ಸ್ಕಿನ್ ಟ್ಯಾಗ್ ನರುಳ್ಳಿ ಈ ಸಮಸ್ಯೆಯನ್ನು ಬಹಳಷ್ಟು ಜನರು ಎದುರಿಸುತ್ತಿದ್ದಾರೆ. ಈ ಸಮಸ್ಯೆಯು ಬರಲು ಇಂಥದ್ದೇ ಕಾರಣವಿರುವುದಿಲ್ಲ ಈ ಸಮಸ್ಯೆಗೆ ಮನೆಯಲ್ಲಿ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದರೆ ಸ್ಕಿನ್ ಟ್ಯಾಗ್ ನಿವಾರಿಸಿಕೊಳ್ಳಲು ಏನೆಲ್ಲಾ ಮನೆಮದ್ದುಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಚರ್ಮದ ಸಮಸ್ಯೆಯಾದ ನರುಳ್ಳಿ ಇದು ಕೂಡ ವೈರಸ್ ಆಗಿದ್ದು ದಪ್ಪ ಇರುವವರಿಗೆ ಹೆಚ್ಚಾಗಿ ಕಾಣಿಸುತ್ತದೆ ಮತ್ತು ದೇಹದಲ್ಲಿ ವಿಟಮಿನ್ ಅಂಶ ಕಡಿಮೆಯಾದಾಗ ಬರುತ್ತದೆ. ಕುತ್ತಿಗೆ ಮತ್ತು ಕಣ್ಣಿನ ಮೇಲೆ ಹೆಚ್ಚಾಗಿ ಬರುತ್ತದೆ. ಈ ಸಮಸ್ಯೆಗೆ ಪೈನಾಪಲ್ ಸೇವಿಸುವುದು ಉತ್ತಮ ಪರಿಹಾರ. ಪ್ರತಿದಿನ ಒಂದು ಗ್ಲಾಸ್ ಪೈನಾಪಲ್ ಜ್ಯೂಸ್ ಅನ್ನು 3 ತಿಂಗಳು ಕುಡಿಯುವುದರಿಂದ ನರುಳ್ಳಿ ಸಮಸ್ಯೆ ನಿವಾರಣೆಯಾಗುತ್ತದೆ. ಪೈನಾಪಲ್ ವೈರಸ್ ಅನ್ನು ಕೊಲ್ಲುವ ವಿಶೇಷ ಗುಣವನ್ನು ಹೊಂದಿದೆ. ಕ್ಯಾಸ್ಟ್ರೋಲ್ ಅಥವಾ ಹರಳೆಣ್ಣೆಯನ್ನು ಪ್ರತಿದಿನ ನರುಳ್ಳಿಗೆ ಹಚ್ಚುವುದರಿಂದ ಸಾಫ್ಟ್ ಆಗುತ್ತದೆ. ಪಪ್ಪಾಯ ಮತ್ತು ಹಾಲನ್ನು ಮಿಕ್ಸ್ ಮಾಡಿ ಪ್ರತಿನಿತ್ಯ ಹಚ್ಚುವುದರಿಂದ ನರುಳ್ಳಿ ಮೃದುವಾಗಿ ಕಡಿಮೆ ಆಗುತ್ತಾ ಬರುತ್ತದೆ. ಬಟಾಟೆಯನ್ನು ಸ್ಲೈಸ್ ರೀತಿ ಕಟ್ ಮಾಡಿ ಅದನ್ನು ನರುಳ್ಳಿ ಮೇಲೆ ಪ್ರತಿದಿನ ವತ್ತಿದರೆ ನರುಳ್ಳಿ ಕ್ರಮೇಣ ಕಡಿಮೆಯಾಗುತ್ತದೆ. ಶುದ್ಧವಾದ ಜೇನುತುಪ್ಪವನ್ನು ನರುಳ್ಳಿ ಮೇಲೆ ಹಚ್ಚಬೇಕು ಇದರಿಂದ ನರುಳ್ಳಿ ನಿವಾರಣೆಯಾಗುತ್ತದೆ.
ಬೆಳ್ಳುಳ್ಳಿ ಪೇಸ್ಟ್, ಪೈನಾಪಲ್ ಪೇಸ್ಟ್ ಮಾಡಿಕೊಂಡು ಮೊದಲು ಬೆಳ್ಳುಳ್ಳಿ ಪೇಸ್ಟ್ ನರುಳ್ಳಿ ಮೇಲೆ ಹಚ್ಚಿ 5 ನಿಮಿಷ ಬಿಟ್ಟು ಅದನ್ನು ತೆಗೆದು ಪೈನಾಪಲ್ ಪೇಸ್ಟ್ ಹಚ್ಚಿ ಪುನಃ ಬೆಳ್ಳುಳ್ಳಿ ಪೇಸ್ಟ್ ಹಚ್ಚಬೇಕು. ಈ ರೀತಿ ದಿನಕ್ಕೆ ಎರಡು ಸಲ ಹಚ್ಚುವುದರಿಂದ ನರುಳ್ಳಿ ಕಡಿಮೆಯಾಗುತ್ತದೆ. ಆಲೊವೆರಾ ಜಲ್ ಮತ್ತು ಅರಿಶಿಣ ಮಿಕ್ಸ್ ಮಾಡಿ ನರುಳ್ಳಿಗೆ ಹಚ್ಚುವುದರಿಂದ ಕಡಿಮೆ ಆಗುತ್ತದೆ. ಟೀ ಟ್ರೀ ಆಯಿಲ್ ನರುಳ್ಳಿಗೆ ಹಚ್ಚುವುದರಿಂದ ನರುಳ್ಳಿ ಕಡಿಮೆಯಾಗುತ್ತದೆ. ಟೀ ಟ್ರೀ ಆಯಿಲ್ ಆಯುರ್ವೇದ ಅಂಗಡಿಯಲ್ಲಿ ಸಿಗುತ್ತದೆ. ಒಂದು ಬಾಳೇಹಣ್ಣನ್ನು ಅರ್ಧ ಕಟ್ ಮಾಡಿ ಸಿಪ್ಪೆ ತೆಗೆದು ಸಿಪ್ಪೆಯನ್ನು ಚೆನ್ನಾಗಿ ತೊಳೆದು ಸಣ್ಣ ಸಣ್ಣ ಪೀಸ್ ಆಗಿ ಕಟ್ ಮಾಡಿ ಒಂದು ಬೌಲ್ ನಲ್ಲಿ ಹಾಕಿ ಎರಡು ಸ್ಪೂನ್ ಆಪಲ್ ಸೈಡರ್ ವಿನೆಗರ್ ಅನ್ನು ಹಾಕಿ ಎರಡು ಗಂಟೆ ನೆನೆಸಿ ನಂತರ ನರುಳ್ಳಿ ಮೇಲೆ ರಬ್ ಮಾಡಬೇಕು ಇದರಿಂದ ನರುಳ್ಳಿ ನಿವಾರಣೆಯಾಗುತ್ತದೆ.
ಬಿಸಿಲಿನಲ್ಲಿ ಹೆಚ್ಚು ಹೋಗುವುದರಿಂದಲೂ ನರುಳ್ಳಿ ಆಗುತ್ತದೆ. ಸ್ಕಿನ್ ಅನ್ನು ಡ್ರೈ ಆಗಿಟ್ಟುಕೊಳ್ಳಬೇಕು. ಹೆಚ್ಚು ಬೇವರುವುದರಿಂದ ನರುಳ್ಳಿ ಆಗುತ್ತದೆ. ಒಂದು ಉದ್ದ ಕೂದಲನ್ನು ತೆಗೆದುಕೊಂಡು ಹೊರಗಡೆ ಬಂದಿರುವ ಚರ್ಮಕ್ಕೆ ಸುತ್ತಿ ಪ್ರತಿದಿನ ವತ್ತುತ್ತಾ ಇದ್ದರೆ ನರುಳ್ಳಿ ಲೂಸಾಗಿ ನಾಲ್ಕೈದು ದಿನದ ನಂತರ ಹೋಗುತ್ತದೆ. ಆಪಲ್ ಸೈಡರ್ ವಿನೆಗರ್ ನಲ್ಲಿ ಕಾಟನ್ ಅನ್ನು ಡಿಪ್ ಮಾಡಿ ಸ್ಕಿನ್ ಟ್ಯಾಗ್ ಮೇಲೆ ಇಡಬೇಕು ಹೀಗೆ ಪ್ರತಿದಿನ ನಾಲ್ಕೈದು ಬಾರಿ ಮಾಡಿದರೆ ನಾಲ್ಕೈದು ದಿನದಲ್ಲಿ ಉದುರಿಹೋಗುತ್ತದೆ. ಸ್ಕಿನ್ ಟ್ಯಾಗ್ ಒಂದು ದೊಡ್ಡ ಸಮಸ್ಯೆಯೇನಲ್ಲ ಅನೇಕ ಪರಿಹಾರಗಳಿವೆ. ಇವುಗಳಲ್ಲಿ ಯಾವುದೆ ಒಂದು ಮನೆಮದ್ದನ್ನು ಅನುಸರಿಸಿದರೂ ಇಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.