ನಾವಿಂದು ನಿಮಗೆ ತಿಳಿಸುತ್ತಿರುವ ವಿಷಯ ಎಲ್ಲರೂ ಕೂಡ ಮನೆಯಲ್ಲಿಯೇ ದುಡ್ಡನ್ನು ಸುಲಭವಾಗಿ ಸಂಪಾದಿಸುವುದು. ನೀವು ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಅಳವಡಿಸಿಕೊಂಡು ಅದರಿಂದ ಬರುವ ವಿದ್ಯುತನ್ನು ಹೆಸ್ಕಾಂ ನವರಿಗ ಮಾರಾಟ ಮಾಡಿದರೆ ನೀವು ಪ್ರತಿ ತಿಂಗಳು ಹಣವನ್ನು ಗಳಿಸಬಹುದು ಅಂತಹ ಒಂದು ಪ್ರೋಸೆಸ್ ಇದೆ ಸಿಸ್ಟಮ್ ಇದೆ ಅದರ ಬಗ್ಗೆ ನಾವಿಂದು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಇದಕ್ಕೆ ಅರ್ಜಿಯನ್ನು ಕೂಡ ಆಹ್ವಾನಿಸಲಾಗಿದೆ ನೀವು ಪ್ರತಿ ತಿಂಗಳು ಆದಾಯವನ್ನು ಗಳಿಸಬೇಕು ಎಂಬುದು ನಮ್ಮ ಉದ್ದೇಶ ಹಾಗಾಗಿ ಈ ಸೋಲಾರ್ ಸಿಸ್ಟಮ್ ಅನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ
ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದಿಂದ ಸಾಮಾನ್ಯವಾಗಿ ಕರ್ನಾಟಕದ ಏಳು ಜಿಲ್ಲೆಗಳಿಗೆ ಹುಬ್ಬಳ್ಳಿ ವಿದ್ಯುತ್ ನಿಗಮದಿಂದ ವಿದ್ಯುತನ್ನು ಸರಬರಾಜು ಮಾಡಲಾಗುತ್ತದೆ. ಈ ವಿದ್ಯುತ್ ಸರಬರಾಜು ಮಾಡುವ ನಿಗಮದಿಂದ ಸೌರ ಮೇಲ್ಛಾವಣಿ ಯೋಜನೆ ಎರಡರ ಅಡಿಯಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವ ಉದ್ದೇಶಕ್ಕಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ.
ಇದರ ಉದ್ದೇಶ ನೇರವಾಗಿ ತೋರುತ್ತದೆ ನಿಮ್ಮ ಮನೆಯ ಮೇಲ್ಚಾವಣಿಗಳ ಮೇಲೆ ಸೌರ ವಿದ್ಯುತ್ತನ್ನು ಅಳವಡಿಸಿಕೊಂಡು ಅದನ್ನು ನಿಮ್ಮ ಮನೆಗೆ ಬಳಸಬಹುದು ನಿಮ್ಮ ಮನೆಗೆ ಬಳಸಿ ಹೆಚ್ಚುವರಿ ವಿದ್ಯುತ್ ಅನ್ನು ನೀವು ಹೆಸ್ಕಾಂ ಅವರಿಗೆ ಮಾರಾಟ ಮಾಡಬಹುದು. ಕೆಲವರಿಗೆ ಯಾವ ರೀತಿಯಾಗಿ ಸೌರ ವಿದ್ಯುತ್ತನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಗೊಂದಲಗಳು ಉಂಟಾಗುತ್ತದೆ.
ಅದು ತುಂಬಾ ಸುಲಭವಾಗಿದೆ ನೀವೇನಾದರೂ ಹೊಸ ಸ್ಲಾಪಿನ ಮನೆಯನ್ನು ಕಟ್ಟಿಕೊಂಡಿದ್ದರೆ ನಿಮ್ಮ ಮನೆಯ ಮೇಲ್ಚಾವಣಿ ಸಿಮೆಂಟಿನಿಂದ ನಿರ್ಮಿಸಿದ್ದಾಗಿದ್ದಲ್ಲಿ ನೀವು ಸೋಲಾರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಬಹುದು. ಆ ಪ್ಲೇಟುಗಳಲ್ಲಿ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದನೆ ಆಗುತ್ತದೆ ಆ ವಿದ್ಯುತ್ತನ್ನು ನೀವು ಪ್ರತಿ ತಿಂಗಳು ಹೆಸ್ಕಾಂ ಅವರಿಗೆ ಮಾರಾಟ ಮಾಡಬಹುದು.
