ಪ್ರತಿಯೊಬ್ಬ ವ್ಯಕ್ತಿಗೆ ನಿದ್ರೆ ಅವಶ್ಯಕವಾಗಿದೆ. ಮಲಗುವಾಗ ಯಾವ ಭಂಗಿಯಲ್ಲಿ ಮಲಗುವುದು ಉತ್ತಮ ಹಾಗೂ ಅದರ ಪ್ರಯೋಜನಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಸರಿ ಸುಮಾರು ಮೂರನೇ ಒಂದು ಭಾಗದಷ್ಟು ನಿದ್ರೆ ಮಾಡುತ್ತಾನೆ. ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ 6-8 ಗಂಟೆ ಮಲಗಬೇಕು. ಉತ್ತಮ ಆರೋಗ್ಯ ಹೊಂದಲು ನಿದ್ರೆ ಅವಶ್ಯಕ. ಉತ್ತಮ ನಿದ್ರೆ ಇದ್ದರೆ ಸದೃಢ ದೇಹ, ಉತ್ಸಾಹಭರಿತ ಮನಸ್ಸು, ಉತ್ತಮ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. ಆಧುನಿಕ ಜೀವನ ಶೈಲಿಯಲ್ಲಿ ನಿದ್ರೆಯ ಬಗ್ಗೆ ಕಾಳಜಿವಹಿಸುವುದು ಅವಶ್ಯಕವಾಗಿದೆ.

ನಾವು ಮಲಗುವ ಭಂಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಭಂಗಿಯಲ್ಲಿ ಮಲಗದೆ ಇದ್ದರೆ ಬೆನ್ನುನೋವು, ಕುತ್ತಿಗೆ ನೋವು, ಹೊಟ್ಟೆ ನೋವು, ಹೃದಯದ ಸಮಸ್ಯೆ, ನಿದ್ರಾಹೀನತೆ, ಜೀರ್ಣ ಕ್ರಿಯೆಯ ಸಮಸ್ಯೆ, ಎದೆಉರಿ, ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಹಾಸಿಗೆಯಲ್ಲಿ ನೇರವಾಗಿ ಬೆನ್ನ ಮೇಲೆ ಮಲಗುವುದು ಅತ್ಯತ್ತುಮ ಭಂಗಿಯಾಗಿದೆ. ಈ ರೀತಿ ಮಲಗುವುದರಿಂದ ರಕ್ತ ಪರಿಚಲನೆ ಉತ್ತಮವಾಗುತ್ತದೆ, ಉಸಿರಾಟ ಸಮರ್ಪಕವಾಗಿರುತ್ತದೆ. ಈ ರೀತಿ ಮಲಗಿದಾಗ ಕೆಲವರಿಗೆ ಗೊರಕೆ ಸಮಸ್ಯೆ ಕಾಣಿಸಿಕೊಳ್ಳಬಹುದು ಇದಕ್ಕೆ ಕಾರಣ ಮೂಗಿನ ಒಳಭಾಗವು ಹೆಚ್ಚು ಸಡಿಲಗೊಳ್ಳುವುದಾಗಿದೆ.

ಮಲಗುವಾಗ ದೇಹಕ್ಕೆ ಆಧಾರ ನೀಡುವ ಹಾಸಿಗೆಯ ಮೇಲೆ ಮಲಗಬೇಕು. ಹೊಟ್ಟೆಯ ಮೇಲೆ ಮಲಗಬಾರದು. ದೇಹದ ಒತ್ತಡ ಹೊಟ್ಟೆಯ ಮೇಲೆ ಬೀಳುತ್ತದೆ ಇದರಿಂದ ಬೆನ್ನು ನೋವು, ಕುತ್ತಿಗೆ ನೋವು ಬರುತ್ತದೆ. ಅಲ್ಲದೇ ತಲೆನೋವು ಹಾಗೂ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಬಲ ಮಗ್ಗುಲಲ್ಲಿ ಮಲಗಬಾರದು. ಹೀಗೆ ಮಲಗಿದರೆ ಎದೆ ಉರಿ, ಹುಳಿ ತೇಗು, ಅಜೀರ್ಣ, ಹೃದಯ ಸಮಸ್ಯೆ ಬರುತ್ತದೆ.

ಎಡ ಮಗ್ಗುಲಲ್ಲಿ ಮಲಗುವುದು ಉತ್ತಮವಾಗಿದೆ. ಬೆನ್ನು ನೋವಿನಿಂದ ಬಳಲುವವರು ಎಡ ಮಗ್ಗುಲಲ್ಲಿ ಮಲಗಬೇಕು ಹಾಗೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ದೇಹದ ಅಂಗಾಂಗಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಮೂತ್ರಪಿಂಡ ಮತ್ತು ಯಕೃತ್ ನ ಕಾರ್ಯಕ್ಷಮತೆ ಹೆಚ್ಚುತ್ತದೆ, ಜೀರ್ಣ ಕ್ರಿಯೆಗೆ ಉತ್ತಮವಾಗಿದೆ. ಗರ್ಭಿಣಿಯರು ಎಡ ಮಗ್ಗುಲಲ್ಲಿ ಮಲಗುವುದು ಉತ್ತಮವಾಗಿದೆ. ಆದರೆ ಒಂದೇ ಮಗ್ಗುಲಲ್ಲಿ ಮಲಗಬಾರದು ಭುಜದ ನೋವು ಬರುವ ಸಾಧ್ಯತೆ ಇರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!