ನವೆಂಬರ್ ತಿಂಗಳಿನಲ್ಲಿ ಪ್ರತಿದಿನ ಸಿಂಹ ರಾಶಿಯವರು ಸೂರ್ಯ ನಮಸ್ಕಾರ ಮಾಡುವುದು ಉತ್ತಮ. ದೇಹವನ್ನು ಕಟುಮಸ್ತಾಗಿ ಇಟ್ಟುಕೊಳ್ಳಲು ಬೇಕಾಗುವಂತಹ ಎಲ್ಲಾ ಕಾರ್ಯಗಳನ್ನು ಮಾಡಿ. ತಂದೆ ತಾಯಿಗೆ ಒಳ್ಳೆಯದಾಗಲಿದೆ ಹಾಗೂ ಆಸ್ತಿ ವಿಚಾರದಲ್ಲಿ ಕೂಡ ಶುಭ ಸುದ್ದಿಯನ್ನು ನೀವು ಕೇಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇನ್ನು ಶನಿಯ ಜಪವನ್ನು ಸದಾ ಕಾಲ ಮಾಡುವುದರಿಂದಾಗಿ ಶನಿಯ ವಕ್ರ ದೃಷ್ಟಿಯಿಂದ ನೀವು ಪಾರಾಗಬಹುದಾಗಿದೆ. ಶನಿಯಿಂದ ಯಾವುದೇ ಅಪಾಯ ಇಲ್ಲದಿದ್ದರೂ ಕೂಡ ಶನಿಯ ಜಪವನ್ನು ಮಾಡುವುದರಿಂದ ಇನ್ನಷ್ಟು ಒಳ್ಳೆಯ ಫಲಿತಾಂಶವನ್ನು ನೀವು ನಿಮ್ಮ ಜೀವನದಲ್ಲಿ ಪಡೆಯಬಹುದಾಗಿದೆ. ಹಣ ಸಂಪಾದನೆಯಲ್ಲಿ ಕೂಡ ನಿಮಗೆ ಅದ್ವಿತೀಯ ಅದೃಷ್ಟ ದೊರಕಲಿದ್ದು ಮನೆಯಲ್ಲಿ ಕೂಡ ಸುಖ ಶಾಂತಿ ನೆಮ್ಮದಿ ತುಂಬಿ ತುಳುಕಾಡಲಿದೆ ಈ ತಿಂಗಳಿನಲ್ಲಿ.

ಸೋದರ ಮಾವನ ಜೊತೆಗೆ ಈ ತಿಂಗಳಿನಲ್ಲಿ ನೀವು ಮಾತಿನ ಜಗಳದಲ್ಲಿ ವೈಮನಸ್ಸನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ ಹೀಗಾಗಿ ಮಾತಿನ ಮೇಲೆ ಕೊಂಚಮಟ್ಟಿಗೆ ಹಿಡಿತವಿರಲಿ. ಇನ್ನು ಈ ತಿಂಗಳಿನಲ್ಲಿ ನೀವು ಕೆಲವೊಂದು ಸಮಸ್ಯೆಗಳ ಪರಿಹಾರಕ್ಕಾಗಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡುವುದು ಉತ್ತಮ. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಹಿರಿಯರ ಆಶೀರ್ವಾದದಿಂದಾಗಿ ಯಶಸ್ಸನ್ನು ಸಾಧಿಸಲಿದ್ದೀರಿ. ಯಶಸ್ಸಿನಿಂದಾಗಿ ಹಣ ಸಿಗುತ್ತಿದೆ ಎಂದು ದುಂದು ವೆಚ್ಛ ಮಾಡುವುದು ಒಳ್ಳೆಯದಲ್ಲ ಹಾಗೂ ವಾಹನ ಚಲಾವಣೆಯ ಸಂದರ್ಭದಲ್ಲಿ ಕೂಡ ಅಗತ್ಯಕ್ಕಿಂತ ಹೆಚ್ಚಾಗಿ ಜಾಗ್ರತೆಯಿಂದ ಇರಿ.

ವೈದ್ಯಕೀಯ ಕ್ಷೇತ್ರದಲ್ಲಿ ಇರುವವರೆಗೂ ಕೂಡ ಉತ್ತಮ ಫಲವನ್ನು ನಿರೀಕ್ಷಿಸಬಹುದಾಗಿದೆ. ಆಸ್ತಿ ಖರೀದಿಸುವ ಬಗ್ಗೆ ನೀವು ಒಲವು ತೋರಬಹುದಾಗಿದೆ ಸಮಾಜದಲ್ಲಿ ನಿಮಗೆ ಉತ್ತಮ ಸ್ಥಾನಮಾನಗಳು ದೊರಕಲಿವೆ. ಪುಣ್ಯ ಕಾರ್ಯಗಳು ಕೂಡ ನಿಮ್ಮ ಕುಟುಂಬದಲ್ಲಿ ನಡೆಯಲಿವೆ. ಅನಿರೀಕ್ಷಿತವಾಗಿ ಧನ ಲಾಭ ನಿಮಗೆ ಆಗಲಿದ್ದು ಇನ್ನಷ್ಟು ಉತ್ತಮ ಅದೃಷ್ಟಕ್ಕಾಗಿ ಕ್ಷೀರಾಭಿಷೇಕ ಹಾಗೂ ಕ್ಷೀರ ದಾನವನ್ನು ಮಾಡುವುದು ಉತ್ತಮ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!