ನೀವು ವಿದ್ಯುತ್ತನ್ನು ಹೆಸ್ಕಾಂನವರಿಗೆ ಸರಬರಾಜು ಮಾಡುವುದೇ ಆದಲ್ಲಿ ಅವರು ನಿಮಗೆ ಒಂದು ಮೀಟರನ್ನು ಅಳವಡಿಸಿಕೊಡುತ್ತಾರೆ ಇದರಿಂದ ಪ್ರತಿ ತಿಂಗಳು ಎಷ್ಟು ಆದಾಯ ಬರುತ್ತದೆ ಅಷ್ಟು ಹಣವನ್ನು ಹೆಸ್ಕಾಂ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತದೆ. ಹಾಗಾದರೆ ಸೋಲಾರ್ ವಿದ್ಯುತ್ ಪ್ಲೇಟ್ ಗಳನ್ನು ಯಾವ ರೀತಿಯಾಗಿ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇಲ್ಲದಿದ್ದಲ್ಲಿ ನೀವು ಸೋಲಾರ್ ವೆಬ್ಸೈಟ್ಗೆ ಲಾಗಿನ್ ಆಗಿ ಅರ್ಜಿಯನ್ನು ಸಲ್ಲಿಸಬಹುದು.
ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಅದಕ್ಕಿಂತ ಮೊದಲು ಇದರಿಂದ ಆಗುವ ಲಾಭಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಈ ಸೋಲಾರ್ ಸಿಸ್ಟಮನ್ನು ಅಳವಡಿಸಿಕೊಂಡು ನಿಮ್ಮ ಮನೆಗೆ ಎಷ್ಟು ವಿದ್ಯುತ್ ಬೇಕು ಅಷ್ಟನ್ನು ಉತ್ಪಾದಿಸಿ ಹೆಚ್ಚುವರಿ ಉಳಿದಿರುವುದನ್ನು ಹೆಸ್ಕಾಂ ಅವರಿಗೆ ನೀಡಿ ನೀವು ಹಣವನ್ನು ಗಳಿಸಿ. ಇದುವರೆಗೆ ಕೈಗಾರಿಕಾ ವಲಯದಲ್ಲಿ ಮತ್ತು ಕೃಷಿ ವಲಯದಲ್ಲಿ ಅಳವಡಿಸುತ್ತಿದ್ದ ದೊಡ್ಡಮಟ್ಟದ ಸೋಲಾರ್ ಛಾವಣಿಗಳಿಗೆ ದೊಡ್ಡಮಟ್ಟದ ಹಣ ಖರ್ಚಾಗುತ್ತಿತ್ತು.
ಜನಸಾಮಾನ್ಯರು ಸೋಲಾರ್ ವಿದ್ಯುತ್ ಅನ್ನ ಬಳಸುವ ಆಸೆ ಇದ್ದರೂ ದುಬಾರಿ ವೆಚ್ಚದಿಂದಾಗಿ ಹಿಂದೆ ಸರಿಯುವಂತೆ ಆಗುತ್ತಿತ್ತು ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಎಂ ಎನ್ ಆರ್ ಇ ವತಿಯಿಂದ ಸಬ್ಸಿಡಿ ದರದಲ್ಲಿ ಸೋಲಾರ್ ಪ್ಲೇಟುಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಸೌರ ಮೇಲ್ಚಾವಣಿ ಯೋಜನೆ ಎರಡನ್ನು ಆರಂಭಿಸಲಾಗಿದೆ. ವಸತಿ ಮತ್ತು ಗುಂಪು ವಸತಿ ಸಮುದಾಯ ವಸತಿ ಕಲ್ಯಾಣ ಸಂಘದ ಗ್ರಾಹಕರಿಗೆ ನೆಟ್ ಮೀಟರಿಂಗ ಆಧಾರದ ಮೇಲೆ ಸೌರ ಮೇಲ್ಚಾವಣಿಯನ್ನು ಸ್ಥಾಪಿಸಲು ಹತ್ತು ಕಿಲೋವ್ಯಾಟ್ ವರೆಗೆ ಸಹಾಯಧನ ನೀಡುವ ಯೋಜನ ಇದಾಗಿದೆ.
