ದೇಹಕ್ಕೆ ಬೇಕಾದ ಪೌಷ್ಟಿಕಾಹಾರವನ್ನು ಡ್ರೈ ಪ್ರುಟ್ಸ್ ಹೆಚ್ಚಾಗಿ ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಡ್ರೈ ಪ್ರುಟ್ಸ್ ನಲ್ಲಿ ಗೊಡಂಬಿ, ಒಣ ದ್ರಾಕ್ಷಿ, ಬಾದಾಮಿ, ಉತ್ತುತ್ತೆ, ಮುಂತಾದವು ಬರುತ್ತದೆ. ಇವುಗಳಲ್ಲಿ ಒಂದಾದ ಬಾದಾಮಿಯ ಬಗ್ಗೆ ಮಾಹಿತಿ ಇಲ್ಲಿದೆ. ಬಾದಾಮಿಯಲ್ಲಿ ಯಾವ ತರಹದ ಪೌಷ್ಟಿಕತೆ ಇರುತ್ತದೆ ಎಂಬ ಮಾಹಿತಿ ಇಲ್ಲಿದೆ. ಬಾದಾಮಿಯನ್ನು ನೆನೆಸಿಟ್ಟು ತಿನ್ನಬೇಕು ಎನ್ನುತ್ತಾರೆ ಯಾಕೆಂದರೆ ಬಾದಾಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ಜಿಂಕ್, ಕ್ಯಾಲ್ಸಿಯಂ, ಮ್ಯಾಗ್ನಿಶಿಯಂ, ಮ್ಯಾಂಗನಿಸ್, ಹಾಗೂ ವಿಟಮಿನ್ ಇ ಇದೆ. ಇದು ದೇಹದಲ್ಲಿ ಇರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹಾಗೂ ಹೃದಯದ ತೊಂದರೆ ಹೋಗಲಾಡಿಸುತ್ತದೆ. ತ್ವಚೆಯು ಸುಂದರವಾಗಿ ಹಾಗೂ ನುಣುಪಾಗುವಂತೆ ಮಾಡುತ್ತದೆ. ನಮ್ಮ ಮೆದುಳನ್ನು ಚುರುಕಾಗಿಸುತ್ತದೆ. ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಬಾದಾಮಿ ಹಲ್ಲು ಹಾಗೂ ಮೂಳೆಯನ್ನು ಬಲಶಾಲಿಯಾಗಿ ಮಾಡುತ್ತದೆ.
ಕೂದಲಿನ ಸಮಸ್ಯೆಯನ್ನು ಬಾದಾಮಿ ನಿವಾರಿಸುತ್ತದೆ. ಅನಿಮಿಯಾ ಬರದಂತೆ ತಡೆಯುತ್ತದೆ. ಕ್ಯಾನ್ಸರ್ ರೋಗದ ವಿರುದ್ದ ಹೋರಾಡುತ್ತದೆ. ದಿನಕ್ಕೆ ನಾಲ್ಕರಿಂದ ಐದು ನೆನೆಸಿ ಸಿಪ್ಪೆ ತೆಗೆದ ಬಾದಾಮಿ ತಿನ್ನುವುದು ಗರ್ಭಿಣಿಯರಿಗೆ ಒಳ್ಳೆಯದು. ಗರ್ಭಿಣಿಯರಿಗೆ ಬೇಕಾದ ಪೋಲಿಕ್ ಪ್ರಮಾಣ ಬಾದಾಮಿಯಲ್ಲಿ ತುಂಬಾ ಇರುತ್ತದೆ. ಮಧುಮೇಹ ಇರುವವರಿಗೆ ಬಾದಾಮಿ ಉತ್ತಮವಾಗಿದೆ. ಜೀರ್ಣಕ್ರಿಯೆಗೆ ಇದು ಸಹಾಯ ಮಾಡುತ್ತದೆ. ಬಾದಾಮಿಯನ್ನು ಸಿಪ್ಪೆ ತೆಗೆದು ಯಾಕೆ ತಿನ್ನಬೇಕು ಎಂಬ ಪ್ರಶ್ನೆಗೆ ಉತ್ತರ ಬಾದಾಮಿಯ ಸಿಪ್ಪೆ ಅಜೀರ್ಣ, ಗ್ಯಾಸ್, ಮಲಬದ್ಧತೆ ಸಮಸ್ಯೆಗಳನ್ನು ತರುತ್ತದೆ. ಹಾಗಾಗಿ ಬಾದಾಮಿಯ ನೆನೆಸಿ ಸಿಪ್ಪೆ ತೆಗೆದು ತಿನ್ನಬೇಕು ಎಂದು ಹೇಳುವುದು. ಕೆಲವೊಮ್ಮೆ ಈ ಸಿಪ್ಪೆ ಬಾದಾಮಿಯಲ್ಲಿರುವ ಪೋಷಕಾಂಶಗಳನ್ನು ದೇಹ ಸೇರಲು ಬಿಡುವುದಿಲ್ಲ ಎಂಬ ಮಾತು ಇದೆ. ಬಾದಾಮಿಯನ್ನು ಎಂಟರಿಂದ ಹತ್ತು ಗಂಟೆಗಳ ವರೆಗೆ ನೆನೆಸಿಡಬೇಕು . ಹೀಗೆ ದಿನಕ್ಕೆ ನಾಲ್ಕರಿಂದ ಐದು ಬಾದಾಮಿಯನ್ನು ಮಕ್ಕಳಿಗೆ, ವಯಸ್ಸಾದವರಿಗೆ ಕೊಡುವುದರಿಂದ ಅವರ ಮೆದುಳು ಚುರುಕಾಗುತ್ತದೆ ಹಾಗೂ ದೇಹಕ್ಕೆ ಶಕ್ತಿ ಒದಗಿಸುತ್ತದೆ.