ಯಾರೇ ಆದರೂ ಅವರಿಗೆ ಸೈಟ್ ಖರೀದಿ ಮಾಡುವ ಆಸೆ ಇರುತ್ತದೆ. ಆದರೆ ಸೈಟ್ ಖರೀದಿ ಮಾಡುವ ಮುನ್ನ ಈ ದಾಖಲೆ ಪರಿಶೀಲನೆ ಮಾಡುವುದು ಕಂಪಲ್ಸರಿ ( compulsory)
ಯಾವುದೇ ಜಮೀನು ಅಥವಾ ಸೈಟು ಖರೀದಿ ಮಾಡುವ ಮೊದಲು ಹತ್ತಾರು ಬಾರಿ ಯೋಚಿಸಿ ಪರಿಚಯಸ್ಥರ ಬಳಿ ವಿಚಾರ ಮಾಡಿ ಕೈ ಹಾಕಬೇಕು. ಅದರಲ್ಲಿ, ಈ ನಗರ ಪ್ರದೇಶದಲ್ಲಿ ಆಸ್ತಿ ಮಾಡುವುದಾದರೆ ಖಾಲಿ ನಿವೇಶನ ಆಗಲಿ ಮನೆ ನಿರ್ಮಾಣ ಮಾಡಿರುವ ಜಾಗ ಯಾವುದೇ ಇರಲಿ ಈ ಸಮಯದಲ್ಲಿ ಎಷ್ಟು ಜಾಗೃತೆ ವಹಿಸಿದರೂ ಅದು, ಕಡಿಮೆ. ಏಕೆಂದರೆ ಒಂದೇ ಸೈಟ್ ಅನ್ನು ಒಂದೇ ಬಾರಿ 4-5 ಮಂದಿಗೆ ಮಾರಾಟ ಮಾಡಿ ದ್ರೋಹ ಮಾಡುವ ಜನರು ಇರುತ್ತಾರೆ ಅಥವಾ ಬೇರೆಯವರ ಹೆಸರಿನಲ್ಲಿ ಇರುವ ಭೂಮಿಯನ್ನು ತಮ್ಮದು ಎಂದು ಸುಳ್ಳು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಹಣ ಲಪಟಾಯಿಸುತ್ತಿದ್ದಾರೆ. ಅದರಿಂದ, ಈ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು ಹೇಗೆ? ಆಸ್ತಿ ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಅಗತ್ಯವಾಗಿ ಪರೀಕ್ಷೆ ಮಾಡಬೇಕು? ಎನ್ನುವುದರ ಕುರಿತು ತಿಳಿಯೋಣ;

