ಇಂದಿನ ಆಧುನಿಕ ಯುಗದಲ್ಲಿ ಜನರು ತಮ್ಮ ಜಂಜಾಟದಲ್ಲಿ ತಮ್ಮ ಆರೋಗ್ಯದ ಮೇಲೆ ಅಷ್ಟೊಂದು ಆಸಕ್ತಿ ವಹಿಸದ ಕಾರಣ ದೇಹವು ಹಲವಾರು ರೋಗಕ್ಕೆ ತುತ್ತಾಗುವ ಬಗ್ಗೆ ಎಲ್ಲರಿಗೂ ತಿಳಿದ ವಿಷಯ ಇಂದಿನ ಕಾಲದಲ್ಲಿ ರಕ್ತದೊತ್ತಡ ಸಮಸ್ಯೆ ಹಾಗೂ ಮಧುಮೇಹಿ ಇಂದ ಬಳಲುವರ ಸಂಖ್ಯೆ ಜಾಸ್ತಿ ಆಗಿದೆ ಒಮ್ಮೆ ರೋಗವು ಮನುಷ್ಯನ ದೇಹವನ್ನು ಅವರಿಸಿದರೆ ಬಿಟ್ಟು ಹೋಗಲು ಕಷ್ಟವೇ ಸರಿ ವೈದ್ಯರ ಸಲಹೆ ಅಂತೆ ಸಾಯುವ ತನಕ ಕೂಡ ಔಷಧಿ ಹಾಗೂ ಚಿಕಿತ್ಸೆ ಅನ್ನು ಪಡೆಯುತ್ತಾ ಇರಬೇಕು ಹಾಗಾಗಿ ಕೆಲವೊಬ್ಬರು ಆಯುರ್ವೇದಿಕ ಕಡೆಗೆ ಗಮನ ಹರಿಸುತ್ತಾರೆ
ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣದ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ ಇದು ಅನುವಂಶೀಯವಾಗಿ ಕೂಡ ಬರಬಹುದು ಮಧುಮೇಹವು ಒಂದು ಮಹಾಮಾರಿ ಕಾಯಿಲೆ ಎಂದು ವಿಶ್ವಸಂಸ್ಥೆಯು ಘೋಷಿಸಿದೆ ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ ಇದರ ಪರಿಣಾಮ ಎಂದರೆ ಪದೇ ಪದೇ ಮೂತ್ರ ವಿಸರ್ಜನೆ ತೀವ್ರವಾದ ಬಾಯಾರಿಕೆ ಹಾಗೂ ಹಸಿವು ಆಗುವುದು ದೇಹದಲ್ಲಿ ತೂಕ ಹೆಚ್ಚಳ ಅಥವಾ ಅನಿಯಮಿತ ತೂಕ ಇಳಿಕೆ ಆಯಾಸ ಹಾಗೂ ಪುರುಷರಲ್ಲಿ ಲೈಂ ಗಿಕ ದೌರ್ಬಲ್ಯತೆ ಇತ್ಯಾದಿ ಆಗಿದ್ದು ಸಂಪೂರ್ಣ ಆಗಿ ಹೋಗಲಾಡಿಸಲು ಸಾಧ್ಯವಿಲ್ಲ ಆದರೆ ವ್ಯಾಯಾಮ ಹಾಗೂ ನಡಿಗೆ ಇಂದ ಸ್ವಲ್ಪ ಮಟ್ಟಿಗೆ ನಿಯಂತ್ರಣ ಅಲ್ಲಿ ಇಡಬಹುದು
ಮಧುಮೇಹವನ್ನು ನಿಯಂತ್ರಣ ಅಲ್ಲಿ ಇಡಲು ಹಲವಾರು ಪತ್ಯಗಳ ಅವಶ್ಯಕತೆ ಇದೆ ಸಿಹಿ ಪದಾರ್ಥಗಳ ಸೇವನೆ ನಿಷಿದ್ಧ ನಿಯಮಿತ ಆಹಾರ ಸೇವನೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುವ ಆಹಾರ ಸೇವನೆ ಕಡಿಮೆ ಮಾಡುವುದು ಖಾಲಿ ಹೊಟ್ಟೆಗೆ ಹಿಂದಿನ ದಿನ ನೆನಸಿ ಇಟ್ಟ ಮೆಂತ್ಯ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದು ಎಳೆ ಬೆಂಡೆಕಾಯಿ ನೀರನ್ನು ಬೆಳಿಗ್ಗೆ ಕುಡಿಯುವುದು ರಾಗಿ ನವಣೆ ಮುಂತಾದ ಸಿರಿ ಧಾನ್ಯದಿಂದ ಮಾಡಿದ ಉಪಹಾರ ಸೇವಿಸುವುದು ಹಾಗೂ ಅನ್ನ ಪ್ರಮಾಣ ಕಮ್ಮಿ ಮಾಡಿ ಸೊಪ್ಪು ತರಕಾರಿ ಮುಂತಾದುವುಗಳ ಸೇವನೆ ಅಗತ್ಯ ಸಲಾಡ್ ಮಜ್ಜಿಗೆ ಹಾಗೂ ಚಪಾತಿ ತರಕಾರಿ ಪಲ್ಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಆದಷ್ಟು ಆಹಾರದ ಮೂಲಕವೇ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು
ಮೆಂತೆ ಕಾಳಿನಲ್ಲಿ ಅನೇಕ ಔಷಧೀಯ ಗುಣಗಳಿದ್ದು ಸಕ್ಕರೆ ಖಾಯಿಲೆಗೆ ಒಂದು ಉತ್ತಮ ಔಷಧಿ ನಿಜ ಮೆಂತ್ಯೆ ಕಾಳಿನಲ್ಲೂ ಗ್ಯಲಿಟೋನೋ ಮೆನನ್ ಎಂಬ ನಾರಿನ ಅಂಶ ಇದೆ ಇದು ರಕ್ತದಲ್ಲಿರುವ ಸಕ್ಕರೆಯ ಹೀರುವಿಕೆಯನ್ನು ತಡೆಗಟ್ಟುತ್ತದೆ ಹಾಗಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಆಗುವುದು ಇದನ್ನು ಹೇಗೆ ಮಾಡಬೇಕು ಹಾಗೂ ಹೇಗೆ ಸೇವೇನೆ ಮಾಡಬೇಕು ಎಂದು ನೋಡೋಣ ಬನ್ನಿ
ಸ್ವಲ್ಪ ಮೆಂತ್ಯೆ ಕಾಳಿನ ಪುಡಿಯನ್ನು ಮಾಡಿಕೊಂಡಿರಬೇಕು ಒಂದು ಲೋಟದಲ್ಲಿ ಒಂದು ಸ್ಪೂನ್ ಮೆಂತ್ಯೆ ಕಾಳಿನ ಪುಡಿಗೆ ಎರಡು ಚಮಚದಷ್ಟು ಮೊಸರನ್ನು ಸೇರಿಸಬೇಕು ಮೊಸರನ್ನು ನೀವು ಜಾಸ್ತಿ ಕೂಡ ಹಾಕಬಹುದು ಈ ಮಿಶ್ರಣವನ್ನು ಎರಡು ಗಂಟೆಗಳ ಕಾಲ ಹಾಗೆ ಬಿಡಿ ತದನಂತರ ಸೇವೆನೆ ಮಾಡಿ ನಿಮ್ಮ ಆರೋಗ್ಯದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಇದ್ದಲ್ಲಿ ದಿನ ಅಥವಾ ದಿನ ಬಿಟ್ಟು ದಿನ ಕುಡಿಯಬಹುದು ಸಕ್ಕರೆ ಪ್ರಮಾಣ ನಿಯಂತ್ರಣ ಅಲ್ಲಿ ಇದ್ದಲ್ಲಿ ವಾರಕ್ಕೆ ಒಮ್ಮೆ ಇಲ್ಲ ಎರಡು ಬಾರಿ ಕುಡಿಯಬಹುದು ಆದರೆ ಯಾವುದೇ ಕಾರಣಕ್ಕೂ ಈ ಮಿಶ್ರಣವನ್ನು ರಾತ್ರಿ ಮೊಸರಿನಲ್ಲಿ ನೆನೆಸಿ ಬೆಳಗ್ಗೆ ಕುಡಿಯಲು ಹೋಗಬೇಡಿ ಯಾಕೆಂದರೆ ಮೊಸರು ವಾಸನೆ ಬಂದು ಕುಡಿಯಲು ಸಾದ್ಯ ಆಗುವುದಿಲ್ಲ
ನಿಮಗೆ ಮಲಬದ್ದತೆ ಇದ್ದಲ್ಲಿ ಈ ಮನೆಮದ್ದನು ಮಾಡಲು ಹೋಗಬೇಡಿ ಯಾಕೆಂದರೆ ಮೆಂತ್ಯೆ ಸೇವನೆ ಇಂದ ಹೊಟ್ಟೆ ಗಟ್ಟಿ ಆಗುತ್ತದೆ ಹಾಗಾಗಿ ಮಲಬದ್ದತೆ ಸಮಸ್ಯೆ ಇರುವವರು ಸೇವನೆ ಮಾಡಿದ್ದಲಿ ಸಮಸ್ಯೆ ಉಂಟಾಗುವುದು ಇನ್ನೂ ಹಾಗಲಕಾಯಿ ಇಂದ ವಿವಿಧ ಭಕ್ಷ್ಯ ಮಾಡಿದಲ್ಲಿ ಕೂಡ ಉತ್ತಮ ಹಾಗೂ ರಾಗಿ ಮುದ್ದೆ ತಿನ್ನುವುದರಿಂದ ಕೂಡ ಉತ್ತಮ ಲಾಭ