ವಿದ್ಯುತ್ತನ್ನು ಉತ್ಪಾದಿಸುವಂತಹ ಸೋಲಾರ್ ಸಿಸ್ಟಮ್ ಅನ್ನು ನೀವು ಅಳವಡಿಸಿಕೊಳ್ಳಲು ನಿಮಗೆ ಸಬ್ಸಿಡಿ ಸಹಾಯಧನ ನೀಡಲಾಗುತ್ತದೆ. ಸಬ್ಸಿಡಿ ರಿಯಾಯಿತಿ ಯಾವ ರೀತಿ ಇದೆ ಎಂದು ನೋಡುವುದಾದರೆ ವಸತಿ ಗ್ರಾಹಕರಿಗೆ ಶೇಕಡ ನಲವತ್ತರಷ್ಟು ಮೂರು ಕಿಲೋವ್ಯಾಟ್ ವರೆಗೆ, ಜೊತೆಗೆ ಇಪ್ಪತ್ತು ಶೇಕಡಾ ಮೂರು ಕಿಲೋ ವ್ಯಾಟ್ ವರೆಗೆ ಮತ್ತು ಮೇಲ್ಪಟ್ಟು ಹತ್ತು ವ್ಯಾಟ್ ವರೆಗೆ, ಗುಂಪು ವಸತಿ ಸಮುದಾಯ ಮತ್ತು ಕಲ್ಯಾಣ ವಸತಿ ಸಂಘದ ಗ್ರಾಹಕರಿಗೆ ಶೇಕಡ ಇಪ್ಪತ್ತರಷ್ಟು ಅಂದರೆ ಪ್ರತಿ ಮನೆಗೆ ಹತ್ತು ಕಿಲೋ ವ್ಯಾಟ್ ನಿಂದ ಐದುನೂರು ಕಿಲೋ ವ್ಯಾಟ್ ವರೆಗೆ ಅಂತ ಮಾಹಿತಿಯನ್ನು ನೀಡಿದ್ದಾರೆ. ಅಂದರೆ ಒಂದು ವೇಳೆ ನೀವು ಮೂರು ಕಿಲೋವ್ಯಾಟ್ ವರೆಗೆ ನೀವು ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿಕೊಂಡರೆ ನಿಮಗೆ ಶೇಕಡ ನಲವತ್ತರಷ್ಟು ಸಬ್ಸಿಡಿ ಸಿಗುತ್ತದೆ ನೀವು ಮೂರು ಕಿಲೋವ್ಯಾಟ್ ಮೇಲ್ಪಟ್ಟು ಹತ್ತು ಕಿಲೋ ವ್ಯಾಟ್ ವರೆಗೆ ಸೋಲಾರ್ ಸಿಸ್ಟಮ್ ನಲ್ಲಿ ಅಳವಡಿಸಿಕೊಂಡರೆ ನಿಮಗೆ ಇಪ್ಪತ್ತು ಶೇಕಡಾ ಸಬ್ಸಿಡಿ ಸಿಗುತ್ತದೆ.
ಇದರಿಂದ ಏನು ಉಪಯೋಗ ಎಂಬುದನ್ನು ನೋಡುವುದಾದರೆ ನಿಮ್ಮ ಮನೆಗೆ ನೀವೇ ವಿದ್ಯುತ್ತನ್ನ ಸಂಪಾದಿಸಿ ನೀವು ಬಳಸಬಹುದು. ಎರಡನೆಯ ಅಂಶ ನೀವು ತಿಂಗಳ ವಿದ್ಯುತ್ ಬಿಲ್ಲನ್ನು ಉಳಿತಾಯ ಮಾಡಬಹುದು. ಇನ್ನು ನೀವು ಹೆಚ್ಚುವರಿಯಾಗಿ ಉಳಿದಿರುವಂತಹ ವಿದ್ಯುತ್ತನ್ನ ಇಪ್ಪತ್ತೈದು ವರ್ಷಗಳವರೆಗೆ ಹೆಸ್ಕಾಂಗೆ ಮಾರಾಟ ಮಾಡಿ ಹಣ ಸಂಪಾದಿಸಬಹುದು.
