Siddaramayya with Dhavana Rakesh Ches Game: ಚುನಾವಣೆಯ ಸಂದರ್ಭದಲ್ಲಿ ನೀವು ಸಿದ್ದರಾಮಯ್ಯನವರ ಮೊಮ್ಮಗನನ್ನು ನೋಡಿರಬಹುದು. ಈತನ ಹೆಸರು ಧವನ್‌ ರಾಕೇಶ್‌. ಚುನಾವಣೆಯ ಬಗ್ಗೆ ಈತನಿಗೆ ಇರುವ ಆಸಕ್ತಿ ನೋಡಿ ಸಿದ್ದರಾಮಯ್ಯನವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ವರುಣಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆಂದು ಸಿದ್ದರಾಮಯ್ಯನವರು ಬಂದಿದ್ದಾಗ ಅವರ ಜೊತೆ ಅವರ ಮೊಮ್ಮಗ ಧವನ್ ರಾಕೇಶ್ ಕೂಡ ಮೈಸೂರು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ವಿಷಯ ನಿಮಗೂ ಗೊತ್ತಿರಬಹುದು. ಆ ಸಮಯದಲ್ಲಿ ರಾಕೇಶ್ ಅವರೇ ಮುಂದೆ ನಿಂತು ಎಲ್ಲಾ ಕರ್ತವ್ಯವನ್ನು ನಿರ್ವಹಿಸಿದ್ದರು .ಅದನ್ನು ಗಮನಿಸಿದ ಸಿದ್ದರಾಮಯ್ಯನವರು ನನ್ನ ಮೊಮ್ಮಗ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಧವನ್ ರಾಕೇಶ್ ಅವರಿಗೆ ರಾಜಕೀಯದಲ್ಲಿ ತುಂಬಾ ಆಸಕ್ತಿ ಇರುವುದರಿಂದ ಚೆನ್ನಾಗಿ ನಡೆಸಿಕೊಂಡು ಹೋಗುತ್ತಾನೆ. ಎಷ್ಟಂದರೂ ಅಪ್ಪನ ರಕ್ತ ಅಲ್ವಾ? ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

Siddaramayya with Dhavana Rakesh Ches Game

ಮೊಮ್ಮಗ ಕಲಿತದ್ದು ಬೆಂಗಳೂರಿನ ಕೆನಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ.ನಂತರ ಅವರ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಭಾಗಿಯಾಗಿದ್ದರು. ಇದು ಪದವಿ ಶಿಕ್ಷಕರಿಗೆ ಸಂತಸ ತಂದಿದೆ. ವೇದಿಕೆಯಲ್ಲಿ ಧವನ್ ರಾಕೇಶ್ ಹಾಗೂ ಸಿದ್ದರಾಮಯ್ಯ ನಿಂತಿರುವ ಫೋಟೋ ಈಗ ತುಂಬಾ ವೈರಲ್ ಆಗಿದೆ.

ಮೊಮ್ಮಗ ಧವನ್ ರಾಕೇಶ್ ಅವರ ಹುಟ್ಟು ಹಬ್ಬದಂದು ಸಿದ್ದರಾಮಯ್ಯನವರು ತನ್ನ ಮೊಮ್ಮಗನ ಜೊತೆ ಚೆಸ್ ಆಟ ಆಡಿ ಚಾಣಾಕ್ಷದಿಂದ ಸಿದ್ದರಾಮಯ್ಯನವರು ಗೆದ್ದರು. ಸಿದ್ದರಾಮಯ್ಯನವರ ಗೆಲುವು ಮೊಮ್ಮಗನಿಗೆ ಸಂತೋಷ ತಂದಿತು. ಚೆಸ್ ಆಟದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

By AS Naik

Leave a Reply

Your email address will not be published. Required fields are marked *