Simi Karan IAS Success story: ಇವತ್ತಿನ ದಿನಗಳಲ್ಲಿ ಬಡವರಿಗಾಗಿ ಬಡವರ ಪರ ಕೆಲಸ ಮಾಡಬೇಕು ಅವರ ಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಅಧಿಕಾರಕ್ಕೆ ಬರುವ ಅಧಿಕಾರಿಗಳು ತುಂಬಾ ಕಡಿಮೆ, ಸ್ವಾರ್ಥಿಗಳ ಪ್ರಪಂಚದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಅಧಿಕಾರಿಗಳು ಸಿಗೋದು ತೀರಾ ಕಡಿಮೆ ಆದ್ರೆ ಇಲ್ಲೊಬ್ಬ ಯುವತಿ ತಾನು ಉನ್ನತ ಅಧಿಕಾರಿಯಾಗಬೇಕು ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಅಷ್ಟೇ ಅಲ್ಲದೆ ಬಡವರ ಪರ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ತಾನು ಶ್ರಮ ಪಟ್ಟು ಜೀವನದಲ್ಲಿ ನಾನಾ ತೊಂದರೆಗಳಿಂದ ಜಯಿಸಿ ಉಫ್ಸ್ಕಿ ಪರೀಕ್ಷೆಯಲ್ಲಿ ಪಾಸ್ ಆಗಿ ಐಎಎಸ್ ಅಧಿಕಾರಿಯಾಗಿದ್ದಾರೆ.
ಅಷ್ಟಕ್ಕೂ ಇವರು ಯಾರು ಇವರ ಸಾಧನೆ ಹಾದಿ ಹೇಗಿದೆ ಅನ್ನೋದನ್ನ ಮುಂದೆ ತಿಳಿಯುತ್ತ ಹೋಗೋಣ ಬನ್ನಿ, ನಿಮಗೆ ಈ ಸ್ಟೋರಿ ಇಷ್ಟವಾಗಿದ್ರೆ ಖಂಡಿತ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಇದರಿಂದ ಅವರಿಗೂ ಸ್ಪೂರ್ತಿಯಾಗಲಿದೆ.
ಇವರ ಹೆಸರು ಸಿಮಿ ಎಂಬುದಾಗಿ ಮೂಲತಃ ಒಡಿಸ್ಸಾದವರು ಇವರ ತಂದೆ ಭಿಲಾಯ್ ಎಂಬುದಾಗಿ ಸ್ಟೀಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಾರೆ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾರೆ. ಸಿಮಿ ಅವರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅನ್ನು ಮುಂದುವರಿಸಲು IIT ಬಾಂಬೆಗೆ ಹೋಗುತ್ತಾರೆ. ಕಾಲೇಜು ದಿನಗಳಲ್ಲಿ ಸ್ಲಮ್‌ಗಳಲ್ಲಿ ವಾಸಿಸುವ ಮಕ್ಕಳಿಗೆ ಅಲ್ಲಿಯೂ ಪಾಠ ಕಲಿಸಿದರು. ಇದರಿಂದ ಅ ಬಡ ಮಕ್ಕಳ ಮೇಲೆ ಅತಿಯಾದ ಕಾಳಜಿ ವಹಿಸುತ್ತಾರೆ. ಅಷ್ಟೇ ಅಲ್ಲದೆ ಬಡವರ ಪರ ಕೆಲಸ ಮಾಡಬೇಕು ಎನ್ನುವ ಉದ್ದೇಶ ಉಂಟಾಗುತ್ತದೆ.
ಉನ್ನತ UPSC ಅಭ್ಯರ್ಥಿಗಳ ಸಂದರ್ಶನಗಳನ್ನು ನೋಡುವ ಮೂಲಕ SIMI ತಯಾರಿಯನ್ನು ಪ್ರಾರಂಭಿಸಿದರು. ಅವರು UPSC ಸಿವಿಲ್ ಸರ್ವೀಸಸ್ ಪರೀಕ್ಷೆಯ ಪಠ್ಯಕ್ರಮವನ್ನು ಸಣ್ಣ ಭಾಗಗಳಾಗಿ ವಿಂಗಡಿಸಿದರು. ಇದರ ನಂತರ, ಸಿಮಿ ಅವರು 2019 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಖಿಲ ಭಾರತ 31 ನೇ ರ್ಯಾಂಕ್ ಪಡೆಯುವ ಮೂಲಕ IAS ಹುದ್ದೆಯನ್ನು ಪಡೆದರು. ಅವರು ಕೇವಲ 22 ನೇ ವಯಸ್ಸಿನಲ್ಲಿ ಈ ಸ್ಥಾನವನ್ನು ಸಾಧಿಸಿದ್ದಾರೆ.
ಇನ್ನು ಇವರ ಸಾಧನೆಗೆ ನಮ್ಮ ಕಡೆಯಿಂದ ಧನ್ಯವಾದಗಳು ಅಷ್ಟೇ ಅಲ್ಲದೆ ಇವರ ಕಾಳಜಿ ಹಾಗು ಬಡಪರ ಇರುವ ಒಳ್ಳೆಯ ಉದ್ದೇಶ ಇವರನ್ನು ಇನ್ನು ಮುಂದೆ ಎತ್ತರದ ಸ್ಥಾನಕ್ಕೆ ಏರಿಸಲಿ ಅನ್ನೋದೇ ನಮ್ಮ ಆಶಯ. ಈ ಸ್ಟೋರಿ ನಿಮಗೂ ಇಷ್ಟ ಆಗಿದ್ದರೆ ನಿಜಕ್ಕೂ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರಿಂದ ಅವರಿಗೂ ಸ್ಪೂರ್ತಿ ದೊರೆಯಲಿ.