ಸಾಮಾನ್ಯವಾಗಿ ಮನೆಯ ಮೇಲ್ಚಾವಣಿ ಖಾಲಿ ಇರುತ್ತದೆ ಅದನ್ನು ಬಳಸುವುದು ತುಂಬಾ ಕಡಿಮೆ ನೀವು ಅಲ್ಲಿ ಸೋಲಾರ್ ಪ್ಲೇಟುಗಳನ್ನು ಅಳವಡಿಸಿಕೊಂಡರೆ ಪ್ರತಿ ದಿನ ಅದಕ್ಕಾಗಿ ಕೆಲಸ ಮಾಡಬೇಕು ಎಂಬುದಿರುವುದಿಲ್ಲ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ ಅದನ್ನು ನಿಮ್ಮ ಮನೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಗಳಿಗೆ ವರ್ಗಾಯಿಸುತ್ತಾರೆ ಆಟೋಮೆಟಿಕ್ ಆಗಿ ವಿದ್ಯುತ್ ಟ್ರಾನ್ಸ್ಫರ್ ಆಗುತ್ತಿರುತ್ತದೆ ಮೀಟರ್ ಕೂಡ ಓಡುತ್ತಿರುತ್ತದೆ. ಎಷ್ಟು ವಿದ್ಯುತ್ ಉತ್ಪಾದನೆ ಆಗಿದೆ ಅಷ್ಟು ಆದಾಯ ನಿಮಗೆ ಬರುತ್ತಾ ಹೋಗುತ್ತದೆ.
ಈ ಒಂದು ಯೋಜನೆಗೆ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು ಎಂದರೆ http: //solar rooftop.gov.in ಈ ವೆಬ್ಸೈಟ್ ಅನ್ನು ಓಪನ್ ಮಾಡಿ. ಆಗ ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಅಪ್ಲೈ ಫಾರ್ ಸೋಲಾರ್ ರೂಫ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಮತ್ತೊಂದು ಫೇಜ್ ಓಪನ್ ಆಗುತ್ತದೆ ಅಲ್ಲಿ ರಾಜ್ಯಗಳ ಹೆಸರು ಇರುತ್ತದೆ ಅಲ್ಲಿ ನೀವು ಕರ್ನಾಟಕವನ್ನು ಸೆಲೆಕ್ಟ್ ಮಾಡಿ ಅಲ್ಲಿ ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮಗೊಂದು ಅರ್ಜಿ ನಮೂನೆ ಕಾಣಿಸುತ್ತದೆ ಅದರಲ್ಲಿ ಕೇಳುವ ಮಾಹಿತಿಗಳನ್ನು ಭರ್ತಿಮಾಡಿ ಅದನ್ನು ಸಬ್ಮಿಟ್ ಮಾಡಬೇಕು.
ನೋಡಿದರಲ್ಲಿ ಸ್ನೇಹಿತರೆ ಈ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ನೀವು ಕೂಡ ಹಣವನ್ನು ಸಂಪಾದಿಸಬಹುದು ನೀವು ಕೂಡ ಈ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿಕೊಂಡು ಸುಲಭವಾಗಿ ಹಣವನ್ನು ಗಳಿಸಬಹುದು ಸುಮಾರು ಇಪ್ಪತ್ತೈದು ವರ್ಷಗಳವರೆಗೆ ನೀವು ಈ ಸೋಲಾರ್ ಸಿಸ್ಟಮ್ ನಿಂದ ಹಣವನ್ನು ಗಳಿಸಬಹುದಾಗಿದೆ. ಈ ಮಾಹಿತಿ ತುಂಬ ಉಪಯುಕ್ತವಾಗಿದ್ದು ನೀವು ಇದರ ಲಾಭವನ್ನು ಪಡೆದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೂ ಇದರ ಮಾಹಿತಿಯನ್ನು ತಿಳಿಸಿ.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430