ಯಾವ ರೀತಿಗಳಲ್ಲಿ ದ್ರೋಹ ಆಗಬಹುದು :-

  • ಈ ಮೇಲೆ ಹೇಳಿರುವಂತೆ ಒಂದೇ ಆಸ್ತಿಯನ್ನು ಹೆಚ್ಚುವರಿ ಜನರಿಗೆ ಮಾರಾಟ ಮಾಡಿರಬಹುದು.
  • ಸರ್ಕಾರಿ ಭೂಮಿಯನ್ನು ಸ್ವಂತದ್ದು ಎಂದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರಬಹುದು.
  • ಸರ್ಕಾರಿ ಸೌಕರ್ಯಕ್ಕೆ ಮೀಸಲಿರುವ ಆಸ್ತಿಯನ್ನು ಮಾರಾಟ ಮಾಡಬಹುದು.
  • ರಸ್ತೆ ಅಳತೆಯನ್ನು ಸಹ ಸೈಟ್’ಗೆ ಸೇರಿಸಿ ಜಾಸ್ತಿ ಇದೆ ಎಂದು ಹೇಳಿ ಹಣ ತೆಗೆದು ಕೊಂಡಿರಬಹುದು.
  • ಹಲವು ವರ್ಷ ಕಳೆದ ಮೇಲೆ ಅದೇ, ಸೈಟ್ ನಲ್ಲಿ ರಾಜಕಾಲುವೆ, ಸಾರ್ವಜನಿಕ ರಸ್ತೆ, ಕಾಲುದಾರಿ ಇಲ್ಲವೇ ರಸ್ತೆ ಅಗಲೀಕರಣಕ್ಕೆ ಬಳಕೆ ಮಾಡಿಕೊಳ್ಳಲು ನಿಯೋಜಿಸಿರುವ ಭೂಮಿ ಆಗಿರಬಹುದು.
  • ಕೃಷಿ ಭೂಮಿಯನ್ನು ವಸತಿ ಪ್ರದೇಶ ಎಂದು ಸುಳ್ಳು ಹೇಳಿ ಮಾರಾಟ ಮಾಡಿರಬಹುದು. ಕೃಷಿ ಭೂಮಿಯನ್ನು ಲೇಔಟ್ ಮಾಡದೆ ಸೈಟ್ ಮಾಡಿ ಮಾರಾಟ ಮಾಡಿರಬಹುದು.
  • ಖರೀದಿದಾರ ಮತ್ತು ಮಾರಾಟ ಮಾಡುವವರ ನಡುವೆ ಇರುವ ಬ್ರೋಕರ್ ಹೆಚ್ಚು ಹಣ ವಸೂಲಿ ಮಾಡಬಹುದು.
  • ಪೂರ್ಣ ಹಕ್ಕು ಹೊಂದಿರದ ಆಸ್ತಿಗಳನ್ನು ತಮ್ಮದೇ ಎಂದು ಬಿಂಬಿಸಿ ಮಾರಾಟ ಮಾಡಿರುತ್ತಾರೆ.
  • ನಗರಸಭೆ ಅನುಮತಿ ಇಲ್ಲದೆ ಮಾರಾಟ ಮಾಡಿರುವುದು
  • ಸೈಟ್ ಖರೀದಿ ಮಾಡಿ ಮನೆ ನಿರ್ಮಾಣ ಮಾಡುವುದಾದರೆ, ನಗರ ಪ್ರದೇಶದಲ್ಲಿ ಸಾಕಷ್ಟು ಇಲಾಖೆಯಿಂದ ಪರ್ಮಿಷನ್ ಪಡೆದಿರಬೇಕು. ಇದ್ಯಾ ವ ಪರ್ಮಿಷನ್ ಪಡೆಯದೆ ಅಕ್ರಮವಾಗಿ ಕಟ್ಟಿ ಅನ್ಯಾಯ ಮಾಡಿ ಮಾರಾಟ ಮಾಡಿದ್ದರೆ ನಂತರ ಖರೀದಿ ಮಾಡಿದ ಜನ ಸಮಸ್ಯೆ ಎದುರಿಸಬೇಕಾಗುತ್ತದೆ.
  • ತೋರಿಸಿದ್ದೆ ಒಂದು ಸೈಟ್ ಆದರೆ ಈಗ ಮಾರಾಟ ಮಾಡಿರುವುದೇ ಬೇರೆ ಸೈಟ್ ಆಗಿರುವ ಉದಾಹರಣೆಗಳು ಇವೆ.
  • ಬದುಕಿರುವ ವ್ಯಕ್ತಿಗೆ ಸುಳ್ಳು ಮರಣ ಪ್ರಮಾಣ ಪತ್ರ ಸೃಷ್ಟಿ ಮಾಡಿ ಆಸ್ತಿ ಮಾರಾಟ ಮಾಡಿರುವುದು. ಇನ್ನು ಇತ್ಯಾದಿ ಹೆಚ್ಚಿನ ಪ್ರಕರಣಗಳು ಕೋರ್ಟ್ ಆವರಣದಲ್ಲಿ ಇವೆ.

ಯಾವುದೇ ರೀತಿಯಾಗಿ ತೊಂದರೆ ಎದುರಾದರು ಪರಿಣಾಮ ಬೀಳುವುದು ಆಸ್ತಿ ಖರೀದಿ ಮಾಡಿದ ಜನರ ಮೇಲೆ. ಎಚ್ಚರ ವಹಿಸದೆ ಹೋದರೆ ಹತ್ತಾರು ವರ್ಷ ಕೋರ್ಟು ಕಚೇರಿ ಅಲೆಯ ಬೇಕಾಗುತ್ತದೆ. ಕೆಲವೊಮ್ಮೆ ಕಾನೂನು ಪ್ರಕಾರವಾಗಿ ನಡೆದುಕೊಳ್ಳದೆ ಹೋದರೆ ಎಡವಿದ ಕಾರಣ ಹಣ ಕೂಡ ಕೈ ಸೇರದೆ ಆಸ್ತಿಯು ಹೆಸರಿಗೆ ಆಗದೆ ಹೋಗಿ ಬಿಡಬಹುದು. ಅದರಿಂದ, ಕೆಳಕಂಡ ದಾಖಲೆಗಳನ್ನು ಪರಿಶೀಲಿಸಿ ಮುಂದುವರೆಯಿರಿ.

ಲೇಔಟ್ ನಕ್ಷೆ ಪರಿಶೀಲನೆ ಮಾಡಿ :-
ಇದರಿಂದ, ಆ ಸೈಟ್ ಪುರಸಭೆ ನಗರಸಭೆ ವ್ಯಾಪ್ತಿಗೆ ಬಂದಿದೆಯೋ? ಇಲ್ಲವೋ? ಅಪ್ರೂವಲ್ ಆಗಿದಿಯೋ ಇಲ್ಲವೋ ಎನ್ನುವ ಎಲ್ಲಾ ವಿಚಾರ ತಿಳಿಯಬಹುದು.

