ಸಿ’ಗರೇಟ್ ಸೇವನೆಯಿಂದ ಶ್ವಾಸಕೋಶ ಹಾನಿಗೊಳಗಾಗಿದ್ದು ಇದನ್ನು ನಿವಾರಿಸಲು ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಮನೆ ಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ.
ಸಿಗರೇಟ್ ಸೇದುವುದು ದೇಹಕ್ಕೆ ಹಾನಿಕಾರಕ. ಸಂಶೋಧನೆಯ ಪ್ರಕಾರ ಒಂದು ಸಿಗರೇಟ್ ಸೇದುವುದರಿಂದ ಸುಮಾರು 4,000 ರೀತಿಯ ಕೆಮಿಕಲ್ ಬಿಡುಗಡೆಯಾಗುತ್ತದೆ. ಅದರಲ್ಲಿ ವಿಷಪೂರಿತ ಕೆಮಿಕಲ್, ಕ್ಯಾನ್ಸರ್ ಗೆ ಕಾರಣವಾಗುವ ಕೆಮಿಕಲ್ ಇರುತ್ತದೆ. ಈ ಕೆಮಿಕಲ್ಸ್ ನಿಂದ ಶ್ವಾಸಕೋಶ ಕಪ್ಪಾಗಿ ರಕ್ತವು ನಿಧಾನವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಸಿಗರೇಟ್ ಸೇದುವುದರಿಂದ ಉಂಟಾದ ವಿಷವನ್ನು ಹೊರಹಾಕಲು ಸುಲಭವಾದ ಮನೆ ಮದ್ದಿದೆ ಅದಕ್ಕೆ ಬೇಕಾಗುವ ಸಾಮಗ್ರಿಗಳು ಈರುಳ್ಳಿ ರಸ, ದಾಲ್ಚಿನಿ ಅಥವಾ ಚಕ್ಕೆ, ಲಿಂಬು ರಸ, ಜೇನುತುಪ್ಪ, ಕೆಂಪು ಮೆಣಸಿನ ಪೌಡರ್. ಮೊದಲು ಒಂದು ಪಾತ್ರೆಯಲ್ಲಿ ಒಂದುವರೆ ಕಪ್ ನೀರನ್ನು ಕುದಿಸಬೇಕು. ಒಂದು ಲೋಟದಲ್ಲಿ ನೀರನ್ನು ಹಾಕಿ ಅದಕ್ಕೆ ಅರ್ಧ ಚಮಚ ಮೆಣಸಿನ ಪುಡಿ, ಚಕ್ಕೆ ಪೌಡರ್ ಸೇರಿಸಿ, ಒಂದು ಚಮಚ ನಿಂಬೆ ರಸ, ಈರುಳ್ಳಿ ರಸ, ಎರಡು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು ಪ್ರತಿದಿನ ಮಲಗುವ ಅರ್ಧ ಗಂಟೆ ಮುನ್ನ ಮೆಲ್ಲನೆ ಟಿ ಕುಡಿಯುವ ಹಾಗೆ ಕುಡಿಯಬೇಕು. ಇದರಲ್ಲಿರುವ ದಾಲ್ಚಿನಿ ಮತ್ತು ಲೆಮನ್ ಶ್ವಾಸಕೋಶದಲ್ಲಿ ಕಪ್ಪುತನವನ್ನು ಹೋಗಲಾಡಿಸುತ್ತದೆ. ಮೆಟಪೊಲಿಸಂನ್ನು ಬೂಸ್ಟ್ ಮಾಡುತ್ತದೆ, ಶ್ವಾಸಕೋಶದ ಕಾರ್ಯವನ್ನು ಸುಗಮಗೊಳಿಸುತ್ತದೆ.
ಸಿಗರೇಟ್ ಸೇದುವವರು ಫ್ಲೋರೋಫಿಲ್ ಹೆಚ್ಚಾಗಿ ಇರುವ ಆಹಾರವನ್ನು ಸೇವಿಸಬೇಕು. ವೀಟ್ ಗ್ರಾಸ್ ನಿಂದ ತಯಾರಾದ ಜ್ಯೂಸ್ ನಲ್ಲಿ ಪ್ಲೋರೋಪಿಲ್ ಅಂಶ ಹೆಚ್ಚಾಗಿ ಇರುತ್ತದೆ ಅದರ ಸೇವನೆಯಿಂದ ಶ್ವಾಸಕೋಶದಲ್ಲಿರುವ ಕೊಳೆಯನ್ನು ಕ್ಲೀನ್ ಮಾಡುತ್ತದೆ. ಚವನ್ ಪ್ರಾಶ್ ದಿನಕ್ಕೆ ಒಂದು ಬಾರಿ ಸೇವಿಸುವುದರಿಂದ ಸಿಗರೇಟ್ ಪ್ರಭಾವವನ್ನು ತಗ್ಗಿಸಬಹುದು ಇದರಲ್ಲಿ ಆಯುರ್ವೇದ ಅಂಶಗಳು ಇದೆ ಅಲ್ಲದೇ ಇದು ದೇಹಕ್ಕೆ ಶಕ್ತಿ ಕೊಡುತ್ತದೆ. ಸಿಗರೇಟ್ ಸೇವನೆಯಿಂದ ಆಯಾಸ ಆಗುವವರು ದಿನಕ್ಕೆ ಎರಡು ಚಮಚ ಚವನ್ ಪ್ರಾಶ್ ತೆಗೆದುಕೊಳ್ಳಬೇಕು. ವ್ಯಾಯಾಮ ಮಾಡುವುದರಿಂದಲೂ ಸಿಗರೇಟ್ ಸೇವನೆಯಿಂದ ಆಗುವ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಬೆಳಗ್ಗೆ ಜಾಗಿಂಗ್ ಮಾಡುವುದು ಉತ್ತಮ ಇದರಿಂದ ಬಲ ಹೀನವಾದ ಶ್ವಾಸಕೋಶ ನಿಧಾನವಾಗಿ ಆರೋಗ್ಯಕರವಾಗುತ್ತದೆ. ಒಟ್ಟಿನಲ್ಲಿ ಸಿಗರೇಟ್ ಸೇವನೆಯನ್ನು ಬಿಡಬೇಕು.