಡುತ್ತಿದೆ.

Solar touch for electric auto

ಅಷ್ಟಕ್ಕೂ ಈ ವ್ಯಕ್ತಿ ಯಾರು ಎಂಬುದಾಗಿ ನೋಡಿದಾಗ ಒಡಿಶಾದ 35 ವರ್ಷದ ಶ್ರೀಕಾಂತ್ ಪಾತ್ರಾ ಹಲವು ವರ್ಷಗಳಿಂದ ವೃತ್ತಿಯಲ್ಲಿ ಆಟೋ ಚಾಲಕ. ಸುಮಾರು 15 ವರ್ಷಗಳಿಂದ ಇವರು ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿರುವದಾಗಿ ಹೇಳಿಕೊಂಡಿದ್ದಾರೆ. ಒಡಿಶಾದ ರಾಜಧಾನಿ ಭುವನೇಶ್ವರ ಸಮೀಪದ ನಯಾಗರ್ ಜಿಲ್ಲೆಯಲ್ಲಿ ಕುಟುಂಬದ ಜೊತೆ ವಾಸಿಸುತ್ತಿರುವ ಈತ ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಆಟೋವನ್ನು ಸೋಲಾರ್ ಆಟೋವನ್ನಾಗಿ ಪರಿವರ್ತಿಸಿದ್ದಾನೆ.

ಎಲೆಕ್ಟ್ರಿಕ್ ಆಟೋಗೆ ಸೋಲಾರ್ ಅಳವಡಿಸಲು ಮುಖ್ಯ ಕಾರಣವೇನು?
ಎಲೆಕ್ಟ್ರಿಕ್ ಆಟೋ ಓಡಿಸುವಾಗ ಕಡಿಮೆ ಬ್ಯಾಟರಿ ಮತ್ತು ಚಾರ್ಜಿಂಗ್ ಸಮಸ್ಯೆಯು ಪ್ರತಿದಿನವೂ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಈ ಹಿಂದೆ ಇಂಧನ ಚಾಲಿತ ಆಟೋದಂತೆ ಕೂಡ ಇದನ್ನು ಓಡಿಸಲು ಸಾಧ್ಯವಾಗಲಿಲ್ಲ ಅದರಿಂದ ಸೋಲಾರ್ ಅಳವಡಿಸಿಕೊಂಡಿದ್ದಾರೆ ಇದರಿಂದ ಪ್ರತಿದಿನ 1000 ದಿಂದ 1500 ಸಾವಿರದವರೆಗೆ ಉಳಿತಾಯವಾಗುತ್ತಿದೆ ಇದೀಗ ನೆಮ್ಮದಿಯ ಜೀವನ ನಡೆಸುತ್ತಿದಿನಿ ಎಂಬುದಾಗಿ ಹೇಳಿಕೊಂಡಿದ್ದಾರೆ. ಅದೇನೇ ಇರಲಿ ಇವರ ಇವರ ಈ ಸೂಪರ್ ಐಡಿಯಾಗೆ ಸಲಾಂ ಅಂತಿದ್ದಾರೆ ನೆಟ್ಟಿಗರು (ಇದನ್ನೂ ಓದಿ) ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್ ನ್ಯೂಸ್, 4045 ಕ್ಲರ್ಕ್ ಹುದ್ದೆಗಳು ಖಾಲಿ ಇವೆ ಕೂಡಲೇ ಅರ್ಜಿಹಾಕಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!