  • ಮ್ಯೂಟೇಷನ್ ರಿಪೋರ್ಟ್ ವೀಕ್ಷಿಸಬೇಕು ಇದರಲ್ಲಿ, ಯಾರಿಂದ ಯಾರಿಗೆ ಆಸ್ತಿ ವರ್ಗಾವಣೆ ಆಗಿದೆ ಯಾವ ವಿಧಾನದಲ್ಲಿ ಆಗಿದೆ ಎಲ್ಲದರ ಮಾಹಿತಿ ಸಿಗುತ್ತದೆ.
  • EC ಇದನ್ನು Encumbrance Certificate ಎನ್ನುತ್ತಾರೆ. ಈ ಡಾಕ್ಯೂಮೆಂಟ್ ನೋಡುವುದರಿಂದ ಸದರಿ ಆಸ್ತಿ ಮೇಲೆ ಎಷ್ಟು ಸಾಲ ಇದೆ, ಋಣಭಾರ ಹಾಗೂ ನಿರ್ದಿಷ್ಟ ಹಕ್ಕುಗಳ ಬಗ್ಗೆ ತಿಳಿಯುತ್ತದೆ.
  • ನಿವೇಶನದ ಚಕ್ಕುಬಂಧಿ ಮಾಹಿತಿ ಪರಿಶೀಲನೆ ಮಾಡಬೇಕು.
  • ಸೇಲ್ ಡೀಡ್ ಪರಿಶೀಲನೆ ಮಾಡಬೇಕು ಇದರಿಂದ, ಈ ಹಿಂದೆ ಯಾರಿಂದ ಯಾರಿಗೂ ಸದರಿ ಆಸ್ತಿ ವರ್ಗಾವಣೆ ಆಗಿದೆ ಯಾವ ರೂಪದಲ್ಲಿ ಆಗಿದೆ ತಿಳಿಯುತ್ತದೆ. https://kaverionline.karnataka.gov.in ಈ ವೆಬ್ಸೈಟ್ ಮುಖಾಂತರ ಆಸ್ತಿ ನಂಬರ್ ಹಾಕಿ ದಾಖಲೆಗಳು ಅದೇ ಪ್ರಾಪರ್ಟಿ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಅಥವಾ ಮತ್ತೇನು ಎನ್ನುವುದರ ಸತ್ಯ ಸತ್ಯತೆ ತಿಳಿದುಕೊಳ್ಳಬಹುದು.
  • ನಗರ ಪ್ರದೇಶದಲ್ಲಿ ಆಸ್ತಿ ಖರೀದಿ ಮಾಡುವವರು ಭೂ ಪರಿವರ್ತನೆ ಆದೇಶ ಪತ್ರವನ್ನು ನೋಡಬೇಕು.
  • ಸದರಿ ಪ್ರಾಪರ್ಟಿಗೆ ಟ್ಯಾಕ್ಸ್ ಕಟ್ಟಿದರೆ ಅದರ ರಿಸಿಪ್ಟ್ ಸಹ ನೋಡಬೇಕು.
  • ಇ-ಖಾತಾ ( E-Khata ) ಸರ್ಟಿಫಿಕೇಟ್ ಪರಿಶೀಲನೆ ಮಾಡಬೇಕು. ಇದು ಆನ್ಲೈನ್’ನಲ್ಲಿ ಸಿಗುತ್ತದೆ (www.eaasthi.mrc.gov.in ವೆಬ್ ಸೈಟ್ ಗೆ ಹೋಗಿ ಆಸ್ತಿ ಸಂಖ್ಯೆ ಹಾಕಿ ಚೆಕ್ ಮಾಡಬಹುದು).
  • ಈ ಮೇಲಿನ ದಾಖಲೆಗಳಂತೆ ಆಸ್ತಿಯ Mother deed, A khata ಅಥವಾ B khata ಸರ್ಟಿಫಿಕೇಟ್ ಇವುಗಳನ್ನು ಪರಿಶೀಲನೆ ಮಾಡಬೇಕು ಹತ್ತಿರದ ಮುನ್ಸಿಪಲ್ ಕಚೇರಿಗೆ ಹೋಗಿ ಸಿವಿಲ್ ಇಂಜಿನಿಯರ್ ಭೇಟಿಯಾಗಿ ಸೈಟ್ ಇರುವ ಜಾಗಕ್ಕೆ ಕರೆದುಕೊಂಡು ಹೋಗುವ ಮೂಲಕ ಆಸ್ತಿ ಅಳತೆಯ ಬಗ್ಗೆ ಅಥವಾ ಇನ್ನಿತರ ವಿಚಾರಗಳ ಬಗ್ಗೆ ಅಸಲಿ ಅಂಶಗಳನ್ನು ತಿಳಿದುಕೊಳ್ಳಬಹುದು. ಹಾಗಿದ್ರೆ ಸೈಟ್ ಖರೀದಿ ಮಾಡುವುದರಿಂದ ತುಂಬಾ ಕಷ್ಟ ಅನುಭವ ಆಗಬಾರದು ಖರೀದಿ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು.
WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!